ಮಾರ್ಚ್ 8ಕ್ಕೆ 3ನೇ ತಲೆಮಾರಿನ Apple iPhone SE ಲಾಂಚ್, 23 ಸಾವಿರ ರೂ.ಗೆ ಸಿಗುತ್ತಾ ಫೋನ್?

By Suvarna News  |  First Published Mar 3, 2022, 3:53 PM IST

*ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿರುವ ಆಪಲ್‌ನ ಮೂರನೇ ತಲೆಮಾರಿ ಐಫೋನ್ ಎಸ್ಇ
*ಎರಡನೇ ತಲೆಮಾರಿನ ಐಫೋನ್ ಎಸ್ಇ ಮೀರಿಸಲಿರುವ ಈ ಹೊಸ ಸ್ಮಾರ್ಟ್‌ಫೋನ್
*ಕೆಲವು ವರದಿಗಳ ಪ್ರಕಾರ ಈ ಪೋನ್ 21 ಸಾವಿರದಿಂದ 23 ಸಾವಿರ ರೂ.ಗೆ ಸಿಗಲಿದೆ?


Tech Desk: ಬಹುನಿರೀಕ್ಷಿತ ಮೂರನೇ ತಲೆಮಾರಿನ ಆಪಲ್ ಐಫೋನ್ ಎಸ್‌ಇ (Apple iPhone SE) ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಲು ಸಿದ್ಧವಾಗಿದೆ. ಅಲ್ಲದೇ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇದ್ದು, ಆಪಲ್ ಕಂಪನಿಯ ಪ್ರಕಾರ 2022 ಮಾರ್ಚ್ 8ರಂದು ಆಪಲ್ ಐಫೋನ್ ಎಸ್ಇ ಸ್ಮಾರ್ಟ್ ಫೋನ್ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಸಾಮಾನ್ಯವಾಗಿ ಆಪಲ್ ಕಂಪನಿಯ ಐಫೋನ್‌ಗಳು ದುಬಾರಿಯಾಗಿರುತ್ತವೆ. ಕಂಪನಿಯ ಇತರ ಸಾಧನಗಳಿಗೆ ಹೋಲಿಸಿದರೆ ಮಾರ್ಚ್ 8ರಂದು ಬಿಡುಗಡೆಯಾಗಲಿವೆ ಐಫೋನ್ ಎಸ್ಇ (Apple iPhone SE) ಮೂರನೇ ತಲೆಮಾರಿನ ಸ್ಮಾರ್ಟ್‌ಫೋನ್ ಕಡಿಮೆ ವೆಚ್ಚದ ಫೋನ್ ಆಗಿದೆ.

ಈಗ ಬಿಡುಗಡೆಯಾಗಲಿರುವ ಐಫೋನ್ ಎಸ್ಇ, ಈ ಹಿಂದೆ ಬಿಡುಗಡೆಯಾಗಿ ಜನಪ್ರಿಯವಾಗಿದ್ದ ಐಫೋನ್ ಎಸ್ಇ ಎರಡನೇ ತಲೆಮಾರಿನ ಫೋನ್‌ ಅನ್ನು ಮೀರಿಸುವ ರೀತಿಯಲ್ಲಿದೆ. ಈ  A13 ಬಯೋನಿಕ್ CPU ನಿಂದ ಚಾಲಿತವಾಗಿದೆ. ಮೂರನೇ ತಲೆಮಾರಿನ ಆಪಲ್ ಐಫೋನ್ ಎಸ್ಇ (Apple iPhone SE) ಅನ್ನು ಹೊರತುಪಡಿಸಿ, ಲಾಂಚ್ ಸಮಾರಂಭದಲ್ಲಿ ಕೆಲವು ಇತರ ಸಾಧನಗಳನ್ನೂ ಕಂಪನಿಯು ಅನಾವರಣಗೊಳಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎನ್ನಲಾಗುತ್ತಿದೆ. ಕಡಿಮೆ ಬೆಲೆಯ ಐಪ್ಯಾಡ್ ಏರ್ ಸಾಧನಗಳು ಈ ಬಿಡುಗಡೆ ಪಟ್ಟಿಯಲ್ಲಿರಬಹುದು ಎಂದು ಅಂದಾಜಿಸಲಾಗುತ್ತಿದೆ.

