ವ್ಯಾಲೆಂಟೈನ್ಸ್ ಡೇ ಮರುದಿನವೇ ಸ್ಯಾಮ್ಸಂಗ್ ಗ್ಯಾಲಕ್ಸಿ F62 ಬಿಡುಗಡೆ, ಬೆಲೆ ಎಷ್ಟು?

By Suvarna NewsFirst Published Feb 9, 2021, 2:22 PM IST
Highlights

ಸ್ಯಾಮ್ಸಂಗ್ ಕಂಪನಿಯ ತನ್ನ ಗ್ಯಾಲಕ್ಸಿ ಎಫ್62 ಸ್ಮಾರ್ಟ್‌ಫೋನ್ ಭಾರತದಲ್ಲಿ ಫೆ.16ರಂದು ಬಿಡುಗಡೆ ಮಾಡುತ್ತಿದೆ. ಈ ಬಗ್ಗೆ ಫ್ಲಿಪ್‌ಕಾರ್ಟ್ ಪುಟದಲ್ಲಿ ಮಾಹಿತಿಯನ್ನು ನೀಡಲಾಗಿದೆ. 7000 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇರಲಿದೆ ಎನ್ನಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್‌ ಸೀರೀಸ್‌ನ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಕಂಪನಿ ಬಿಡುಗಡೆ ಮಾಡುತ್ತಿದೆ. ಭಾರತದಲ್ಲಿ ಸ್ಯಾಮ್ಸಂಗ್  ಗ್ಯಾಲಕ್ಸಿ ಎಫ್62 ಸ್ಮಾರ್ಟ್‌ಫೋನ್ ಫೆಬ್ರವರಿ 15ರಂದು ಮಾರಾಟಕ್ಕೆ ಲಭ್ಯವಾಗಲಿದೆ. ಈ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್‌62 ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿಯ Exynos 9825 SoC ಬಳಸಲಾಗಿದೆ. ಇದು 7ಎನ್ಎಂ ಪ್ರೊಸೆಸ್ ಆಧರಿತವಾಗಿದೆ.

ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲಿ ಇದರ ಮಾರಾಟಕ್ಕೆ ರೂಪಿಸಲಾಗಿರುವ ಡೆಡಿಕೆಟೆಡ್ ಪೇಜ್ ಈ ಮಾಹಿತಿಯನ್ನು ಖಚಿತಪಡಿಸಿದೆ. ಫೆಬ್ರವರಿ 15ರಂದು ಮಧ್ಯಾಹ್ನ 12ಕ್ಕೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್‌62 ಮಾರಾಟಕ್ಕೆ ದೊರೆಯಲಿದೆ ಎಂದು ಅದರಲ್ಲಿ ತಿಳಿಸಲಾಗಿದೆ ಮತ್ತು ನೋಟಿಫೈ ಮಾಡಿಕೊಳ್ಳುವಂತೆ ಹೇಳಲಾಗಿದೆ.

ಆ್ಯಂಡ್ರಾಯ್ಡ್ 12 ಬಿಡುಗಡೆಗೆ ಸಿದ್ಧವಾಗುತ್ತಿದೆಯಾ ಗೂಗಲ್?

ಫ್ಲಿಪ್‌ಕಾರ್ಟ್‌ನ ಪೇಜ್‌ನಲ್ಲಿ ಈ ಸ್ಮಾರ್ಟ್‌ಫೋನಿನ ಒಂದಿಷ್ಟು ಮಾಹಿತಿಯನ್ನು ಬಿಟ್ಟುಕೊಡಲಾಗಿದೆ. ಪುಟದಲ್ಲಿ ಫೋನಿನ ಬ್ಯಾಕ್ ಮತ್ತು ಫ್ರಂಟ್ ವಿನ್ಯಾಸವನ್ನು ತೋರಿಸಲಾಗಿದೆ. ಅಂದ ಹಾಗೆ, ಈ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್62 ಬೆಲೆ 20 ಸಾವಿರದಿಂದ 25 ಸಾವಿರ ರೂಪಾಯಿವರೆಗೂ ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಎಫ್‌ ಸೀರೀಸ್‌ನಲ್ಲಿ ಈ ಮೊದಲ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್41 ಸ್ಮಾರ್ಟ್‌ಫೋನ್ ಅನ್ನು ಕಳೆದ ಅಕ್ಟೋಬರ್‌ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧವಾಗುತ್ತಿದೆ.

