Love Seasons Review: ಈ ಒಂದು ಕಾರಣಕ್ಕಾಗಿ 'ಲವ್ ಸೀಸನ್ಸ್' ಸಿನಿಮಾ ಮಿಸ್ ಮಾಡಿಕೊಳ್ಳಬೇಡಿ!

Published : Jul 04, 2026, 04:28 PM IST
Love Seasons

ಸಾರಾಂಶ

Love Seasons Movie Review: ಈ ಕತೆ ವಿಭಿನ್ನ ಹಾದಿ ಹಿಡಿಯುತ್ತದೆ. ಅವನ ಬದುಕನ್ನು ಸೀಸನ್‌ಗಳ ರೀತಿಯಲ್ಲಿ ತೆರೆದಿಡುತ್ತಾ ಹೋಗುತ್ತದೆ. ಎಲ್ಲವೂ ಸ್ಪಷ್ಟವಾಗುತ್ತಾ ಹೋಗುತ್ತದೆ. ಹಲವು ಪ್ರೇಮಗಳ ಕಥನ ಹೇಳುತ್ತಾರೆ.

ಆರ್‌.ಎಸ್‌.

ಇದೊಂದು ಪ್ರೇಮಕತೆ ಎಂದು ಸುಲಭವಾಗಿ ಹೇಳಿಬಿಡಬಹುದು. ಆದರೆ ಪ್ರೇಮದ ಕತೆ ಹೇಳುತ್ತಲೇ ಜೀವನದ ಸಂಕೀರ್ಣತೆಯನ್ನು ತೆರೆದಿಡುತ್ತಾ ಹೋಗುವುದು ಈ ಚಿತ್ರದ ವಿಶೇಷತೆ. ಅದರಲ್ಲೂ ಮುಕುಂದ ರಾಮಸ್ವಾಮಿ ಮೊದಲ ಸಿನಿಮಾದಲ್ಲಿ ಅತ್ಯಂತ ಸವಾಲಿನ ಪಾತ್ರವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿರುವುದು ಮತ್ತೊಂದು ಹೆಗ್ಗಳಿಕೆ.

ಈ ಸಿನಿಮಾದ ಆರಂಭ ಕೂಡ ವಿಭಿನ್ನವಾಗಿದೆ. ಒಬ್ಬ ತರುಣನ ಮೂಲಕ ಕತೆ ಆರಂಭವಾಗುತ್ತದೆ. ಅವನ ಜೀವನದ ಏಳುಬೀಳುಗಳು, ಒಂದು ಆಘಾತದ ಬಳಿಕ ಬದಲಾಗುವ ಬದುಕಿನ ಚಿತ್ರಣವನ್ನು ನಿರ್ದೇಶಕರು ದಾಟಿಸುತ್ತಾ ಹೋಗುತ್ತಾರೆ. ಅವನ ತವಕ ತಲ್ಲಣಗಳು, ಏಳುಬೀಳುಗಳಲ್ಲೇ ಮೊದಲಾರ್ಧ ನಡೆಯುತ್ತದೆ. ಈ ಭಾಗ ಸರಾಗ, ನಿರಾಳ, ಆದರೆ ಅಸ್ಪಷ್ಟ.

ದ್ವಿತೀಯಾರ್ಧದಲ್ಲಿ ಈ ಕತೆ ವಿಭಿನ್ನ ಹಾದಿ ಹಿಡಿಯುತ್ತದೆ. ಅವನ ಬದುಕನ್ನು ಸೀಸನ್‌ಗಳ ರೀತಿಯಲ್ಲಿ ತೆರೆದಿಡುತ್ತಾ ಹೋಗುತ್ತದೆ. ಎಲ್ಲವೂ ಸ್ಪಷ್ಟವಾಗುತ್ತಾ ಹೋಗುತ್ತದೆ. ಹಲವು ಪ್ರೇಮಗಳ ಕಥನ ಹೇಳುತ್ತಾರೆ. ಅಚ್ಚರಿ, ನವಿರುತನ, ಮೋಸ, ದ್ರೋಹ ಎಲ್ಲವೂ ಈ ಭಾಗದಲ್ಲಿ ಬರುತ್ತದೆ. ಅಷ್ಟರ ಮಟ್ಟಿಗೆ ವಿಭಿನ್ನತೆ ಕಾಪಾಡಲು ನಿರ್ದೇಶಕರು ಯತ್ನಿಸಿದ್ದಾರೆ. ಕೊಂಚ ಬರವಣಿಗೆಯನ್ನು ತೀವ್ರಗೊಳಿಸಿದ್ದರೆ ಮತ್ತಷ್ಟು ಗಾಢವಾಗುತ್ತಿತ್ತು.

ಚಿತ್ರ: ಲವ್ ಸೀಸನ್ಸ್‌

ನಿರ್ದೇಶನ: ಕೃತ್ವಿಕ್ ಶೆಟ್ಟಿ

ತಾರಾಗಣ: ಮುಕುಂದ ರಾಮಸ್ವಾಮಿ, ದಿಯಾ ಕೀರ್ತಿ, ಚಂದನಾ ಗೌಡ, ಶ್ವೇತಾ ಕೊಗ್ಲೂರು, ರಾಜೇಶ್ ನಟರಂಗ

ರೇಟಿಂಗ್: 3

ಅದರ ಹೊರತಾಗಿ ಏನು ಹೇಳಬೇಕೋ, ಅದನ್ನು ಅಚ್ಚುಕಟ್ಟಾಗಿ ಹೇಳಿದ್ದಾರೆ. ರಾಜೇಶ್‌ ನಟರಂಗ, ಮಂಡ್ಯ ರಮೇಶ್‌ರಂತಹ ಹಿರಿಯರು ಕತೆಯನ್ನು ಆಪ್ತಗೊಳಿಸಿದ್ದಾರೆ. ನಾಯಕಿಯರಾದ ದಿಯಾ ಕೀರ್ತಿ, ಚಂದನಾ ಗೌಡ, ಶ್ವೇತಾ ಕೊಗ್ಲೂರು ಉತ್ತಮವಾಗಿ ನಟಿಸಿದ್ದಾರೆ. ದಾರಿಯಲ್ಲಿ ಸಿಗುವ ವಿಚಿತ್ರ ತಿರುವುಗಳು ದಾರಿಯನ್ನು ಅಥವಾ ಜೀವನವನ್ನು ಹೇಗೆ ಸಂಕೀರ್ಣಗೊಳಿಸುತ್ತದೆ ಎಂಬುದನ್ನು ಪ್ರೇಮದ ಹಿನ್ನೆಲೆಯಲ್ಲಿ ಹೇಳಿರುವ ನಿರ್ದೇಶಕರ ಪ್ರಯತ್ನ ಶ್ಲಾಘನೀಯ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Gramayana Movie Review: ಹೇಗಿದೆ ದೊಡ್ಮನೆ ಕುಡಿ ‘ಗ್ರಾಮಾಯಣ’? ಇಲ್ಲಿದೆ ಸಂಪೂರ್ಣ ವಿಮರ್ಶೆ
Nagabandham X Review: ನಭಾ, ಕೆಜಿಎಫ್ ಗರುಡ 'ನಾಗಬಂಧಂ'ಗೆ ಪ್ರೇಕ್ಷಕರು ಏನಂದ್ರು? ಇಲ್ಲಿದೆ ಟ್ವಿಟರ್ ವಿಮರ್ಶೆ