ಬಿಸಿನೆಸ್‌ನಲ್ಲಿ ಕೈಗೊಳ್ಳುವ ಒಂದು ಸಣ್ಣ ನಿರ್ಧಾರವು ಇಡೀ ವ್ಯಾಪಾರವನ್ನು ಬುಡಮೇಲು ಮಾಡವ ಸಂದರ್ಭಗಳು ಹೆಚ್ಚಿರುತ್ತವೆ. ಯಾಕೆ ಈ ಮಾತು ಎಂದರೆ, ಬಹು ಜನಪ್ರಿಯ ವಾಟ್ಸಾಪ್ ತನ್ನ ಪ್ರೈವೇಸಿ ನೀತಿಯ ಸಂಬಂಧ ಕೈಗೊಳ್ಳಲಿದ್ದ ನಿರ್ಧಾರದ ಕುರಿತು ಅಸಮಾಧಾನಗೊಂಡಿದ್ದ ಬಳಕೆದಾರರು ಪರ್ಯಾಯ ಹುಡುಕಾಟಕ್ಕೆ ಇಳಿದರು. ಆಗ ಅವರ ಪರ್ಯಾಯ ಸಾಧನಗಳಾಗಿ ಕಂಡದ್ದೇ ಟೆಲಿಗ್ರಾಮ್ ಮತ್ತು ಸಿಗ್ನಲ್ ಆಪ್‌ಗಳು.

ವಾಟ್ಸಾಪ್‌ ಮಾಹಿತಿಯನ್ನು ಫೇಸ್‌ಬುಕ್ ವೇದಿಕೆಯಲ್ಲೂ ಷೇರ್ ಮಾಡುವುದಕ್ಕೆ ಅನುಮತಿಸಿದರೆ ವಾಟ್ಸಾಪ್ ಬಳಕೆಗೆ ಅವಕಾಶ ಕಲ್ಪಿಸುವ ಫೇಸ್‌ಬುಕ್‌ನ ಉದ್ದೇಶಿತ ನೀತಿಯ ಪರಿಣಾಮ ವಾಟ್ಸಾಪ್ ಬಳಕೆದಾರರ ಪೈಕಿ ಬಹಳಷ್ಟು ಜನರು ಟೆಲಿಗ್ರಾಮ್ ಪರ ವಾಲುತ್ತಿದ್ದಾರೆ. ವಾಟ್ಸಾಪ್ ಒಡೆತನ ಹೊಂದಿರುವ ಫೇಸ್‌ಬುಕ್, ವಾಟ್ಸಾಪ್ ಪ್ರವೇಸಿ ನೀತಿಯನ್ನು ತಡೆ ಹಿಡಿದರುವುದಾಗಿ ಮತ್ತು ಬಳಕೆದಾರರ ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ ಎಂದು ಹೇಳಿತಾದರೂ, ಜನ ನಂಬಲು ತಯಾರಿರಲಿಲ್ಲ. ಪರಿಣಾಮ ಇದೀಗ ಡೌನ್‌ಲೋಡ್‌ಗಳಲ್ಲಿ ಟೆಲಿಗ್ರಾಮ್ ಮುನ್ನಡೆ ಸಾಧಿಸುತ್ತಿದೆ.

ಪವರ್‌ಫುಲ್ ಬ್ಯಾಟರಿ ಇರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಬಿಡುಗಡೆ

ಸೆನ್ಸರ್‌ ಟವರ್ ರಿಪೋರ್ಟ್ ಪ್ರಕಾರ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಟೆಲಿಗ್ರಾಮ್ ಅತಿ ಹೆಚ್ಚು ಡೌನ್‌ಲೋಡ್ ಕಂಡ ಆಪ್ ಆಗಿದೆ. ಅತಿ ಹೆಚ್ಚು ಡೌನ್‌ಲೋಡ್ ಪಟ್ಟಿಯ 9ನೇ ಸ್ಥಾನದಲ್ಲಿದ್ದ ಟೆಲಿಗ್ರಾಮ್ ಇದೀಗ ಅಗ್ರ ಸ್ಥಾನಕ್ಕೆ ಬಂದು ಕುಳಿತಿದೆ. ಹಾಗೆಯೇ ಆಪಲ್‌ನ ಆಪ್ ಸ್ಟೋರ್‌ನಲ್ಲೂ ನಾಲ್ಕನೇ ಅತಿ ಹೆಚ್ಚು ಡೌನ್‌ಲೋಡ್ ಆದ ಹೆಗ್ಗಳಿಕೆ ಈ ಟೆಲಿಗ್ರಾಮ್‌ಗೆ ಇದೆ. ಅಂದರೆ, ನಿಧಾನವಾಗಿ ಟೆಲಿಗ್ರಾಮ್  ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಹಾಗಂತ, ಟೆಲಿಗ್ರಾಮ್ ಏನೂ ವಾಟ್ಸಾಪ್ ಅನ್ನು ಹಿಂದಿಕ್ಕಿಲ್ಲ. ಆದರೆ, ಡೌನ್‌ಲೋಡ್ ಪ್ರಮಾಣದಲ್ಲಿ ಮುಂದಿದೆ.

