Redmi Note 11E Pro ಲಾಂಚ್, ವಿಶೇಷತೆಗಳೇನು? ಭಾರತದಲ್ಲಿ ಯಾವಾಗ ಬಿಡುಗಡೆ?

By Suvarna News  |  First Published Mar 1, 2022, 2:45 PM IST

* ಭಾರೀ ನಿರೀಕ್ಷೆ ಮೂಡಿಸಿದ್ದ ರೆಡ್‌ಮಿ ನೋಟ್ 11 ಇ ಪ್ರೋ ಸ್ಮಾರ್ಟ್‌ಫೋನ್ ಬಿಡುಗಡೆ
* 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೇರಿ ಮೂರು ಕ್ಯಾಮೆರಾಗಳನ್ನು ನೀಡಲಾಗಿದೆ. 
* ಅಕ್ಟಾಕೋರ್ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 695 ಪ್ರೊಸೆಸರ್ ಇದೆ.


Tech Desk: ಭಾರೀ ನಿರೀಕ್ಷೆ ಮೂಡಿಸಿದ್ದ ರೆಡ್‌ಮಿ ನೋಟ್ 11 ಇ ಪ್ರೋ (Redmi Note 11E pro) ಸ್ಮಾರ್ಟ್‌ಫೋನ್ ಮಂಗಳವಾರ ಲಾಂಚ್ ಆಗಿದೆ. ಚೀನಾ (China) ಮೂಲದ ರೆಡ್‌ಮಿ ಇತ್ತೀಚಿನ ದಿನಗಳಲ್ಲಿ ಬಿಡುಗಡೆ ಮಾಡುತ್ತಿರುವ ನೋಟ್‌ ಸಿರೀಸ್‌ನಲ್ಲಿ ಇದು ಹೊಸ ಸ್ಮಾರ್ಟ್‌ಫೋನ್ ಆಗಿದೆ.  ಈ ಫೋನ್ ಸಾಕಷ್ಟು ಹೊಸ ಹೊಸ ಫೀಚರ್‌ಗಳಿಂದ ಗಮನ ಸೆಳೆಯುತ್ತದೆ. ರೆಡ್‌ಮಿ ನೋಟ್ 11 ಇ ಪ್ರೋ ಸ್ಮಾರ್ಟ್‌ಫೋನ್‌ನಲ್ಲಿ ನೀವು 120ಎಚ್‌ಜೆಡ್ ಅಮೋಎಲ್ಇಡಿ ಪ್ರದರ್ಶಕ, ಮೂರು ಕ್ಯಾಮೆರಾಗಳ ಸೆಟ್‌ಅಪ್, 67 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಇನ್ನಿತರ ಫೀಚರ್‌ಗಳನ್ನು ಕಾಣಬಹುದು.

ಇವುಗಳ ಜತೆಗೆ, ಈ ಫೋನ್‌ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 695 ಎಸ್ಒಸಿ ಆಧರಿತವಾಗಿದ್ದು, 8 ಜಿಬಿವರೆಗೂ RAM ದೊರೆಯಲಿದೆ. ಚೀನಾದಲ್ಲಿ ಪ್ರಾರಂಭವಾದ ಹೊಸ Redmi ಫೋನ್ ಮೂಲಭೂತವಾಗಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾದ Redmi Note 11 Pro 5G ಯ ಮರುಬ್ರಾಂಡೆಡ್ ಆವೃತ್ತಿಯಾಗಿದ್ದು, ಅದು ಜನವರಿಯಲ್ಲಿ ಲಾಂಚ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು. ಭಾರತೀಯ ಮಾರುಕಟ್ಟೆಯಲ್ಲೂ ರೆಡ್‌ಮಿ ನೋಟ್ ಸ್ಮಾರ್ಟ್‌ಫೋನುಗಳಿಗೆ ಸಾಕಷ್ಟು ಬೇಡಿಕೆ ಇದೆ. ತನ್ನ ಬಜೆಟ್ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನುಗಳ ಮೂಲಕ ಕಂಪನಿಯ ಮಾರುಕಟ್ಟೆಯಲ್ಲಿ ಸಖತ್ ಪಾಲು ಪಡೆದುಕೊಂಡಿದೆ ಎಂದು ಹೇಳಬಹುದು.

Latest Videos

undefined

 ಇದನ್ನೂ ಓದಿMotorola Edge 30 Pro ಭಾರತದಲ್ಲಿ ಲಾಂಚ್, ಏನೆಲ್ಲ ವಿಶೇಷತೆ? ಸೆಲ್ಫಿ ಕ್ಯಾಮೆರಾ ಹೇಗಿದೆ?

