Anushka Shetty: ಅನುಷ್ಕಾ ಶೆಟ್ಟಿ ಸಿಗ್ತಾರೆಂದು 51 ಲಕ್ಷ ಟೋಪಿ ಹಾಕಿಸ್ಕೊಂಡ ಖ್ಯಾತ ನಿರ್ಮಾಪಕ!

By Suvarna News  |  First Published Jan 28, 2023, 4:31 PM IST

ಟಾಲಿವುಡ್​ ಮತ್ತು ಕಾಲಿವುಡ್​ನಲ್ಲಿ ಖ್ಯಾತಿ ಗಳಿಸಿರುವ ನಟಿ ಅನುಷ್ಕಾ ಶೆಟ್ಟಿ ತಮಗೆ ಸಿಗುತ್ತಾರೆ ಎನ್ನುವ ಕಾರಣಕ್ಕೆ ನಿರ್ಮಾಪಕರೊಬ್ಬರು 51 ಲಕ್ಷ ರೂಪಾಯಿಗಳ ಮೋಸ ಹೋಗಿದ್ದಾರೆ. ಏನಿದು ಘಟನೆ?
 


ತಮಿಳು ಹಾಗೂ ತೆಲಗು ಚಿತ್ರರಂಗದಲ್ಲಿ ಸೂಪರ್​ಸ್ಟಾರ್​ (Super Star) ಆಗಿ ಮಿಂಚುತ್ತಿರುವ ನಟಿಯರಲ್ಲಿ ಟಾಪ್​ ಮೋಸ್ಟ್​ ಸ್ಥಾನದಲ್ಲಿ ಇರುವವರು ಕನ್ನಡತಿ ಅನುಷ್ಕಾ ಶೆಟ್ಟಿ (Anushka Shetty). ಮಂಗಳೂರಿನ ಸ್ವೀಟಿ ಶೆಟ್ಟಿ, ಚಿತ್ರರಂಗಕ್ಕೆ ಕಾಲಿಟ್ಟು ಅನುಷ್ಕಾ ಶೆಟ್ಟಿಯಾಗಿ  ವರ್ಷಗಳೇ ಗತಿಸಿದ್ದು, ಈಕೆ ಬಹಳ ಬೇಡಿಕೆಯಲ್ಲಿರುವ ನಟಿ. 31 ವರ್ಷದ ಈ ಬೆಡಗಿ ಹಿಂದೆ ಭಾರಿ ಸುದ್ದಿಯಲ್ಲಿದ್ದುದು ಮದುವೆಯಿಂದಾಗಿ. ಕೆಲ ತಿಂಗಳ ಹಿಂದೆ ಇವರ ಮದುವೆ ಎನ್ನುವ ಸುದ್ದಿ  ಭಾರಿ ವೈರಲ್​ ಆಗಿತ್ತು. ಇವರು  ಸಿನಿಮಾರಂಗದವರನ್ನು ಮದುವೆಯಾಗುತ್ತಿಲ್ಲ. ಬದಲಿಗೆ ಉದ್ಯಮಿಯ ಹಿಡಿಯುತ್ತಿದ್ದಾರೆ. ಅದೂ  ಬೆಂಗಳೂರು ಮೂಲದ ಉದ್ಯಮಿಯನ್ನು ಮದುವೆಯಾಗಲಿದ್ದಾರಂತೆ. ಹುಡುಗ ಬೆಂಗಳೂರು ಮೂಲದ ಉದ್ಯಮಿಯಾಗಿದ್ದು ಮನೆಯವರೇ ನೋಡಿ ಮದುವೆ ನಿಶ್ಚಯ ಮಾಡುತ್ತಿದ್ದಾರೆ ಎಂದೆಲ್ಲಾ ಸುದ್ದಿ ಹರಡಿ ಅದು ಸದ್ಯ ತಣ್ಣಗಾಗಿದೆ. ಆದರೆ ಈ ನಟಿ ಈಗ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ಅದೇನೆಂದರೆ ಈಕೆಯ ಹೆಸರಿನಲ್ಲಿ ನಿರ್ಮಾಪಕರೊಬ್ಬರು ಮೋಸ ಹೋಗಿರುವ ಕಾರಣಕ್ಕೆ!

