ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ಗೆ ಕಾಲ್‌ ಮಾಡೋಕೆ ಈ ರೂಲ್ಸ್ ಫಾಲೋ ಮಾಡ್ಲೇ ಬೇಕು: ಏನದು..?

By Suvarna News  |  First Published Nov 28, 2020, 2:59 PM IST

ಮೊಬೈಲ್ ಫೋನ್‌ಗಳ ಹಾವಳಿ ಶುರುವಾಗುವುದಕ್ಕಿಂತ ಲ್ಯಾಂಡ್‌ಲೈನ್‌ ಫೋನ್‌ಗಳೇ ಸಂಪರ್ಕ ಸಾಧನದ ಪ್ರಮುಖ ಅಂಗವಾಗಿದ್ದವು. ಆದರೆ ಇದೀಗ ಅವುಗಳ ಉಪಯೋಗ ಮೊದಲಿನಷ್ಟು ಇಲ್ಲ. ಹೀಗಿದ್ದಾಗ್ಯೂ, ಟ್ರಾಯ್ ಶಿಫಾರಸಿನ ಪ್ರಕಾರ ಇನ್ನು ಮುಂದೆ ಲ್ಯಾಂಡ್‌ಲೈನಿಂದ ಮೊಬೈಲ್‌ ಕರೆ ಮಾಡುವ ಮುಂಚೆ  ಹೊಸ ನಿಯಮ ಪಾಲಿಸ್ಬೇಕಾಗಿದೆ. ಏನದು ನೋಡಿ
 


ಜನವರಿ 15ರಿಂದ ನೀವು ಲ್ಯಾಂಡ್‌ಲೈನ್‌ನಿಂದ ನೇರವಾಗಿ ಮೊಬೈಲ್ ಫೋನ್‌ಗೆ ನಂಬರ್ ಮೂಲಕ ಡಯಲ್ ಮಾಡಿದರೆ ಕರೆ ನೀವು ಡಯಲ್ ಮಾಡಿದ ವ್ಯಕ್ತಿಗೆ ಕನೆಕ್ಟ್ ಆಗುವುದಿಲ್ಲ. ಯಾಕೆಂದರೆ, ಸರಕಾರ 2021 ಜನವರಿ 15ರಿಂದ ಲ್ಯಾಂಡ್‌ಲೈನ್ ಫೋನ್‌ನಿಂದ ಮೊಬೈಲ್‌ಗೆ ಡಯಲ್ ಮಾಡಬೇಕಾದರೆ ಮೊಬೈಲ್ ನಂಬರ್‌ಗೆ ಝೀರೋ(‘0’) ಸೇರಿಸಿ ಡಯಲ್ ಮಾಡುವುದನ್ನು ಕಡ್ಡಾಯಗೊಳಿಸಿದೆ!

ಹೌದು ನಿಜ. ಎಲ್ಲ ಲ್ಯಾಂಡ್ ಲೈನ್ ಫೋನ್ ಬಳಕೆದಾರರು ಇನ್ನು ಮುಂದೆ ಮೊಬೈಲ್ ಫೋನ್ ನಂಬರ್‌ಗಳಿಗೆ ಕರೆ ಮಾಡುವ ಮುನ್ನ ‘0’ ಡಯಲ್ ಮಾಡಬೇಕಾಗುತ್ತದೆ ಎಂದು ಕೇಂದ್ರ ಟೆಲಿಕಮ್ಯುನಿಕೇಷನ್ ಇಲಾಖೆ ಹೇಳಿದೆ. ಈ  ಬದಲಾವಣೆ ಬಗ್ಗೆ ಎಲ್ಲ ಟೆಲಿಕಾಮ್ ಪೂರೈಕೆದಾರಿಗೆ ಇಲಾಖೆ ತಿಳಿಸಿದ್ದು, ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವ ಸಂಬಂಧ 20121ರ ಜನವರಿ 1ರವರೆಗೆ ಡೆಡ್‌ಲೈನ್ ನೀಡಲಾಗಿದೆ. ಇದರಲ್ಲಿ ಸ್ಥಿರ ದೂರವಾಣಿಯಿಂದ ಕರೆ ಮಾಡುವ ಬಳಕೆದಾರರಿಗೆ ಈ ಬದಲಾವಣೆ ಗೊತ್ತಾಗುವುದಂತೆ ಮಾಡಲು ಉದ್ಘೋಷಣೆಯನ್ನು ಸೇರಿಸುವುದು ಸೇರಿದೆ. 

