Appu Garage Review: ಅಪ್ಪು ಗ್ಯಾರೇಜ್‌ಗೂ ಪುನೀತ್ ರಾಜ್‌ಕುಮಾರ್‌ಗೂ ಸಂಬಂಧವಿದೆಯೇ?

Published : Oct 31, 2026, 03:18 PM IST
Appu Garage

ಸಾರಾಂಶ

ಪುನೀತ್ ರಾಜ್‌ಕುಮಾರ್‌ ಮೇಲಿನ ಅಭಿಮಾನದಿಂದ ಶೀರ್ಷಿಕೆ ಪಡೆದಿರುವ ಅಪ್ಪು ಗ್ಯಾರೇಜ್ ಸಿನಿಮಾ ಪ್ರೀತಿ, ಸ್ನೇಹ, ಆ್ಯಕ್ಷನ್ ಹಾಗೂ ಹಾಸ್ಯದ ಕಥೆಯನ್ನು ಹೊಂದಿದೆ. ವಿಷ್ಣುತೇಜ, ಜೀವನ್, ರಾಧಿಕಾ ರಾಮ್ ಮತ್ತು ರಕ್ಷಾ ಗೌಡ ಅಭಿನಯದ ಈ ಸಿನಿಮಾ ಹೇಗಿದೆ?

ಆರ್.ಎಸ್.

ತಮ್ಮನ್ನು ನಂಬಿದ ಮಾಲೀಕರ ರಕ್ಷಣೆಗಾಗಿ ನಿಲ್ಲುವ ಯುವಕರ ಕತೆ ಹೊಂದಿರುವ ಚಿತ್ರ. ಪುನೀತ್ ರಾಜ್‌ಕುಮಾರ್ ಮೇಲಿನ ಅಭಿಮಾನದಿಂದ ಚಿತ್ರದ ಶೀರ್ಷಿಕೆ ಇಡಲಾಗಿದೆಯೇ ಹೊರತು ಚಿತ್ರಕ್ಕೂ ಅವರಿಗೂ ಬೇರೆ ಸಂಬಂಧವಿಲ್ಲ.

ಹಳ್ಳಿಯಿಂದ ಬೆಂಗಳೂರಿಗೆ ಬಂದು ನಿವೃತ್ತ ಮೇಜರ್ ಧನರಾಜ್ ಅವರ ಅಪ್ಪು ಗ್ಯಾರೇಜ್‌ನಲ್ಲಿ ಕೆಲಸಕ್ಕೆ ಸೇರುವ ವಿಷ್ಣು ಮತ್ತು ಅಪ್ಪು ಎಂಬ ಆಪ್ತ ಸ್ನೇಹಿತರ ಕಥೆಯಿದು. ನಗರದ ಹೃದಯಭಾಗದಲ್ಲಿರುವ ಈ ಬೆಲೆಬಾಳುವ ಜಾಗವನ್ನು ಕಬಳಿಸಲು ಸಂಬಂಧಿಯೊಬ್ಬ ಹೊಂಚು ಹಾಕುತ್ತಿರುತ್ತಾನೆ. ಈ ನಡುವೆ ಇಬ್ಬರು ಯುವಕರ ಪ್ರೇಮಕಥೆ ಹಾಗೂ ತಾಯಿ-ಮಗನ ಬಾಂಧವ್ಯದ ಸನ್ನಿವೇಶಗಳು ಬರುತ್ತವೆ. ಅಂತಿಮವಾಗಿ ಹುಡುಗರು ಆ ಜಾಗವನ್ನು ಹೇಗೆ ಉಳಿಸಿಕೊಳ್ಳುತ್ತಾರೆ ಮತ್ತು ತಮ್ಮ ಪ್ರೀತಿಯಲ್ಲಿ ಗೆಲ್ಲುತ್ತಾರಾ ಎನ್ನುವುದೇ ಚಿತ್ರದ ತಿರುಳು.

ನಿರ್ದೇಶಕ ಚಂದ್ರಚೂಡೇಶ್ವರ ರಾಜು ಅವರು ಪ್ರೀತಿ, ಸ್ನೇಹ, ಆ್ಯಕ್ಷನ್ ಹಾಗೂ ಹಾಸ್ಯವನ್ನು ಬೆರೆಸಿ ರೆಗ್ಯುಲರ್ ಕಮರ್ಷಿಯಲ್ ಶೈಲಿಯಲ್ಲೇ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ನಿರ್ದೇಶಕರು ಅಲ್ಲಲ್ಲಿ ತಿಳಿಹಾಸ್ಯ ಹಾಗೂ ಟ್ವಿಸ್ಟ್‌ಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಆದರೆ ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಮತ್ತು ಪೂರ್ವತಯಾರಿ ಇರುತ್ತಿದ್ದರೆ ಚಿತ್ರದ ಸತ್ವ ಹೆಚ್ಚುತ್ತಿತ್ತು.

ಚಿತ್ರ: ಅಪ್ಪು ಗ್ಯಾರೇಜ್

ನಿರ್ದೇಶನ: ಚಂದ್ರಚೂಡೇಶ್ವರ ರಾಜು

ತಾರಾಗಣ: ವಿಷ್ಣುತೇಜ, ಜೀವನ್, ರಾಧಿಕಾ ರಾಮ್, ರಕ್ಷಾ ಗೌಡ, ಅವಿನಾಶ್, ರಮೇಶ್ ಭಟ್, ಶೋಭರಾಜ್

ನಾಯಕ ವಿಷ್ಣುತೇಜ ಡ್ಯಾನ್ಸ್ ಹಾಗೂ ಆ್ಯಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದಾರೆ. ನಾಯಕಿಯರಾದ ರಾಧಿಕಾ ರಾಮ್ ಹಾಗೂ ರಕ್ಷಾ ಗೌಡ ಸೊಗಸಾಗಿ ಕಾಣಿಸಿಕೊಂಡಿದ್ದಾರೆ. ಉಪನಾಯಕನಾಗಿ ಜೀವನ್ ಸಾಥ್ ನೀಡಿದ್ದಾರೆ. ಹಳೆಯ ಕಮರ್ಷಿಯಲ್ ಫಾರ್ಮುಲಾ, ಆ್ಯಕ್ಷನ್ ಹಾಗೂ ಸೆಂಟಿಮೆಂಟ್ ಇಷ್ಟಪಡುವವರಿಗೆ ಈ ಚಿತ್ರ ಅರ್ಪಿಸಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಕೆ ಸಾಮಾನ್ಯ ಯುವತಿಯಲ್ಲ, ಏಲಿಯನ್, AI ಸುತ್ತ ಹೆಣೆದ ವಿಚಿತ್ರ ಕಥೆ: ಹೇಗಿದೆ ನಟಿ ಜ್ಯೋತಿ ರೈ ಮೊದಲ ಸಿನಿಮಾ?
ಸ್ನೇಹಿತರ ಜೊತೆ ನೋಡಿದರೆ ಬೋರಿಂಗ್‌ ಸಿನಿಮಾ, ಒಂಟಿಯಾಗಿ ನೋಡಿದರೆ ಜೀವನಪಾಠ: ಪುನೀತ್‌ ಪರಮಾತ್ಮದೊಳಗಿದೆ ಬದುಕಿನ ಸತ್ಯ!