ಸ್ಯಾಮ್‌ಸಂಗ್ 13 ವರ್ಷಗಳ ಪ್ರಾಬಲ್ಯ ಅಂತ್ಯ: ಜಗತ್ತಿನ ನಂ. 1 ಸ್ಮಾರ್ಟ್‌ಫೋನ್‌ ತಯಾರಕ ಎನಿಸಿಕೊಂಡ ಆ್ಯಪಲ್

By BK AshwinFirst Published Jan 18, 2024, 6:23 PM IST
Highlights

ಐಡಿಸಿಯ ಮಾಹಿತಿಯ ಪ್ರಕಾರ, ಆ್ಯಪಲ್‌ನ ಸ್ಮಾರ್ಟ್‌ಫೋನ್ ಮಾರುಕಟ್ಟೆ ಪಾಲು ಶೇಕಡಾ 18.8 ರಿಂದ ಶೇಕಡಾ 20.1 ಕ್ಕೆ ಏರಿದೆ. ಮತ್ತೊಂದೆಡೆ, ಸ್ಯಾಮ್‌ಸಂಗ್‌ನ ಮಾರುಕಟ್ಟೆ ಪಾಲು ಶೇಕಡಾ 21.7 ರಿಂದ ಶೇಕಡಾ 19.4 ಕ್ಕೆ ಇಳಿದಿದೆ.

ದೆಹಲಿ (ಜನವರಿ 18, 2024): ಪ್ರಮುಖ ಸ್ಮಾರ್ಟ್‌ಫೋನ್ ತಯಾರಕರಾಗಿ ಒಂದು ದಶಕಕ್ಕೂ ಹೆಚ್ಚು ಸಮಯದ ನಂತರ,  ಆ್ಯಪಲ್ 2023 ರಲ್ಲಿ ಸ್ಯಾಮ್‌ಸಂಗ್ ಅನ್ನು ಹಿಂದಿಕ್ಕಿದೆ. ಈ ಮೂಲಕ ಸ್ಯಾಮ್‌ಸಂಗ್‌ನ ಸ್ಮಾರ್ಟ್‌ಫೋನ್‌ಗಳನ್ನು ಸೋಲಿಸಿ ಐಫೋನ್‌ ಜಾಗತಿಕವಾಗಿ ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಫೋನ್ ಆಗಿದೆ.

ಐ ಫೋನ್‌ ಜಗತ್ತಿನ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ 20.1 ಪ್ರತಿಶತ ಹೊಂದಿದ್ದು, ಮತ್ತೊಂದೆಡೆ, ಸ್ಯಾಮ್ಸಂಗ್ ಮಾರುಕಟ್ಟೆಯ 19.4 ಪ್ರತಿಶತವನ್ನು ಹೊಂದಿದೆ. ಸಂಶೋಧನಾ ಸಂಸ್ಥೆ ಐಡಿಸಿ ಪ್ರಕಾರ, ಆ್ಯಪಲ್ ಇತ್ತೀಚೆಗೆ ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಕರಾಗಿ ಹೊರಹೊಮ್ಮಿದ್ದು, ಸ್ಯಾಮ್‌ಸಂಗ್‌ನ 13 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿದೆ. 2010 ರಲ್ಲಿ ನೋಕಿಯಾವನ್ನು ಹಿಂದಿಕ್ಕಿದ ಬಳಿಕ ಸ್ಯಾಮ್‌ಸಂಗ್ ಈ ಹಿಂದೆ 13 ವರ್ಷಗಳ ಕಾಲ ನಂ. 1 ಸ್ಮಾರ್ಟ್‌ಫೋನ್‌ ತಯಾರಕನಾಗಿತ್ತು.

ಇದನ್ನು ಓದಿ: ಜಿಯೋದಿಂದ ರಿಪಬ್ಲಿಕ್ ಡೇ ಆಫರ್‌, ಅತೀ ಕಡಿಮೆ ಪ್ಲ್ಯಾನ್‌ನಲ್ಲಿ OTT, ಸ್ವಿಗ್ಗಿ, ಅಜಿಯೋ ಕೂಪನ್‌ ಫ್ರೀ!

