
ಬಡತಾಯಿಯೊಬ್ಬಳು ತನ್ನ ಪುಟ್ಟ ಮಗನನ್ನು ಆಸ್ಪತ್ರೆಗೆ ಸೇರಿಸುತ್ತಾಳೆ. ಆದರೆ ಆಕೆಯ ಬಳಿ ಚಿಕಿತ್ಸೆ ಕೊಡಿಸಲು ಹಣ ಇರುವುದಿಲ್ಲ. ಅವಳು ಒಡವೆ ಮಾರಿ ಎರಡು ಸಾವಿರ ರೂಪಾಯಿ ಹಣವನ್ನು ತರುತ್ತಾಳೆ. ಆದರೆ ದಾರಿಯಲ್ಲಿ ಅದನ್ನೊಬ್ಬ ಕಳ್ಳ ಎಗರಿಸುತ್ತಾನೆ. ಆ ಕಳ್ಳನಿಂದ ಆ ನೋಟು ಇನ್ಯಾರಿಗೋ ಹೋಗುತ್ತದೆ. ಹತ್ತಾರು ಮಂದಿಗೆ ಈ ನೋಟು ದಾಟುತ್ತಾ ಹೋಗುತ್ತದೆ. ಆ ಒಂದು ನೋಟು ಎಷ್ಟು ಜನರ ಬದುಕನ್ನು ಬದಲಿಸುತ್ತದೆ ಎಂಬುದನ್ನು ನಿರ್ದೇಶಕರು ಇಲ್ಲಿ ಹೇಳುತ್ತಾ ಹೋಗುತ್ತಾರೆ.
ಇದೊಂದು ಹಣದ ಮಾಯೆಯ ಕುರಿತ ಸಿನಿಮಾ. ಹಣ ಮನುಷ್ಯನನ್ನು ಹೇಗೆ ದುಡಿಸುತ್ತದೆ, ಅಳಿಸುತ್ತದೆ, ಬೀಳಿಸುತ್ತದೆ, ನೋಯಿಸುತ್ತದೆ ಎಂಬುದನ್ನು ಈ ಸಿನಿಮಾ ಮೂಲಕ ಹೇಳಿದ್ದಾರೆ. ಹಣಕ್ಕಾಗಿ ಆಸೆ ಪಡುವ, ದುರಾಸೆ ಹೊಂದುವ ಮಾನವ ಹೇಗೆ ಅಧಃಪತನಕ್ಕೆ ಒಳಗಾಗುತ್ತಾನೆ ಅನ್ನುವುದನ್ನು ಹೇಳುತ್ತಲೇ, ಬಡ ವ್ಯಕ್ತಿಗಳು ಅದರಿಂದ ಹೇಗೆ ನೋಯುತ್ತಾರೆ ಎಂಬ ಅಸಹಾಯಕತೆಯನ್ನೂ ದಾಟಿಸುತ್ತಾರೆ.
ಚಿತ್ರ: ಆ ಒಂದು ನೋಟು
ನಿರ್ದೇಶನ: ರತ್ನತನಯ್
ತಾರಾಗಣ: ಗೋಪಾಲಕೃಷ್ಣ ದೇಶಪಾಂಡೆ, ಅಕ್ಷತಾ ಪಾಂಡವಪುರ, ಬಲರಾಜವಾಡಿ, ಗೌತಮರಾಜ್, ಜಗದೀಶ್
ಹಳೆಯ ಎರಡು ಸಾವಿರದ ನೋಟು ಈ ಸಿನಿಮಾದ ಪ್ರಧಾನ ಪಾತ್ರ. ಹಾಗಾಗಿ ಈ ಸಿನಿಮಾ ಆ ನೋಟು ಬಾಳಿಕೆ ಬಾರುತ್ತಿದ್ದ ಕಾಲದಷ್ಟು ಹಳೆಯದು. ಕೊಂಚ ತಡವಾಗಿ ಪ್ರೇಕ್ಷಕರ ಮುಂದೆ ಬಂದಿದೆ. ಅಲ್ಲಲ್ಲಿ ಸ್ವಲ್ಪ ನಿಧಾನ ಅನ್ನಿಸಿದರೂ ನಿರ್ದೇಶಕರು ವಿಶಿಷ್ಟ ಪ್ರಯೋಗ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.