ಹೊಸ ವರ್ಷಕ್ಕೆ ಭರ್ಜರಿ ಕೊಡುಗೆ ಕೊಟ್ಟ ಜಿಯೋ/ ಬೇರೆ ನೆಟ್ ವರ್ಕ್ ಗೆ ಕರೆ ಸಂಪೂರ್ಣ ಉಚಿತ/ ಜನವರಿ ಒಂದರಿಂದ ಕೊಡುಗೆ ಆರಂಭ/ ಟ್ರಾಯ್ ನಿರ್ಧಾರದ ಮೇರೆಗೆ ಸೆಪ್ಟೆಂಬರ್ 2019 ರಲ್ಲಿ, ಜಿಯೋ ತನ್ನ ಗ್ರಾಹಕರಿಗೆ ಆಫ್ ನೆಟ್ ವಾಯ್ಸ್ ಕರೆಗಳಿಗೆ ಶುಲ್ಕ ವಿಧಿಸಲು ಪ್ರಾರಂಭಿಸಿತ್ತು
ನವದೆಹಲಿ(ಡಿ. 31) ಹೊಸ ವರ್ಷಕ್ಕೆ ಯಾರೂ ಏನೂ ಕೊಟ್ಟಿದ್ದಾರೋ.. ಬಿಟ್ಟಿದ್ದಾರೋ.. ಜಿಯೋ ಮಾತ್ರ ಅದ್ಭುತ ಕೊಡುಗೆ ನೀಡಿದೆ. ಮತ್ತೆ ತನ್ನ ಹಳೆಯ ಹಾದಿಗೆ ಮರಳಿದ್ದು ಆಫ್-ನೆಟ್ ದೇಶೀಯ ವಾಯ್ಸ್ ಕರೆಗಳನ್ನು ಸಂಪೂರ್ಣ ಉಚಿತವಾಗಲಿದೆ. ಜಿಯೋ ಟು ಜಿಯೋ ಉಚಿತ ಇತ್ತು.. ಈಗ ಜಿಯೋದಿಂದ ಉಳಿದ ನೆಟ್ ವರ್ಕ್ ಗಳಿಗೂ ಉಚಿತ ಸೌಲಭ್ಯ ಸಿಗಲಿದೆ.
ಜಿಯೋ ಆರಂಭದಲ್ಲಿ ಡೇಟಾ ಮತ್ತು ಕರೆ ಸೌಲಭ್ಯವನ್ನು ಉಚಿತವಾಗಿಯೇ ನೀಡಿತ್ತು. ನಂತರದ ಬೆಳವಣಿಗೆಯಲ್ಲಿ ಜಿಯೋ ಕರೆಗಳ ಮೇಲೆ ಶುಲ್ಕ ವಿಧಿಸಿತ್ತು.
ಸೈಬರ್ ಕಳ್ಳರಿಂದ ನಿಮ್ಮನ್ನು ನೀವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು?
ಟ್ರಾಯ್ ನಿರ್ಧಾರದ ಮೇರೆಗೆ ಸೆಪ್ಟೆಂಬರ್ 2019 ರಲ್ಲಿ, ಜಿಯೋ ತನ್ನ ಗ್ರಾಹಕರಿಗೆ ಆಫ್ ನೆಟ್ ವಾಯ್ಸ್ ಕರೆಗಳಿಗೆ ಶುಲ್ಕ ವಿಧಿಸಲು ಪ್ರಾರಂಭಿಸಿತ್ತು. ಆದರೆ ಶುಲ್ಕ ವಿಧಿಸುವುದನ್ನು ಈಗ ರದ್ದುಗೊಳಿಸಲಾಗಿದ್ದು, ರಿಲಯನ್ಸ್ ಜಿಯೋ ಗ್ರಾಹಕರು ಜನವರಿ 1 ರಿಂದ ಉಚಿತವಾಗಿ ಆಫ್ ನೆಟ್ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ/
ಜಿಯೋ ತನ್ನ ಎಲ್ಲಾ ದೇಶೀಯ ಧ್ವನಿ ಕರೆಗಳಿಗೆ ಕೆಲವು ತಿಂಗಳ ಹಿಂದೆ ವಿಧಿಸಿದ್ದ ಇಂಟರ್ ಕನೆಕ್ಟ್ ಯೂಸ್ ಚಾರ್ಜ್ (ಐಯುಸಿ) ಹಿಂತೆಗೆದುಕೊಳ್ಳುವುದಾಗಿ ಘೋಷಿಸಿರುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿಯೂ ಪ್ರತಿಕ್ರಿಯೆಗಳು ಬಂದಿವೆ.
ಕೇಂದ್ರ ಸರ್ಕಾರದ ಕೃಷಿ ಮಸೂದೆಗಳ ವಿರುದ್ಧ ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದು ಅದರ ಒಂದು ಭಾಗವಾಗಿ ಬಾಯ್ಕಾಟ್ ಜಿಯೋ ಅಭಿಯಾನವೂ ಆರಂಭವಾಗಿತ್ತು. ಅನೇಕರು ಜಿಯೋದಿಂದ ಬೇರೆ ನೆಟ್ ವರ್ಕ್ ಗೆ ಪೋರ್ಟ್ ಆಗಿದ್ದರು. ಇದಲ್ಲದೇ ಪಂಜಾಬ್ ನಲ್ಲಿ ದುಷ್ಕರ್ಮಿಗಳು ನೂರಾರು ಜಿಯೋ ಟವರ್ ಗಳನ್ನು ಧ್ವಂಸ ಮಾಡಿದ್ದರು.