ಹೌದು! ಅನುಷ್ಕಾ ಶೆಟ್ಟಿಯ ಹೆಸರು ಹೇಳಿಕೊಂಡು ಮೋಸಗಾರನೊಬ್ಬ ತೆಲಗು ನಿರ್ಮಾಪಕರೊಬ್ಬರಿಗೆ (producer) ಭಾರಿ ಮೋಸ ಮಾಡಿದ್ದಾನೆ. ಅನುಷ್ಕಾ ಅವರನ್ನು ಭೇಟಿ ಮಾಡಿಸುವುದಾಗಿ ಹೇಳಿಕೊಂಡು ವಿಶ್ವಕರ್ಮ ಕ್ರಿಯೇಷನ್ಸ್ ಮುಖ್ಯಸ್ಥ ಹಾಗೂ ನಿರ್ಮಾಪಕ ಲಕ್ಷ್ಮಣ್ ಚಾರಿ (Lakshman Chari) ಅವರಿಗೆ 51 ಲಕ್ಷ ರೂಪಾಯಿ ಟೋಪಿ ಹಾಕಿದ್ದಾನೆ ಓರ್ವ ಆಸಾಮಿ. ಅನುಷ್ಕಾ ಶೆಟ್ಟಿ ಅವರ ಕಾಲ್‌ಶೀಟ್‌ ಕೊಡಿಸುವುದಾಗಿ ನಂಬಿಸಿ, ನಿರ್ಮಾಪಕರಿಗೆ ಮೋಸ ಮಾಡಿದ್ದಾನೆ ಯಲಾ ರೆಡ್ಡಿ ಎಂಬ ಆಸಾಮಿ. ಅನುಷ್ಕಾ ಶೆಟ್ಟಿ ಜೊತೆಗೆ ಸಂಗೀತ ನಿರ್ದೇಶಕ ಮಣಿ ಶರ್ಮಾ ಅವರನ್ನೂ   ಭೇಟಿ ಮಾಡಿಸುತ್ತೇನೆ ಎಂದು ವ್ಯಕ್ತಿ ಹೇಳಿಕೊಂಡು ಮೋಸ ಮಾಡಿದ್ದಾನೆ.

Tap to resize

Latest Videos

Pathaan: ಶಾರುಖ್‌ ಸಿನಿಮಾ ಸಕ್ಸಸ್​ ಹಿಂದೆ ಪಾಕಿಸ್ತಾನ​ದ ISI ನಂಟು: ಕಂಗನಾ ರಣಾವತ್‌

ಅಷ್ಟಕ್ಕೂ ನಟ- ನಟಿಯರು ಎಲ್ಲಿಯೋ ಶೂಟಿಂಗ್​ಗೆ (shooting)ಬಂದಾಗ ಅವರ ಜೊತೆ ನಿಂತು ಫೋಟೋ ತೆಗೆಸಿಕೊಂಡು ಇವರು ನಮಗೆ  ಪರಿಚಯ ಎಂದು ಹೇಳಿಕೊಂಡು ಜನರಿಗೆ ಮೋಸ ಮಾಡುವವರು ಅಲ್ಲಲ್ಲಿ ಕಾಣಸಿಗುತ್ತಾರೆ. ಆದರೆ ಇದೀಗ ಖುದ್ದು ನಿರ್ಮಾಪಕರೇ ಮೋಸಗಾರನ ಬಲೆಗೆ ಬಿದ್ದಿದ್ದಾರೆ! ಯಲ್ಲಾ ರೆಡ್ಡಿ (Yella Reddy) ತಾನು ಸಿನಿಮಾ ಮ್ಯಾನೇಜರ್‌ (manager) ಎಂದು ಲಕ್ಷ್ಮಣ್​ ಅವರಿಗೆ ಪರಿಚಯಿಸಿಕೊಂಡಿದ್ದಾನೆ. ನನಗೆ ತೆಲುಗಿನ ಎಲ್ಲಾ ಸ್ಟಾರ್‌ಗಳೂ ಬಹಳ ಕ್ಲೋಸ್‌ ಎಂದು ಬಣ್ಣ ಬಣ್ಣದ ಮಾತುಗಳನ್ನಾಡಿ ಲಕ್ಷ್ಮಣ್​ ಅವರನ್ನು ಮರುಳು ಮಾಡಿದ್ದಾನೆ. ನಂತರ ನಿಮಗೆ ಅನುಷ್ಕಾ ಶೆಟ್ಟಿ ಅವರ ಕಾಲ್‌ಶೀಟ್‌ ಕೊಡಿಸುತ್ತೇನೆ ಎಂದು ಸುಳ್ಳು ಹೇಳಿ ನಂಬಿಸಿದ್ದಾನೆ.  ಲಕ್ಷ್ಮಣ್‌ ಅವರು ತನ್ನ ಬಲೆಗೆ ಬೀಳುತ್ತಿರುವುದು ತಿಳಿಯುತ್ತಲೇ ಅವರಿಂದ 51 ಲಕ್ಷ ರೂಪಾಯಿ ಪೀಕಿದ್ದಾನೆ. ಲಕ್ಷ್ಮಣ್​ ಅವರೂ ಅನುಷ್ಕಾ ಅವರನ್ನು ಭೇಟಿ ಮಾಡುವ ಆಸೆಯಿಂದ ಎಲ್ಲಾ ರೆಡ್ಡಿ ಕೇಳಿದಷ್ಟು ಹಣ ನೀಡಿದ್ದಾರೆ.

