
ಭಾರತದ ದಕ್ಷಿಣದ ಸಿನಿಮಾಗಳು ಸರಳವಾದ ಕಥೆಯನ್ನು ತೆರೆಯ ಮೇಲೆ ಅದ್ಭುತವಾಗಿ ತೆಗೆದುಕೊಂಡು ಬರಲಾಗುತ್ತದೆ. ಮಾಲಿವುಡ್‌ನ ಸಿನಿಮಾಗಳು ಕೇರಳದ ಎಲ್ಲೋ ಒಂದು ಮನೆಯಲ್ಲಿ ನಡೆಯುವ ಕಥೆ ಎಲ್ಲಿಯೂ ಶಿಫ್ಟ್ ಆಗಲ್ಲ. ಒಂದು ಮನೆ ಮತ್ತು ನಾಲ್ಕೈದು ಪಾತ್ರಗಳಲ್ಲೇ ಸಿನಿಮಾ ಮುಗಿದು ಹೋಗುತ್ತದೆ. ಸಿನಿಮಾ ಮುಕ್ತಾಯಗೊಂಡಾಗ ಎಷ್ಟೊಂದು ಸರಳ ಅಲ್ಲವಾ ಎಂಬ ಉದ್ಘಾರದ ಜೊತೆ ಮನಸ್ಸಿನಲ್ಲೊಂದು ನಿರಾಳತೆಯುಂಟಾಗುತ್ತದೆ. ಈ ರೀತಿಯಾಗಿ ಮಲಯಾಳಂ ಸಿನಿಮಾಗಳು ವೀಕ್ಷಕರನ್ನು ಕೊನೆಯವರೆಗೂ ತೆಗೆದುಕೊಂಡು ಹೋಗುತ್ತದೆ. ಸಿನಿಮಾ ಮುಗಿದ ಬಳಿಕ ಕಥೆ ನಿಮ್ಮೊಂದಿಗೆ ಸಾಗುತ್ತದೆ. ಚಿತ್ರದ ಒಂದೊಂದು ಸನ್ನಿವೇಶಗಳು ಕಣ್ಮುಂದೆ ಬಂದು ನಿಮ್ಮ ಮನಸ್ಸಿಗೆ ಹೊಸತನದ ಕೆಲಸ ನೀಡುತ್ತವೆ.
ಸದ್ಯ ಸಾಲು ಸಾಲು ರಜೆಗಳಿದ್ದು ಅಥವಾ ವೀಕೆಂಡ್‌ಗಳಲ್ಲಿ ಕುಟುಂಬಸ್ಥರೊಂದಿಗೆ ಈ ಮಲಯಾಳಂ ಮತ್ತು ತಮಿಳಿನ ಭಾಷೆಯ ಸಿನಿಮಾ ನೋಡಬಹುದು. ಈ ಎರಡು ಸಿನಿಮಾಗಳು OTT ಪ್ಲಾಟ್‌ಫಾರಂನಲ್ಲಿದ್ದು, ಕನ್ನಡ ಭಾಷೆಯಲ್ಲಿಯೂ ನೋಡಬಹುದಾಗಿದೆ. ಆ ಎರಡು ಸಿನಿಮಾಗಳು ಯಾವವು ಎಂದು ನೋಡೋಣ ಬನ್ನಿ.
ಇಂದೊಂದು ಮಿಸ್ಟರಿ ಆಂಡ್ ಸೈಕೋಲಾಜಿಕಲ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಅರಣ್ಯ ಪ್ರದೇಶದಲ್ಲಿನ ಮನೆ ಕಥೆಯನ್ನು ಹೊಂದಿದೆ. ಈ ಸಿನಿಮಾಗೆ IMDbಯಲ್ಲಿ 8 ರೇಟಿಂಗ್ ಸಿಕ್ಕಿದ್ದು, ಚಿತ್ರದಲ್ಲಿ ಆಸಿಫ್ ಅಲಿ ಮತ್ತು ವಿಜಯರಾಘವನ್ ಅಭಿನಯ ನಿಮ್ಮನ್ನು ಮೋಡಿ ಮಾಡುತ್ತದೆ. ಅದರಲ್ಲಿಯೂ ಅಪ್ಪು ಪಿಳ್ಳೈ ಪಾತ್ರದಲ್ಲಿ ವಿಜಯರಾಘವನ್ ಜೀವಿಸಿದ್ದಾರೆ.
