ಏರ್‌ಟೆಲ್‌ಗೆ ಅತ್ಯುತ್ತಮ ನೆಟ್‌ವರ್ಕ್ ಸಂಸ್ಥೆ ಎಂಬ ಗರಿ....

By Suvarna News  |  First Published Apr 29, 2020, 7:40 PM IST

ಇದೀಗ ಅನೇಕರು ಮನೆಯಿಂದಾನೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಬದಲಾದ ಸನ್ನಿವೇಶದಲ್ಲಿ ಹೊಸತನಕ್ಕೆ ಮನುಷ್ಯ ಹೊಂದಿ ಕೊಳ್ಳುತ್ತಿದ್ದಾನೆ. ಆದರೆ, ಎಲ್ಲವಕ್ಕೂ ಇಂಟರ್ನೆಟ್ ಮಾತ್ರ ಅತ್ಯಗತ್ಯವಾಗಿ ಬೇಕೇ ಬೇಕು. ಇಂಥ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಏರ್‌ಟೆಲ್‌‌ಗೆ ಅನೇಕ ಮನ್ನಣೆ ದೊರೆತಿದ್ದು, ಏನವು, ನೀವೇ ಓದಿ...


ಏಪ್ರಿಲ್ 2020ರ ಮೊಬೈಲ್ ನೆಟ್‌ವರ್ಕ್ ಎಕ್ಸ್‌ಪಿರಿಯನ್ಸ್ ವರದಿ ಬಂದಿದ್ದು, ಯಾರಿಗೂ ಸರಿಸಾಟಿ ಇಲ್ಲದಂತೆ, ಅತ್ಯುತ್ತಮ ಸೇವೆ ನೀಡುತ್ತಿರುವ ನೆಟ್‌ವರ್ಕ್ ಎಂಬ ಗರಿ ಏರ್‌ಟೆಲ್ ಕಂಪನಿಗೆ ಲಭಿಸಿದೆ.

ಗ್ರಾಹಕರ ಮೊಬೈಲ್ ಅನುಭವವನ್ನು ವಿಶ್ಲೇಷಿಸುವ ಓಪನ್‌ಸಿಗ್ನಲ್ ಒಂದು ಸ್ವತಂತ್ರ, ಜಾಗತಿಕ ಸ್ಥಾನಮಾನವುಳ್ಳ ಕಂಪನಿ. ಈ ಕಂಪನಿ ಭಾರತದಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ಕಂಪನಿಗಳಿಗೆ ಹೋಲಿಸಿ ಇಂಥ ವರದಿಯನ್ನು ಆಗಾಗ ಬಿಡುಗಡೆ ಮಾಡುತ್ತಿದ್ದು, ಯಾವ ಕಂಪನಿ ಅತ್ಯುತ್ತಮ ಸೇವೆ ನೀಡುವುದರಲ್ಲಿ ಮುಂದಿದೆ ಎಂದು ಹೇಳುತ್ತದೆ. ಈ ಸ್ವಾಯತ್ತ ಕಂಪನಿ ತನ್ನ ವರದಿಯನ್ನು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಿದ್ದು, ವೀಡಿಯೋ ಹಾಗೂ ಮೊಬೈಲ್ ಎಕ್ಸ‌ಪಿಯರಿಯನ್ಸ್‌ನಲ್ಲಿ ಉತ್ತಮ ಸೇವೆ ನೀಡುವ ಸಂಸ್ಥೆಯಾಗಿ ಏರ್‌ಟೆಲ್ ಹೊರ ಹೊಮ್ಮಿದೆ. 

