ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಗೊತ್ತು, ರೋಲೆಬಲ್ ಫೋನ್?

By Suvarna NewsFirst Published Dec 10, 2020, 2:50 PM IST
Highlights

ಎಲೆಕ್ಟ್ರಾನಿಕ್ಸ್ ಗೃಹೋಪಯೋಗಿ ವಸ್ತುಗಳ ತಯಾರಿಕೆಯ ಮುಂಚೂಣಿಯಲ್ಲಿರುವ ಎಲ್‌ಜಿ ಇದೀಗ ವಿನೂತನವಾದ ಸ್ಮಾರ್ಟ್‌ಫೋನ್ ಸಿದ್ಧತೆಯಲ್ಲಿದೆ. ಈ ಫೋನ್‌ ಮುಂದಿನ ವರ್ಷದ ಮಧ್ಯೆದಲ್ಲಿ ಅನಾವರಣಗೊಳ್ಳಬಹುದು ಎನ್ನಲಾಗುತ್ತಿದೆ.
 

ಫೋಲ್ಡಿಂಗ್ ಸ್ಮಾರ್ಟ್ ಫೋನ್ ಕೇಳಿದ್ದೀರಿ. ಆದರೆ ನಿಮಗೆ ರೋಲೆಬಲ್ ಅಥವಾ ಸ್ಲೈಡ್ ಸ್ಮಾರ್ಟ್‌ಫೋನ್‌ ಬಗ್ಗೆ ಗೊತ್ತಿದೆಯೇ? ಖಂಡಿತ ಗೊತ್ತಿರಲಾರದು. ಊಹೆ ಮಾತ್ರವೇ ಮಾಡಿಕೊಳ್ಳಬಹುದಾದ ಸಾಧನವನ್ನು ಎಲ್‌ಜಿ ಸಾಧ್ಯವಾಗಿಸುತ್ತಿದೆ. ಎಲ್ಲವೂ ಅಂದಕೊಂಡಂತೆಯಾದರೆ, ಮುಂದಿನ ವರ್ಷದ ಮಧ್ಯದಲ್ಲಿ ಎಲ್‌ಜಿ ರೋಲೆಬಲ್ ಅಥವಾ ಎಲ್‌ಜಿ ಸ್ಲೈಡ್ ಫೋನ್ ಜಗತ್ತಿನ ಮುಂದೆ ಅನಾವರಣಗೊಳ್ಳವ ಸಾಧ್ಯತೆ ಇದೆ.

ಇಷ್ಟೆಲ್ಲ ಯಾಕೆ ಹೇಳಬೇಕಾಯಿತು ಎಂದರೆ, ಮುಂದಿನ ವರ್ಷ ಮಾರುಕಟ್ಟೆಗೆ ಬರಲಿರುವ ಈ ರೋಲೆಬಲ್ ಸ್ಮಾರ್ಟ್‌ಫೋನ್‌ ಅನ್ನು ದಕ್ಷಿಣ ಕೊರಿಯಾದ ಇಂಟರ್ನೆಟ್ ಡೇಟಾಬೇಸ್‌ನಲ್ಲಿ ರಿಜಿಸ್ಟರ್ ಆಗಿರುವ ಸಂಗತಿ ಸೋರಿಕೆಯಾಗಿದೆ. ಆ ಮೂಲಕ ಎಲ್‌ಜಿ ವಿನೂತನವಾದ ರೋಲೆಬಲ್ ಸ್ಕ್ರೀನ್ ಫೋನ್ ತಯಾರಿಸುತ್ತಿರುವ ಬಗ್ಗೆ ಸುಳಿವು ದೊರೆತಿದ್ದು, ಮುಂದಿನ ವರ್ಷದ ಜೂನ್ ವೇಳೆಗೆ ಅನಾವರಣಗೊಳ್ಳಲಿದೆ. 

ವಿವೋ ವಿ20 ಪ್ರೋ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ, ಸಖತ್ ಆಫರ್ ಉಂಟು!

ವಿಶೇಷ ಎಂದರೆ, ಎಲ್‌ಜಿ ಈಗಾಗಲೇ ರೋಲೆಬಲ್ ಸ್ಮಾರ್ಟ್ ಟಿವಿಗಳನ್ನು ಅನಾವರಣಗೊಳಿಸಿ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೇ ತಂತ್ರಜ್ಞಾನವನ್ನು ಸ್ಮಾರ್ಟ್‌ಫೋನ್‌ಗೂ ಬಳಸಲು ಮುಂದಾಗಿದೆ ಎನ್ನಲಾಗುತ್ತಿದೆ. 