ಫ್ಲಿಪ್‌ಕಾರ್ಟ್‌ನ ಪುಟದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್‌62 ಸ್ಮಾರ್ಟ್‌ಫೋನಿನ ಹಸಿರು ಮಾದರಿಯನ್ನು ಪ್ರದರ್ಶಿಸಲಾಗಿದೆ. ಆದರೆ, ಭಾರತದಲ್ಲಿ ಈ ಫೋನಿನ ಬೆಲೆ ಎಷ್ಟಿರಬಹುದು ಎಂಬುದರಲ್ಲಿ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿಲ್ಲ. ಹಾಗಿದ್ದೂ, 20ರಿಂದ 25 ಸಾವಿರ ರೂಪಾಯಿಯವರೆಗೂ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.
ಈ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್‌62 ಸ್ಮಾರ್ಟ್‌ಫೋನ್‌ನಲ್ಲಿ 7ಎನ್ಎಂ ಅಕ್ಟಾಕೋರ್ ಎಕ್ಸಿನೋಸ್ 9825 ಎಸ್ಒಸಿ ಇದೆ. ಇದೊಂದು ಅತ್ಯಂತ ವೇಗದ ಸ್ಮಾರ್ಟ್‌ಫೋನ್ ಆಗಿದೆ ಎಂಬುದು ಕಂಪನಿ ಹೇಳಿಕೆಯಾಗಿದೆ.

ಪ್ಲೇಸ್ಟೋರ್‌ನಲ್ಲಿ ಟೆಲಿಗ್ರಾಮ್ ಡೌನ್‌ಲೋಡ್ ನಾಗಾಲೋಟ

ಈ ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಇದ್ದು ಒಟ್ಟು ನಾಲ್ಕು ಕ್ಯಾಮೆರಾಗಳಿವೆ. ಸ್ಕ್ವೈರ್ ಕ್ಯಾಮೆರಾ ಮಾಡೂಲ್‌ನಲ್ಲಿ ಫ್ಲ್ಯಾಶ್ ಕೂಡ ಕೊಡಲಾಗಿದೆ. ನಾಲ್ಕು ಕ್ಯಾಮೆರಾಗಳ ಪೈಕಿ ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿರಲಿದೆ. ಸೆಕೆಂಡರಿ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿರಲಿದೆ. ಇನ್ನು 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಶೂಟರ್ ಹಾಗೂ 2 ಮೆಗಾ ಪಿಕ್ಸೆಲ್  ಡೆಫ್ತ್ ಕ್ಯಾಮೆರಾ ಆಗಿರಲಿದೆ. ಇಷ್ಟು ಮಾತ್ರವಲ್ಲದೇ ಬಳಕೆದಾರರು ಐಎಸ್ಒ ಕಂಟ್ರೋಲ್, ಡಿಜಿಟಲ್ ಝೂಮ್, ಎಚ್‌ಡಿಆರ್ ಮೋಡ್, ಎಕ್ಸ್‌ಪೋಸರ್, ಆಟೋ ಫ್ಲ್ಯಾಶ್ ಇತ್ಯಾದಿ ಫೀಚರ್‌ಗಳೂ ಸಿಗಲಿವೆ.

ಫೋನಿನ ಮುಂಭಾಗದ ಮಧ್ಯೆದಲ್ಲಿ ಇರುವ 32 ಮೆಗಾ ಪಿಕ್ಸೆಲ್  ಸೆಲ್ಫಿ ಕ್ಯಾಮೆರಾಕ್ಕಾಗಿ ಹೋಲ್ ಪಂಚ್ ಕೌಟ್ ಔಟ್ ರೂಪಿಸಲಾಗಿದೆ. ಇದರಿಂದ ಸೆಲ್ಫೀ ತೆಗೆಯಲು ನೆರವು ದೊರೆಯುತ್ತದೆ.  ಈ ಹಿಂದೆಯೂ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್‌62ಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿ ಸೋರಿಕೆಯಾಗಿದ್ದವು. ಈ ಫೋನ್ 6.7 ಇಂಚ್ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದೆ.

ಪವರ್‌ಫುಲ್ ಬ್ಯಾಟರಿ ಇರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಬಿಡುಗಡೆ

ಮತ್ತು ಪವರ್ ಫುಲ್ 7000 ಎಂಎಎಚ್ ಬ್ಯಾಟರಿ  ಇರಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 11 ಒಎಸ್ ಆಧರಿತವಾಗಿರಲಿದೆ. ಈ ಫೋನ್ ಮತ್ತು ಹಸಿರು ಮತ್ತು ನೀಲಿ ಬಣ್ಣಗಳಲ್ಲಿ ಮಾರಾಟಕ್ಕೆ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸ್ಮಾರ್ಟ್‌ಫೋನ್ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದರೂ ಅದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಸ್ಯಾಮ್ಸಂಗ್ ಹಂಚಿಕೊಂಡಿಲ್ಲ. ಫೆಬ್ರವರಿ 15ರಂದು ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್62 ಬಗ್ಗೆ ಮಾಹಿತಿ ದೊರೆಯಲಿದೆ.

click me!