Xiaomi 11i Hypercharge: ಶಾಓಮಿಯ ಅತ್ಯಂತ ವೇಗದ ಚಾರ್ಜಿಂಗ್ ಸ್ಮಾರ್ಟ್‌ಫೋನ್ ಜನವರಿಯಲ್ಲಿ ಬಿಡುಗಡೆ!

By Suvarna News  |  First Published Dec 24, 2021, 1:33 PM IST

Xiaomi 11i ಹೈಪರ್‌ಚಾರ್ಜ್ ಭಾರತದಲ್ಲಿ ಜನವರಿ 6 ರಂದು ಬಿಡುಗಡೆಯಾಗಲಿದೆ. ಇದರ ಬೆಲೆ ಸುಮಾರು 25,000 ರೂ ಇರಬಹುದು ಎಂದು ಊಹಿಸಲಾಗಿದೆ.
 


Tech Desk: ಶಾಓಮಿ 2022 ರ ತನ್ನ ಮೊದಲ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಜನವರಿ 6 ರಿಂದ ಬಿಡುಗಡೆ ಮಾಡಲು ಸಿದ್ಧವಾಗಿದೆ. ಭಾರತದ ನಂ.1 ಸ್ಮಾರ್ಟ್‌ಫೋನ್ ತಯಾರಕ,  Xiaomi 11i ಹೈಪರ್‌ಚಾರ್ಜ್ಅನ್ನು ಜನವರಿ ಮೊದಲ ವಾರದಲ್ಲಿ ದೇಶದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದೆ.  ಈ ಸ್ಮಾರ್ಟ್‌ಫೋನ್ ಕಳೆದ ತಿಂಗಳ ಕೊನೆಯಲ್ಲಿ ಚೀನಾದಲ್ಲಿ  ಬಿಡುಗಡೆಯಾದ Redmi Note 11 Pro+ ನ ಮರುಬ್ರಾಂಡೆಡ್ ಮಾದರಿ ಎಂದು ಹೇಳಲಾಗುತ್ತದೆ. ಹೊಸ ಫೋನ್ ಭಾರತದಲ್ಲಿ 120W ವೇಗದ ಚಾರ್ಜಿಂಗ್ (Fast Charging) ಬೆಂಬಲದೊಂದಿಗೆ ಬರಲಿದೆ ಎಂದು ಶಾಓಮಿ ದೃಢಪಡಿಸಿದೆ, ಇದು ದೇಶದಲ್ಲಿ ಈ ತಂತ್ರಜ್ಞಾನವನ್ನು ಬೆಂಬಲಿಸುವ ಕಂಪನಿಯ ಮೊದಲ ಫೋನ್ ಆಗಿದೆ.

ಈ ವರ್ಷದ ಆರಂಭದಲ್ಲಿ, ಶಾಓಮಿ Mi 11 Ultra ಅನ್ನು 67W ವೇಗದ ಚಾರ್ಜಿಂಗ್‌ನೊಂದಿಗೆ ಪರಿಚಯಿಸಿತ್ತು. ಆದರೆ ರಿಟೇಲ್ ಬಾಕ್ಸ್ 55W ವೇಗದ ಚಾರ್ಜರ್ ಅನ್ನು ಹೊಂದಿತ್ತು. ‌ ಸಹಜವಾಗಿ  Xiaomi, Poco ಮತ್ತು Redmi ಸ್ಮಾರ್ಟ್‌ಫೋನ್‌ಗಳು ತಮ್ಮ ವೇಗದ ಚಾರ್ಜಿಂಗ್ ಅನ್ನು 33W ಗೆ ನಿರ್ಬಂಧಿಸುತ್ತವೆ. ಹಾಗಾಗಿ ಶಾಓಮಿ ಯ ಹೊಸ ಬಿಡುಗಡೆ 120W ಚಾರ್ಜರ್ ಹೇಗೆ ಕೆಲಸ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಶಾಓಮಿಯ ಚಾರ್ಜಿಂಗ್ ಟೆಕ್ (Charging Tech) ಖಂಡಿತವಾಗಿಯೂ, ತಮ್ಮ ಸಾಧನಗಳಲ್ಲಿ ವೇಗವಾಗಿ ಚಾರ್ಜಿಂಗ್ ತಂತ್ರಜ್ಞಾನವನ್ನು ನೀಡುವ OnePlus, Realmeಗಳ   ಜತೆಗೆ ಸ್ಪರ್ಧಿಸಲಿದೆ.

Tap to resize

Latest Videos

undefined

 

P̵a̵t̵i̵e̵n̵c̵e̵ ̵i̵s̵ ̵p̵o̵w̵e̵r̵.
̵K̵n̵o̵w̵l̵e̵d̵g̵e̵ ̵i̵s̵ ̵p̵o̵w̵e̵r̵.

POWER IS POWER.

Redefine power with : 120 Watt Hypercharge to fuel 100% in just 15 mins.

Witness the on 6th Jan: https://t.co/gh6YKt60lT pic.twitter.com/DGou4Eeywr

— Xiaomi India | #Xiaomi11iHypercharge ⚡ (@XiaomiIndia)

 

Xiaomi 11i ಬೆಲೆ ಎಷ್ಟು?

