ಚಿತ್ರ ವಿಮರ್ಶೆ: ಕೊಡೆಮುರುಗ

Kannadaprabha News   | Asianet News
Published : Apr 10, 2021, 04:32 PM IST
ಚಿತ್ರ ವಿಮರ್ಶೆ: ಕೊಡೆಮುರುಗ

ಸಾರಾಂಶ

ಸಿನಿಮಾದೊಳಗೆ ಸಿನಿಮಾ ತೋರಿಸುವಂತಹ ಕತೆಗಳು ಸಾಕಷ್ಟು ಬಂದಿವೆ. ‘ಕೊಡೆಮುರುಗ’ ಅದೇ ಸಾಲಿನ ಚಿತ್ರವಾದರೂ ತನ್ನ ಕತೆ ಮತ್ತು ನಿರ್ದೇಶಕರು ಈ ಚಿತ್ರದ ಮೂಲಕ ಹೇಳಹೊರಟಿರುವ ಸಂಗತಿಗಳ ಕಾರಣಕ್ಕೆ ಭಿನ್ನವಾಗಿ ನಿಲ್ಲುತ್ತದೆ. 

ಮನರಂಜನೆಯನ್ನೇ ಪ್ರಧಾನ ಎನಿಸಿಕೊಂಡಿರುವ ಈ ಚಿತ್ರದಲ್ಲಿ ಸ್ಟಾರ್ ಹೀರೋಗಳು ಇಲ್ಲ. ಆದರೂ ಒಳ್ಳೆಯ ಕತೆ ಇದೆ. ಕೋಟಿ ಕೋಟಿ ಬಜೆಟ್ ಮೀರಿಸುವ ಮೇಕಿಂಗ್ ಇಲ್ಲ. ಆದರೂ ಮನಸ್ಸಿಗೆ ಮುಟ್ಟುವ ಸೆಂಟಿಮೆಂಟ್ ತಿರುಳು ಇವೆ. ಹೀರೋಯಿಸಂ ಇಲ್ಲ. ಆದರೂ ಕತೆಯೇ ಹೀರೋ ಎನ್ನುವ ಅಪ್ಪಟ ಕಲಾವಿದರು ಇಲ್ಲಿದ್ದಾರೆ. ನಿರ್ದೇಶಕರ, ನಿರ್ಮಾಪಕ, ಕಲಾವಿದರು ಎಲ್ಲರೂ ಕತೆಗೆ ಶರಣಾಗತರಾದರೆ ಎಂಥ ಸಿನಿಮಾ ಮೂಡಬಹುದು ಎಂಬುದಕ್ಕೆ ಈ ‘ಕೊಡೆಮುರುಗ’ ಚಿತ್ರವೇ ಸಾಕ್ಷಿ. ಹೀಗಾಗಿ ಒಮ್ಮೆ ಚಿತ್ರವನ್ನು ನೋಡಲು ಅಡ್ಡಿ ಇಲ್ಲ ಎನ್ನಬಹುದು.

'ವಕೀಲ್ ಸಾಬ್' ಚಿತ್ರದ ಬಗ್ಗೆ ಟ್ವೀಟ್ಸ್ ಸುರಿಮಳೆ; ಚಿತ್ರ ವಿಮರ್ಶೆ ರೆಡಿ! 

ತಾರಾಗಣ: ಮುನಿಕೃಷ್ಣ, ಸುಬ್ರಮಣ್ಯ ಪ್ರಸಾದ್, ಕುರಿ ಪ್ರತಾಪ್, ರಾಕ್‌ಲೈನ್ ಸುಧಾಕರ್, ದತ್ತಣ್ಣ, ಅರವಿಂದ್ ರಾವ್, ಸ್ವಯಂವರ ಚಂದ್ರು, ಪಲ್ಲವಿ ಗೌಡ, ಕಾಮಿನಿಧರನ್
ನಿರ್ದೇಶನ: ಸುಬ್ರಮಣ್ಯ ಪ್ರಸಾದ್
ನಿರ್ಮಾಣ: ಕೆ ರವಿಕುಮಾರ್
ಛಾಯಾಗ್ರಾಹಣ: ರುದ್ರಮನಿ ಬೆಳಗೆರೆ
ಸಂಗೀತ: ಎಂಎಸ್ ತ್ಯಾಗರಾಜ್

