ಬೆಂಗಳೂರು(ಸೆ.03); ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S7 ಮತ್ತು S7 + ಭಾರತದಲ್ಲಿ ದೊಡ್ಡ ಅಭಿಮಾನಿಗಳ ನಡುವೆ ಬಿಡುಗಡೆಯಾಗುತ್ತಿದೆ ಮತ್ತು ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ರಿಟೇಲರ್ ರಿಲಯನ್ಸ್ ಡಿಜಿಟಲ್ ಸೇರಿಂದಂತೆ ಮೈ ಜಿಯೋ ಸ್ಟೋರ್ ಮತ್ತು reliancedigital.in ನಲ್ಲಿ ಎಲ್ಲಾ ಮಾಡಲ್‌ಗಳು ಅತ್ಯಾಕರ್ಷಕ ಬೆಲೆಯಲ್ಲಿ ಲಭ್ಯವಿರಲಿದೆ.
ಜಿಯೋ ರಿಚಾರ್ಜ್ ಮಾಡಿ ಉಚಿತವಾಗಿ ಐಪಿಎಲ್ ನೋಡಿ..!.
ಲಾಂಚ್‌ನ ಪ್ರಮುಖ ಅಂಶವೆಂದರೆ ಸುಂದರವಾಗಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S7 ವೈ-ಫೈ ಮಾದರಿಯ ಆರಂಭಿಕ ಬೆಲೆ ರೂ. 55,999ಗೆ ಲಭ್ಯವಿದೆ. ಇತರ ಎರಡು ಮಾದರಿಗಳಾದ ಟ್ಯಾಬ್ S7 LTE ಮತ್ತು ಟ್ಯಾಬ್ S7 + LTE ಕ್ರಮವಾಗಿ ರೂ.63,999 ಮತ್ತು ರೂ.79,999ಕ್ಕೆ ದೊರೆಯಲಿದೆ.
ಜಿಯೋ ಧಮಾಕಾ: 5 ತಿಂಗಳವರೆಗೆ ಡೇಟಾ, ಕರೆ ಸಂಪೂರ್ಣ ಉಚಿತ!
ಇನ್ನೂ ಹೆಚ್ಚೆಂದರೆ, ಈಗ ಮೊದಲೇ ಬುಕ್ ಮಾಡುವ ಗ್ರಾಹಕರು HDFC ಕಾರ್ಡ್‌ಗಳ ಮೇಲೆ ರೂ. 6000 ವರೆಗೆ ಅತ್ಯಾಕರ್ಷಕ ಕ್ಯಾಶ್‌ಬ್ಯಾಕ್ ಪಡೆಯಬಹುದು ಮತ್ತು ಸ್ಯಾಮ್‌ಸಂಗ್ ಕೀಬೋರ್ಡ್ ಕವರ್ ಮೇಲೆ ರೂ.10,000ಗಳ ಕಡಿತವನ್ನು ಪಡೆಯಬಹುದು. ಈ ಆಫರ್ ಸೆಪ್ಟೆಂಬರ್ 7, 2020 ರವರೆಗೆ ಲಭ್ಯವಿರಲಿದೆ.
ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S7 ಮತ್ತು S7 + ಮಾದರಿಗಳು ಅಲ್ಟ್ರಾ-ಸ್ಮೂತ್ 120Hz ರಿಫ್ರೆಶ್ ದರ ಹೊಂದಿರುವ ಡಿಸ್ಪ್ಲೇ ಮತ್ತು ಪ್ರಬಲ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್ ಹೊಂದಿದ್ದು, ಡಾಲ್ಬಿ ಅಟ್ಮೋಸ್ ಕ್ವಾಡ್ ಸ್ಪೀಕರ್‌ಗಳು ಮತ್ತು ಅಲ್ಟ್ರಾ-ಲೋ ಲೇಟೆನ್ಸಿ S ಪೆನ್ ನೊಂದಿಗೆ ದೊರೆಯಲಿದೆ.
ಶೂನ್ಯ ಅಡಚಣೆಗಳನ್ನು ಖಚಿತಪಡಿಸಿಕೊಳ್ಳಲು, ಆಲ್ ಡೇ ಇನ್ಟಲಿಜೆಂಟ್ ಬ್ಯಾಟರಿಯನ್ನು ಸಹ ಹೊಂದಿದೆ. ನೀವು ಕೆಲಸ ಮಾಡುವ ಮತ್ತು ಆಟ ಆಡುವ ವಿಧಾನವನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S7 ಅಥವಾ S7 + ಬದಲಾಯಿಸುವ ಸಾಧ್ಯತೆಯಿದೆ.
ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳು, ಮೈ ಜಿಯೋ ಸ್ಟೋರ್‌ಗಳು ಮತ್ತು ಆನ್‌ಲೈನ್‌ನಲ್ಲಿ ಈ ಟ್ಯಾಬ್ ಗಳನ್ನು ಪ್ರಿ ಬುಕ್ ಮಾಡಬಹುದಾಗಿದೆ. ಅಲ್ಲದೇ ಫಾಸ್ಟ್ ಡೆಲಿವರಿ ಅಥವಾ ಅವರ ಹತ್ತಿರದ ಅಂಗಡಿಯಿಂದ ಸ್ಟೋರ್ ಪಿಕ್ ಅಪ್ ಪಡೆಯಬಹುದು.