Sutradhari Film Review: ಆತ್ಯಹತ್ಯೆಗಳ ಹಿಂದಿನ ಸೂತ್ರಧಾರಿಯ ಹುಡುಕಾಟ

Published : May 10, 2025, 10:54 AM IST
Sutradhari Film Review: ಆತ್ಯಹತ್ಯೆಗಳ ಹಿಂದಿನ ಸೂತ್ರಧಾರಿಯ ಹುಡುಕಾಟ

ಸಾರಾಂಶ

ಅಪ್ಪನನ್ನೇ ದ್ವೇಷಿಸುವುದು ಯಾಕೆ ಎಂಬುದು ಮತ್ತೊಂದು ಕುತೂಹಲಕಾರಿ ಅಂಶ. ಇಂಥ ಪೊಲೀಸ್‌ ಮುಂದೆ ಒಂದು ಪ್ರಕರಣ ಬರುತ್ತದೆ. ಒಂದಿಷ್ಟು ಮಂದಿ ಅಪಹರಣಕ್ಕೆ ಒಳಗಾದವರು ಕಿಡ್ನಾಪ್‌ ಕೂಪದಿಂದ ಆಚೆ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುತ್ತಾರೆ. 

ಆರ್‌. ಕೇಶವಮೂರ್ತಿ

‘ಸೂತ್ರಧಾರಿ’ ಪಕ್ಕಾ ನೆತ್ತರಿನ ಲೋಕದ ಕ್ರೈಮ್‌ ಕತೆ. ಕ್ರೈಮ್‌ ಹುಟ್ಟು ಮತ್ತು ಕಾರಣಗಳೇ ಚಿತ್ರದ ಸ್ಕ್ರೀನ್‌ ಪ್ಲೇ ಆಧಾರ ಸ್ತಂಭಗಳು. ಆದರೆ, ಆಧಾರಗಳನ್ನು ಹುಡುಕುತ್ತಾ ಹೋಗುವ ಪೊಲೀಸ್‌ ಅಧಿಕಾರಿಗೆ ಸಿಗೋದು ಮಾತ್ರ ಪಾತ್ರಧಾರಿಗಳು. ಹಾಗಾದರೆ ಸೂತ್ರಧಾರಿ ಯಾರು ಎನ್ನುವ ಕುತೂಹಲಕ್ಕೆ ನೀವು ಚಿತ್ರ ನೋಡಬೇಕು. ಚಿತ್ರದ ನಾಯಕ ವಿಜಯ್‌ ಪೊಲೀಸ್‌ ಅಧಿಕಾರಿ. ಮೂಗಿನ ಮೇಲೆ ಸಿಟ್ಟು. ಕ್ರಿಮಿನಲ್‌ಗಳನ್ನು ಕಂಡ ಕೂಡಲೇ ಗುಂಡು ಹಾರಿಸಿ ಸಾಯಿಸುವ ಖಡಕ್‌ ಖಾಕಿ. ವಿಜಯ್‌ಗೆ ಸತ್ತೋಗಿರುವ ತನ್ನ ಅಪ್ಪನ ಮೇಲೆ ಸಿಟ್ಟು. 

ಅಪ್ಪನನ್ನೇ ದ್ವೇಷಿಸುವುದು ಯಾಕೆ ಎಂಬುದು ಮತ್ತೊಂದು ಕುತೂಹಲಕಾರಿ ಅಂಶ. ಇಂಥ ಪೊಲೀಸ್‌ ಮುಂದೆ ಒಂದು ಪ್ರಕರಣ ಬರುತ್ತದೆ. ಒಂದಿಷ್ಟು ಮಂದಿ ಅಪಹರಣಕ್ಕೆ ಒಳಗಾದವರು ಕಿಡ್ನಾಪ್‌ ಕೂಪದಿಂದ ಆಚೆ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುತ್ತಾರೆ. ಕಿಡ್ನಾಪ್‌ನಿಂದ ಬಚಾವ್‌ ಆದರೂ ಸಾಯುವುದು ಯಾಕೆ, ಇದರ ಹಿಂದೆ ಯಾರಿದ್ದಾರೆ ಎಂದು ತನಿಖೆ ಶುರುವಾಗುತ್ತದೆ. ಕೊನೆತನಕ ಕತೆಯ ಗುಟ್ಟು ರಟ್ಟಾಗದಂತೆ ಕುತೂಹಲ ಕಾಯ್ದುಕೊಂಡಿರುವುದು ನಿರ್ದೇಶಕ ಕಿರಣ್‌ ಕುಮಾರ್‌ ಹೆಚ್ಚುಗಾರಿಕೆ.

ಚಿತ್ರ: ಸೂತ್ರಧಾರಿ
ತಾರಾಗಣ: ಚಂದನ್‌ ಶೆಟ್ಟಿ, ಅಪೂರ್ವ, ಸಂಜನಾ ಆನಂದ್‌, ನವರಸನ್‌, ತಬಲಾ ನಾಣಿ, ಪ್ರಶಾಂತ್‌ ನಟನಾ, ಕಾವ್ಯ ಕೃಷ್ಣಮೂರ್ತಿ
ನಿರ್ದೇಶನ: ಕಿರಣ್‌ ಕುಮಾರ್‌
ರೇಟಿಂಗ್‌: 3

ಆ್ಯಕ್ಷನ್‌ ಹಾಗೂ ಕ್ರೈಮ್‌ ನೆರಳಿನ ಕತೆಗೆ ಚಂದನ್‌ ಶೆಟ್ಟಿ ಇನ್ನಷ್ಟು ತಯಾರಿ ಮಾಡಿಕೊಳ್ಳಬೇಕಿತ್ತು, ತಾಂತ್ರಿಕತೆ ಹಾಗೂ ಮೇಕಿಂಗ್‌ ವಿಭಾಗದ ಕಡೆ ಗಮನ ಕೊಡಬೇಕಿತ್ತು, ಇಡೀ ಕತೆ ನಿಂತಿರುವ ಅಂಶ ರೆಗ್ಯುಲರ್‌ ಅನಿಸುತ್ತದೆ. ಇದರ ಹೊರತಾಗಿಯೂ ಚಿತ್ರದ ನಾಯಕಿ ಅಪೂರ್ವ, ತಬಲಾ ನಾಣಿ ಹಾಗೂ ನರಸನ್‌ ಪಾತ್ರಗಳು ಚಿತ್ರದ ನಿಜವಾದ ಪಿಲ್ಲರ್‌ಗಳು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?