ಬಹಳ ದಿನಗಳ ನಿರೀಕ್ಷೆಯಲ್ಲಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಸ್ಮಾರ್ಟ್‌ಫೋನ್ ವಿಯೆಟ್ನಾಮಾದಲ್ಲಿ ಬಿಡುಗಡೆಯಾಗಿದೆ. ಈ ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಯಾವುದೇ ಮಾಹಿತಿ ಇಲ್ಲ. ಅದ್ಭುತ ಬ್ಯಾಟರಿ ಮತ್ತು ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್‌ಫೋನ್ ನಿಮಗೆ ಅತ್ಯಾಧುನಿಕ ತಂತ್ರಜ್ಞಾನದ ಅನುಭವ ನೀಡಲಿದೆ ಎನ್ನುತ್ತಿದ್ದಾರೆ ವಿಶ್ಲೇಷಕರು.
ಹಲವು ದಿನಗಳಿಂದ ರೂಮರ್‌ನಲ್ಲಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಸ್ಮಾರ್ಟ್‌ಫೋನ್ ಕೊನೆಗೂ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಕಂಪನಿ ಈ ಸ್ಮಾರ್ಟ್‌ಫೋನ್ ಅನ್ನು ವಿಯೆಟ್ನಾಮಾದಲ್ಲಿ ಅನಾವರಣ ಮಾಡಿದೆ.
ಈ ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಸ್ಮಾರ್ಟ್‌ಫೋನ್ ವಾಟರ್‌ಪ್ರೂಫ್ ನಾಚ್ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಸಾಫ್ಟ್ ಅಂಚು ಬಾಗುವಿಕೆಯನ್ನು ಒಳಗೊಂಡಿರುವ ಮೆಟಾಲಿಕ್ ಬ್ಯಾಕ್ ಕವರನ್ನು ನೀವು ಕಾಣಬಹುದು. ಈ ಸ್ಮಾರ್ಟ್‌ಫೋನ್‌ನ ಹಿಂಬದಿಯು ಇನ್ನೂ ಒಂದು ಕಾರಣಕ್ಕೆ ವಿಶಿಷ್ಟವಾಗಿದೆ. ಫೋನ್‌ನ ಹಿಂಬದಿಯಲ್ಲಿ ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ ಸ್ಕ್ವಾರಿಶ್ ಕ್ಯಾಮರಾ ಮಾಡ್ಯೂಲ್ ಕೊಡಲಾಗಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಸ್ಮಾರ್ಟ್‌ಫೋನ್ 6.5 ಇಂಚಿನ ಎಚ್‍ಡಿ ಪ್ಲಸ್ ಡಿಸ್‌ಪ್ಲೇ, 48 ಮೆಗಾ ಪಿಕ್ಸೆಲ್ ಕ್ವಾಡ್ ರಿಯರ್ ಕ್ಯಾಮರಾಗಳು, 6000 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಮತ್ತು 2 ಜಿಎಚ್‌ಜೆಡ್ ಅಕ್ಟಾ ಕೋರ್ ಪ್ರೊಸೆಸರ್ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ವೈಶಿಷ್ಟ್ಯವೇ ಇದರ ಬ್ಯಾಟರಿ. 6000 ಎಎಂಎಚ್ ಸಾಮರ್ಥ್ಯದ ಬ್ಯಾಟರಿ ನಿಮಗೆ ದೀರ್ಘಕಾಲದ ಸೇವೆಯನ್ನು ಒದಗಿಸಬಹುದು.
undefined
ಈ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಸ್ಮಾರ್ಟ್‌ಫೋನ್‌ಗೆ ಕಂಪನಿ ಎಷ್ಟು ಬೆಲೆ ನಿಗದಿ ಮಾಡಿದೆ ಎಂದು ತಿಳಿದು ಬಂದಿಲ್ಲ. ಕಪ್ಪು, ಎಲಗಂಟ್ ನೀಲಿ, ಟ್ರೆಂಡಿ ಎಮರಾಲ್ಡ್ ಗ್ರೀನ್ ಬಣ್ಣಗಳಲ್ಲಿ ಈ ಫೋನ್ ಮಾರಾಟಕ್ಕೆ ಲಭ್ಯವಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಸ್ಮಾರ್ಟ್‌ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಖಚಿತವಾದ ಮಾಹಿತಿಗಳಿಲ್ಲ. ಆದರೆ, ಈ ಗ್ಯಾಲಕ್ಸಿ ಎಂ12 ಫೋನ್ ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಬಗ್ಗೆ ಹಲವು ವರದಿಗಳು ಬಂದಿವೆ.