Tap to resize

Latest Videos

undefined

ಲಾಕ್‌ಡೌನಲ್ಲೂ ಪಡೆಯಬಹುದಾದ 5 ಏರ್‌ಟೆಲ್ ಸೇವೆಗಳು

ಲಾಕ್‌ಡೌನ್ ಆಗಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮನೆಯಲ್ಲಿಯೇ ಬಂಧಿಯಾಗಿದ್ದು, ಮೊಬೈಲ್ ಮೇಲೆ ಅವಲಂಬಿತವಾಗಿರುವುದು ವಿಪರೀತ ಹೆಚ್ಚಾಗಿದೆ. ಈ ಕಾರಣದಿಂದ ಇಂಟರ್ನೆಟ್ ಡೇಟಾ ಡಿಮ್ಯಾಂಡ್ ಸಹ ಹೆಚ್ಚಾಗಿದೆ. ತಮ್ಮ ಮೊಬೈಲ್‌ನಲ್ಲಿ ವೀಡಿಯೋ ಹಾಗೂ ಆಡಿಯೋ ಸರಾಗವಾಗಿ ಪ್ಲೇ ಆಗಬೇಕೆಂದು ಈ ಸಂದರ್ಭದಲ್ಲಿ ಪ್ರತಿಯೊಬ್ಬ ಗ್ರಾಹಕನೂ ಬಯಸುತ್ತಾನೆ. ಇಂಥ ಸಂದರ್ಭದಲ್ಲಿ ಏರ್‌ಟೆಲ್ ತನ್ನ ಸೇವೆಯನ್ನು ಉತ್ತಮಗೊಳಿಸಿಕೊಂಡಿದ್ದು, ಹಿಂದಿನ ತಿಂಗಳಿಗಿಂತಲೂ ಅತ್ಯುತ್ತಮ ಸೇವೆ ನೀಡುತ್ತಿದೆ, ಎಂದು ಓಪನ್ ಸಿಗ್ನಲ್ ವರದಿಯಲ್ಲಿ ಹೇಳಿದೆ. 

ವೀಡಿಯೋ, ವಾಯ್ಸ್ ಆ್ಯಪ್ ಅನುಭವ, ಡೌನ್‌ಲೋಡ್ ಸ್ಪೀಡ್ ಹಾಗೂ ಸುಪ್ತ ಅನುಭವ ನೀಡುವ ಸೇವೆಯಲ್ಲಿ ಏರ್‌ಟೆಲ್ ಗೆಲವು ಸಾಧಿಸಿದೆ. ಅಪ್‌ಲೋಡ್ ಸ್ಪೀಡ್ ಕ್ಯಾಟಗರಿಯಲ್ಲಿ ವೊಡಾಫೋನ್ ಗೆಲುವಿನ ಗರಿ ಮುಡಿಗೇರಿಸಿಕೊಂಡರೆ, ಜಿಯೋ 4ಜಿ ಸೇವೆ ಹಾಗೂ 4ಜಿ ಕವರೇಜ್ ಎಕ್ಸ್‌ಪಿರಿಯನ್ಸ್‌ನಲ್ಲಿ ತನ್ನ ಗುಣಮಟ್ಟವನ್ನು ಹೆಚ್ಚಿಸಿಕೊಂಡಿದ್ದಾಗಿ, ವರದಿ ಹೇಳಿದೆ. 