Tap to resize

Latest Videos

undefined

ವಾಟ್ಸಾಪಿನಲ್ಲಿ Disappearing Messages ಸಕ್ರಿಯಗೊಳಿಸುವುದು ಹೇಗೆ?

ಸ್ಥಿರ ದೂರವಾಣಿ ನಂಬರ್‌ಗಳಿಂದ ಸೆಲ್ಯುಲಾರ್ ಮೊಬೈಲ್ ನಂಬರ್‌ಗಳಿಗೆ ಕರೆ ಮಾಡುವ ಡೈಯಲಿಂಗ್ ಪ್ಯಾಟರ್ನ್‌ ಬದಲಾವಣೆ ಎಂಬ ಶೀರ್ಷಿಕೆಯಡಿ ಟೆಲಿಕಮ್ಯುನಿಕೇಷನ್ ಇಲಾಖೆ ಈ ಹೊಸ ಮಾಹಿತಿಯನ್ನು ಹಂಚಿಕೊಂಡಿದೆ.  ಈಗ ತರಲಾಗುತ್ತಿರುವ ಎಲ್ಲ ಬದಲಾವಣೆಗಳನ್ನು ಎಲ್ಲ ಟೆಲಿಕಾಂ ಸೇವೆ ಪೂರೈಕೆದಾರರಿಗೆ ತಿಳಿಸಲಾಗುತ್ತಿದೆ. ವಾಸ್ತವದಲ್ಲಿ, ಲ್ಯಾಂಡ್‌ಲೈನ್‌ ಫೋನ್‌ನಿಂದ ಮೊಬೈಲ್‌ ನಂಬರ್‌ಗೆ ಕರೆ ಮಾಡುವ ಮುನ್ನ ‘0’ ಡಯಲ್ ಮಾಡುವ ಶಿಫಾರಸ್ಸನ್ನು ಭಾರತೀಯ ಟೆಲಿಕಾಂ ನಿಯಂತ್ರಣಾ ಪ್ರಾಧಿಕಾರ-ಟ್ರಾಯ್(Telecom Regulatory Authority of India) ಮಾಡಿದೆ. ಟ್ರಾಯ್ ಶಿಫಾರಸಿನ ಹಿನ್ನೆಲೆಯಲ್ಲೇ ಈ ಹೊಸ ಬದಲಾವಣೆಯನ್ನು ಟೆಲಿಕಾಂ ಇಲಾಖೆ ಮಾಡುತ್ತಿದೆ.

ಈಗ ಹೇಗಿದೆ ವ್ಯವಸ್ಧೆ?

ಸದ್ಯದ ಪರಿಸ್ಥಿತಿಯಲ್ಲಿ ಬೇಸಿಕ್ ಅಥವಾ ಸ್ಥಿರ ಫೋನ್‌ಗಳಿಂದ ಅಂತರ್-ಸೇವಾ ಪ್ರದೇಶದ ಮೊಬೈಲ್ ಕರೆಗಳನ್ನು ‘0’ ಇಲ್ಲದೇ ಡಯಲ್ ಮಾಡುವ ಮೂಲಕ ಸಂಪರ್ಕಿಸಬಹುದು. ಹೀಗಿದ್ದಾಗ್ಯೂ ‘0’  ಡಯಲ್ ಮಾಡದೆಯೇ ಸೇವಾ ಪ್ರದೇಶದೊಳಗೆ ಲ್ಯಾಂಡ್ ಫೋನ್‌ನಿಂದ ಮೊಬೈಲ್ ಫೋನ್‌ಗಳಿಗೆ ಕರೆ ಮಾಡಬಹುದು. 

ವಿಂಡೋಸ್ ಡೆಸ್ಕ್‌ಟಾಪ್‌ನಲ್ಲಿ ಆಂಡ್ರಾಯ್ಡ್ ಆ್ಯಪ್‌ಗಳು ಸೇರ್ಪಡೆ?

