ಸ್ಯಾಮ್‌ಸಂಗ್ ಫೋನ್‌ಗಳ ಭರ್ಜರಿ ಡಿಸ್ಕೌಂಟ್, ಗ್ಯಾಲಕ್ಸಿ A05S ಸೇರಿ ಕೆಲ ಫೋನ್ ಮೆಲೆ ಆಕರ್ಷಕ ಕೊಡುಗೆ!

By Suvarna News  |  First Published Jan 16, 2024, 6:57 PM IST

ಸ್ಯಾಮ್ ಸಂಗ್ ಗೆಲ್ಯಾಕ್ಸಿ A05ಎಸ್, ಎ54 5ಜಿ, ಎ34 5ಜಿ ಫೋನ್ ಮೇಲೆ ಆಕರ್ಷಕ ಕೊಡುಗೆ ಘೋಷಿಸಿದೆ. ಭರ್ಜರಿ ರಿಯಾಯಿತಿ ಮೂಲಕ ಆಯ್ದ ಸ್ಯಾಮ್ಸಂಗ್ ಫೋನ್ ಲಭ್ಯವಿದೆ. ಯಾವೆಲ್ಲಾ ಫೋನ್‌ಗಳ ಮೇಲೆ ಡಿಸ್ಕೌಂಟ್ ಆಫರ್ ಲಭ್ಯವಿದೆ ಅನ್ನೋ ಮಾಹಿತಿ ಇಲ್ಲಿದೆ.
 


ಬೆಂಗಳೂರು(ಜ.16) ಭಾರತದ ಸ್ಮಾರ್ಟ್‌ಫೋನ್ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ತಕ್ಕಂತೆ ಹಲವು ಬ್ರ್ಯಾಂಡ್‌ಗಳು ಲಭ್ಯವಿದೆ. ಭಾರತದಲ್ಲಿ ಸ್ಯಾಮ್‌ಸಂಗ್ ಅತೀ ದೊಡ್ಡ ಮಾರುಕಟ್ಟೆ ಹೊಂದಿದೆ. ಇದೀಗ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಸೀರಿಸ್‌ನ ಆಯ್ದ ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಸ್ಯಾಮ್‌ಸಂಗ್ ಗೆಲ್ಯಾಕ್ಸಿ A05s, A54 5G ಮತ್ತು ಗೆಲ್ಯಾಕ್ಸಿ A34 5G ಸ್ಮಾರ್ಟ್‌ಫೋನ್‌ಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ.

ಗ್ರಾಹಕರು ಇದೀಗ ಮೂಲ ಬೆಲೆ 13499 ರೂಗಳು (4ಜಿಬಿ+128ಜಿಬಿ) ಮತ್ತು 14999 (6ಜಿಬಿ+128ಜಿಬಿ) ರೂಗಳ ಗೆಲ್ಯಾಕ್ಸಿ A05ಎಸ್ ಅನ್ನು ತಕ್ಷಣವೇ 2000 ರೂಗಳ ರಿಯಾಯಿತಿಯೊಂದಿಗೆ ಖರೀದಿಸಬಹುದು. ಎಂದರೆ, ಈಗ ಗ್ರಾಹಕರು ಇವುಗಳನ್ನು ಕ್ರಮವಾಗಿ ಕೇವಲ 11499 ರೂಗಳು ಮತ್ತು 12999 ರೂಗಳಿಗೆ ಪಡೆಯಬಹುದು. ಅಸಾಧಾರಣ ಕಾರ್ಯಕ್ಷಮತೆಯುಳ್ಳ ಕ್ವಾಲ್ಕಾಮ್ ಸ್ನ್ಯಾಪ್ಡ್ರೇಗಾನ್ (Qualcomm Snapdragon) 680 ಹೊಂದಿರುವ ಮತ್ತು ದೊಡ್ಡದಾದ 6.71" ಪೂರ್ಣ ಎಚ್.ಡಿ+ 90Hz ಡಿಸ್ಪ್ಲೇ ಉಳ್ಳ ಗೆಲ್ಯಾಕ್ಸಿ A05s ಮಲ್ಟಿಫಂಕ್ಷನ್ ಸಾಮರ್ಥ್ಯ ಹೊಂದಿದೆ.  50MP ಮುಖ್ಯ ಶೂಟರ್‌ ನಿಂದ ರೋಮಾಂಚಕಾರಿ ಫೋಟೋಗಳನ್ನು ಸೆರೆಹಿಡಿಯಬಹುದು ಮತ್ತು 25W ಸೂಪರ್-ಫಾಸ್ಟ್ ಚಾರ್ಜಿಂಗ್ ಗಾಗಿ 5000 mAh ಬ್ಯಾಟರಿ ಇರುವುದರಿಂದ ದೀರ್ಘಾವಧಿಯವರೆಗೆ ಬಳಸಬಹುದು. ಗೆಲ್ಯಾಕ್ಸಿ A05s, 4 ವರ್ಷಗಳ ಸುರಕ್ಷತಾ ನವೀಕರಣಗಳು ಮತ್ತು 2 ತಲೆಮಾರುಗಳ OS ನವೀಕರಣಗಳೊಂದಿಗೆ ಭವಿಷ್ಯತ್ತಿನಲ್ಲೂ ಉಪಯೋಗಿಸಬಲ್ಲ ಸಾಧನವಾಗಿದೆ.  