RAM ಎಷ್ಟಿದೆ?: ಈಗಾಗಲೇ ಹೇಳಿದಂತೆ ರೆಡ್‌ಮಿ ನೋಟ್ 11 ಇ ಪ್ರೋ (Redmi Note 11E pro) ಸ್ಮಾರ್ಟ್‌ಫೋನ್ ತನ್ನ ವಿಶಿಷ್ಟ ಫೀಚರ್‌ಗಳಿಂದಾಗಿ ಗಮನ ಸೆಳೆಯುತ್ತಿದೆ. ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ, ಈ ಫೋನ್ ಡ್ಯುಯಲ್ ಸಿಮ್ ಫೋನ್ ಆಗಿದ್ದು, MIUI 13 ಜತೆಗೆ ಆಂಡ್ರಾಯ್ಡ್ 11 ಒಎಸ್ ಆಧರಿತವಾಗಿದೆ. ಜತೆಗೆ, 6.67 ಇಂಚ್ ಫುಲ್ ಎಚ್‌ಡಿ ಪ್ಲಸ್ ಸ್ಯಾಮ್ಸಂಗ್ ಅಮೋಎಲ್ಇಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಈ ಪ್ರದರ್ಶಕವು 360Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 1,200 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿದೆ.

ಇನ್ನು ಈ ಫೋನ್‌ನಲ್ಲಿ ನೀವು 8GB LPDDR4x RAMನೊಂದಿಗೆ ಸಂಯೋಜಿತಗೊಂಡಿರುವ ಅಕ್ಟಾಕೋರ್ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 695 (octa-core Qualcomm Snapdragon 695 SoC) ಪ್ರೊಸೆರ್ ಕಾಣಬಹುದು. ಇದು ಸ್ಮಾರ್ಟ್‌ಫೋನ್ ವೇಗವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಹಾಗಾಗಿ, ಈ ಫೋನು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. 

ಇದನ್ನೂ ಓದಿIndian Smartphone Market: 2026ರ ಹೊತ್ತಿಗೆ ಭಾರತದಲ್ಲಿ 100 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರು!

ಕ್ಯಾಮೆರಾ ಹೇಗಿದೆ?: ಇನ್ನು ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಕಂಪನಿಯು ಈ ಫೋನಿನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ನೀಡಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. 8 ಮೆಗಾ ಪಿಕ್ಸೆಲ್ ಮತ್ತು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳನ್ನು ಎರಡನೇ ಮತ್ತು ಮೂರನೇ ಕ್ಯಾಮೆರಾಗಳಾಗಿ ನೀಡಲಾಗಿದೆ.  ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಾಗಿ ಕಂಪನಿಯು ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳಡಿಸಿದೆ. ಕ್ಯಾಮೆರಾ ದೃಷ್ಟಿಯಿಂದ ಈ ಫೋನು ತುಂಬ ಚೆನ್ನಾಗಿದೆ ಎಂದು ಹೇಳಬಹುದು. 

ಬೆಲೆ ಎಷ್ಟು?: ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಈ ಫೋನ್ ಬೆಲೆ ಅಂದಾಜು 20,300 ರೂ.ನಿಂದ ಬೇರೆ ಬೇರೆ ವೆರಿಯೆಂಟ್‌ಗಳಿಗೆ 25,100 ರೂ.ವರೆಗೂ ಇರಲಿದೆ ಎಂದು ಹೇಳಲಾಗುತ್ತಿದೆ. 6GB RAM + 128GB, 8GB + 128GB ಮತ್ತು 8GB + 256GB ವೆರಿಯೆಂಟ್‌ಗಳಲ್ಲಿ ಈ ಫೋನ್ ಗ್ರಾಹಕರಿಗೆ ಮಾರಾಟಕ್ಕೆಸಿಗಲಿದೆ. ಕಪ್ಪು, ನೀಲಿ, ಬಿಳಿ ಬಣ್ಣಗಳಲ್ಲಿ ಈ ಫೋನ್ ಮಾರಾಟಕ್ಕೆಸಿಗಲಿದೆ ಎಂದು ಹೇಳಬಹುದು. ಇದೇ ವೇಳೆ, ಕಂಪನಿಯ ರೆಡ್‌ಮಿ Redmi Note 11 Pro 5G ಮಾರ್ಚ್ 9 ರಂದು Redmi Note 11 Pro+ 5G ಆಗಿ ಭಾರತಕ್ಕೆ ಬರುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.

click me!