ಅಗ್ಗದ ಬೆಲೆಗೆ ಐಟೆಲ್ ಎ23 ಪ್ರೋ ಸ್ಮಾರ್ಟ್‌ಫೋನ್, ಸಖತ್ ಫೀಚರ್ಸ್

By Suvarna NewsFirst Published Jun 2, 2021, 4:31 PM IST
Highlights

ಚೀನಾ ಮೂಲದ ಮತ್ತೊಂದು ಕಂಪನಿ ಐಟೆಲ್ ಮೊಬೈಲ್, ಭಾರತೀಯ ಮಾರುಕ್ಟಟೆಗೆ ತೀರಾ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್ ಐಟೆಲ್ ಎ23 ಪ್ರೋ ಬಿಡುಗಡೆ ಮಾಡಿದೆ. 1 ಜಿಬಿ ರ್ಯಾಮ್ ಮತ್ತು 8 ಜಿಬಿ ಸ್ಟೋರೇಜ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಕಡಿಮೆಗೆ ಬೆಲೆ ಹೆಚ್ಚು ಫೀಚರ್‌ಗಳನ್ನು ಒದಗಿಸುತ್ತದೆ.

ಚೀನಾ ಮೂಲದ ಮತ್ತೊಂದು ಸ್ಮಾರ್ಟ್‌ಫೋನ್ ಉತ್ಪಾದಕ ಕಂಪನಿ ಐಟೆಲ್ ಮೊಬೈಲ್ ಕಂಪನಿ, ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಳೆದ ವಾರ ಐಟೆಲ್ ಎ23 ಪ್ರೋ ಎಂಬ ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಇದು 4ಜಿ ಸ್ಮಾರ್ಟ್‌ಫೋನ್ ಆಗಿದೆ. ಬೆಲೆ ತುಂಬಾ ಕಡಿಮೆ ಇದೆ.

ಬೊಂಬಾಟ್ ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡಿದ ರಿಯಲ್‌ಮೀ

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಖರೀದಿಸುವ ದೊಡ್ಡ ವರ್ಗವೇ ನಮ್ಮ ದೇಶದಲ್ಲಿದೆ. ಅಂಥ ಗ್ರಾಹಕ ವಲಯವನ್ನು ಗುರಿಯಾಗಿಸಿಕೊಂಡು ಚೀನಾ ಮೂಲದ ಈ ಕಂಪನಿ ಕಡಿಮೆ ದರಕ್ಕೆ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ವರ್ಗ ಮೊದಲಿನಿಂದಲೂ ಗಮನದಲ್ಲಿ ಇಟ್ಟುಕೊಂಡಿರುವ ಕಂಪನಿ ಕಡಿಮೆ ದುಡ್ಡಿಗೆ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದೆ.

ಭಾರತೀಯ ಮಾರುಕಟ್ಟೆಗೆ ಐಟೆಲ್ ಬಿಡುಗಡೆ ಮಾಡಿರುವ ಎ23 ಪ್ರೋ ಸ್ಮಾರ್ಟ್‌ಫೋನ್ ಇತರ ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳಿಗೆ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲದಂತೆ ಇದೆ. ಈ ಮೊಬೈಲ್ ಸ್ಕ್ರೀನ್ ಹೆಚ್ಚು ಅದ್ಧೂರಿತನದಿಂದ ಕೂಡಿದೆ ಎಂಬುದು ಮೊದಲ ನೋಟದಲ್ಲೇ ಗಮನಕ್ಕೆ ಬರುತ್ತದೆ. ಈ ಮೊಬೈಲ್ 5 ಇಂಚಿನ್ ಡಿಸ್‌ಪ್ಲೇ ಹೊಂದಿದೆ.

ಐಟೆಲ್ ಎ23 ಮೊಬೈಲ್ 4ಜಿ ಸ್ಮಾರ್ಟ್‌ಫೋನ್ ಬೆಲೆ ತುಂಬಾ ಕಡಿಮೆ ಇದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್  ನೀವು ಮೈ ಜಿಯೋ ಸ್ಟೋರ್ಸ್, ರಿಲಯನ್ಸ್ ಡಿಜಿಟಲ್ ಸ್ಟೋರ್ಸ್ ಮತ್ತು ರಿಲಯನ್ಸ್ ಡಿಜಿಟಲ್ ವೆಬ್‌ಸೈಟ್ ಮೂಲಕ ಖರೀದಿಸಿದರೆ 3,899 ರೂಪಾಯಿಗೆ ಸಿಗಲಿದೆ. ಈ ಫೋನ್‌ನ ಹಿಂಬದಿಯಲ್ಲಿ ಸಿಂಗಲ್ ಕ್ಯಾಮೆರಾ ಇರಲಿದೆ ಮತ್ತು ಸೆಲ್ಫಿಗಾಗಿ ಕಂಪನಿ ವಿಜಿಎ ಶೂಟರ್ ಒದಗಿಸಿದೆ.

1.4 ಗಿಗಾ ಹರ್ಡ್ಸ್ ಸಾಮರ್ಥ್ಯದ ಕ್ವಾಡ್‌ಕೋರ್ ಪ್ರೊಸೆಸರ್, 1 ಜಿಬಿ ರ್ಯಾಮ್, 8 ಜಿಬಿ ಸ್ಟೋರೇಜ್ ಇದ್ದು, ಕಂಪನಿಯು 2400 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಿದೆ. 2 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ನೀವು ಈ ಸ್ಮಾರ್ಟ್‌ಫೋನ್‌ನಲ್ಲಿ ಎರಡು ಸಿಮ್‌ಗಳನ್ನು ಬಳಸಿಕೊಳ್ಳಬಹುದು.

