ತೀವ್ರ ಅಸ್ವಸ್ಥಗೊಂಡ ಕೇರಳ ಸ್ಟೋರಿ ನಟಿ ಆದಾ ಶರ್ಮಾ ಆಸ್ಪತ್ರೆ ದಾಖಲು, ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ!

Published : Aug 02, 2023, 08:17 PM IST
ತೀವ್ರ ಅಸ್ವಸ್ಥಗೊಂಡ ಕೇರಳ ಸ್ಟೋರಿ ನಟಿ ಆದಾ ಶರ್ಮಾ ಆಸ್ಪತ್ರೆ ದಾಖಲು, ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ!

ಸಾರಾಂಶ

ಕೇರಳ ಸ್ಟೋರಿ ನಟಿ ಅದಾ ಶರ್ಮಾ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರು ನಿಗಾವಹಿಸಿದ್ದಾರೆ.

ಮುಂಬೈ(ಆ.02) ಕೇರಳ ಸ್ಟೋರಿ ಚಿತ್ರದ ಮೂಲಕ ಭಾರಿ ಸಂಚಲನ ಸೃಷ್ಟಿಸಿದ ನಟಿ ಆದಾ ಶರ್ಮಾ ಇದೀಗ ತೀವ್ರ ಆಸ್ವಸ್ಥಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಕಮಾಂಡೋ ಚಿತ್ರದ ಪ್ರಮೋಶನ್ ಈವೆಂಟ್ ಕಾರ್ಯಕ್ರಮದಲ್ಲಿ ಆಸ್ವಸ್ಧಗೊಂಡ ಆದಾ ಶರ್ಮಾ ಕುಸಿದಿದ್ದಾರೆ. ತಕ್ಷಣವೇ ಆದಾ ಶರ್ಮಾರನ್ನು ಆಸ್ಪತ್ರೆ ದಾಖಲಿಸಲಾಗಿದೆ. ತುರ್ತು ನಿಘಾ ಘಟಕದಲ್ಲಿ ಅದಾ ಶರ್ಮಾಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆದಾ ಶರ್ಮಾ ಅತಿಸಾರ ಹಾಗೂ ವಾಂತಿ ಸಮಸ್ಯೆಯಿಂದ ಬಳಲಿದ್ದಾರೆ. ಆಹಾರದಲ್ಲಿ ಏರುಪೇರಾಗಿರುವ ಸಾಧ್ಯತೆ ಇದೆ ವೈದ್ಯರು ಹೇಳಿದ್ದಾರೆ.

ಕಮಾಂಡೋ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಆದಾ ಶರ್ಮಾ ತೀವ್ರ ಅಸ್ವಸ್ಥಗೊಂಡಿದ್ದಾರೆ.  ಇಂದು ಬೆಳಗ್ಗೆ ಆಯೋಜಿಸಿದ ಕಾರ್ಯಕ್ರಮಕ್ಕೆ ಹಾಜರಾದ ಆದಾ ಶರ್ಮಾ ಸಂಪೂರ್ಣವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಕಾರ್ಯಕ್ರಮದ ನಡುವೆ ಎದ್ದು ವಿಶ್ರಾಂತಿ ಕೊಠಡಿಗೆ ತೆರಳಿದ ಆದಾ ಶರ್ಮಾ ಅಸ್ವಸ್ಥಗೊಂಡಿದ್ದಾರೆ. ಅತಿಸಾರ ಹಾಗೂ ವಾಂತಿಯಿಂದ ಬಳಲಿದ್ದಾರೆ.

‘ದಿ ಕೇರಳ ಸ್ಟೋರಿ’ ನಟಿ ಮತಾಂತರಗೊಂಡರಾ?: ಅದಾ ಶರ್ಮಾ ಫೋಟೋ ಹಿಂದಿನ ಅಸಲಿಯತ್ತೇನು ?

ಅದಾ ಶರ್ಮಾ ಆರೋಗ್ಯ ಕ್ಷೀಣಿಸಿದೆ. ಹೀಗಾಗಿ ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲಾಯಿತು. ತುರ್ತು ನಿಘಾ ಘಟಕದಲ್ಲಿ ಅದಾ ಶರ್ಮಾಗೆ ಚಿಕಿತ್ಸೆ ನೀಡಲಾಗುತ್ತಿದೆ. ದೇಹದಲ್ಲಿ ನೀರಿನ ಅಂಶವೂ ಕಡಿಮೆಯಾಗಿರುವ ಕಾರಣ ಅದಾ ಶರ್ಮಾ ಬಳಲಿದ್ದಾರೆ. ಒತ್ತಡ, ಬಿಡುವಿಲ್ಲದ ಶೂಟಿಂಗ್ ಹಾಗೂ ಕಾರ್ಯಕ್ರಮ, ಜೊತೆಗೆ ಫುಡ್ ಅಲರ್ಜಿ ಆದಾ ಶರ್ಮಾ ಆರೋಗ್ಯವನ್ನು ಏರುಪೇರು ಮಾಡಿದೆ.