Tap to resize

Latest Videos

15,000 ರೂಪಾಯಿ ಒಳಗೆ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್, ಇಲ್ಲಿದೆ ಲಿಸ್ಟ್

ಈಗ ಗ್ರಾಹಕರು ಮೂಲ ಬೆಲೆ 30999 ರೂಗಳ ಗೆಲ್ಯಾಕ್ಸಿ A34 5G ಅನ್ನು ಕೇವಲ 25999 ರೂಗಳಿಗೆ ಖರೀದಿಸಬಹುದು; 3500 ರೂಗಳ ಬ್ಯಾಂಕ್ ಕ್ಯಾಶ್‌ಬ್ಯಾಕ್ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ 1500 ರೂಗಳ ಹೆಚ್ಚುವರಿ ಕ್ಯಾಶ್‌ಬ್ಯಾಕ್. ಆಸಮ್ (Awesome) ಗೆಲ್ಯಾಕ್ಸಿ A54 5G ಖರೀದಿಸಲು ಬಯಸುವವರು ಇದೀಗ 8ಜಿಬಿ+128ಜಿಬಿ ರೂಪಾಂತರವನ್ನು ಕೇವಲ 33499 ರೂಗಳಿಗೆ ಹೊಂದಬಹುದು. ಮೊದಲು ಇದರ ಬೆಲೆ 38999 ರೂಗಳು. ಈ ಕೊಡುಗೆಯಲ್ಲಿ 3500 ರೂಗಳ ಬ್ಯಾಂಕ್ ಕ್ಯಾಶ್‌ಬ್ಯಾಕ್ ಇರುತ್ತದೆ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ ಹೆಚ್ಚುವರಿ 2000 ರೂಗಳ ಬ್ಯಾಂಕ್ ಕ್ಯಾಶ್‌ಬ್ಯಾಕ್. ಇಷ್ಟೇ ಅಲ್ಲದೆ, ಅನುಕೂಲಕರ ಇಎಂಐ ಯೋಜನೆಗಳೂ ಇವೆ. 

