ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ಗೆ ಕರೆ ಮಾಡಲು ‘0’ ಡಯಲ್‌ ಕಡ್ಡಾಯ?

By Kannadaprabha News  |  First Published May 30, 2020, 9:59 AM IST

ಲ್ಯಾಂಡ್‌ಲೈನ್‌ ಫೋನಿಂದ ಮೊಬೈಲ್‌ಗೆ ಕರೆ ಮಾಡಲು ‘0’ ಡಯಲ್‌ ಕಡ್ಡಾಯ?|  ಮೊಬೈಲ್‌ ಸಂಖ್ಯೆಯಲ್ಲಿ ವ್ಯತ್ಯಾಸವೇನೂ ಆಗುವುದಿಲ್ಲ|  ಸ್ಥಿರ ದೂರವಾಣಿಯಿಂದ ಮೊಬೈಲ್‌ಗೆ ಕರೆ ಮಾಡುವ ಮುನ್ನ ‘0’ಯನ್ನು ಡಯಲ್‌ ಮಾಡಬೇಕು


ನವದೆಹಲಿ(ಮೇ.30): ಈಗಿರುವ 10 ಸಂಖ್ಯೆಯ ಮೊಬೈಲ್‌ ನಂಬರ್‌ ಅನ್ನು 11 ಸಂಖ್ಯೆಗೆ ಹೆಚ್ಚಿಸಲು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಶುಕ್ರವಾರ ಶಿಫಾರಸು ಮಾಡಿದೆ.

ಇದರಿಂದ ಈಗಿರುವ ಮೊಬೈಲ್‌ ಸಂಖ್ಯೆಯಲ್ಲಿ ವ್ಯತ್ಯಾಸವೇನೂ ಆಗುವುದಿಲ್ಲ. ಆದರೆ, ಸ್ಥಿರ ದೂರವಾಣಿಯಿಂದ ಮೊಬೈಲ್‌ಗೆ ಕರೆ ಮಾಡುವ ಮುನ್ನ ‘0’ಯನ್ನು ಡಯಲ್‌ ಮಾಡಬೇಕು.

Tap to resize

Latest Videos

undefined

ಟ್ರೂ ಕಾಲರ್‌ ಬಳಸ್ತಿದ್ದೀರಾ? ಎಚ್ಚರ... ಇಲ್ಲಿದೆ ನೋಡಿ ಶಾಕಿಂಗ್ ಸುದ್ದಿ!

ಆದರೆ, ಮೊಬೈಲ್‌ನಿಂದ ಮೊಬೈಲ್‌ಗೆ ಅಥವಾ ಮೊಬೈಲ್‌ನಿಂದ ಸ್ಥಿರ ದೂರವಾಣಿಗೆ ಕರೆ ಮಾಡುವ ‘0’ಯನ್ನು ಡಯಲ್‌ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ.

ಹಾಲಿ ಲಭ್ಯವಿರುವ ಮೊಬೈಲ್‌ ಹಾಗೂ ಸ್ಥಿರ ದೂರವಾಣಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಳಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಟ್ರಾಯ್‌ ಈ ಶಿಫಾರಸು ಮಾಡಿದೆ.

click me!