ಮದುವೆಯಾಗಿ ಬಂದ ಸೊಸೆ ಹಲವು ಆಶ್ಚರ್ಯಕರ ಘಟನೆಗಳನ್ನು ತುಂಬಾನೇ ಸೂಕ್ಷ್ಮವಾಗಿ ಗಮನಿಸುತ್ತಾಳೆ. ಒಂದೊಂದು ಘಟನೆಯ ಎಳೆ ಬಿಡಿಸುತ್ತಾ ಹೋದಂತೆ ತಂದೆ-ಮಗನ ಭಾವನಾತ್ಮಕ ಮತ್ತು ಮರೆಯಲಾಗದ ಗುಟ್ಟಿನ ಸುತ್ತ ಕಥೆ ಸಾಗುತ್ತದೆ.
ಬಿಡುಗಡೆ: 19ನೇ ನವೆಂಬರ್ 2024
OTT ಪ್ಲಾಟ್‌ಫಾರಂ: Jiohotstar, Prime Video
ರೇಟಿಂಗ್: 8/10
ತಮಿಳು ಭಾಷೆಯ ಮೀಯಳಗನ್ ಸಿನಿಮಾ OTT ಪ್ಲಾಟ್‌ಫಾರಂ ಪ್ರವೇಶಿಸಿದಾಗ ಸೋಶಿಯಲ್ ಮೀಡಿಯಾದಲ್ಲಿ ಆರೋಗ್ಯಕರ ಸಂಚಲನವನ್ನೇ ಸೃಷ್ಟಿಸಿತ್ತು. ಊರು ತೊರೆದು ಪಟ್ಟಣ ಸೇರಿದ ಬಹುತೇಕರ ಜೀವನಕ್ಕೆ ಹತ್ತಿರವಾದ ಈ ಸಿನಿಮಾವನ್ನು ಕುಟುಂಬದ ಜೊತೆ ಕುಳಿತು ವೀಕ್ಷಿಸಬಹುದು. ಕಾರ್ತಿ ಮತ್ತು ಅರವಿಂದ್ ಸ್ವಾಮಿ ಅವರ ಭಾವನಾತ್ಮಕ ಹಾಗೂ ಸಹಜ ನಟನೆ ಚಿತ್ರದ ಪ್ರಮುಖ ಆಕರ್ಷಣೆಯಾಗಿತ್ತು. ಸಿಟಿಯಲ್ಲಿದ್ದ ವ್ಯಕ್ತಿ, ಸೋದರಿಯ ಮದುವೆಗಾಗಿ ತನ್ನೂರಿಗೆ ಹಲವು ವರ್ಷಗಳ ನಂತ್ರ ಹೋಗುತ್ತಾನೆ. ಇಲ್ಲಿಂದ ಮೀಯಳಗನ್ ಕಥೆ ಆರಂಭಗೊಳ್ಳುತ್ತದೆ. ಮನಸ್ಸಿಗೆ ಹಿತ ನೀಡೋದರ ಜೊತೆ ಚಿತ್ರದ ಒಂದೊಂದು ದೃಶ್ಯಗಳು ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿ ಹಾಕುತ್ತವೆ. ಬಾಲ್ಯದ ನೆನಪುಗಳನ್ನು ತೆರೆಯ ಮೇಲೆ ಅತ್ಯಂತ ಸರಳವಾಗಿ ತೆಗೆದುಕೊಂಡು ಬಂದಿರೋದು ಚಿತ್ರದ ಹೈಲೈಟ್
ಬಿಡುಗಡೆ: 27ನೇ ಸೆಪ್ಟೆಂಬರ್ 2024
OTT ಪ್ಲಾಟ್‌ಫಾರಂ: Netflix
ರೇಟಿಂಗ್: 8.5/10
ಇದನ್ನೂ ಓದಿ: ಕಣ್ಣೀರಾಗಿಸುವ ‘ಮೇಯಗಳನ್’ ನೋಡಿದ್ರೆ ಊರಿಗೆ ಮರಳುವಂತಾಗುತ್ತೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.