ಗೆಲ್ಯಾಕ್ಸಿ A54 5G ಮತ್ತು ಗೆಲ್ಯಾಕ್ಸಿ A34 5G ಬಹಳ ಸದೃಢ; IP67 ರೇಟಿಂಗ್‌ನ ಸ್ಪಿಲ್ ಮತ್ತು ಸ್ಪ್ಲಾಶ್ ಪ್ರತಿರೋಧ ನೀಡುತ್ತದೆ. 30 ನಿಮಿಷಗಳ ಕಾಲ 1 ಮೀಟರ್ ಸಿಹಿ ನೀರಿನ ಒತ್ತಡವನ್ನು ತಡೆದುಕೊಳ್ಳಬಲ್ಲುದು ಮತ್ತು ಧೂಳು-ನಿರೋಧಕ. ಈ ಮೊಬೈಲ್ ಸಾಹಸಪ್ರಿಯರಿಗೆ ಸೂಕ್ತವಾಗಿದೆ. A54 ನಲ್ಲಿ 50MP OIS ಪ್ರಾಥಮಿಕ ಲೆನ್ಸ್ ಮತ್ತು A34 ನಲ್ಲಿ 48MP, ಜೊತೆಗೆ 5MP ಮ್ಯಾಕ್ರೋ ಲೆನ್ಸ್ ಸೇರಿದಂತೆ ಶಕ್ತಿಯುತ ಕ್ಯಾಮೆರಾಗಳಿವೆ. ಇವುಗಳಲ್ಲಿ ಹೊಸದಾದ, ಜನಪ್ರಿಯ 'ನೈಟೋಗ್ರಫಿ' ವೈಶಿಷ್ಟ್ಯವೂ ಇದೆ. ಈ ಸೊಗಸಾದ ಸಾಧನಗಳು ಫ್ಲೋಟಿಂಗ್ ಕ್ಯಾಮೆರಾ ಸೆಟಪ್, ಬಣ್ಣ-ಹೊಂದಾಣಿಕೆಯ ಲೋಹದ ಕ್ಯಾಮೆರಾ ಡೆಕೊ ಮತ್ತು 5000 mAh ಬ್ಯಾಟರಿ ಹೊಂದಿದ್ದು ಒಂದು ಸಲ ಚಾರ್ಜ್‌ ಮಾಡಿದರೆ 2 ದಿನಗಳಿಗೆ ಸಾಕು. ಶ್ರೇಷ್ಠ ಮನರಂಜನೆಗಾಗಿ ಸ್ಯಾಮ್‌ಸಂಗ್ ವಾಲಿಟ್, ವಾಯ್ಸ್ ಫೋಕಸ್ ಮತ್ತು ಡ್ಯುಯಲ್ ಡಾಲ್ಬಿ-ಇಂಜಿನಿಯರಿಂಗ್ ಸ್ಟೀರಿಯೊ ಸ್ಪೀಕರ್‌ಗಳೂ ಇವೆ. 

ಫೋಲ್ಡೇಬಲ್ ಸ್ಯಾಮ್ ಸಂಗ್ ಗ್ಯಾಲಕ್ಸಿ Z Flip5, Z Fold5 ಫೋನ್ ದಾಖಲೆ, 28 ಗಂಟೆಯಲ್ಲಿ 1 ಲಕ್ಷ ಬುಕಿಂಗ್!
 
ಸೂಪರ್ ಎಎಮ್ಒಎಲ್ಇಡಿ (AMOLED) ಡಿಸ್ಪ್ಲೇ, 1000 ನಿಟ್ಸ್ ಬ್ರೈಟ್ನೆಸ್ ಗಳಿದ್ದು ನಿಜ-ಜೀವನದ ಬಣ್ಣಗಳನ್ನು ಅನುಭವಿಸಬಹುದು ಮತ್ತು ಸುಗಮ ಪರಿವರ್ತನೆಗಳಿಗಾಗಿ 120Hz ರಿಫ್ರೆಶ್ ದರ ಇದೆ. ಸುರಕ್ಷಿತತೆಗಾಗಿ ಸ್ಯಾಮ್‌ಸಂಗ್‌ನ ನಾಕ್ಸ್‌ ಇದ್ದು ನೈಜ-ಸಮಯದಲ್ಲಿ ಡೇಟ ರಕ್ಷಣೆ ನೀಡುತ್ತದೆ. ನಾಲ್ಕು OS ನವೀಕರಣಗಳು ಮತ್ತು 5 ವರ್ಷಗಳ ಭದ್ರತಾ ನವೀಕರಣಗಳಿದ್ದು ಗೆಲ್ಯಾಕ್ಸಿ A54 5G ಮತ್ತು ಗೆಲ್ಯಾಕ್ಸಿ A34 5G ಖಚಿತವಾಗಿ ದೀರ್ಘಕಾಲಿಕ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.

click me!