ಜುಲೈ 11ಕ್ಕೆ ಭಾರತದಲ್ಲಿ ಐಫೋನ್ ಪ್ರತಿಸ್ಪರ್ಧಿ ನಥಿಂಗ್ ಫೋನ್(2) ಬಿಡುಗಡೆ, ಇದರಲ್ಲಿದೆ ಸಮ್‌ಥಿಂಗ್!

By Suvarna NewsFirst Published Jun 14, 2023, 4:21 PM IST
Highlights

ಭಾರತದ ಮಾರುಕಟ್ಟೆಗೆ ನಥಿಂಗ್ ಫೋನ್ 2 ಲಗ್ಗೆ ಇಡುತ್ತಿದೆ. ಜುಲೈ 11ಕ್ಕೆ ಅತ್ಯಾಧುನಿಕ, ಅತ್ಯಾಕರ್ಷಕ ಫೋನ್ ಬಿಡುಗಡೆ ಮಾಡಲಾಗುತ್ತಿದೆ. ಇದು ಐಫೋನ್ ಪ್ರತಿಸ್ಪರ್ಧಿ ಸ್ಮಾರ್ಟ್‌ಫೋನ್ ಲಂಡನ್ ಮೂಲಕ ಈ ಫೋನ್ ವಿಶೇಷತೆ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ನವದೆಹಲಿ(ಜೂ.14): ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರತದ ಅಗ್ರಸ್ಥಾನದಲ್ಲಿದೆ. ಹೀಗಾಗಿ ಚೀನಾ ಸೇರಿದಂತೆ ವಿದೇಶಿ ಕಂಪನಿಗಳು ಭಾರತದಲ್ಲಿ ಮೊಬೈಲ್ ಮಾರುಕಟ್ಟೆಯ ಸಿಂಹಪಾಲು ಪಡೆದಿದೆ. ಇದೀಗ ಭಾರತದ ಅತೀ ದೊಡ್ಡ ಮೊಬೈಲ್ ಫೋನ್ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್ ಎಂಟ್ರಿಕೊಡುತ್ತಿದೆ. ಹೌದು ಯುಕೆ ಮೂಲದ ಕಾರ್ಲ್ ಪೆ ಲೆಡ್ ಟೆಕ್ ಕಂಪನಿ ಹೊಚ್ಚ ಹೊಸ ನಥಿಂಗ್ ಫೋನ್(2) ಬಿಡುಗಡೆ ಮಾಡತ್ತಿದೆ.  ನಥಿಂಗ್(1) ಯಶಸ್ಸಿನ ಅಲೆಯಲ್ಲಿರುವ ಕಾರ್ಲ್ ಪೆ ಲೇಡ್ ಇದೀಗ ನಥಿಂಗ್(2) ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಜುಲೈ 11 ರಂದು ರಾತ್ರಿ 8.30ಕ್ಕೆ ಅದ್ಧೂರಿ ಕಾರ್ಯಕ್ರಮದ ಮೂಲಕ ನಥಿಂಗ್ ಫೋನ್ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಇದುವರೆಗೆ ಐಫೋನ್‌ಗೆ ಪ್ರತಿಸ್ಪರ್ಧಿಯಾಗಿ ಭಾರತದಲ್ಲಿ ಯಾವುದೇ ಫೋನ್ ಇರಲಿಲ್ಲ. ಇದೀಗ ನಥಿಂಗ್ ಈ ಆ್ಯಪಲ್ ಐಫೋನ್‌ಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಎಂಟ್ರಿಕೊಡುತ್ತಿದೆ.

