ಬಜೆಟ್ ಫ್ರೆಂಡ್ಲಿ ಎರಡು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಸ್ಯಾಮ್ಸಂಗ್

By Suvarna News  |  First Published Jun 5, 2021, 6:17 PM IST

ಸ್ಯಾಮ್ಸಂಗ್ ಗ್ಯಾಲಕ್ಸಿ ಎ22 5ಜಿ ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ 4ಜಿ ಎಂಬ ಎರಡು ಬಜೆಟ್ ಫ್ರೆಂಡ್ಲಿ ಸ್ಮಾರ್ಟ್‌ಫೋನ್‌ಗಳು ಯುರೋಪಿಯನ್ ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಈ ಎರಡೂ ಫೋನ್‌ಗಳು ಗ್ರಾಹಕಸ್ನೇಹಿ ಫೀಚರ್‌ಗಳನ್ನು ಹೊಂದಿದ್ದು, ಕೈಗೆಟುಕುವ ದರದಲ್ಲಿ ಇವೆ. ಆದರೆ, ಈ ಫೋನ್‌ಗಳು  ಭಾರತೀಯ ಮಾರುಕಟ್ಟೆಗೆ ಯಾವಾಗ ಬಿಡುಗಡೆಯಾಗಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲ.


ಸ್ಮಾರ್ಟ್‌ಫೋನ್ ಉತ್ಪಾದಕ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಸ್ಯಾಮ್ಸಂಗ್, ಯುರೋಪಿಯನ್ ಮಾರುಕಟ್ಟೆಗೆ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಯುರೋಪ್ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಬಜೆಟ್ ಫ್ರೆಂಡ್ಲೀ ಆಗಿವೆ. ಅಂದರೆ, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಅತ್ಯಾಧುನಿಕ ಸ್ಯಾಮ್ಸಂಗ್ ಫೋನ್‌ಗಳ ದೊರೆಯಲಿವೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎ22 5ಜಿ ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ 4ಜಿ ಸ್ಮಾರ್ಟ್‌ಫೋನ್‌ಗಳೇ ಹೊಸದಾಗಿ ಬಿಡುಗಡೆಯಾಗಿರುವ ಫೋನ್‌ಗಳು.

Tap to resize

Latest Videos

undefined

ಬೊಂಬಾಟ್ ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡಿದ ರಿಯಲ್‌ಮೀ

ಯುರೋಪಿಯನ್ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎ22 5ಜಿ ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ 4ಜಿ ಸ್ಮಾರ್ಟ್‌ಫೋನ್‌ಗಳ ಭಾರತೀಯ ಮಾರುಕಟ್ಟೆಗೆ ಯಾವಾಗ ಪ್ರವೇಶಿಸಲಿವೆ ಎಂಬ  ಬಗ್ಗೆ ಮಾಹಿತಿ ಇಲ್ಲ. ಫೀಚರ್‌ಗಳ ವಿಷಯದಲ್ಲಿ ಈ ಎರಡೂ ಸ್ಮಾರ್ಟ್‌ಫೋನ್ ಭಿನ್ನವಾಗಿವೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎ22 5ಜಿ ಸ್ಮಾರ್ಟ್‌ಫೋನ್‌ನಲ್ಲಿ ಮೂರು ಕ್ಯಾಮೆರಾಗಳ  ಸೆಟ್ ಅಪ್ ಇದೆ. 4ಜಿ  ಸ್ಮಾರ್ಟ್‌ಫೋನ್‌ಗಿಂತ 5ಜಿ ಫೋನ್‌ನ ಡಿಸ್‌ಪ್ಲೇ ಕೊಂಚ ದೊಡ್ಡದಾಗಿದೆ. ಜೊತೆಗೆ ರ್ಯಾಮ್ ಕೂಡ 5ಜಿ ಸ್ಮಾರ್ಟ್‌ಫೋನ್‌ದ್ದು ಹೆಚ್ಚಾಗಿದೆ. ಇಷ್ಟಲ್ಲದೇ ಅನೇಕ ಹೊಸ ಹೊಸ ಫೀಚರ್‌ಗಳು ಸ್ಮಾರ್ಟ್‌ಫೋನ್‌ಗಳಲ್ಲಿ ಇವೆ. 

ಇನ್ನು ಈ ಸ್ಮಾರ್ಟ್‌ಫೋನ್‌ಗಳ ದರದ ಬಗ್ಗೆ ಮಾತನಾಡುವುದಾದರೆ, ಸ್ಯಾಮ್ಸಂಗ್‌ನ ಹೈ ಎಂಡ್‌ ಫೋನ್‌ಗಳಿಗೆ ಹೋಲಿಸಿದರೆ ಈ ಸ್ಮಾರ್ಟ್‌ಫೋನ್‌ಗಳು ತುಸು ಅಗ್ಗ ಎಂದುಹೇಳಬಹದು. ಸ್ಯಾಮ್ಸಂಗ್ ಗ್ಯಾಲಕ್ಸಿ ಎ22 5ಜಿ ಬೆಲೆ 229 ಯುರೋ(ಅಂದಾಜು 20,300 ರೂ.)ದಿಂದ ಶುರುವಾಗುತ್ತದೆ. 4 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ಫೋನ್ ಬೆಲೆ 249 ಯುರೋ(ಅಂದಾಜು 22,100 ರೂ.) ಇದೆ. 6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್  ಮತ್ತು 8 ಜಿಬಿ ರ್ಯಾಮ್, 128 ಜಿಬಿ ಸ್ಟೋರೇಜ್‌ ಮಾದರಿಗಳ ಬೆಲೆಯನ್ನು ಕಂಪನಿ ಇನ್ನೂ ಬಹಿರಂಗಗೊಳಿಸಿಲ್ಲ.

