ವಿವೋನಿಂದ ಮತ್ತೊಂದು ಫೋನ್ ಲಾಂಚ್. ಎಷ್ಟು ಬೆಲೆ, ಏನೆಲ್ಲ ವಿಶೇಷತೆಗಳಿವೆ?

By Suvarna News  |  First Published Aug 22, 2021, 1:25 PM IST

ಚೀನಾ ಮೂಲದ ವಿವೋ ಕಂಪನಿಯ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಗ್ರಾಹಕ ವಲಯವನ್ನು ಸೃಷ್ಟಿಸಿಕೊಂಡಿದೆ. ಈ ಕಂಪನಿಯು ಇದೀಗ ಭಾರತದಲ್ಲಿ ವಿವೋ ವೈ21 ಎಂಬ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಫೋನ್ ಹಲವು ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿದೆ.


ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಗ್ರಾಹಕ ವಲಯವನ್ನು ಸೃಷ್ಟಿಸಿಕೊಂಡಿರುವ ವಿವೋ, ಇದೀಗ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ವಿವೋ, ಭಾರತೀಯ ಮಾರುಕಟ್ಟೆಯಲ್ಲೂ ಸಾಕಷ್ಟು ಪಾಲು ಹೊಂದಿದೆ. ಈ ಕಂಪನಿಯು ವಿವೋ ವೈ21 ಎಂಬ ಹೊಸ ಸ್ಮಾರ್ಟ್‌ಫೋನ್ ಅನ್ನ ಲಾಂಚ್ ಮಾಡಿದೆ. ವಾಟರ್‌ಡ್ರಾಪ್ ಸ್ಟೈಲ್ ವಾಚ್ ಡಿಸ್‌ಪ್ಲೇ ವಿನ್ಯಾಸ ಹೊಂದಿರುವ ಈ ಫೋನ್‌ನ ಹಿಂಬದಿಯೂ ಆಯಾತಕಾರದಲ್ಲಿದೆ. 

Latest Videos

undefined

ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ವಿವೋ ವೈ21 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಕ್ಯಾಮೆರಾ ಸೆಟ್‌ಅಪ್ ಇದ್ದು, ಈ ಪೈಕಿ ಮೊದಲನೆಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಕ್ಯಾಮೆರಾ ಆಗಿದೆ. ಮೀಡಿಯಾ ಟೆಕ್ ಹೆಲಿಯೋ P35 SoC ಒಳಗೊಂಡಿದ್ದು, 5,000 ಎಂಎಎಚ್ ಬ್ಯಾಟರಿಯನ್ನು ನೀಡಲಾಗಿದೆ. ಆಂಡ್ರಾಯ್ಡ್ 11 ಒಎಸ್ ಇದ್ದು, ಫೋನ್ ಬದಿಯಲ್ಲಿ ಫಿಂಗರ್ ಪ್ರಿಂಟ ಸೆನ್ಸರ್ ಸ್ಕ್ಯಾನರ್ ಒದಗಿಸಲಾಗಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ 3, ಗ್ಯಾಲಕ್ಸಿ ಜೆಡ್ ಫ್ಲಿಪ್ 3 ಫೋನ್ ಅನಾವರಣ

ವಿವೋ ವೈ21 ಸ್ಮಾರ್ಟ್‌ ಫೋನ್ ಅನ್ನು ಕಂಪನಿಯು ಎರಡು ಬಣ್ಣಗಳ ಆಯ್ಕೆಯಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಕಾಮರ್ಸ್ ವೆಬ್ ತಾಣಗಳಲ್ಲಿ ಮಾರಾಟಕ್ಕೆ ಈ ಹೊಸ ಫೋನ್ ಸಿಗಲಿದೆ. ಈಗಾಗಲೇ ವಿವೋ ತನ್ನ ಹಲುವಾರ ಫೋನ್‌ಗಳ ಮೂಲಕ ಗ್ರಾಹಕರ ಮನಗೆದ್ದಿದೆ. 

4 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಮಾದರಿಯ ವಿವೋ ವೈ21 ಸ್ಮಾರ್ಟ್‌ಫೋನ್ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 15,490 ರೂ. ಇದೆ. ಇಷ್ಟು ಮಾತ್ರವಲ್ಲದೇ ಕಂಪನಿಯು ಶೀಘ್ರವೇ ಭಾರತದಲ್ಲಿ 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಆಯ್ಕೆ ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ ಎನ್ನಲಾಗಿದೆ. 


