
ಬೆಂಗಳೂರು (ಮಾ.2): ಆಪಲ್ ಸಂಸ್ಥೆಯು ತನ್ನ ಬಹುನಿರೀಕ್ಷಿತ 'ಐಫೋನ್ 17' ಸರಣಿಯಲ್ಲಿ ಹೊಸದಾದ 'iPhone 17e' ಮಾದರಿಯನ್ನು ಪರಿಚಯಿಸಿದೆ. ಕಡಿಮೆ ಬೆಲೆಯಲ್ಲಿ ಅತ್ಯಾಧುನಿಕ ಫೀಚರ್‌ಗಳನ್ನು ನೀಡುವ ಉದ್ದೇಶದಿಂದ ಈ ಫೋನ್ ಅನ್ನು ಮಾರುಕಟ್ಟೆಗೆ ತರಲಾಗಿದೆ. ಆಪಲ್ ತನ್ನ ಲೇಟೆಸ್ಟ್ ಸ್ಮಾರ್ಟ್‌ಫೋನ್ ಲೈನಪ್ ಅನ್ನು 'iPhone 17e' ಮೂಲಕ ಇನ್ನಷ್ಟು ವಿಸ್ತರಣೆ ಮಾಡಿದರು. ಇದು ಐಫೋನ್ 17 ಸರಣಿಯಲ್ಲೇ ಹೆಚ್ಚು ಆಕರ್ಷಕ ಬೆಲೆಯ ಫೋನ್ ಆಗಿದ್ದರೂ, ಪ್ರೀಮಿಯಂ ಫೀಚರ್‌ಗಳನ್ನು ಒಳಗೊಂಡಿದೆ.
ಈ ಫೋನ್‌ನಲ್ಲಿ ಅತ್ಯಾಧುನಿಕ 3-ನ್ಯಾನೋಮೀಟರ್ ತಂತ್ರಜ್ಞಾನದ A19 ಚಿಪ್ ಬಳಸಲಾಗಿದೆ. ಇದು ಹಳೆಯ ಮಾಡೆಲ್‌ಗಳಿಗಿಂತ ವೇಗವಾಗಿದ್ದು, ಮಲ್ಟಿಟಾಸ್ಕಿಂಗ್ ಮತ್ತು ಗೇಮಿಂಗ್‌ಗೆ ಅತ್ಯುತ್ತಮವಾಗಿದೆ. 16-ಕೋರ್ ನ್ಯೂರಲ್ ಇಂಜಿನ್ ಇರುವುದರಿಂದ ಈ ಫೋನ್‌ನಲ್ಲಿ ಆಪಲ್‌ನ ಕೃತಕ ಬುದ್ಧಿಮತ್ತೆ (AI) ಫೀಚರ್‌ಗಳು ಅದ್ಭುತವಾಗಿ ಕೆಲಸ ಮಾಡುತ್ತವೆ. ಆಪಲ್ ಸ್ವತಃ ತಯಾರಿಸಿದ C1X ಸೆಲ್ಯುಲಾರ್ ಮೊಡೆಮ್ ಅನ್ನು ಇಲ್ಲಿ ಬಳಸಲಾಗಿದೆ. ಇದು ಹಳೆಯದಕ್ಕಿಂತ ಎರಡು ಪಟ್ಟು ವೇಗವಾಗಿ ನೆಟ್‌ವರ್ಕ್ ನೀಡುತ್ತದೆ ಮತ್ತು ಬ್ಯಾಟರಿ ಉಳಿಸಲು ಸಹಾಯ ಮಾಡುತ್ತದೆ.
6.1 ಇಂಚಿನ Super Retina XDR OLED ಡಿಸ್‌ಪ್ಲೇ ಹೊಂದಿದ್ದು, 1200 ನಿಟ್ಸ್ ಬ್ರೈಟ್‌ನೆಸ್ ಹೊಂದಿದೆ. ಸ್ಕ್ರೀನ್ ಸುರಕ್ಷತೆಗಾಗಿ 'ಸೆರಾಮಿಕ್ ಶೀಲ್ಡ್ 2' ನೀಡಲಾಗಿದ್ದು, ಇದು ಹಳೆಯ ಮಾಡೆಲ್‌ಗಿಂತ 3 ಪಟ್ಟು ಹೆಚ್ಚು ಗೀರು ನಿರೋಧಕ (Scratch resistant) ಶಕ್ತಿ ಹೊಂದಿದೆ. ಇದು IP68 ರೇಟಿಂಗ್ ಹೊಂದಿದ್ದು, ನೀರು ಮತ್ತು ಧೂಳಿನಿಂದ ರಕ್ಷಣೆ ನೀಡುತ್ತದೆ. ಅಲ್ಯೂಮಿನಿಯಂ ಫ್ರೇಮ್ ಫೋನ್‌ಗೆ ಹೆಚ್ಚಿನ ಶಕ್ತಿ ನೀಡುತ್ತದೆ.