ಆದಾ ಶರ್ಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಕಮಾಂಡೋ ಇದೇ ತಿಂಗಳು ಬಿಡುಗಡೆಯಾಗುತ್ತಿದೆ.  ಈ ಚಿತ್ರದ ಶೂಟಿಂಗ್ ಬಳಿಕ ಡಬ್ಬಿಂಗ್, ಇದೀಗ ಪ್ರಮೋಶನ್‌ನಲ್ಲಿ ಬ್ಯೂಸಿಯಾಗಿರುವ ಆದಾ ಶರ್ಮಾ ಆರೋಗ್ಯ ಕ್ಷೀಣಿಸಿದೆ. ಇಂದು ಬೆಳಗ್ಗೆ ಅದಾ ಶರ್ಮಾರನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಆಸ್ಪತ್ರೆಯಲ್ಲೇ ಇರುವ ಆದಾ ಶರ್ಮಾ ಆರೋಗ್ಯ ಸ್ಥಿರವಾಗಿದೆ. ಆದಾ ಶರ್ಮಾಗೆ ಕೆಲ ದಿನಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ.

ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದ ದಿ ಕೇರಳ ಸ್ಟೋರಿಗೆ OTT ’ಷಡ್ಯಂತ್ರ’ದ ಶಾಕ್‌!

ಕಮಾಂಡೋ ಚಿತ್ರಕ್ಕೂ ಮೊದಲು ಅದಾ ಶರ್ಮಾ ದಿ ಕೇರಳ ಸ್ಟೋರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 40 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಬರೋಬ್ಬರಿ 300 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇಷ್ಟೇ ಅಲ್ಲ ಚಿತ್ರಮಂದಿರದಲ್ಲಿ 50 ದಿನ ಪೂರೈಸಿದೆ. ಈ ಚಿತ್ರ ದೇಶಾದ್ಯಂತ ಭಾರಿ ವಿವಾದಕ್ಕೆ ಕಾರಣಾಗಿತ್ತು. ಕೆಲ ರಾಜ್ಯಗಳಲ್ಲಿ ಕೇರಳ ಸ್ಟೋರಿ ಚಿತ್ರ ಪ್ರದರ್ಶನ ಮಾಡದಂತೆ ನಿಷೇಧ ಹೇರಲಾಗಿತ್ತು. ಪ್ರತಿಭಟನೆಗಳು ನಡೆದಿತ್ತು.

ಇದರ ನಡುವೆ ಅದಾ ಶರ್ಮಾ ಮೊಬೈಲ್ ನಂಬರ್ ಸೋರಿಕೆಯಾಗಿ ಮತ್ತೊಂದು ಆತಂಕಕ್ಕೆ ಕಾರಣವಾಗಿತ್ತು. ಆದಾ ಶರ್ಮಾಗೆ ಬೆದರಿಕೆ ಸಂದೇಶಗಳು ಹಾಗೂ ಕಿರುಕುಳ ನೀಡುವಂತಹ ಸಂದೇಶಗಳು ಬಂದಿತ್ತು. ‘ಝಾಮುಡಾ ಬೋಲ್ತೆ’ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅದಾ ಅವರ ವಿವರಗಳನ್ನು ಲೀಕ್‌ ಮಾಡಗಿತ್ತು. ವಿಷಯ ಗೊತ್ತಾದ ತಕ್ಷಣ ಈ ಖಾತೆಯನ್ನು ಬ್ಲಾಕ್‌ ಮಾಡಲಾಗಿದೆ.  ಚಿತ್ರ ಬಿಡುಗಡೆಗೂ ಮುನ್ನ ನನಗೆ ಏನಾದರೂ ಅಪಾಯ ಆಗಬಹುದು ಎಂಬ ಭಯವಿತ್ತು. ಉಗ್ರ ಸಂಘಟನೆಗಳು ಬೆದರಿಕೆ ಹಾಕುವ ಆತಂಕವಿತ್ತು ಎಂದು ಆದಾ ಶರ್ಮಾ ಹೇಳಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ
BBK 12: ಗಿಲ್ಲಿ ನಟನಿಗೆ ಏನ್‌ ಮಾಡೋದು ಅಂತ ನಿರ್ಧಾರ ಮಾಡಿ: ರಘು ಬಳಿ ಕಾವ್ಯ ಶೈವ ಬೇಸರ ತೋಡಿಕೊಂಡ್ರು