Tap to resize

Latest Videos

undefined

ಇದನ್ನೂ ಓದಿ: Redmi Note 11E Pro ಲಾಂಚ್, ವಿಶೇಷತೆಗಳೇನು? ಭಾರತದಲ್ಲಿ ಯಾವಾಗ ಬಿಡುಗಡೆ?

ಆಪಲ್‌ (Apple) ನ SVP ಮಾರ್ಕೆಟಿಂಗ್‌ನ ಗ್ರೆಗ್ ಜೋಸ್ವಿಯಾಕ್ (Greg Joswiak), , ಬಿಡುಗಡೆ ದಿನಾಂಕವನ್ನು ಟ್ವಿಟರ್ (Twitte)r ನಲ್ಲಿ ಬಹಿರಂಗಪಡಿಸಿದ್ದಾರೆ. ಈ ಟ್ವೀಟ್‌ನಲ್ಲಿ ಅವರು "ಅತ್ಯುತ್ತಮ ಕಾರ್ಯಕ್ಷಮತೆ," ಎಂದು ವಿವರಣೆಯಲ್ಲಿ ಸೇರಿಸಿದ್ದಾರೆ. ಹಾಗಿಯೇ ಆಪಲ್‌ನ ಪ್ರಸಿದ್ಧ ಲೋಗೋದ ವೀಡಿಯೊವನ್ನು ಕೇಂದ್ರೀಕರಿಸಲಾಗಿದೆ.

A15 ಬಯೋನಿಕ್ ಚಿಪ್‌ಸೆಟ್ ಮೂರನೇ ತಲೆಮಾರಿನ Apple iPhone SE ಗೆ ಶಕ್ತಿ ತುಂಬುವ ಸಾಧ್ಯತೆಯಿದೆ. Apple iPhone 12 ಮತ್ತು iPhone 13 ನಂತಹ ಸ್ಮಾರ್ಟ್‌ಫೋನ್ 5G-ಸಕ್ರಿಯಗೊಳಿಸಲ್ಪಡುತ್ತದೆ ಎಂದು ಖರೀದಿದಾರರು ಭರವಸೆ ಹೊಂದಿದ್ದಾರೆ. ಏತನ್ಮಧ್ಯೆ, iPhone SE 2022 ಅನ್ನು ಕಂಪನಿಯ ಆರಂಭಿಕ ಬೆಲೆಯಾಗಿ 300 ಡಾಲರ್‌ಗೆ ನೀಡಬಹುದು ಎಂದು ಹೇಳಲಾಗುತ್ತಿದೆ. ಲೂಪ್ ಮಾರುಕಟ್ಟೆ ವಿಶ್ಲೇಷಕ  ಜಾನ್ ಡೊನೊವನ್ ಅವರ ಪ್ರಕಾರ ಈ  ಸ್ಮಾರ್ಟ್ಫೋನ್ 300 ಡಾಲರ್‌ನಿಂದ ಪ್ರಾರಂಭವಾಗಬಹುದು.

