ಕ್ಯಾಮನ್ 20, ಕ್ಯಾಮನ್ 20 ಪ್ರೋ, ಕ್ಯಾಮನ್ ಪ್ರೀಮಿಯರ್ 5ಜಿ ಮೊಬೈಲ್ ಬಿಡುಗಡೆ, ವಿಶಿಷ್ಟ ವಿನ್ಯಾಸ, ಅತ್ಯದ್ಭುತ ಕ್ಯಾಮರಾ ಸೌಲಭ್ಯ, 15 ಸಾವಿರ ರು.ನಿಂದ 22 ಸಾವಿರ ರು.ವರೆಗೆ ಬೆಲೆ
ಜಗದೀಶ್ ಬಳಂಜ
ನವದೆಹಲಿ(ಮೇ.31): ಅಗ್ಗದ ದರದಲ್ಲಿ ಹೆಚ್ಚು ವೈಶಿಷ್ಟ್ಯವುಳ್ಳ ಮೊಬೈಲ್ ಫೋನ್‌ಗಳನ್ನು ಬಳಕೆದಾರರಿಗೆ ನೀಡುವ ಮೂಲಕ ಹೆಸರು ಗಳಿಸಿರುವ ಟೆಕ್ನೊ ಕ್ಯಾಮ್ ಸಂಸ್ಥೆ ಇದೀಗ ಭಾರತದಲ್ಲಿ ತನ್ನ 20ನೇ ಸರಣಿಯ 3 ಮೊಬೈಲ್‌ಗಳನ್ನು ಬಿಡುಗಡೆಗೊಳಿಸಿದೆ.
‘ಟೆಕ್ನೋ ಕ್ಯಾಮ್‌ನ 20ನೇ ಸರಣಿಯು ಕ್ಯಾಮನ್ 20, ಕ್ಯಾಮನ್ 20 ಪ್ರೋ, ಕ್ಯಾಮನ್ 20 ಪ್ರೀಮಿಯರ್ 5ಜಿ ಎಂಬ 3 ಮೊಬೈಲ್‌ಗಳನ್ನು ಹೊಂದಿದ್ದು, ಈ ಮೊಬೈಲ್‌ಗಳು ವಿಶಿಷ್ಟವಿನ್ಯಾಸ ಮತ್ತು ಕ್ಯಾಮರಾ ವೈಶಿಷ್ಟ್ಯತೆಗಳನ್ನು ಹೊಂದಿವೆ. ಅತಿ ಕಡಿಮೆ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ’ ಎಂದು ಕಂಪನಿಯ ಸಿಇಓ ಅರ್ಜಿತ್ ತಲಪಾತ್ರ ತಿಳಿಸಿದ್ದಾರೆ.
ಕೈಗೆಟುಕವ ಬೆಲೆಯಲ್ಲಿ ನೋಕಿಯಾ ಸಿ22 ಸ್ಮಾರ್ಟ್‌ಫೋನ್ ಬಿಡುಗಡೆ, ಬಂಪರ್ ಕೊಡುಗೆ!
ವೈಶಿಷ್ಟ್ಯವೇನು?:
ಟೆಕ್ನೊ ತನ್ನ 20ನೇ ಸರಣಿಯಲ್ಲಿ ಕಡಿಮೆ ಬೆಳಕಿನಲ್ಲಿಯೂ ಸುಂದರವಾದ ಚಿತ್ರಗಳನ್ನು ಸೆರೆಹಿಡಿಯಬಲ್ಲ ಆರ್‌ಜಿಬಿ ಎಂಬ ವಿನೂತನ ತಂತ್ರಜ್ಞಾನವನ್ನು ಅಳವಡಿಸಿದೆ. ಕ್ಯಾಮರಾಗೆ 1ಜಿ-6ಪಿ ಲೆನ್ಸ್‌ಗಳಿದ್ದು, ಪ್ಲಾಸ್ಟಿಕ್‌ನ ಬದಲಾಗಿ ಒಂದು ಗ್ಲಾಸ್ ಲೆನ್ಸ್ ನೀಡಲಾಗಿದೆ. ಇದರಿಂದ ರಾತ್ರಿಯ ಸಮಯದಲ್ಲಿಯೂ ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ.
