
ಬೆಂಗಳೂರು (ಮಾ.19): ಸ್ಯಾಮ್‌ಸಂಗ್ ಕಂಪನಿಯು ತನ್ನ ಜನಪ್ರಿಯ ಮಿಡ್-ರೇಂಜ್ 'M' ಸರಣಿಯ ಅಡಿಯಲ್ಲಿ ಹೊಸ Galaxy M17e 5G ಅನ್ನು ಬಿಡುಗಡೆ ಮಾಡಿದೆ. ಈ ಫೋನ್ ಪ್ರಮುಖವಾಗಿ ತನ್ನ ದೈತ್ಯ ಬ್ಯಾಟರಿ ಬ್ಯಾಕಪ್‌ನಿಂದಾಗಿ ಗಮನ ಸೆಳೆಯುತ್ತಿದೆ. ಕಂಪನಿಯ ಪ್ರಕಾರ, ಈ ಫೋನ್ ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ ಸತತ 26 ಗಂಟೆಗಳ ಕಾಲ ವಿಡಿಯೋ ಪ್ಲೇಬ್ಯಾಕ್ ನೀಡುವ ಸಾಮರ್ಥ್ಯ ಹೊಂದಿದೆ.
ಸ್ಯಾಮ್‌ಸಂಗ್ ಅಧಿಕೃತವಾಗಿ ಬೆಲೆ ಘೋಷಿಸದಿದ್ದರೂ, ಅಮೆಜಾನ್ (Amazon) ವೆಬ್‌ಸೈಟ್‌ನಲ್ಲಿ ಈ ಫೋನ್ ಲಿಸ್ಟ್ ಆಗಿದೆ. ಅದರ ಪ್ರಕಾರ 4GB RAM + 128GB ಸ್ಟೋರೇಜ್ ವೇರಿಯಂಟ್‌ನ ಬೆಲೆ ₹11,749 ರೂಪಾಯಿ ಆಗಿದ್ದರೆ, 6GB RAM + 128GB ಸ್ಟೋರೇಜ್ ವೇರಿಯಂಟ್‌ನ ಬೆಲೆ ₹13,249 ರೂಪಾಯಿ ಆಗಿದೆ.
ಮಾರುಕಟ್ಟೆಯಲ್ಲಿ ಈ ಫೋನ್ ನೇರವಾಗಿ Motorola G57 Power 5G, Redmi Note 14 SE 5G, Vivo T4X 5G, ಮತ್ತು Poco M7 Plus 5G ಫೋನ್‌ಗಳಿಗೆ ಪ್ರಬಲ ಪೈಪೋಟಿ ನೀಡಲಿದೆ.
6.58-ಇಂಚಿನ HD Plus LCD ಸ್ಕ್ರೀನ್ ಹೊಂದಿದ್ದು, ಸುಗಮ ಬಳಕೆಗೆ 120 Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ವೇಗದ ಕಾರ್ಯಕ್ಷಮತೆಗಾಗಿ ಇದರಲ್ಲಿ ಆಕ್ಟಾ-ಕೋರ್ MediaTek Dimensity 6300 ಚಿಪ್‌ಸೆಟ್ ನೀಡಲಾಗಿದೆ. ಈ ಫೋನ್ ಆಂಡ್ರಾಯ್ಡ್ 16 ಆಧಾರಿತ OneUI 8.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ವಿಶೇಷವೆಂದರೆ, ಇದಕ್ಕೆ 6 ವರ್ಷಗಳ ಓಎಸ್ ಅಪ್‌ಗ್ರೇಡ್ ಮತ್ತು 6 ವರ್ಷಗಳ ಸೆಕ್ಯೂರಿಟಿ ಅಪ್‌ಡೇಟ್ ಸಿಗಲಿದೆ.
ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಒಳಗೊಂಡ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಈ ಫೋನಿನ ಹೈಲೈಟ್ ಎಂದರೆ 6000 mAh ದೈತ್ಯ ಬ್ಯಾಟರಿ. ಇದು ದೀರ್ಘಕಾಲದ ಬ್ಯಾಕಪ್ ನೀಡುತ್ತದೆ. 6GB ವರೆಗೆ RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಇದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಬಹುದು. ಡ್ಯುಯಲ್ ಬ್ಯಾಂಡ್ Wi-Fi, 5G, 4G LTE, USB Type-C ಪೋರ್ಟ್, ಬ್ಲೂಟೂತ್ 5.3 ಮತ್ತು 3.5mm ಹೆಡ್‌ಫೋನ್ ಜಾಕ್ ಸೌಲಭ್ಯವಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.