ತಾನು ಮಾಡಿಕೊಂಡಿರುವ ಕತೆ ಸಿನಿಮಾ ಆಗಬೇಕು ಎಂದುಕೊಳ್ಳುವ ಪ್ರತಿಭಾವಂತ ಯುವಕ, ತಾನು ನಿರ್ಮಾಪಕ ಆಗಬೇಕಾದರೆ ತನ್ನ ತಮ್ಮನೇ ಹೀರೋ ಆಗಬೇಕು ಎನ್ನುವ ನಿರ್ಮಾಪಕ, ನಾಯಕನ ಮೂತಿ ನೋಡಿ ಹೆದರುವ ನಾಯಕಿ, ತಾಯಿ ಪಾತ್ರ ಮಾಡುವುದಾದರೂ ಹೇಗೆಂದು ಯೋಚಿಸುವ ನಡು ವಯಸ್ಸಿನ ಮಹಿಳೆ, ಸಾಲದಕ್ಕೆ ನಾಯಕನ ್ರೆಂಡ್ ಕಿತಾಪತಿ... ಇವೆಲ್ಲ ಕತೆಗೆ ಪೂರಕವಾಗಿ ಬಂದು ಹೋಗುತ್ತ ಪ್ರೇಕ್ಷಕರಲ್ಲಿ ನಗು ತರಿಸುತ್ತದೆ. ಸಿನಿಮಾ ನಿರ್ದೇಶಕನಾಗಬೇಕು ಒದ್ದಾಡುವವರ ನೈಜ ಘಟನೆಗಳು, ನಿರ್ಮಾಪಕರ ಸಂಕಷ್ಟಗಳು, ಸಿನಿಮಾ ಬಿಡುಗಡೆ ಮತ್ತು ವಿತರಣೆಯ ಒಳಸುಳಿಗಳು ಹೀಗೆ ಸಾಕಷ್ಟು ಅಂಶಗಳನ್ನು ಸಿನಿಮಾ ಒಳಗೊಳ್ಳುತ್ತದೆ. ಈ ಎಲ್ಲವೂ ನೈಜತೆಗೆ ಹತ್ತಿರವಾಗಿವೆ.

ಚಿತ್ರ ವಿಮರ್ಶೆ: ಯುವರತ್ನ 

ಈ ಎಲ್ಲಾ ತಿರುವುಗಳು ಎಪ್ಪತ್ತು, ಎಂಭತ್ತರ ದಶಕದ ಹಿನ್ನೆಲೆಯಲ್ಲಿ ಮೂಡುವ ಸಿನಿಮಾ ಜತೆಗೆ ಸಾಗುತ್ತದೆ. ಈ ಕಾರಣಕ್ಕೆ ಪ್ರೇಕ್ಷಕನಿಗೆ ವರ್ತಮಾನದ ಸಿನಿಮಾ ಜಗತ್ತಿನ ನೈಜತೆ ಮತ್ತು ರೆಟ್ರೋ ದಿನಗಳ ಒಂದು ಹಾಸ್ಯ ಸಿನಿಮಾ ಎರಡನ್ನೂ ಒಟ್ಟಿಗೆ ನೋಡಿದ ಅನು‘ವ ಆಗುತ್ತದೆ. ರಾಕ್‌ಲೈನ್ ಸುಧಾಕರ್ ಖಡಕ್ ವಾಯ್ಸ್, ಕುರಿ ಪ್ರತಾಪ್ ಕಾಮಿಡಿ ಕಮಾಲ್, ಮುನಿಕೃಷ್ಣರ ತಿಕ್ಕಲುತನಗಳು ನೋಡುತ್ತ ಹೋದಂತೆ ಸಿನಿಮಾ ಮುಗಿಯುವುದೇ ಗೊತ್ತಾಗುವುದಿಲ್ಲ. ಇದರ ಜತೆಗೆ ಎರಡು ಹಾಡು ಕೂಡ ಕೇಳುವಂತಿದೆ. ಕೊರೋನಾ ಸಂಕಷ್ಟದಲ್ಲಿ ನಗು, ಮನರಂಜನೆ ಮರೆತವರಿಗೆ ‘ಕೊಡೆ ಮುರುಗ’ ಒಳ್ಳೆಯ ಕಾಮಿಡಿ ಟಾನಿಕ್ ಆಗಬಲ್ಲದು. ನಿರ್ದೇಶಕ ಸುಬ್ರಮಣ್ಯ ಪ್ರಸಾದ್, ಮೊದಲ ಹೆಜ್ಜೆಯಲ್ಲೇ ತಮ್ಮ ವೃತ್ತಿ ಪಯಣದಲ್ಲಾಗುವ ಸಂಕಷ್ಟಗಳನ್ನು ನಗುತ್ತಲೇ ಹೇಳುವ ಪ್ರಯತ್ನ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?
ಪ್ರೇಮವೋ, ದ್ವೇಷವೋ, ಥ್ರಿಲ್ಲರೋ?: ಇಲ್ಲಿದೆ ಅನೇಕ ತಿರುವುಗಳ 'ಫ್ಲರ್ಟ್' ಸಿನಿಮಾ ವಿಮರ್ಶೆ