Latest Videos

ಕೊಲೆ ಕೇಸ್‌ ಆರೋಪಿ ದರ್ಶನ್‌ ಬಗ್ಗೆ ಬಾವ ಮಂಜುನಾಥ್ ಹೇಳಿದ್ದೇನು? ಜನ ಏನಂತ ರಿಯಾಕ್ಟ್ ಮಾಡ್ಬಹುದು?

By Contributor AsianetFirst Published Jun 15, 2024, 7:02 PM IST
Highlights

ದರ್ಶನ್ ಅವರು ಅವರಾಗಿಯೇ ಏನೂ ಮಾಡೋಕೆ ಹೋಗಲ್ಲ, ಮಾಡೋದು ಇಲ್ಲ. ಅವರು ಏನೂಂತ ನಮಗೆ ಗೊತ್ತು, ಯಾರಿಗೆ ನೋವಾದ್ರೂನು ಅದನ್ನು ಫಾಲೋ ಮಾಡಿ ಕ್ಲಿಯರ್ ಆಗೋವರೂ ಬಿಡಲ್ಲ. ದರ್ಶನ್ ಕ್ಲೀನ್ ಚಿಟ್ ತೆಗೆದುಕೊಂಡು ಶೀಘ್ರದಲ್ಲಿ ಹೊರ ಬರ್ತಾರೆ.

ನಟ ದರ್ಶನ್ ಮೇಲೆ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ, ದರ್ಶನ್ ಸಹೋದರಿ ದಿವ್ಯಾ ಅವರ ಪತಿ ಮಂಜುನಾಥ್ ಏಷಿಯಾನೆಟ್ ಸುವರ್ಣ ನ್ಯೂಸ್‌ಗೆ ಹೇಳಿಕೆ ನೀಡಿದ್ದಾರೆ. ಕಾರವಾರದ ಕೈಗಾ ಪ್ರದೇಶದಲ್ಲಿ ನೆಲೆಸಿರುವ ನಟ ದರ್ಶನ್ ಅವರ ಭಾವ ಮಂಜುನಾಥ್ 'ದರ್ಶನ್ ಅವರದ್ದು ಸಾಫ್ಟ್ ನೇಚರ್, ಅವರಾಯ್ತು ಅವರ ಕೆಲಸ ಆಯ್ತು ಎನ್ನುವಂತೆ ಇರ್ತಾರೆ. ಅವರ ಪ್ರಾಣಿ, ಪಕ್ಷಿಗಳನ್ನು ನೋಡಿಕೊಂಡು ಸಂತೋಷವಾಗಿ ಖುಷಿಯಾಗಿರೋರು. ಕೆಲಸದಲ್ಲೂ ತುಂಬಾ ಡೆಡಿಕೇಶನ್, ಇರೋ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸಬೇಕು, ಯಾರಿಗೂ ತೊಂದರೆ ಕೊಟ್ಟು ಕೆಲಸ ಮಾಡಲ್ಲ. 

ದರ್ಶನ್ ಮನೆಗೆ ಬಂದಾಗ ಅವರು ಸೆಲೆಬ್ರಿಟಿ ಅಂತಾನೆ ತೋರಿಸ್ಕೊಳ್ತಿರ್ಲಿಲ್ಲ. ಎಲ್ಲರ ಜತೆ ಸೇರಿಕೊಂಡು ಕ್ರಿಕೆಟ್ ಕೂಡಾ ಆಡ್ತಿದ್ರು, ಜನ ಅವರನ್ನು ನೆನೆಸ್ಕೊತ್ತಾರೆ. ದರ್ಶನ್ ಮಾಡಿದ ದಾನ ಧರ್ಮಗಳ  ಬಗ್ಗೆ ಲೆಕ್ಕವೇ ಇಲ್ಲ, ಸಮುದ್ರ ತರಾನೇ..ಯಾರೇ ಕಷ್ಟ ಅಂತಾ ಬಂದ್ರೂನೂ ತೃಷ್ತಿ ಪಡಿಸಿ ಕಳುಹಿಸ್ತಿದ್ರು. ಅನಾಥತಾಶ್ರಮಗಳಿಗೆ ದಾನ ಮಾಡ್ತಿದ್ರು, ಬರೋ ಆದಾಯದಲ್ಲೂ ಸಾಕಷ್ಟು ದಾನ ಮಾಡ್ತಿದ್ರು. ಅವರನ್ನು ಯಾರೂ ಪ್ರೊವೋಕ್ ಮಾಡಬಾರದಷ್ಟೇ, ಅದು ಬಿಟ್ರೆ ಅವರು ಕೆಲಸ ಮಾಡ್ಕೊಂಡು ಚೆನ್ನಾಗಿರ್ತಾರೆ. ಅವರ ಪಾಡಿಗೆ ಅವರು ಎಲ್ಲರನ್ನೂ ಚೆನ್ನಾಗಿ ನೋಡಿಕೊಂಡು ಹೋಗ್ತಿದ್ರು. 