 ಐಡಿಸಿಯ ಮಾಹಿತಿಯ ಪ್ರಕಾರ, ಆ್ಯಪಲ್‌ನ ಸ್ಮಾರ್ಟ್‌ಫೋನ್ ಮಾರುಕಟ್ಟೆ ಪಾಲು ಶೇಕಡಾ 18.8 ರಿಂದ ಶೇಕಡಾ 20.1 ಕ್ಕೆ ಏರಿದೆ. ಮತ್ತೊಂದೆಡೆ, ಸ್ಯಾಮ್‌ಸಂಗ್‌ನ ಮಾರುಕಟ್ಟೆ ಪಾಲು ಶೇಕಡಾ 21.7 ರಿಂದ ಶೇಕಡಾ 19.4 ಕ್ಕೆ ಇಳಿದಿದೆ. 2023 ರಲ್ಲಿ 234.6 ಮಿಲಿಯನ್‌ಗಿಂತಲೂ ಹೆಚ್ಚು ಐಫೋನ್‌ಗಳನ್ನು ರವಾನಿಸಿದ ಆ್ಯಪಲ್ ಕಂಪನಿ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ಮಾರುಕಟ್ಟೆ ನಾಯಕನಾಗಿದೆ.

ವಿಶ್ವದ ಅತ್ಯಮೂಲ್ಯ ಬ್ರ್ಯಾಂಡ್‌ಗಳಲ್ಲಿ ಒಂದಾದ Apple, ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಸ್ಯಾಮ್‌ಸಂಗ್ ಅನ್ನು ಹಿಂದಿಕ್ಕಿದೆಯಾದರೂ, ದಕ್ಷಿಣ ಕೊರಿಯಾ ಮೂಲದ ಕಂಪನಿಯು ಇನ್ನೂ ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ನಂ. 1 ಸ್ಥಾನದಲ್ಲೆ ಇದೆ. ಮತ್ತು ಅದರ ಪ್ರತಿಸ್ಪರ್ಧಿಗಳಾದ Oppo ಮತ್ತು Xiaomi ಗಿಂತ ಸಾಕಷ್ಟು ಮುಂದಿದೆ.

ಅಮೆಜಾನ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಭರ್ಜರಿ ಆಫರ್, ಅತೀ ಕಡಿಮೆ ಬೆಲೆಗೆ ಸಿಗ್ತಿದೆ ಐಫೋನ್‌!

ಸ್ಯಾಮ್‌ಸಂಗ್ 19.4% ಮಾರುಕಟ್ಟೆ ಪಾಲನ್ನು ನಿರ್ವಹಿಸುತ್ತದೆ ಮತ್ತು 2023 ರಲ್ಲಿ 226.6 ಮಿಲಿಯನ್ ಸಾಗಣೆಗಳನ್ನು ದಾಖಲಿಸಿದೆ. ಪ್ರಸ್ತುತ, ಆ್ಯಪಲ್ 2.82 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಕ್ಯಾಪ್ ಹೊಂದಿದ್ದರೆ, ಮತ್ತೊಂದೆಡೆ, ಸ್ಯಾಮ್ಸಂಗ್ 350.18 ಬಿಲಿಯನ್‌ ಡಾಲರ್ ಮಾರುಕಟ್ಟೆ ಕ್ಯಾಪ್ ಹೊಂದಿದೆ. ಒಟ್ಟಾರೆಯಾಗಿ, Apple, Samsung, Xiaomi ಮತ್ತು OPPO ಉನ್ನತ ಸ್ಮಾರ್ಟ್‌ಫೋನ್ ಮಾರುಕಟ್ಟೆ ನಾಯಕರಾಗಿದ್ದಾರೆ.

ಕದ್ದಿದ್ದು ಐಫೋನ್ ಅಲ್ಲ.. ಆಂಡ್ರಾಯ್ಡ್ ಎಂದು ಅರಿವಾಗಿ ವಾಪಸ್‌ ಕೊಟ್ಟೋದ BMW ಕಾರಲ್ಲಿ ಬಂದ ಕಳ್ಳರು!

click me!