
ಆರ್.ಕೆ
ಮೂವರು ಹುಡುಗರ ಪಯಣವನ್ನು ಪುಟಗಳನ್ನು ಹೇಳುತ್ತಾ ಜೀವನದ ಬೇರುಗಳು ಇರುವುದು ಹುಟ್ಟೂರಿನಲ್ಲೋ, ಉದ್ಯೋಗ ಆರಿಸಿಕೊಂಡ ಹೋದ ನಗರದಲ್ಲೋ ಎನ್ನುವ ಪ್ರಶ್ನೆಯನ್ನು ಮುಂದಿಡುವುದು ಇಂಟರ್ವಲ್ ಚಿತ್ರದ ಹೆಚ್ಚುಗಾರಿಕೆ. ಆರಂಭದಲ್ಲಿ ಪೋಲಿತನ, ತಮಾಷೆಯಾಗಿ ಸಾಗುತ್ತಲೇ ಮೂವರು ಬೇಜವಾಬ್ದಾರಿ ಪಾತ್ರಧಾರಿಗಳ ಮೂಲಕ ಮನಸ್ಸಿಗೆ ಆಪ್ತವಾಗುವ ಸಂದೇಶ ದಾಟಿಸುತ್ತಾರೆ ನಿರ್ದೇಶಕ ಭರತ್. ನಗಿಸುತ್ತಲೇ ಸಾಗುವ ಈ ಚಿತ್ರವು ಯಾವುದನ್ನು ಮತ್ತು ಯಾರನ್ನೂ ವೈಭವೀಕರಣ ಮಾಡಿಲ್ಲ.
ತೀರಾ ಸಹಜವಾಗಿ ಪ್ರತಿಯೊಂದು ದೃಶ್ಯವನ್ನು ರೂಪಿಸಲಾಗಿದೆ. ದೂರದ ಬೆಟ್ಟ ನುಣ್ಣಗೆ ಎನ್ನುವ ಮಾತು ನೆನಪಿಸುವ ಈ ಚಿತ್ರದಲ್ಲಿ ಓದೋ ವಯಸ್ಸಿನಲ್ಲಿ ಓದದೆ ಪೋಲಿ ಬಿದ್ದಿರುವ ಮೂವರು ಹುಡುಗರು, ತುಂಬಾ ಕನಸುಗಳನ್ನು ಕಟ್ಟಿಕೊಂಡು ಹಳ್ಳಿ ಬಿಟ್ಟು ನಗರ ಸೇರುತ್ತಾರೆ. ಆದರೆ, ನಗರದಲ್ಲಿ ಇವರು ಹೇಗೆಲ್ಲ ಸಂಕಷ್ಟಗಳನ್ನು ಎದುರಿಸುತ್ತಾರೆ, ಏನೋ ಬದಲಾವಣೆ ಆಗೋಯ್ತು ಎನ್ನುವ ಹೊತ್ತಿಗೆ ಮತ್ತಿನ್ನೇನೋ ಸಮಸ್ಯೆ ಎದುರಾಗುತ್ತದೆ. ಕೊನೆಗೆ ಈ ಮೂವರ ಜೀವನದಲ್ಲಿ ಗೆಲ್ಲುತ್ತಾರೆಯೇ ಎಂಬುದು ಚಿತ್ರ.
ಚಿತ್ರ: ಇಂಟರ್ವಲ್
ನಿರ್ದೇಶನ: ಭರತ್
ತಾರಾಗಣ: ಶಶಿ ರಾಜ್, ಪ್ರಜ್ವಲ್ ಕುಮಾರ್ ಗೌಡ, ಸುಕಿ, ಚರಿತ್ರ ರಾವ್,ಸಹನ ಆರಾಧ್ಯ, ಸಮೀಕ್ಷ, ದಾನಂ
ಚಿತ್ರದ ಮೊದಲರ್ಧ ತಮಾಷೆಯಾಗಿ ಸಾಗುತ್ತ, ದ್ವಿತಿಯಾರ್ಧ ಕತೆ ತೆರೆದುಕೊಳ್ಳುವಹೊತ್ತಿಗೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ. ಮುಂದೇನು ಎಂಬುದಕ್ಕೆ ಚಿತ್ರ ನೋಡಬೇಕು. ಈಗಿನ ಕಾಲದ ಯುವ ಸಮುದಾಯದ ಮನಸ್ಥಿತಿಯನನ್ನ ಬೇಸ್ ಮಾಡಿಕೊಂಡಿರುವ ಕತೆಯಾಗಿರುವುದರಿಂದ ಇದು ಯೂಥ್‌ಪುಲ್ ಸಿನಿಮಾ ಕೂಡ ಹೌದು. ಪ್ರತಿಯೊಬ್ಬರ ಜೀವನದಲ್ಲೂ ಒಂದು ಇಂಟರ್ವಲ್ ಇರುತ್ತದೆ. ಅದು ಯಾವಾಗ ಮತ್ತು ಹೇಗೆ ಬರುತ್ತದೆ ಎಂಬುದನ್ನು ತಿಳಿಯಲು ಈ ಚಿತ್ರ ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.