ಟೆಲಿಕಾಂ ಕ್ಷೇತ್ರದಲ್ಲಿ ಏರ್‌ಟೆಲ್ ಕ್ರಾಂತಿ

ವೀಡಿಯೋ ಎಕ್ಸ್‌ಪಿರಿಯನ್ಸ್
ವೀಡಿಯೋ ವೀಕ್ಷಿಸಲು ಹಾಗೂ ಮೊಬೈಲ್ ಸಂಬಂಧಿ ಇತರೆ ಕಾರ್ಯ ಚಟುವಟಿಕೆಗಳಿಗೆ ಬೇರೆ ಎಲ್ಲ ಸಾಧನಗಳಿಗಿಂತ ಸ್ಮಾರ್ಟ್ ಫೋನ್ ಹಾಗೂ ಮೊಬೈಲ್ ಡೇಟಾ  ಹೆಚ್ಚು ಬಳಕೆಯಾಗುತ್ತಿವೆ. ಅತ್ಯುತ್ತಮ ಕ್ವಾಲಿಟಿ ಹಾಗೂ ಸರಾಗವಾಗಿ ವೀಡಿಯೋ ಪ್ಲೇ ಆಗಬೇಕೆಂಬುವುದು ಪ್ರತಿಯೊಬ್ಬ ಇಂಟರ್ನೆಟ್ ಬಳಸೋ ಗ್ರಾಹಕನ ಬಯಕೆ. ಈ ನಿರೀಕ್ಷೆಯನ್ನು ಪೂರ್ಣಗೊಳಿಸಲು ಭಾರತದ ಪ್ರತಿಯೊಂದೂ ಇಂಟರ್ನೆಟ್ ಸೇವೆ ನೀಡುವ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿವೆ. ಪಿಕ್ಚರ್ ರೆಸಲ್ಯೂಷನ್ ಹಾಗೂ ಸ್ಟಾಲಿಂಗ್ ರೇಟ್ ಗಣನೆಗೆ ತೆಗೆದುಕೊಳ್ಳುವುದರೊಂದಿಗೆ ವೀಡಿಯೋ ಲೋಡ್ ಟೈಮ್ ಮತ್ತು ವೀಡಿಯೋ ವೀಕ್ಷಣೆಗೆ ಸಂಬಂಧಿಸಿದ ವಿವಿಧ ಅನುಭವಗಳನ್ನು ಒಟ್ಟು 100 ಪ್ರದೇಶಗಳಲ್ಲಿ ಓಪನ್‌ಸಿಗ್ನಲ್ ಪರೀಕ್ಷೆ ನಡೆಸುತ್ತದೆ. ಈ ಎಲ್ಲಾ ಸೇವೆಯನ್ನು ಪರಿಗಣಿಸುವ ಕಂಪನಿ, Airtel ಉತ್ತಮ ಸೇವೆ ಸಲ್ಲಿಸುತ್ತಿದೆ ಎಂಬ ರೇಟಿಂಗ್ ನೀಡಿದೆ. ಉಳಿದ ನೆಟ್‌ವರ್ಕ್‌ಗಳು ಫೇರ್ ಹಾಗೂ ಪೂರ್ ರೇಟಿಂಗ್ ಗಳಿಸಿಕೊಂಡಿವೆ. ವೊಡಾಫೋನ್‌ಗೂ 'ಗುಡ್' ರೇಟಿಂಗ್ ಸಿಕ್ಕಿದೆ. ಫೋನ್ ಡೇಟಾ ಬಳಸಿ ತ್ವರಿತ ವೀಡಿಯೋ ಲೋಡಿಂಗ್ ಸಮಯ ಹಾಗೂ ವೀಡಿಯೋ ವೀಕ್ಷಿಸುತ್ತಿರುವಾಗ ಆಗದ ಯಾವುದೇ ತೊಂದರೆ...ಮುಂತಾದ ಗುಣಮಟ್ಟದ ಸೇವೆಯನ್ನು ಪರಿಗಣಿಸಿ, ಸಂಸ್ಥೆ ವರದಿಯಲ್ಲಿ ರೇಟಿಂಗ್ ನೀಡುತ್ತದೆ. 

ವಾಯ್ಸ್ ಆ್ಯಪ್ ಅನುಭವ
ಓವರ್ ದಿ ಟಾಪ್ (OTT) ಸೇರಿ, ಫೇಸ್‌ಬುಕ್ ಮೆಸೆಂಜರ್, ವಾಟ್ಸ್ ಆ್ಯಪ್, ಸ್ಕೈಪ್ ಮುಂತಾದ ವಾಯ್ಸ್ ಆಧಾರಿತ ಸೇವೆ ನೀಡುವ ಆ್ಯಪ್‌ಗಳಲ್ಲಿ ಅನುಭವ ಹೇಗಿದೆ ಎಂಬ ಆಧಾರದ ಮೇಲೆ ಓಪನ್‌ಸಿಗ್ನಲ್ ನೆಟ್‌ವರ್ಕ್‌ ಮೌಲ್ಯವನ್ನು ನಿರ್ಧರಿಸುತ್ತದೆ. ಈ ವಿಭಾಗದಲ್ಲಿ ಎಲ್ಲ ನೆಟ್‌ವರ್ಕ್‌ಗಳೂ ನೆಕ್ ಟು ನೆಕ್ ಸ್ಪರ್ಧೆ ನೀಡಿದ್ದು, ಏರ್‌ಟೆಲ್ ಎಲ್ಲವುಕ್ಕಿಂತ ತುಸು ಮುಂದಿದೆ. ಭಾರತದಲ್ಲಿ ಸೇವೆಯಲ್ಲಿರುವ ಎಲ್ಲ ಇಂಟರ್ನೆಟ್ ಕಂಪನಿಗಳೂ ಸಮಾಧಾನಕರ ಸೇವೆ ಸಲ್ಲಿಸುತ್ತಿವೆ. ಅಂದರೆ ಗ್ರಾಹಕರು ಪುನಾರವರ್ತನೆ ಇಲ್ಲದೇ ಮತ್ತೊಂದು ಕಡೆಯಿಂದ ಹೇಳಿರುವುದನ್ನು ಕೇಳಿಸಿಕೊಳ್ಳುತ್ತಿದ್ದು, ವಾಯ್ಸ್ ಆ್ಯಪ್ ವಿಷಯದಲ್ಲಿ ತೃಪ್ತರಾಗಿದ್ದಾರೆ. 