ನಥಿಂಗ್ ಫೋನ್ ಪ್ರಮುಖ ವಿಶೇಷತೆ ಎಂದರೆ ಇದು ಗ್ಲೈಫ್ ಇಂಟರ್‌ಫೇಸ್ ಡಿಸೈನ್ ಫೋನ್ ಆಗಿದೆ. ನಥಿಂಗ್ 1 ಕೂಡ ಇದೇ ಮಾದರಿಯಲ್ಲಿ ತಯಾರಿಸಲಾಗಿತ್ತು. 6.7 ಇಂಚಿನ ಡಿಸ್‌ಪ್ಲೇ ಹೊಂದಿದೆ. ನಥಿಂಗ್ ಫೋನ್(1) ಡಿಸ್‌ಪ್ಲೇಗಿಂತ 0.15 ಇಂಚು ದೊಡ್ಡದಾಗಿದೆ. ಫುಲ್ ಹೆಚ್‌ಡಿ ಪ್ಲಸ್ ರೆಸಲ್ಯೂಶನ್ ಹೊಂದಿದೆ. ಕ್ವಾಲ್‌ಕಾಮ್ ಸ್ನಾಪ್‌ಡ್ರಾಗ್ಯನ್  8+ Gen 1 ಚಿಪ್‌ಸೆಟ್, 12GBಯ LPDDR5 RAM ಹಾಗೂ 256GB UFS 3.1 ಇಂಟರ್ನಲ್ ಸ್ಟೋರೇಜ್ ಹೊಂದಿದೆ. 

Nothing Phone (1) ಭಾರತದಲ್ಲಿ Jio 5G ಬೆಂಬಲಿತ ಮೊದಲ ಫೋನ್

4,700mAh ಬ್ಯಾಟರಿ, 50MP ಪ್ರೈಮರಿ ಕ್ಯಾಮೆರಾ, 2 ಸೆನ್ಸಾರ್ ಸೇರಿದಂತೆ ಹಲವು ಫೀಚರ್ಸ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ನಥಿಂಗ್ ಫೋನ್(2)ನಲ್ಲಿದೆ.ಐಫೋನ್‌ಗೆ ಪ್ರತಿಸ್ಪರ್ಧಿಯಾಗಿರುವ ನಥಿಂಗ್ ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಚೀನಾ ಸೇರಿದಂತೆ ಸಾಮಾನ್ಯ ಫೋನ್‌ಗಳಿಗೆ ಭಾರತದಲ್ಲಿ ಹಲವು ಬ್ರ್ಯಾಂಡ್ ಹಾಗೂ ಅದೇ ಬೆಲೆಯಲ್ಲಿ ಹಲವು ಪ್ರತಿಸ್ಪರ್ಧಿ ಫೋನ್‌ಗಳಿವೆ. ಆದರೆ ಐಫೋನ್‌ಗೆ ಸೂಕ್ತ ಪ್ರತಿಸ್ಪರ್ಧಿ ಇಲ್ಲ. ಇದೀಗ ನಥಿಂಗ್ ಫೋನ್(2) ಭಾರತದಲ್ಲಿ ಐಫೋನ್ ಮಾರುಕಟ್ಟೆ ಆಕ್ರಮಿಸಿಕೊಳ್ಳುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ.

ಸ್ಮಾರ್ಟ್‌ಫೋನ್ ಭಾರತದಲ್ಲಿ ಹೊಸ ಗ್ರಾಹಕರ ಸೆಳೆಯಲು ಎಲ್ಲಾ ಪ್ರಯತ್ನ ಮಾಡುತ್ತಿದೆ. ಐಫೋನ್ ಪ್ರತಿಸ್ಪರ್ಧಿಯಾಗಿರುವ ಲಂಡನ್ ಮೂಲಕ ನಥಿಂಗ್ ಭಾರತದಲ್ಲಿ ಕೊಂಚ ದುಬಾರಿ ಅನ್ನೋ ಮಾತಗಳು ಕೇಳಿಬರುತ್ತಿದೆ. ನಥಿಂಗ್ ಫೋನ್(2) ಬೆಲೆ ಇನ್ನು ಬಹಿರಂಗವಾಗಿಲ್ಲ. ಜುಲೈ 11 ರಂದು ನೂತನ ಫೋನ್ ಬೆಲೆ ಬಹಿರಂಗವಾಗಲಿದೆ. ಮೂಲಗಳ ಪ್ರಕಾರ ಐಫೋನ್‌ಗಿಂತಲೂ ಕೊಂಚ ದುಬಾರಿ ಅನ್ನೋ ಮಾತುಗಳು ಕೇಳಿಬರುತ್ತಿದೆ.

Nothing Phone 1 ಖರೀದಿಸಬೇಕಾ? ಸ್ಪೇಷಲ್ ಆಮಂತ್ರಣ ಬೇಕು!
 

click me!