ಫೋನ್‌ನ ಹಿಂಭಾಗದಲ್ಲಿ 48 ಮೆಗಾಪಿಕ್ಸೆಲ್ ಕ್ಯಾಮೆರಾ ಇದ್ದು, ಇದು 2x ಆಪ್ಟಿಕಲ್ ಕ್ವಾಲಿಟಿ ಟೆಲಿಫೋಟೋ ಜೂಮ್ ಬೆಂಬಲಿಸುತ್ತದೆ. ಫೋಟೋ ತೆಗೆದ ನಂತರವೂ ಫೋಕಸ್ ಅನ್ನು ಅಡ್ಜಸ್ಟ್ ಮಾಡಬಹುದು. ಅಲ್ಲದೆ, ಫೋಟೋದಲ್ಲಿ ಮನುಷ್ಯರು ಅಥವಾ ಸಾಕುಪ್ರಾಣಿಗಳನ್ನು ಗುರುತಿಸಿ ಆಟೋಮ್ಯಾಟಿಕ್ ಆಗಿ ಡೆಪ್ತ್ ಇನ್ಫಾರ್ಮೇಶನ್ ಸೇರಿಸುತ್ತದೆ. 4K ಡಾಲ್ಬಿ ವಿಷನ್ ವಿಡಿಯೋ ರೆಕಾರ್ಡಿಂಗ್ ಮತ್ತು ಸ್ಪೇಷಿಯಲ್ ಆಡಿಯೋ (Spatial Audio) ಸೌಲಭ್ಯವಿದೆ.
ಮೊಬೈಲ್ ನೆಟ್‌ವರ್ಕ್ ಇಲ್ಲದ ಜಾಗದಲ್ಲಿ ಸ್ಯಾಟಲೈಟ್ ಮೂಲಕ ಮೆಸೇಜ್ ಕಳುಹಿಸಲು, ಎಮರ್ಜೆನ್ಸಿ SOS ಮತ್ತು ರಸ್ತೆ ಬದಿಯ ಸಹಾಯ ಪಡೆಯಲು ಸಾಧ್ಯವಿದೆ. ಕಾರು ಅಪಘಾತ ಸಂಭವಿಸಿದರೆ ಫೋನ್ ತಾನಾಗಿಯೇ ತುರ್ತು ಸೇವೆಗಳಿಗೆ ಕರೆ ಮಾಡುತ್ತದೆ. ಈ ಫೋನ್ ಲೇಟೆಸ್ಟ್ iOS 26 ಸಾಫ್ಟ್‌ವೇರ್ ಮೇಲೆ ಕೆಲಸ ಮಾಡುತ್ತದೆ. ಇದರಲ್ಲಿ ಲೈವ್ ಟ್ರಾನ್ಸ್‌ಲೇಷನ್ (ಭಾಷಾಂತರ) ಸೌಲಭ್ಯವಿದೆ.
ಇದು USB-C ಪೋರ್ಟ್ ಮೂಲಕ ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. MagSafe ಮತ್ತು Qi2 ವೈರ್‌ಲೆಸ್ ಚಾರ್ಜಿಂಗ್ (15W ವರೆಗೆ) ಲಭ್ಯವಿದೆ.
256GB ಸ್ಟೋರೇಜ್ ಸಾಮರ್ಥ್ಯದ iPhone 17e ಬೆಲೆ ₹64,900 ರಿಂದ ಆರಂಭವಾಗುತ್ತದೆ. ಕಪ್ಪು, ಬಿಳಿ ಮತ್ತು ಹೊಸದಾದ ಸಾಫ್ಟ್ ಪಿಂಕ್ (ಮ್ಯಾಟ್ ಫಿನಿಶ್) ಬಣ್ಣಗಳಲ್ಲಿ ಲಭ್ಯವಿದೆ. ಮಾರ್ಚ್ 4 ರಿಂದ ಪ್ರಿ-ಆರ್ಡರ್ ಆರಂಭವಾಗಲಿದ್ದು, ಮಾರ್ಚ್ 11 ರಿಂದ ಮಾರಾಟ ಶುರುವಾಗಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.