ಬೂದು, ಮಿಂಟ್, ವಾಲ್ವೆಟ್ ಮತ್ತು ಬಿಳಿ ಬಣ್ಣಗಳಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎ22 5ಜಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಿಗಲಿದೆ. ಯುರೋಪಿಯನ್ ಮಾರುಕಟ್ಟೆಯಲ್ಲಿ ಜುಲೈ ತಿಂಗಳಲ್ಲಿ ಮಾರಾಟಕ್ಕೆ ಮುಕ್ತವಾಗಲಿದೆ. ಇದೇ ವೇಳೆ, ಈ ಸ್ಮಾರ್ಟ್‌ಫೋನ್‌ಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಾಗುವ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಹಳೆ ಎಲ್‌ಜಿ ಫೋನ್‌ಗೆ ಹೊಸ ಆಪಲ್ ಸ್ಮಾರ್ಟ್‌ಫೋನ್ ಆಫರ್!

6.6 ಇಂಚ್ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎ22 5ಜಿ ಸ್ಮಾರ್ಟ್‌ಫೋನ್‌ ಅಕ್ಟಾ ಕೋರ್ ಎಸ್ಒಸಿ ಆಧರಿತವಾಗಿದೆ. ಬಹುಶ ಮೀಡಿಯಾ ಟೆಕ್ ಡಿಮೆನ್ಸಿಟಿ 700 ಪ್ರೊಸೆಸರ್ ಇರಬಹುದು ಎಂದು ಹೇಳಲಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ ಸ್ಟೋರೇಜ್ ಸಾಮರ್ಥ್ಯವನ್ನು ಬಳಕೆದಾರರು 1 ಟಿಬಿ ವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಕಂಪನಿ ಮೈಕ್ಸೋ ಎಸ್‌ಡಿ ಕಾರ್ಡ್ ಸ್ಲಾಟ್ ಒದಗಿಸಿದೆ. 

ಈ ಸ್ಮಾರ್ಟ್‌ಫೋನ್‌ನ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳ ಸೆಟ್‌ಅಪ್ ನೀಡಲಾಗಿದೆ. ಪ್ರೈಮರಿ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ. ಅಲ್ಟ್ರಾ ವೈಡ್ ಆಂಗಲ್‌ಗಾಗಿ 5 ಮೆಗಾ ಪಿಕ್ಸೆಲ್, ಮತ್ತೊಂದು ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಇದೆ. ಇನ್ನೂ ಸೆಲ್ಫಿಗಾಗಿ ಸ್ಮಾರ್ಟ್‌ಫೋನ್ ಫ್ರಂಟ್‌ನಲ್ಲಿ ಕಂಪನಿಯು 8 ಮೆಗಾಪಿಕ್ಸೆಲ್ ಕ್ಯಾಮೆರಾ ಒದಗಿಸಿದೆ. 

ಸ್ಯಾಮ್ಸಂಗ್ ಗ್ಯಾಲಕ್ಸಿ ಎ22 5ಜಿ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ವಿಷಯದಲ್ಲಿ ಗಮನ ಸೆಳೆಯುತ್ತದೆ. 5ಜಿ, ವೈಫೈ, ಬ್ಲೂಟೂತ್, ಜಿಪಿಎಸ್ ಮತ್ತಿತರ ಸೌಲಭ್ಯಗಳಿಗೆ ಬೆಂಬಲಿಸುತ್ತದೆ ಈ ಫೋನ್. ಅಕ್ಸೆಲರ್ ಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಪ್ರಾಕ್ಸಿಮಿಟಿ ಸೇರಿದಂತೆ ಹಲವು ಸೆನ್ಸರ್‌ಗಳಿವೆ. ಈ ಸ್ಮಾರ್ಟ್‌ಫೋನ್‌ಗೆ ಕಂಪನಿ 5000 ಎಂಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಿದೆ. ಇದು 15 ವ್ಯಾಟ್ ಸ್ಪೀಡ್ ಚಾರ್ಜಿಂಗ್‌ಗೆ ಬೆಂಬಲಿಸುತ್ತದೆ. ಫೋನ್‌ನ ಸೈಡ್‌ನಲ್ಲಿ ಫಿಂಗರ್ ಸೆನ್ಸರ್ ನೀಡಲಾಗಿದೆ. 

ಜೂನ್ 10ಕ್ಕೆ 1+ ನಾರ್ಡ್ ಸಿಇ 5G ಸ್ಮಾರ್ಟ್‌ಫೋನ್ ಬಿಡುಗಡೆ, ಏನೆಲ್ಲ ವಿಶೇಷತೆಗಳಿವೆ?

ಸ್ಯಾಮ್ಸಂಗ್ ಗ್ಯಾಲಕ್ಸಿ ಎ22 5ಜಿ ಸ್ಮಾರ್ಟ್‌ಫೋನ್‌ ಜೊತೆಗೆ ಬಿಡುಗಡೆಯಾಗಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ 4ಜಿ ಸ್ಮಾರ್ಟ್‌ಫೋನ್ ಹಲವು ವಿಶೇಷತೆಗಳನ್ನು ಹೊಂದಿದ್ದು, ಗ್ರಾಹಕರನ್ನು ಸೆಳೆಯುತ್ತಿವೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿ 48 ಮೆಗಾ ಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಒದಗಿಸಿದೆ.

click me!