ಎಲ್‌ಜಿ ಸ್ಲೈಡ್ ಅಥವಾ ಎಲ್‌ಜಿ ರೋಲೆಬಲ್ ಸ್ಮಾರ್ಟ್‌ಫೋನ್ ಅನ್ನು ದಕ್ಷಿಣ ಕೊರಿಯಾದ ಇಂಟರ್ನೆಟ್ ಡೇಟಾಬೇಸ್‌ನಲ್ಲಿ ರಿಜಿಸ್ಟರ್ ಮಾಡಿರುವ ಮಾಹಿತಿಯನ್ನು ಟ್ವಿಟರ್  ಟಿಪ್ಸಟರ್ @cozyplanes ಸೋರಿಕೆ ಮಾಡಿದ್ದಾರೆ. ಎಲ್ಎಂ-ಆರ್910ಎನ್ ಮತ್ತು ಅನ್ಲಾಕ್ಡ್ ಮಾಡೆಲ್ ನಂಬರ್ ಒಎಂಡಿ- ಎಲ್ಎಂ-ಆರ್910ಎನ್ ಎಲ್‌ಜಿ ರೋಲೆಬಲ್ ಫೋನ್‌ಗಳ ಮಾಡೆಲ್ ಸಂಖ್ಯೆಗಳಾಗಿವೆ. ಟಿಪ್ಸಟರ್ ಈ ರೋಲೆಬಲ್ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲವಾದರೂ ಕಂಪನಿಯಂತೂ ಈ ಬಗ್ಗೆ ಕಾರ್ಯನಿರತಾಗಿರುವುದನ್ನು ಗಮನಿಸಬಹುದು. ಇತ್ತೀಚಿನ ಮಾಹಿತಿಯ ಪ್ರಕಾರ, ಎಲ್‌ಜಿಯ ಮೊದಲ ರೋಲೆಬಲ್ ಒಎಲ್‌ಇಡಿ ಫೋನ್ ಅನ್ನು ಎಲ್‌ಜಿ ಸ್ಲೈಡ್ ಎಂದ ಕರೆಯಬಹುದು ಎನ್ನಲಾಗುತ್ತಿದೆ. 

ಸೈಡ್‌ನಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್, ಇನ್ನಷ್ಟು ಹೊಸ ಫೀಚರ್‌ನೊಂದಿಗೆ ವಿವೋ ವೈ51 ಫೋನ್

ಸ್ವಿವೆಲ್-ಸ್ಕ್ರೀನ್ ಹೊಂದಿರುವ ಎಲ್‌ಜಿ ವಿಂಗ್, ಎಕ್ಸ್‌ಫ್ಲೋರರ್ ಪ್ರಾಜೆಕ್ಟ್‌ನ ಪೈಕಿ ಕಂಪನಿಯ ಮೊದಲ ಫೋನ್ ಆಗಿದ್ದು,  ಎಲ್‌ಜಿ  ಸ್ಲೈಡ್ ಅಥವಾ ಎಲ್‌ಜಿ ರೋಲೆಬಲ್ ಸ್ಮಾರ್ಟ್‌ಫೋನ್ ಎರಡನೆಯದಾಗಿದ್ದರಬಹುದು ಎನ್ನಲಾಗುತ್ತಿದೆ. ಈ ಫೋನ್ ಅನ್ನು ಇತ್ತೀಚೆಗೆ ಇಯುಐಪಿಒ (ಯುರೋಪಿಯನ್ ಯೂನಿಯನ್ ಬೌದ್ಧಿಕ ಆಸ್ತಿ ಕಚೇರಿ)ನಲ್ಲಿ ಟ್ರೇಡ್‌ಮಾರ್ಕ್ ನೋಂದಾಯಿಸಲಾಗಿತ್ತು. ಈ ವೇಳೆ ತಿಳಿಸಿದ ಹೆಸರು, ಎಲ್‌ಜಿ ರೋಲೆಬಲ್. ಹಾಗೆಯೇ ಎಲ್‌ಜಿ ರೋಲೆಬಲ್ ಮತ್ತು ಎಲ್‌ಜಿ ಸ್ಲೈಡ್ ಕಂಪನಿಯು ತಯಾರಿಸುತ್ತಿರುವ ಎರಡು ವಿಭಿನ್ನ ಫೋನ್‌ಗಳೂ ಆಗಿರುವ ಸಾಧ್ಯತೆ ಇದೆ. ಇತ್ತೀಚೆಗೆ ಪ್ರತ್ಯೇಕವಾಗಿ ಬಿಡುಗಡೆಯಾದ ಪೇಟೆಂಟ್ ಮಾಹಿತಿಯ ಪ್ರಕಾರ, ಎಲ್‌ಜಿ ಕಂಪನಿ 17 ಇಂಚಿನ ಡಿಸ್‌ಪ್ಲೇ ಹೊಂದಿರುವ ರೋಲೆಬಲ್ ಲ್ಯಾಪ್‌ಟ್ಯಾಪ್ ತಯಾರಿಸುವ ಬಗ್ಗೆಯೂ ಕಂಪನಿ ನಿರತವಾಗಿದೆ ಎನ್ನಲಾಗುತ್ತಿದೆ. 

ಸ್ಯಾಮ್ಸಂಗ್, ಆಪಲ್ ಕಂಪನಿಗಳಿಗೆ ಹೋಲಿಸಿದರೆ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸ್ವಲ್ಪ ಹಿಂದೆಯೇ ಎಂದು ಹೇಳಬಹುದು. ಇದೀಗ, ಕಂಪನಿ ವಿನೂತನವಾದ ಸ್ಮಾರ್ಟ್‌ಫೋನ್‌ನೊಂದಿಗೆ ಮತ್ತೆ ಮಾರುಕಟ್ಟೆಗೆ ಲಗ್ಗೆ ಹಾಕಲು ಸನ್ನದ್ಧವಾಗಿದ್ದು, ಗ್ರಾಹಕರು ಯಾವ ರೀತಿಯಲ್ಲಿ ಸ್ವಾಗತ ಕೋರುತ್ತಾರೆ ಕಾದು ನೋಡಬೇಕು.

ನೋಕಿಯಾ ಲ್ಯಾಪ್‌ಟ್ಯಾಪ್! ಸ್ಮಾರ್ಟ್‌ಫೋನಲ್ಲಿ ಹೋದ ಮಾನ ಲ್ಯಾಪ್‌ಟಾಪಲ್ಲಿ ಸಿಗುತ್ತಾ

click me!