
ಪುನರ್ಜನ್ಮ, ಕರ್ಮದ ಲೆಕ್ಕಾಚಾರ ಹಾಗೂ ದೈವ-ದುಷ್ಟ ಶಕ್ತಿಗಳ ಸಂಘರ್ಷದ ಸುತ್ತ ಸಾಗುವ ಚಿತ್ರ ತ್ರಿಕಾರಂ. ಶೀರ್ಷಿಕೆಗೆ ತಕ್ಕಂತೆ ಮೂರು ಮುಖ್ಯ ಪಾತ್ರಗಳ ಸಂಬಂಧ ಮತ್ತು ಹಿಂದಿನ ಜನ್ಮದ ನಂಟೇ ಚಿತ್ರದ ಜೀವಾಳ. ನಾಯಕ ಮಿಥುನ್‌ನನ್ನು (ಹರ್ಷವರ್ಧನ್) ಹಿಂದಿನ ಜನ್ಮದ ನಿಗೂಢ ಕನಸುಗಳು ಕಾಡುತ್ತಿರುತ್ತವೆ.
ಮತ್ತೊಂದೆಡೆ ಹಗಲಿನಲ್ಲಿ ಈತನ ಪ್ರೀತಿ ತಿರಸ್ಕರಿಸುವ ನಾಯಕಿ ಮೀರಾ (ನಿಶ್ಚಿತಾ ಶೆಟ್ಟಿ), ರಾತ್ರಿಯಾಗುತ್ತಿದ್ದಂತೆ ವಿಚಿತ್ರವಾಗಿ ಈತನ ಬೆನ್ನೇರುತ್ತಾಳೆ. ಆಕೆ ಬಲಾಢ್ಯ ಬಲದೇವನ ಮಗಳು ಎಂದು ತಿಳಿದಾಗ ಪ್ರೀತಿ ಉಳಿಸಿಕೊಳ್ಳಲು ಹಠ ಹಿಡಿಯುವ ನಾಯಕನ ಬದುಕು, ವಿರಾಮದ ನಂತರ ಅನಿರೀಕ್ಷಿತ ತಿರುವು ಪಡೆಯುತ್ತದೆ. ಹಿಂದಿನ ಜನ್ಮದ ಆ ವೀರ ಯಾರು, ಅವರ ನಡುವಿನ ದ್ವೇಷ-ಪ್ರೀತಿಯ ರಹಸ್ಯವೇನು ಎಂಬುದು ಉಳಿದ ಕಥೆ.
ಚಿತ್ರ: ತ್ರಿಕಾರಂ
ನಿರ್ದೇಶನ: ಜಿ. ಆರ್. ದಿಲೀಪ್ ಕುಮಾರ್
ತಾರಾಗಣ: ಹರ್ಷವರ್ಧನ್, ನಿಶ್ಚಿತಾ ಶೆಟ್ಟಿ, ಜಿ. ಗಣೇಶ್ ಮೂರ್ತಿ, ಬಲರಾಜವಾಡಿ, ಮಂಜು ಪಾವಗಡ
ರೇಟಿಂಗ್: 3
ಆರಡಿ ಎತ್ತರದ ಹರ್ಷವರ್ಧನ್ ಆ್ಯಕ್ಷನ್ ಹಾಗೂ ಎಮೋಷನಲ್ ದೃಶ್ಯಗಳಲ್ಲಿ ಗಮನ ಸೆಳೆಯುತ್ತಾರೆ. ನಿಶ್ಚಿತಾ ಶೆಟ್ಟಿ ನಿಗೂಢ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕೋಟಿಯಾಗಿ ಮಂಜು ಪಾವಗಡ ನಗಿಸಿದರೆ, ಮಾಂತ್ರಿಕನಾಗಿ ಬಲರಾಜವಾಡಿ ಅಬ್ಬರಿಸಿದ್ದಾರೆ. ನಿರ್ಮಾಪಕ ಜಿ. ಗಣೇಶ್ ಮೂರ್ತಿ ಖಡಕ್ ಖಳನಾಯಕನಾಗಿದ್ದಾರೆ. ಗತಕಾಲ ಮತ್ತು ವರ್ತಮಾನವನ್ನು ಗೊಂದಲವಿಲ್ಲದೆ ಕಟ್ಟಿಕೊಟ್ಟಿರುವ ಚಿತ್ರವಿದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.