 

Peek performance. March 8th. See you there. pic.twitter.com/cEKMq7BuBh

— Greg Joswiak (@gregjoz)

 

ಈ ಫೋನ್ ಬೆಲೆ ಈಗ ಹರಡಿರುವ ವದಂತಿಗಳು ನಿಜವೇ ಆಗಿದ್ದರೆ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ  ಫೋನ್‌ನ ಸುಮಾರು 23,000 ರಿಂದ 25,000 ರೂ.ಗೆ ಸಿಗಬಹುದು. ಮಾಧ್ಯಮಗಳ ವರದಿಗಳ ಪ್ರಕಾರ, iPhone SE 3GB ಮೆಮೊರಿಯನ್ನು ಹೊಂದಿರಬಹುದು, ಆದರೆ 2023 iPhone SE ದೊಡ್ಡ ಡಿಸ್‌ಪ್ಲೇ ಮತ್ತು 4GB ಮೆಮೊರಿ ಮಾದರಿಯಂತೆ ಹೆಚ್ಚಿನ ಪ್ರಮುಖ ವರ್ಧನೆಗಳನ್ನು ಮಾಡುತ್ತದೆ.

ಇದನ್ನೂ ಓದಿ: Facebook Bans Russia Media: ಫೇಸ್‌ಬುಕ್‌ನಲ್ಲಿ ರಷ್ಯಾ ಸ್ಟೇಟ್ ಮೀಡಿಯಾ ಬ್ಯಾನ್!

ಆಪಲ್ 2022 ರ ಬಿಡುಗಡೆಗಾಗಿ 5G ಸಂಪರ್ಕದೊಂದಿಗೆ ಹೊಸ 4.7-ಇಂಚಿನ iPhone SE ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಡಿಸ್‌ಪ್ಲೇ ಸಂಶೋಧಕ ರಾಸ್ ಯಂಗ್ (Ross Young) ಹೇಳಿದ್ದಾರೆ. ಯಂಗ್ ಪ್ರಕಾರ, ಸ್ಮಾರ್ಟ್‌ಫೋನ್ 2024 ರಲ್ಲಿ 5.7 ಇಂಚುಗಳಿಂದ 6.1 ಇಂಚಿನ ಎಲ್‌ಸಿಡಿ ಡಿಸ್ಪ್ಲೇಯೊಂದಿಗೆ ಐಫೋನ್ ಎಸ್‌ಇ ಮಾದರಿಯನ್ನು ಅನುಸರಿಸುತ್ತದೆ.

ಆಪಲ್ ಕಂಪನಿಯು ತನ್ನ ಉತ್ಕೃಷ್ಟ ಸ್ಮಾರ್ಟ್‌ಫೋನುಗಳಿಂದಾಗಿ ಹೆಚ್ಚು ಜನಪ್ರಿಯತೆಯನ್ನು, ಭಾರೀ ಸಂಖ್ಯೆಯಲ್ಲಿ ಗ್ರಾಹಕರನ್ನು ಪಡೆದುಕೊಂಡಿದೆ. ಸ್ಮಾರ್ಟ್‌ಫೋನುಗಳ ಮಾತ್ರವಲ್ಲದೇ ಇತರ ಸಾಧನಗಳಿಂದಲೂ ಆಪಲ್ ತನ್ನ ಸಮೀಪದ ಪ್ರತಿಸ್ಪರ್ಧಿ ಕಂಪನಿಗಳಿಗಿಂತಲೂ ಮುಂದಿದೆ. ಜತೆಗೆ, ಹೊಸ ಹೊಸ ತಂತ್ರಜ್ಞಾನವನ್ನು ಬಳಸುವ ಮೂಲಕ ಬಳಕೆದಾರರಿಗೆ ವಿಶಿಷ್ಟ ಅನುಭವವನ್ನು ನೀಡಲು ಯಶಸ್ವಿಯಾಗುತ್ತಿದೆ. ಇದೇ ಕಾರಣಕ್ಕೆ ಆಪಲ್ ಕಂಪನಿಯ ಸ್ಮಾರ್ಟ್‌ಫೋನುಗಳು ಹಾಗೂ ಇತರ ಸಾಧನಗಳು ಹೆಚ್ಚು ಜನಪ್ರಿಯವಾಗುತ್ತಿವೆ ಎಂದು ಹೇಳಬಹುದು.

click me!