2,544 ದಶಲಕ್ಷ ಹೆಚ್ಚುವರಿ ಸಂಖ್ಯೆ

ಭವಿಷ್ಯದಲ್ಲಿ ಮೊಬೈಲ್ ಫೋನ್‌ಗಳಿಗೆ ಬೇಕಾಗುವ ಅಗತ್ಯ ನಂಬರ್‌ಗಳನ್ನು ಸೃಷ್ಟಿಸುವುದಕ್ಕಾಗಿಯೇ ಈಗ ಡಯಲಿಂಗ್ ಪ್ಯಾಟರ್ನ್ ಅನ್ನು ಬದಲಾಯಿಸಲಾಗುತ್ತಿದೆ ಎಂಬುದು ಇದಕ್ಕೆ ನೀಡುತ್ತಿರುವ ಕಾರಣವಾಗಿದೆ ಎನ್ನುವುದು ಟ್ರಾಯ್ ವಿವರಣೆಯಾಗಿದೆ. ‘0’ ಪೂರ್ವಪ್ರತ್ಯಯವನ್ನು ಡಯಲ್ ಮಾಡುವ ಮೂಲಕ ಲ್ಯಾಂಡ್‌ಲೈನ್ ನೆಟ್‌ವರ್ಕ್‌ನಿಂದ ಸೇವಾ ಪ್ರದೇಶದಲ್ಲಿ ಮೊಬೈಲ್ ಸಂಖ್ಯೆಗಳನ್ನುಸಂಪರ್ಕಿಸುವುದು ಕಡ್ಡಾಯಗೊಳಿಸುವ ಮೂಲಕ ಎಲ್ಲಾ ಸಬ್ ಲೆವಲ್‌ನಲ್ಲೂ '2', '3', '4' ಮತ್ತು '6' ನಂಬರ್‌ಗಳನ್ನು ಬಳಸಿಕೊಳ್ಳಲು ಸಾಧ್ಯವಾಗಲಿದು ಎಂಬುದ ಟ್ರಾಯ್‌ನ ವಿವರಣೆಯಾಗಿದೆ.

ಎಲ್ಲ ಫಿಕ್ಸೆಡ್ ಲೈನ್ ಸಬ್‌ಸ್ಕ್ರೈಬರ್‌ರಿಗೆ ‘0’ ಡಯಲಿಂಗ್ ಸೌಲಭ್ಯವನ್ನು ಕಲ್ಪಿಸಬೇಕು. ಅಂದರೆ, ಎಸ್‌ಟಿಡಿ ಸೌಲಭ್ಯ. ಈ ಸಂಬಂಧ ನವೆಂಬರ್ 20 ದಿನಾಂಕ ನಮೂದಿತ ಸರ್ಕ್ಯೂಲರ್‌ ಅನ್ನು ಟೆಲಿಕಾಂ ಇಲಾಖೆ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

8T ಬೆನ್ನಲ್ಲೇ ಒನ್‌ಪ್ಲಸ್‌ನಿಂದ ಹೊಸ ವರ್ಷದಲ್ಲಿ 9 ಪ್ರೋ ಫೋನ್?

ಮೇ ತಿಂಗಳಲ್ಲಿ ಶಿಫಾರಸು ಮಾಡಿದ್ದ ಟ್ರಾಯ್, ಮೊಬೈಲ್ ನಂಬರ್‌ಗಳ ಡಿಜಿಟ್ ಅನ್ನು 10ರಿಂದ 11ಕ್ಕೇರಿಸುವ ಶಿಫಾರಸನ್ನು ಮಾಡಿತ್ತು. ಈ ಮೂಲಕ ಒಟ್ಟು 10 ಶತಕೋಟಿ ಸಂಖ್ಯೆಗಳ ಸಾಮರ್ಥ್ಯವನ್ನು ಒದಗಿಸುವುದು ಅದರ ಉದ್ದೇಶವಾಗಿದೆ. ಇದೇ ವೇಳೆ, ಡಾಂಗಲ್‌ಗಳಿಗೆ ಹಂಚಿಕೆ ಮಾಡಲಾಗುವ ಮೊಬೈಲ್ ನಂಬರ್ ಸಂಖ್ಯೆಯನ್ನು ಕೂಡ 13 ಡಿಜಿಟ್‌ಗಳಿಗೆ ವಿಸ್ತರಿಸುವ ಶಿಫಾರಸನ್ನು ಟ್ರಾಯ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

click me!