ಆರಂಭದಲ್ಲಿ, ಅನುಷ್ಕಾ ಶೆಟ್ಟಿ ಅವರ ಜೊತೆ ಮಾತನಾಡಿಸುವುದಾಗಿ ಹೇಳಿ 26 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ. ಡೌಟ್​ ಬರಬಾರದು ಎನ್ನುವ ಕಾರಣಕ್ಕೆ  ಹಲವು ಬಾರಿ ಬೆಂಗಳೂರಿಗೂ ಕರೆದುಕೊಂಡು ಬಂದಿದ್ದಾನೆ. ಹೋಟೆಲ್​ ಬುಕ್​ ಕೂಡ ಮಾಡಿದ್ದಾನೆ. ಆದರೆ ಏನೇನೋ ನೆಪ ಹೇಳಿ, ಅನುಷ್ಕಾ ಅವರು ಬಿಜಿ ಇರುವುದರಿಂದ ಸಿಗಲು ಆಗುತ್ತಿಲ್ಲ ಎಂದಿದ್ದಾನೆ. ಈತ ಮಾಡುತ್ತಿರುವುದು ಮೋಸ ಎಂದು ಲಕ್ಷ್ಮಣ್​ ಅವರಿಗೆ ತಿಳಿಯಲೇ ಇಲ್ಲ. ಎರಡನೆಯ ಬಾರಿ ಮತ್ತಷ್ಟು ಬಣ್ಣ ಬಣ್ಣದ ಮಾತುಗಳಿಂದ ಮರುಳು ಮಾಡಿ  25 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ.  

ನಂತರ ಲಕ್ಷ್ಮಣ್​ ಅವರಿಗೆ ಸಂದೇಹ ಬರಲು ಶುರುವಾಗಿದೆ. ಎರಡನೆಯ ಬಾರಿ ಹಣ ಕೊಟ್ಟರೂ ಆತ ನಟಿಯನ್ನು ಭೇಟಿ ಮಾಡಿಸದೇ ಇರುವುದರಿಂದ ಡೌಟ್​ ಬಂದಿದೆ. ನಂತರ ಆಸಾಮಿ ಕೈಗೆ ಸಿಗದೇ ತಪ್ಪಿಸಿಕೊಳ್ಳಲು ಶುರು ಮಾಡಿದ ನಂತರ ತಾವು ಸಂಪೂರ್ಣ ಮೋಸ ಹೋಗಿರುವುದು ತಿಳಿದು  ಲಕ್ಷ್ಮಣ್‌ ಚಾರಿ ಅವರು ತೆಲುಗು ಫಿಲ್ಮ್‌ ಚೇಂಬರ್​ಗೆ (film chamber) ದೂರು ದಾಖಲು ಮಾಡಿದ್ದಾರೆ. ದೂರು ದಾಖಲಿಸಿದ ನಂತರ ಯಲಾ ರೆಡ್ಡಿ ಹಣ ವಾಪಸ್​ ಕೊಡುವುದಾಗಿ ಹೇಳಿದ್ದಾನೆ. ಆದರೆ ನಂತರ ಹಣ ಕೊಡುವ ಬದಲು,  ಹಣ ವಾಪಸ್​ ಕೇಳಿದರೆ  ಮನೆಯಲ್ಲಿರುವ ಹೆಂಗಸರಿಂದ ಕೇಸ್ ಹಾಕಿಸುವುದಾಗಿ ಹೆದರಿಸಿರುವುದಾಗಿ ಲಕ್ಷ್ಮಣ್​ ತಿಳಿಸಿದ್ದಾರೆ. ಇದೀಗ ಲಕ್ಷ್ಮಣ್​ ಅವರು ಬಂಜಾರ ಹಿಲ್ಸ್ ಪೊಲೀಸ್ ಠಾಣೆ (police station) ಮೆಟ್ಟಿಲೇರಿದ್ದಾರೆ. 

Aishwarya Rajesh: ದೇವಾಲಯದೊಳಗೆ ಮುಟ್ಟಾದ ಸ್ತ್ರೀ: ನಟಿ ಐಶ್ವರ್ಯಾ ಹೇಳಿಕೆಗೆ ಆಸ್ತಿಕರು ಕಿಡಿ!

click me!