ವಿವೋ ಇಂಡಿಯಾ ಇ ಸ್ಟೋರ್, ಅಮೆಜಾನ್, ಫ್ಲಿಪ್ ಕಾರ್ಟ್, ಪೇಡ್, ಟಾಟಾಕ್ಲಿಕ್, ಬಜಾಜ್ ಫಿನ್‌ಸರ್ವ್ ಇಎಂಐ ಸ್ಟೋರ್‌ ಮತ್ತು ಸಹಭಾಗಿತ್ವದ ರಿಟೇಲ್ ಸ್ಟೋರ್‌ಗಳಲ್ಲಿ ಈ ಹೊಸ ವಿವೋ ವೈ21 ಸ್ಮಾರ್ಟ್‌ಫೋನ್ ಮಾರಾಟಕ್ಕೆ ಸಿಗಲಿದೆ. ಡೈಮೆಂಡ್ ಗ್ಲೋ ಮತ್ತು ಮಿಡ್‌ನೈಟ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಈ ಫೋನ್ ಸಿಗಲಿದೆ. ಲಾಂಚ್ ಆಫರ್ ಆಗಿ ಕಂಪನಿಯು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ಸ್ ಮತ್ತು ಐಸಿಐಸಿಐ ಬ್ಯಾಂಕ್‌ ಕಾರ್ಡ್ ‌ಗಳ ಮೇಲೆ 500 ಕ್ಯಾಶ್‌ಬ್ಯಾಕ್ ನೀಡಲಿದೆ.

ಜಿಯೋಫೋನ್ ನೆಕ್ಸ್ಟ್ ಫೋನ್ ಹೇಗಿದೆ? ಬೆಲೆ ಎಷ್ಟಿದೆ?

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ವಿವೋ ವೈ21 ಸ್ಮಾರ್ಟ್‌ಫೋನ್ ಸಾಕಷ್ಟು ಹೊಸ ಫೀಚರ್‌ಗಳನ್ನು ಹೊಂದಿವೆ. ಗ್ರಾಹಕಸ್ನೇಹಿಯಾಗಿರುವ ಈ ಫೀಚರ್‌ಗಳು ಕಮಾಲ್ ಮಾಡುತ್ತವೆ. ಈ ಹಿಂದೆಯೂ ವಿವೋ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಅನೇಕ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ.

ಆಂಡ್ರಾಯ್ಡ್ 11 ಆಧರಿತ ಫನ್ ಟಚ್ ಒಎಸ್ ಮೇಲೆ  ಹೊಸ ವಿವೋ ವೈ 21 ಸ್ಮಾರ್ಟ್‌ಫೋನ್ ರನ್ ಆಗುತ್ತದೆ.  ಈ ಫೋನ್ 6.5 ಇಂಚ್ ಎಚ್‌ಡಿ ಪ್ಲಸ್ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಮತ್ತು ಮೀಡಿಯಾ ಟೆಕ್ ಹೆಲಿಯೋ ಪಿ35  ಪ್ರೊಸೆಸರ್ ಒಳಗೊಂಡಿದೆ. ಈ ಫೋನ್ 128 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಬಳಸಿಕೊಂಡು ಮೆಮೋರಿಯನ್ನು 512 ಜಿಬಿಗೆ ಹೆಚ್ಚಿಸಿಕೊಳ್ಳಲು ಅವಕಾಶವಿದೆ. 

ಫೋನ್ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳ ಸೆಟ್‌ಅಪ್ ಇದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದ್ದರೆ ಎರಡನೇಯದು 2 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿರಲಿದೆ. ಇನ್ನು ಫ್ರಂಟ್‌ನಲ್ಲಿ ಸೆಲ್ಫಿಗಾಗಿ ಕಂಪನಿಯು 8 ಮೆಗಾ ಪಿಕ್ಸೆಲ್ ನೀಡಿದೆ. ಕಂಪನಿಯು 5000 ಎಂಎಎಚ್ ಬ್ಯಾಟರಿಯನ್ನು ಒದಗಿಸಿದೆ. ಇದು 18 ವ್ಯಾಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಹೀಗೆ ಹಲವು ವಿಶಿಷ್ಟ ಫೀಚರ್‌ಗಳನ್ನು ಈ ಫೋನ್ ಹೊಂದಿದೆ.

Made in Pakistan ಸ್ಮಾರ್ಟ್‌ಫೋನ್ ರಫ್ತು ಆರಂಭಿಸಿದ ಪಾಕ್

click me!