ತಿಹಾರ್ ಜೈಲಿನಲ್ಲಿದ್ದಾಗ ಮಣ್ಣನ್ನು ತೆಗೆದು ತಲೆಗೆ ಹಾಕಿಕೊಳ್ಳುತ್ತಿದ್ದೆ ಎಂದು ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಮೈಸೂರಿನ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಹರಕೆ ತೀರಿಸುವ ಸಂದರ್ಭ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಮೈಸೂರು(ನ.08): ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ವತಿಯಿಂದ ಮಂಗಳವಾದ್ಯದೊಡನೆ ಬರಮಾಡಿಕೊಳ್ಳಲಾಯಿತು.
ನಂಜನಗೂಡು ದೇವಾಲಯದ ಗರ್ಭಗುಡಿಯಲ್ಲಿ ದೇವರ ಮುಂದೆ ಕುಳಿತು ಸ್ವಲ್ಪ ಕಾಲ ಪ್ರಾರ್ಥನೆ ಸಲ್ಲಿಸಿ ಧ್ಯಾನಸಕ್ತರಾದರು. ನಂತರ ಫಲತಾಂಬೂಲ ವಸ್ತ್ರಗಳನ್ನು ನೀಡಿ ಗೌರವಿಸಲಾಯಿತು.
ಮುಂಬೈನಲ್ಲಿ ನಾಟಕ ಮಾಡಿ ಆಸ್ಪತ್ರೆ ಸೇರಿದ್ರಂತೆ ನಾರಾಯಣ ಗೌಡ..!
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ತಿಹಾರ್ ಜೈಲಿನಲ್ಲಿದ್ದಾಗ ನಂಜುಂ ಡೇಶ್ವರಸ್ವಾಮಿಯನ್ನು ಪ್ರಾರ್ಥಿಸಿಕೊಂಡು ಭೂಮಿ ಮೇಲಿನ ಸಣ್ಣ ಮಣ್ಣನ್ನು ತೆಗೆದು ತಲೆಯ ಮೇಲೆ ಹಾಕಿಕೊಂಡಲ್ಲಿ ಸಮಸ್ಯೆಯಿಂದ ಬಿಡುಗಡೆಹೊಂದಬಹುದೆಂದು ನನ್ನ ಪತ್ನಿಗೆ ಯಾರೋ ಸಲಹೆ ನೀಡಿದ್ದರು. ಪ್ರತಿದಿನ 2 ರಿಂದ 3 ನಿಮಿಷಗಳ ಕಾಲ ಕುಟುಂಬದೊಂದಿಗೆ ಪೋನ್ ಮೂಲಕ ಮಾತನಾಡಲು ಅವಕಾಶ ನೀಡಿದ್ದರು.
ಆ ಸಂದರ್ಭದಲ್ಲಿ ನನಗೆ ನನ್ನ ಪತ್ನಿ ನೀಡಿದ್ದ ಸಲಹೆಯಂತೆ ತಿಹಾರ್ ಜೈಲಿನಲ್ಲಿ ಬೆಳಗ್ಗೆ ಅಥವಾ ಸಂಜೆ ಈಶ್ವರನ ದೇವಾಲಯಕ್ಕೆ ಭೇಟಿ ನೀಡಿ ನಂಜುಂಡೇಶ್ವರನ್ನು ಪ್ರಾರ್ಥನೆ ಮಾಡಿಕೊಂಡು ತಲೆಯ ಮೇಲೆ ಸ್ವಲ್ಪ ಭೂಮಿಯ ಮಣ್ಣನ್ನು ಹಾಕಿಕೊಳ್ಳುತ್ತಿದ್ದೆ. ಈ ದಿನ ನಂಜುಂಡೇಶ್ವರನ ಹರಕೆ ತೀರಿಸಿ, ತಾಯಿ ಚಾಮುಂಡೇಶ್ವರಿಯ ದರ್ಶನವನ್ನು ಪಡೆದಿದ್ದೇನೆ. ನಾನು ಕುಟುಂಬ ಸಮೇತ ದೇವಾಲಯಕ್ಕೆ ಭೇಟಿ ನೀಡಬೇಕಿತ್ತು, ಆದರೆ ಗೊಂದಲದಲ್ಲಿ ಬೇಡ ಬೇರೊಂದು ದಿನ ಹೋಗಿ ಬರುವುದಾಗಿ ಪತ್ನಿ ತಿಳಿಸಿದ್ದರಿಂದಾಗಿ ನಾನು ಹರಕೆ ತೀರಿಸಲು ಬಂದಿರುವುದಾಗಿ ತಿಳಿಸಿದ್ದಾರೆ.
ಮಂಡ್ಯ: ಅನರ್ಹ ಶಾಸಕ ನಾರಾಯಣಗೌಡ ಹತ್ಯೆಗೆ ಸುಪಾರಿ..?
ವಿನಯ್ ಗುರೂಜೀ ಅವರು ನನಗೆ ಒಳ್ಳೆಯದಾಗಲಿ ಎಂದು ತಾವು ಹಾಕಿಕೊಂಡಿದ್ದ ರುದ್ರಾಕ್ಷಿ ಮಾಲೆಯನ್ನು ನೀಡಿದ್ದರು. ಆದರೆ ಇಡಿ ಅಧಿಕಾರಿಗಳು ನನ್ನ ವಶಕ್ಕೆ ಪಡೆದ ನಂತರ ಅದನ್ನು ತೆಗೆದು ಅಧಿಕಾರಿಗಳ ವಶಕ್ಕೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಮಾಜಿ ಸಂಸದ ಆರ್. ಧ್ರುವನಾರಾಯಣ್, ವಿಪ ಸದಸ್ಯ ಧರ್ಮಸೇನ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ವಿಧಾನಸಭಾ ಉಸ್ತುವಾರಿ ಶ್ರೀಕಂಠು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯ ಕುಮಾರ್, ಕಾಂಗ್ರೆಸ್ ಮಹಿಳಾ ರಾಜ್ಯಾಧ್ಯಕ್ಷೆ ಪುಷ್ಪವತಿ ಅಮರನಾಥ್, ಮಾಜಿ ನಗರಸಭಾ ಸದಸ್ಯ ಎನ್.ಎಂ. ಮಂಜುನಾಥ್, ಜಿಪಂ ಮಾಜಿ ಸದಸ್ಯ ಕೆ. ಮಾರುತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೂಗಶೆಟ್ಟಿ, ನಗರಸಭಾ ಸದಸ್ಯ ಮಹೇಶ್, ಮಾಜಿ ಪುರಸಭಾ ಸದಸ್ಯ ಸಿ.ಎಂ. ಶಂಕರ್, ಶ್ರೀಧರ್, ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಜಿ. ಮಹೇಶ್, ಮಾಜಿ ವಿಶ್ವಕರ್ಮ ನಿಗಮ ಅಧ್ಯಕ್ಷ ನಂದಕುಮಾರ್, ಸಾವಿರಾರು ಕಾರ್ಯಕರ್ತರು ಇದ್ದರು.
KPCC ಅಧ್ಯಕ್ಷನಾಗಲು ನಾನೀಗ ರೆಡಿ: ಡಿ.ಕೆ.ಶಿವಕುಮಾರ್