ಡೌನ್‌ಲೋಡ್ ಸ್ಪೀಡ್ ಅನುಭವ
ಈ ವಿಷಯದಲ್ಲಿ ಎಂದಿನಂತೆ Airtel ಈ ಸಾರಿಯೂ ಗೆಲವು ಸಾಧಿಸಿದ್ದು, ವೊಡಾಫೋನ್ ಹಾಗೂ ಐಡಿಯಾ ಹಿಂಬಾಲಿಸುತ್ತಿದೆ. ಏಪ್ರಿಲ್‌ನಲ್ಲಿ ಏರ್‌ಟೆಲ್ 3ಜಿ ಹಾಗೂ 4ಜಿ ಡೌಲ್‌ಲೋಡ್ ಸ್ಪೀಡಿನಲ್ಲಿ ಮುನ್ನಡೆ ಸಾಧಿಸಿದೆ. 

ಲೆಂಟೆನ್ಸಿ ಎಕ್ಸ್‌ಪಿರಿಯನ್ಸ್
ಇದೇ ಮೊದಲ ಬಾರಿಗೆ Airtel ಈ ವಿಭಾಗದಲ್ಲಿ ಗೆಲವು ಸಾಧಿಸಿದೆ. ಎಲ್ಲಾ ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ರಿಯಲ್ ಟೈಮ್ ಕಮ್ಮೂನಿಕೇಷನ್ ಮತ್ತು ಗೇಮಿಂಗ್ ಅಪ್ಲಿಕೇಷನ್ ಬಳಕೆಯ ಆಧಾರದ ಮೇಲೆ ಈ ವಿಭಾಗದ ಸೇವೆಯನ್ನು ಪರಿಗಣಿಸಲಾಗುತ್ತದೆ. 

ಪ್ರಾದೇಶಿಕ ಮಟ್ಟದಲ್ಲಿಯೂ ಏರ್‌ಟೆಲ್ ಅತ್ಯುತ್ತಮ ಸೇವೆ ನೀಡುತ್ತಿದ್ದು, ಮೊಬೈಲ್ ಅನುಭವದಲ್ಲಿ ತನ್ನೆಲ್ಲಾ ಸ್ಪರ್ಧಿಗಳನ್ನೂ ಹಿಂದಿಕ್ಕಿದೆ. ಒಟ್ಟಿನಲ್ಲಿ ಎಲ್ಲ ಇಂಟರ್ನೆಟ್ ಸೇವೆ ನೀಡುವ ಕಂಪನಿಗಳೂ ಅತ್ಯುತ್ತಮ ಸೇವೆ ನೀಡಲು ಬದ್ಧವಾಗಿದ್ದು, ಗ್ರಾಹಕರನ್ನು ತೃಪ್ತಿಪಡಿಸುವಲ್ಲಿ ಕಾರ್ಯಪ್ರವೃತ್ತವಾಗಿವೆ. ಈ ವಿಷಯದಲ್ಲಿ ಬಹುತೇಕ ಕಂಪನಿಗಳು ತನ್ನ ಗುರಿ ತಲುಪುವಲ್ಲಿ ಯಶಸ್ವಿಯಾಗಿವೆ. 

 

click me!