ನೌಕರರಿಂದಲೇ ಕೋಲಾರದ iPhone ಕಚೇರಿ ಪುಡಿ ಪುಡಿ!

By Suvarna News  |  First Published Dec 12, 2020, 9:03 PM IST

ಕರ್ನಾಟಕದಲ್ಲಿ ತಲೆ ಎತ್ತಿದ್ದ ದೇಶದ ಮೊದಲ iPhone ಉತ್ಪಾದನಾ ಘಟಕದ ಕಚೇರಿಯನ್ನು ಸ್ವತಃ ನೌಕರರೇ ಧ್ವಂಸಗೊಳಿಸಿದ್ದಾರೆ.


ಕೋಲಾರ(ಡಿ.12):  ಕರ್ನಾಟಕದ ಕೋಲಾರದಲ್ಲಿನ iPhone ಉತ್ಪದನಾ ಘಟಕ ಕಚೇರಿ ಧ್ವಂಸಗೊಂಡಿದೆ. ಸ್ವತಃ ನೌಕರರೇ ಕಚೇರಿಯನ್ನು ಧ್ವಂಸಗೊಳಿಸಲು ಪ್ರಯತ್ನಿಸಿದ್ದಾರೆ. ಒಪ್ಪಂದದ ಪ್ರಕಾರ ನರಸಾಪುರದಲ್ಲಿರುವ ತೈವಾನ್ ದೇಶದ ವಿಸ್ಟ್ರನ್ ಕಾರ್ಪ್ ಮೊಬೈಲ್ ಫ್ಯಾಕ್ಟರಿ, ಆ್ಯಪಲ್ ಕಂಪನಿಗೆ ಐಫೋನ್ ಮೊಬೈಲ್ ಉತ್ಪಾದನೆ ಮಾಡುತ್ತಿದೆ.  ಆದರೆ ಇದೀಗ ವಿಸ್ಟ್ರನ್ ಕಾರ್ಪ್ ಕಚೇರಿ ಪುಡಿ ಪುಡಿಯಾಗಿದೆ.

ಭಾರತದಲ್ಲಿಯೇ ಶುರುವಾಗುತ್ತೆ ಆ್ಯಪಲ್ ಆನ್‌ಲೈನ್ ಸ್ಟೋರ್!..

Tap to resize

Latest Videos

ವೇತನ ನೀಡದೆ ಸತಾಯಿಸಿದ, ವೇತನದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ  ವಿಸ್ಟ್ರನ್ ಕಾರ್ಪ್ ಕಂಪನಿ ಕಾರ್ಮಿಕರು ಕಚೇರಿಗೆ ನುಗ್ಗಿ ಪೀಠೋಪಕರಣ, ಲೈಟ್, ಕಂಪ್ಯೂಟರ್ ಸೇರಿದಂತೆ ವಸ್ತುಗಳನ್ನು ಕೊಠಡಿಗಳನ್ನು ಪುಡಿ ಮಾಡಿದ್ದಾರೆ. ಶನಿವಾರ(ಡಿ.12) ಬೆಳಗ್ಗೆ ಈ ಘಟನೆ ನಡೆದಿದೆ.

iPhone ಮೊಬೈಲ್ ರಿಪೇರಿಗೆ ಎಷ್ಟು ಖರ್ಚಾಗುತ್ತೆ? ಬೆಲೆ ಬಹಿರಂಗ ಪಡಿಸಿದ Apple!

ಕಳೆದ ಕೆಲ ತಿಂಗಳುಗಳಿಂದ ಕಂಪನಿ ವೇತನ ನೀಡಿಲ್ಲ. ಸುಮಾರು 1,000ಕ್ಕೂ ಹೆಚ್ಚು ಕಾರ್ಮಿಕರು ಕಂಪನಿ ಹೊರಭಾಗದಲ್ಲಿ ಸೇರಿದ್ದರು. ಕಂಪನಿ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನ ಆರಂಭಿಸಿದ್ದಾರೆ. ಇದೇ ವೇಳೆ ಉದ್ರಿಕ್ತಗೊಂಡ ಕಾರ್ಮಿಕರು ಕಚೇರಿಯ ಬೋರ್ಡ್, ಹಾಗೂ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ.

ಕಚೇರಿ ಒಳ ಪ್ರವೇಶಿಸಿದ ಕಚೇರಿಯನ್ನು ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಚೇರಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಬಡಿಗೆ, ಕೋಲುಗಳಿಂದ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಬಳಿಕ ಲಾಠಿ ಚಾರ್ಜ್ ಮೂಲಕ ಪ್ರತಿಭಟನಾ ನಿರಿತ ನೌಕರರನ್ನು ಚದುರಿಸಿದ್ದಾರೆ.

ಕೊರೋನಾ ಹರಡಿದ ಚೀನಾಗೆ ಬಿಗ್ ಶಾಕ್, Apple ಕಂಪನಿ ಭಾರತಕ್ಕೆ ಶಿಫ್ಟ್!

80 ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ. ನೌಕರರ ಆರೋಪದ ಕುರಿತು ವಿಸ್ಟ್ರನ್ ಕಾರ್ಪ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಂಪನಿ ಗುತ್ತಿಗೆ ಹಾಗೂ ಒಪ್ಪಂದದ ಆಧಾರದಲ್ಲಿ ಹೆಚ್ಚಿನ ಕಾರ್ಮಿಕರನ್ನು ನೇಮಿಸಿಕೊಂಡಿದೆ. ಇವರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ತಕ್ಷಣವೇ ವೇತನ ನೀಡಬೇಕು ಎಂದು ಟ್ರೇಡ್ ಯೂನಿಯನ್ ಮುಖಂಡರು ಎಚ್ಚರಿಸಿದ್ದಾರೆ.

ಸರ್ಕಾರ ಘಟನೆಯನ್ನು ಖಂಡಿಸಿದೆ. ಇಷ್ಟೇ ಅಲ್ಲ ನೌಕಕರ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದೆ.

click me!