ಎರಡು ಸಿಮ್ ಬಳಸಲು ಅವಕಾಶವಿರುವ ಈ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಆಂಡ್ರಾಯ್ಡ್ ಮತ್ತು ಒನ್ ಯುಐ ಕೋರ್ ಆಪರೇಟಿಂಗ್ ಸಾಫ್ಟ್‌ವೇರ್ ಆಧರಿತವಾಗಿದೆ. 20:9 aspect ratioನೊಂದಿಗೆ ಟಿಎಫ್‌ಟಿ ಇನ್‌ಫಿನಿಟಿ ವಿ ಡಿಸ್‌ಪ್ಲೇ ಇರಲಿದೆ. ಈ ಡಿಸ್‌ಪ್ಲೇ ಗಾತ್ರ 6.5 ಇಂಚು ಇದೆ. ಅಕ್ಟಾ ಕೋರ್ ಪ್ರೊಸೆಸರ್ ಇದ್ದು ಗ್ಯಾಲಕ್ಸಿ ಎಂ12 ಬಳಕೆದಾರರಿಗೆ 3 ಜಿಬಿ, 4 ಜಿಬಿ ಮತ್ತು 6 ಜಿಬಿ ರ್ಯಾಮ್ ಆಯ್ಕೆಗಳೊಂದಿಗೆ ಮಾರಾಟಕ್ಕೆ ಸಿಗಲಿದೆ.
ಫಾಸಿಲ್ ಜೆನ್ 5ಇ ಸ್ಮಾರ್ಟ್‌ವಾಚ್ ಬಿಡುಗಡೆ, ಬೆಲೆ 18,490 ರೂ.!
ಸ್ಮಾರ್ಟ್‌ಫೋನ್‌ನ ಹಿಂಬದಿಯಲ್ಲಿ ನಾಲ್ಕು ಕ್ಯಾಮರಾಗಳಿರುವ ಸೆಟ್ ಅಪ್ ಇದೆ. ನಾಲ್ಕು ಕ್ಯಾಮರಾಗಳ ಪೈಕಿ ಪ್ರೈಮರಿ ಕ್ಯಾಮರಾ 48 ಮೆಗಾ ಪಿಕ್ಸೆಲ್ ಸಾಮರ್ಥ್ಯದ್ದಾಗಿದೆ. ಈ ಕ್ಯಾಮರಾ f/2.0 ಲೆನ್ಸ್ ಹೊಂದಿದೆ. f/2.2 ಅಲ್ಟ್ರಾ ವೈಡ್ ಆಂಗಲ್ ಲೆನ್ಸ್‌ನ 5 ಮೆಗಾ ಪಿಕ್ಸೆಲ್ ಸೆಕಂಡರಿ ಕ್ಯಾಮರಾ ಕೂಡ ಇದೆ. ಈ ಕ್ಯಾಮರಾ 123 ಡಿಗ್ರಿ ಫೀಲ್ಡ್ ವ್ಯೂ ಸೆರೆ ಹಿಡಿಯಬಲ್ಲದು. 2 ಮೆಗಾ ಪಿಕ್ಸೆಲ್ ಶೂಟರ್ ಹಾಗೂ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸರ್ ಕ್ಯಾಮರಾಗಳಿವೆ. ಈ ನಾಲ್ಕು ಕ್ಯಾಮರಾಗಳ ಸೆಟ್ ಅಪ್ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಕ್ಯಾಮರಾ ಸಾಮರ್ಥ್ಯವನ್ನು ಹೆಚ್ಚಿಸಿವೆ. ಫೋನಿನ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮರಾ ನೀಡಲಾಗಿದೆ. ಈ ಫೋನ್ 6000 mAh ಬ್ಯಾಟರಿ ಹೊಂದಿದ್ದು, ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ, 4ಜಿ ನೆಟ್ವರ್ಕ್ ಮೇಲೆ 58 ಗಂಟೆಗಳ ಕಾಲ ಟಾಕ್‌ಟೈಮ್ ಸಾಮರ್ಥ್ಯವನ್ನು ಹೊಂದಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 32 ಜಿಬಿ, 64 ಜಿಬಿ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಗಳಲ್ಲಿ ಗ್ರಾಹಕರಿಗೆ ಲಭ್ಯ ಇವೆ. ಇಷ್ಟು ಮಾತ್ರವಲ್ಲದೇ 1 ಟಿಬಿವರೆಗೂ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಸಂಪೂರ್ಣ ಇದಕ್ಕಾಗಿಯೇ ಫೋನ್‌ನಲ್ಲಿ ಒಂದು ಸ್ಲಾಟ್ ಅನ್ನು ಮೀಸಲಿಡಲಾಗಿದೆ. ಕನೆಕ್ಟಿವಿಟಿ ಬಗ್ಗೆ ಹೇಳಬೇಕೆಂದರೆ, 4ಜಿ ಎಲ್ಇಟಿ, ವೈ ಫೈ 802.11, ಬ್ಲೂಟೂಥ್ ವಿ5.0/ಎಜಿಪಿಎಸ್, ಯುಎಸ್‌ಬಿ ಟೈಪ್-ಸಿ ಮತ್ತು 3.5 ಎಂಎಂ ಹೆಡ್‌ಫೋನ್ ಜಾಕ್‌ಗೆ ಈ ಫೋನ್ ಬೆಂಬಲ ನೀಡುತ್ತದೆ. ವಿಶೇಷ ಎಂದರೆ, ಈ ಫೋನ್ ಬದಿಯಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಇದೆ.
BSNL Offer: 199 ರೂ.ನಲ್ಲಿ 8 ಸಾವಿರಕ್ಕೂ ಅಧಿಕ ಸಿನಿಮಾ ನೋಡಿ