ಹೆಚ್ಚಿನ ಅತ್ಯಾಧುನಿಕ ಫೀಚರ್‌ಗಳನ್ನು ಮತ್ತು ಹೆಚ್ಚಿನ ವೇಗವನ್ನು ಬಯಸುವವರು, ಕಡಿಮೆ ಬೆಲೆಯಲ್ಲಿ ತ್ಯಾಧುನಿಕ ಮೊಬೈಲ್ ಬೇಕು ಎನ್ನುವವರು ಈ ಸ್ಮಾರ್ಟ್‌ಫೋನ್ ಖರೀದಿಸಬಹುದು.

ಹಳೆ ಎಲ್‌ಜಿ ಫೋನ್‌ಗೆ ಹೊಸ ಆಪಲ್ ಸ್ಮಾರ್ಟ್‌ಫೋನ್ ಆಫರ್!

ಕಂಪನಿಯು ಈ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಮೇ 26ರಂದು ಬಿಡುಗಡೆ ಮಾಡಿದೆ. 5 ಇಂಚಿನ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 10(ಗೋ ಎಡಿಷನ್) ಆಪರೇಟಿಂಗ್ ಸಾಫ್ಟ್‌ವೇರ್ ಹೊಂದಿದೆ. 1 ಜಿಬಿ ರ್ಯಾಮ್‌ನೊಂದಿಗೆ 8 ಜಿಬಿ ಸ್ಟೋರೇಜ್ ಸಿಗುತ್ತಿದ್ದು, ಅದನ್ನು ಬಳಕೆದಾರು ಮೈಕ್ರೋಎಸ್‌ಡಿ ಕಾರ್ಡ್ ಮೂಲಕ 32 ಜಿಬಿವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.

ಭಾರತದಲ್ಲಿ  ಬಿಡುಗಡೆಯಾಗಿರುವ ಈ ಐಟೆಲ್‌ ಎ23 4ಜಿ ಸ್ಮಾರ್ಟ್‌ಫೋನ್ ಎರಡು ಸಿಮ್‌ಗಳನ್ನು ಬಳಸಲು ಅವಕಾಶ ಕಲ್ಪಿಸುತ್ತದೆ. 145.40 x 73.90 x 9.85 ಎಂಎಂ ಕ್ರಮವಾಗಿ ಎತ್ತರ, ಅಗಲ ಮತ್ತು ತೂಕವನ್ನು ಹೊಂದಿದೆ. ಲೇಕ್ ಬ್ಲೂ ಮತ್ತು ಸ್ಯಾಪ್‌ಹೈರ್ ಬಣ್ಣಗಳಲ್ಲಿ ಈ ಫೋನ್ ಮಾರಾಟಕ್ಕೆ ದೊರೆಯಲಿದೆ.

ಈ ಫೋನ್‌ನ ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ, ಐಟೆಲ್ ಎ23 4ಜಿ ಸ್ಮಾರ್ಟ್‌ಫೋನ್‌ನಲ್ಲಿ ವೈಫೈ, ಜಿಪಿಎಸ್, ಮೈಕ್ರೋ ಯುಎಸ್‌ಬಿ, ಎರಡೂ ಸಿಮ್‌ ಕಾರ್ಡ್‌ಗಳು 4ಜಿ ನೆಟ್ವರ್ಕ್‌ಕ್ಕೆ ಬೆಂಬಲ ಸಿಗಲಿದೆ. ಅಕ್ಸೆಲೆರೋಮೀಟರ್ ಮತ್ತು ಪ್ರಾಕ್ಸಿಮಿನಿಟಿ ಸೆನ್ಸರ್‌ಗಳಿವೆ. ಈ  ಫೋನ್‌ ಫೇಸ್‌ ಅನ್‌ಲಾಕ್‌ಗೂ ಸಪೋರ್ಟ್ ಮಾಡುತ್ತದೆ.

ಜೂನ್ 10ಕ್ಕೆ 1+ ನಾರ್ಡ್ ಸಿಇ 5G ಸ್ಮಾರ್ಟ್‌ಫೋನ್ ಬಿಡುಗಡೆ, ಏನೆಲ್ಲ ವಿಶೇಷತೆಗಳಿವೆ?

ಭಾರತದ ಮಾರುಕಟ್ಟೆಯಲ್ಲಿ ಇಷ್ಟೊಂದು ಕಡಿಮೆ ದರಕ್ಕೆ ಬೇರೆ ಯಾವುದೇ ಕಂಪನಿಗಳು ಸ್ಮಾರ್ಟ್‌ಫೋನ್‌ಗಳನ್ನು ಹೊಂದಿಲ್ಲ. ಈ ಐಟೆಲ್‌ ಕಂಪನಿ ತೀರಾ ಅಗ್ಗದ ಬೆಲೆ ಸ್ಮಾರ್ಟ್‌ಫೋನ್ ನೀಡುವ ಮೂಲಕ ಹೊಸ ಗ್ರಾಹಕ ವಲಯವನ್ನು ಸೃಷ್ಟಿಸಿಕೊಳ್ಳುವ ತಂತ್ರವನ್ನು ಹೆಣೆದುಕೊಂಡಿರುವಂತಿದೆ.

click me!