ಹೊಸ ಮತ್ತು ಉನ್ನತ ತಂತ್ರಜ್ಞಾನ ಜತೆಗೆ ಬಿಡುಗಡೆಯಾಗುತ್ತಿದೆ ಎಂದರೆ  Xiaomi 11i ಹೈಪರ್‌ಚಾರ್ಜ್ ಮಧ್ಯಮ ಪ್ರೀಮಿಯಂ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿರುವ ಸಾಧ್ಯತೆ ಇದೆ. ಇದು ಖಂಡಿತವಾಗಿಯೂ ಭಾರತದಲ್ಲಿ Redmi Note 10 Pro Max ಗಿಂತ ಹೆಚ್ಚು ಬೆಲೆಗೆ ಮಾರಾಟವಾಗಲಿದೆ. ಇದೀಗ ಭಾರತದಲ್ಲಿ Redmi Note 10 Pro Max ನ ಟಾಪ್-ಎಂಡ್ ಮಾದರಿಯ ಬೆಲೆ 21,999 ರೂ. Xiaomi 11i ಹೈಪರ್‌ಚಾರ್ಜ್‌ನ ಬೆಲೆಯು ಅದಕ್ಕಿಂತ ಹೆಚ್ಚಾಗಿರಬಹುದು ಎಂದು ಊಹಿಸಲಾಗಿದೆ. ಚೀನಾದಲ್ಲಿ ಬಿಡುಗಡೆಯಾಗಿರುವ ಇದೇ ಮಾದರಿಯ Redmi Note 11 Pro+ ಬೆಲೆ 6GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕಾಗಿ CNY 1,899 (ಸುಮಾರು ರೂ 22,200) ನಿಂದ ಪ್ರಾರಂಭವಾಗುತ್ತದೆ.

ಜಾಗತಿಕ ಚಿಪ್ ಕೊರತೆ ಮತ್ತು ಕಚ್ಚಾ ಸಾಮಗ್ರಿಗಳು ದುಬಾರಿಯಾಗುತ್ತಿರುವುದರಿಂದ, ಅನೇಕ ಸ್ಮಾರ್ಟ್‌ಫೋನ್ ತಯಾರಕರು ತಮ್ಮ ಸಾಧನಗಳಿಗೆ ಜಾಗತಿಕ ಮಾರುಕಟ್ಟೆಯ ಬೆಲೆಗಿಂತ ಹೆಚ್ಚಿನ ಬೆಲೆಯನ್ನು ಭಾರತದಲ್ಲಿ ನೀಡುವುದನ್ನು ನಾವು ನೋಡಿದ್ದೇವೆ.  ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, Xiaomi 11i ಹೈಪರ್‌ಚಾರ್ಜ್‌ಗೆ ದೇಶದಲ್ಲಿ ರೂ 25,000 ಕ್ಕಿಂತ ಹೆಚ್ಚು ಬೆಲೆ ನಿರ್ಧಾರವಾಗುವ ಸಾಧ್ಯತೆ ಇದೆ. ಆದರೂ ಈ ಬಗ್ಗೆ ಶಾಓಮಿಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

Xiaomi 11i Specification 

ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಭಾರತದಲ್ಲಿ ಬಿಡುಗಡೆಯಾಗುವ ಮಾದರಿಯೂ ಚೀನಾದಲ್ಲಿ ಬಿಡುಗಡೆಯಾದ ಮೊಬೈಲ್‌ ವೈಶಿಷ್ಟ್ಯಗಳ ಜತೆಗೇ ಬಿಡುಗೆಯಾಗಲಿದೆ. ಫೋನ್ 6.67-ಇಂಚಿನ AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 4,500mAh ಬ್ಯಾಟರಿ ಮತ್ತು 120W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಬಹುದು. ಫೋನ್ MediaTek Dimensity 920 SoC ಚಿಪ್‌ಸೆಟ್ ನೊಂದಿಗೆ ಚಾಲಿತವಾಗಬಹುದು. ಇದು ಭಾರತದಲ್ಲಿ ಈ ಪ್ರೊಸೆಸರ್‌ನೊಂದಿಗೆ ಬರುವ ಮೊದಲ ಫೋನ್ ಆಗಿದೆ.

ಫೋನ್ 108-ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸ್‌ರ್, 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು.  ಮುಂಭಾಗದಲ್ಲಿ 16-ಮೆಗಾಪಿಕ್ಸೆಲ್ ಸೆನ್ಸರ್‌ ಕೂಡ ನಿರೀಕ್ಷಿಸಬಹುದು. ಫೋನ್ ಪವರ್ ಬಟನ್‌ನಲ್ಲಿ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ  ಒಳಗೊಂಡಿರಬಹದು.

ಇದನ್ನೂ ಓದಿ:

1) Honor Magic V: ಹೊಸ ವರ್ಷದಲ್ಲಿ ಹಾನರ್ ಫೋಲ್ಡಬಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ!

2) ಡಿ.26ರಿಂದ ಭಾರತದಲ್ಲಿ Asus ROG phone 5 Ultimate ಮಾರಾಟ, ಇಲ್ಲಿದೆ ಫೋನ್ ಬೆಲೆ ಹಾಗೂ ವಿಶೇಷತೆ!

3) World’s First SMS: ವಿಶ್ವದ ಮೊದಲ ಎಸ್‌ಎಮ್‌ಎಸ್ 'Merry Christmas' ₹91 ಲಕ್ಷಕ್ಕೆ ಮಾರಾಟ!

click me!