ತೆಲುಗು ಪುಷ್ಪ ಚಿತ್ರ ಮತ್ತು ಕನ್ನಡ ಆನ ಚಿತ್ರ ಒಟ್ಟಿಗೆ ಬಿಡುಗಡೆ ಆಗಿದೆ. ಪುಷ್ಪ ನೋಡೋರ ಸಂಖ್ಯೆ ಹೆಚ್ಚಾಗಿದೆ ಹಾಗಂತ ಕನ್ನಡ ಸಿನಿಮಾ ಕೈ ಬಿಟ್ಟಿಲ್ಲ ಕನ್ನಡಿಗರು. ಹೇಗಿದೆ ನೋಡಿ ಆನ....
ಆರ್. ಕೇಶವಮೂರ್ತಿ
ಭಾರತದ ಮೊದಲ ಸೂಪರ್ ಫೀಮೇಲ್ ಸಿನಿಮಾ, ಕನ್ನಡದಲ್ಲಿ ಇಂಥ ಚಿತ್ರವೇ ಬಂದಿಲ್ಲ, ನನ್ನ ಕೆರಿಯರ್‌ನಲ್ಲಿ ಇದೇ ಮೊದಲು ಇಂಥ ಕತೆಯ ಚಿತ್ರದಲ್ಲಿ ನಟಿಸುತ್ತಿರುವುದು... ಹೀಗೆ ಚಿತ್ರತಂಡದ ಪ್ರಶಂಸೆಯ ಮಾತುಗಳೊಂದಿಗೆ ತೆರೆ ಮೇಲೆ ಬಂದ ‘ಆನ’ ಸಿನಿಮಾ ಹೇಗಿದೆ ಎಂದು ಕೇಳಿದರೆ ಹೇಳಕ್ಕೆ ಕಷ್ಟಆಗುತ್ತದೆ. ಹಾರರ್ ಚಿತ್ರವೋ, ದೆವ್ವದ ಸಿನಿಮಾನೋ, ಸೈನ್ಸ್ ಫಿಕ್ಷನ್ ಕತೆಯೋ, ವೈಜ್ಞಾನಿಕ ಚಿತ್ರವೋ, ಅವೈಜ್ಞಾನಿಕ ಕತೆಯೋ ಎಂಬುದನ್ನು ಚಿತ್ರವನ್ನು ಮೂರು ಮೂರು ಸಲ ನೋಡಿದರೆ ಹೇಳಲು ಆಗಲ್ಲ. ಈ ಹಿನ್ನೆಲೆಯಲ್ಲಿ ಚಿತ್ರತಂಡದ ಮಾತನ್ನೇ ನೆನಪಿಸಿಕೊಳ್ಳುವುದಾದರೆ, ‘ಕನ್ನಡದಲ್ಲಿ ಮಾತ್ರವಲ್ಲ, ಇಂಡಿಯಾದಲ್ಲೇ ಇಂಥ ಚಿತ್ರ ಬಂದಿಲ್ಲ!’ ಎನ್ನಬಹುದು.
No Theater for Kannada Movie: ಪುಷ್ಪದಿಂದ ಅದಿತಿ ಪ್ರಭುವೇವ ಸಿನಿಮಾಗಿಲ್ಲ ಥಿಯೇಟರ್!ತಾರಾಗಣ: ಅದಿತಿ ಪ್ರಭುದೇವ, ಸುನೀಲ್ ಪುರಾಣಿಕ್, ಶಿವಮಂಜು, ಚೇತನ್ ಗಂಧರ್ವ, ರನ್ವಿತ್ ಶಿವಕುಮಾರ್, ಪ್ರೇರಣ, ವರುಣ್ ಅಮರವಾತಿ, ಕಾರ್ತಿಕ್ ನಾಗಾರಾಜನ್
ನಿರ್ದೇಶನ: ಮನೋಜ್ ಪಿ ನಡಲುಮನೆ
ಬ್ರಿಟಿಷರ ಕಾಲದ ಮಂತ್ರವಾದಿಗಳ ಕತೆ, ಆ ಕತೆಯಲ್ಲಿ ಬರುವ ಶ್ರೀಮಂತ ಕುಟುಂಬ, ಆ ಕುಟುಂಬದಲ್ಲಿ ಪವರ್‌ಫುಲ್ಲಾದ ಹೆಣ್ಣು ಮಗು ಹುಟ್ಟುವುದು, ಆಕೆಯ ಶಕ್ತಿಯನ್ನು ದಕ್ಕಿಸಿಕೊಳ್ಳಲು ಕಾಯುತ್ತಿರುವ ಮಂತ್ರವಾದಿ, ಹಣಕ್ಕಾಗಿ ಅವಳನ್ನು ಕಿಡ್ನಾಪ್ ಮಾಡುವ ಒಂದು ತಂಡ, ಹುಡುಕಲು ಹೋದ ಪೊಲೀಸ್ ಅಧಿಕಾರಿಗೇ ದಿಕ್ಕು ತೋಚದಂತಾಗುವುದು... ಇವಿಷ್ಟುಅಂಶಗಳು ಯಾವುದೇ ತಳಹದಿ ಇಲ್ಲದೆ ತೆರೆ ಮೇಲೆ ಬಂದು ಹೋಗುತ್ತವೆ. ಇದೆಲ್ಲವನ್ನೂ ಸೇರಿಸಿ ನಿರ್ದೇಶಕರು ‘ಆನ’ ಚಿತ್ರವನ್ನು ಮಾಡಿದ್ದಾರೆ. ಇಲ್ಲಿ ಹಣಕ್ಕಾಗಿ ನಾಯಕಿಯನ್ನು ಅಪಹರಿಸುವ ಗ್ಯಾಂಗ್‌ನ ಎಪಿಸೋಡ್ ಬಿಟ್ಟರೆ ಮಿಕ್ಕಂತೆ ಕತೆಯ ಯಾವುದೇ ಭಾಗದಲ್ಲಿ ಸ್ಪಷ್ಟತೆ ಇಲ್ಲ. ಇಂಥ ಅಸ್ಪಷ್ಟಚಿತ್ರದಲ್ಲಿ ಪಾತ್ರಧಾರಿಗಳು ಕೂಡ ತಮಗೆ ತೋಚಿದಂತೆ ಪಯಣಿಸುತ್ತವೆ. ಹೀಗಾಗಿ ಯಾವ ಪಾತ್ರಗಳು ನೋಡುಗನ ಮನ ಮುಟ್ಟುವುದಿಲ್ಲ.