ಚಿತ್ರರಂಗದ 'ಮರ್ಯಾದೆ ಪ್ರಶ್ನೆ' ಇಲ್ಲಿಗೆ ಬಂದು ನಿಂತಿದೆ; ಸಖತ್ ಸದ್ದು ಮಾಡ್ತಿರೋ ಆಲ್ ಓಕೆ!

ದರ್ಶನ್ ಅವರು ಅವರಾಗಿಯೇ ಏನೂ ಮಾಡೋಕೆ ಹೋಗಲ್ಲ, ಮಾಡೋದು ಇಲ್ಲ. ಅವರು ಏನೂಂತ ನಮಗೆ ಗೊತ್ತು, ಯಾರಿಗೆ ನೋವಾದ್ರೂನು ಅದನ್ನು ಫಾಲೋ ಮಾಡಿ ಕ್ಲಿಯರ್ ಆಗೋವರೂ ಬಿಡಲ್ಲ. ದರ್ಶನ್ ಕ್ಲೀನ್ ಚಿಟ್ ತೆಗೆದುಕೊಂಡು ಶೀಘ್ರದಲ್ಲಿ ಹೊರ ಬರ್ತಾರೆ. ಫಾನ್ಸ್‌ಗಳಿಗೆ ಒಳ್ಳೇ ಸಿನಿಮಾ ಮಾಡ್ತಾರೆ, ಜನಸೇವೆ ಕೂಡಾ ಮಾಡ್ತಾರೆ. ಉಳಿದವರ ಮಾತು ದರ್ಶನ್ ಹೆಚ್ಚಾಗಿ ಕೇಳೋಕೆ ಹೋಗಲ್ಲ. ದರ್ಶನ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ, ಇಲ್ಲವೇ ಎಂದು ನ್ಯಾಯಾಲಯ ತೀರ್ಮಾನ ಮಾಡ್ತದೆ

ಪತ್ನಿ ವಿಜಯಲಕ್ಷ್ಮೀ ಕೊಂಡ ಕಾರೇ ಬೇಕೆಂದು ಹಠ ಹಿಡಿದಿದ್ದ ಪವಿತ್ರಾಗೂ ಸೇಮ್ ಕಾರು ಕೊಡಿಸಿದ್ರಾ ದರ್ಶನ್..?

ಅಲ್ಲಿಯವರೆಗೆ ಅಭಿಮಾನಿಗಳು ಶಾಂತವಾಗಿರಿ, ಅವರು ಶೀಘ್ರದಲ್ಲಿ ಹೊರ ಬರ್ತಾರೆ, ಅದಕ್ಕೆ ಕಾಯೋಣ. ದರ್ಶನ್ ತುಂಬಾ ಕೂಲ್ ಪರ್ಸನ್, ತಮಾಷೆ ಮಾಡಿಕೊಂಡು ಇರ್ತಾರೆ, ಕೋಪಿಷ್ಠ ಅಲ್ಲ. ಆದಷ್ಟು ಬೇಗ ಅವರು ಹೊರಬರಬೇಕು, ಫ್ಯಾನ್ಸ್‌ಗಳಿಗೆ ಉತ್ತಮ ಸಿನಿಮಾ ಮಾಡ್ಬೇಕು, ಮಾದರಿಯಾಗಿರಬೇಕು. ಜನಸೇವೆ ಮಾಡ್ತಿದ್ರು, ಅದನ್ನು ಮುಂದುವರಿಸಬೇಕು' ಎಂದಿದ್ದಾರೆ ದರ್ಶನ್ ಬಾವ ಮಂಜುನಾಥ್.

ವೀಡಿಯೋ ಮಾಡೋಕೋ, ಹುಡ್ಗಿ ಇಂಪ್ರೆಸ್ ಮಾಡೋಕೋ ಹೋಗಿ ಬೈಕಿಂದ ಬಿದ್ದು ಹಾಳಾಗ್ಬೇಡಿ: ರಾಕಿಂಗ್ ಸ್ಟಾರ್ ಯಶ್!

click me!