ಕ್ಯಾಮನ್ 20 5ಜಿ ಪ್ರೀಮಿಯರ್ ಎಸ್‌ಎಸ್‌ಆರ್ ಕ್ಯಾಮರಾ ಇನ್‌ಬಾಡಿ ಇಮೇಜ್ ಸ್ಟೆಬಿಲೈಸೇಷನ್ ಒಳಗೊಂಡಿದೆ. ಇದರೊಂದಿಗೆ ಸೆನ್ಸಾರ್ ಶಿಫ್ಟ್ ಓಐಎಸ್ ಆ್ಯಂಟಿ ಶೇಕಿಂಗ್ ತಂತ್ರಜ್ಞಾನವನ್ನು ಹೊಂದಿದ್ದು, ಇದು ವಿಡಿಯೋ ಮಾಡುವ ವೇಳೆ ಮೊಬೈಲ್ ಅಲುಗಾಡಿದರೂ ಸ್ಥಿರವಾದ ದೃಶ್ಯಗಳನ್ನು ಒದಗಿಸಿಕೊಡುತ್ತದೆ. ಕ್ಯಾಮನ್ 20 ಮತ್ತು 20 ಪ್ರೋ ನಲ್ಲಿ 64 ಎಮ್‌ಪಿ ವೈಡ್, 32 ಎಮ್‌ಪಿ ಫ್ರಂಟ್ ಕ್ಯಾಮರಾಗಳಿದ್ದು, ಕ್ಯಾಮನ್ ಪ್ರೀಮಿಯಂ 5ಜಿ ಯಲ್ಲಿ 108 ಎಮ್‌ಪಿ ವೈಡ್ ಮತ್ತು 32 ಎಮ್‌ಪಿ ಫ್ರಂಟ್ ಕ್ಯಾಮರಾವಿದೆ.
ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್; ಮೇ.1 ರಿಂದ ಫೇಕ್ ಕಾಲ್, ಮೆಸೇಜ್ ಬಂದ್!
ಕ್ಯಾಮನ್ 20 ಸೀರಿಸ್‌ನ ಎಲ್ಲ ಮೊಬೈಲ್‌ಗಳು 8500 ಪ್ರೊಸೆಸ್ಸರ್ ಹೊಂದಿದೆ. 16 ಜಿಬಿ ರಾಮ್ ಮತ್ತು 512 ಜಿಬಿ ಇಂಟರ್ನಲ್ ಸ್ಟೋರೇಜ್ ಬಳಕೆದಾರರಿಗೆ ಯಾವುದೇ ರೀತಿಯ ಆ್ಯಪ್‌ಗಳನ್ನು ಅಡೆತಡೆಗಳಿಲ್ಲದೆ ಬಳಸಬಹುದಾದ ಅವಕಾಶವನ್ನು ನೀಡುತ್ತದೆ. 5000 ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಲೀಥಿಯಂ ಪಾಲಿಮರ್ ಬ್ಯಾಟರಿಗಳನ್ನು ಅಳವಡಿಸಲಾಗಿದ್ದು, ವೇಗವಾಗಿ ಚಾಜ್‌ರ್ ಮಾಡಬಲ್ಲ 45 ವ್ಯಾಟ್‌ನ ಚಾರ್ಜರನ್ನು ಮೊಬೈಲ್ ಹೊಂದಿದೆ. 6.67 ಇಂಚು ಗಾತ್ರದ ಅಮೋಲೆಡ್ ಡಾಟ್ ಇನ್ ಡಿಸ್‌ಪ್ಲೆಯು ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡುತ್ತದೆ. 99 ಪ್ರತಿಶತ ನಿಖರತೆಯನ್ನು ಹೊಂದಿರುವ ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಇರಲಿದೆ.
ಬೆಲೆ ಎಷ್ಟು?:
ಕ್ಯಾಮನ್ 20ಯ ಬೆಲೆ 14,999 ರು. ಇದ್ದು, ಮೇ 29ರಿಂದ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಕ್ಯಾಮನ್ 20 ಪ್ರೋ 128 ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಮೊಬೈಲ್‌ನ ಬೆಲೆ 19,999 ರುಪಾಯಿ ಮತ್ತು ಕ್ಯಾಮನ್ 20 ಪ್ರೋ 256 ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಮೊಬೈಲ್‌ನ ಬೆಲೆ 21,999 ರು. ಇರಲಿದೆ. ಇದು ಜೂನ್ ಎರಡನೇ ವಾರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಕ್ಯಾಮನ್ ಪ್ರೀಮಿಯಂ 5ಜಿಯ ಬೆಲೆಯನ್ನು ಕಂಪನಿ ಇನ್ನೂ ಘೋಷಿಸಿಲ್ಲ, ಇದು ಜೂನ್ ಅಂತ್ಯಕ್ಕೆ ಗ್ರಾಹಕರಿಗೆ ಲಭ್ಯವಾಗಲಿದೆ.