ಜನವರಿ 2021ಕ್ಕೆ ಹೋಲಿಸಿದರೆ ನಾನ್ ಗೇಮಿಂಗ್ ಆಪ್‌ಗಳ ಪೈಕಿ ಟೆಲಿಗ್ರಾಮ್ ಜಗತ್ತಿನಾದ್ಯಂತ ಹೆಚ್ಚು ಡೌನ್‌ಲೋಡ್ ಕಂಡ ಆಪ್ ಆಗಿದೆ. 2020ರ ಜನವರಿಯಿಂದ 2021 ಜನವರಿಗೆ  ಹೋಲಿಸಿದೆ ಡೌನ್‌ಲೋಡ್ ಪ್ರಮಾಣದಲ್ಲಿ 3.8 ಪಟ್ಟು ಹೆಚ್ಚಳವಾಗಿದೆ. ಅಂದರೆ, 63 ಮಿಲಿಯನ್ ಇನ್ಸ್‌ಟಾಲ್ ಆಗಿದೆ ಎಂದರ್ಥ. ಹಾಗೆಯೇ  ಭಾರತದಲ್ಲಿ ಅತಿ ಹೆಚ್ಚು ಇನ್ಸ್‌ಟಾಲ್ ಆಗಿದೆ ಎನ್ನುತ್ತದೆ ವರದಿ. ಭಾರತದಲ್ಲಿ ಒಟ್ಟು ಶೇ.24ರಷ್ಟು ಇನ್ಸ್‌ಟಾಲ್ ಆಗಿದ್ದರೆ ನಂತರದ ಸ್ಥಾನದಲ್ಲಿ ಇಂಡೋನೇಷ್ಯಾ ಇದ್ದು ಅಲ್ಲಿ ಶೇ.10ರಷ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆಪಲ್‌ನ ಟ್ವಿಟರ್ ಖಾತೆಯಲ್ಲಿ ಒಂದೂ ಟ್ವೀಟ್ ಇಲ್ಲ, ಯಾರನ್ನೂ ಫಾಲೋ ಮಾಡ್ತಿಲ್ಲ!

ಮತ್ತೊಂದೆಡೆ, ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಟಿಕ್ ಟಾಕ್ ಕಳೆದ ತಿಂಗಳ ಇನ್ಸ್‌ಟಾಲ್ ಆದ ನಾನ್ ಗೇಮಿಂಗ್ ಆಪ್‌ಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಒಟ್ಟು 62 ಮಿಲಿಯನ್ ಬಾರಿ ಟಿಕ್ ಟಾಕ್ ಆಪ್ ಇನ್ಸ್‌ಟಾಲ್ ಆಗಿದೆ. ಚೀನಾದಲ್ಲಿ ಟಿಕ್ ಟಾಕ್ ಅತಿ ಹೆಚ್ಚು ಇನ್ಸ್‌ಟಾಲ್‌ಗಳನ್ನು ಕಂಡಿದ್ದು, ಶೇ.17ರಷ್ಟು ಡೌನ್‌ಲೋಡನ್ ಆಗಿದೆ. ನಂತರದ ಸ್ಥಾನದಲ್ಲಿ ಅಮೆರಿಕವಿದೆ. ಅಮೆರಿಕದಲ್ಲಿ ಒಟ್ಟು ಶೇ.10ರಷ್ಟು ಟಿಕ್‌ಟಾಕ್ ಡೌನ್‌ಲೋಡ್ ಕಂಡಿದೆ.

ಒಟ್ಟಾರೆಯಾಗಿದೆ ಜಗತ್ತಿನಾದ್ಯಂತ ನಾನ್ ಗೇಮಿಂಗ್ ಆಪ್‌ಗಳ ಪೈಕಿ ಸಿಗ್ನಲ್, ಫೇಸ್‌ಬುಕ್, ವಾಟ್ಸ್‌ಆಪ್, ಟಿಕ್ ಟಾಕ್ ಮತ್ತು ಟೆಲಿಗ್ರಾಮ್ ಅತಿ ಹೆಚ್ಚು  ಇನ್ಸ್‌ಟಾಲ್ಡ್ ಆಪ್‌ಗಳಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವಾಟ್ಸಾಪ್‌ ಪ್ರೈವೇಸಿ ನೀತಿ ಘೋಷಣೆ ಬಳಿಕ ಬಳಕೆದಾರರು ಪರ್ಯಾಯ ಆಪ್‌ಗಳತ್ತ ಹುಡುಕುತ್ತಿದ್ದರು. ಅವರಿಗೆ ಟೆಲಿಗ್ರಾಮ್ ಹೆಚ್ಚು ಸೂಕ್ತ ಪರ್ಯಾಯ ಆಪ್ ಎಂದು ಕಾಣಿಸುತ್ತಿದೆ. ಪರಿಣಾಮ ನಾವು ಜಗತ್ತಿನಾದ್ಯಂತ ಜನವರಿ ತಿಂಗಳಲ್ಲಿ ಹೆಚ್ಚು ಟೆಲಿಗ್ರಾಮ್ ಆಪ್ ಡೌನ್‌ಲೋಡ್ ಆಗಿರುವುದನ್ನು ಕಾಣಬಹುದು. ಫೇಸ್‌ಬುಕ್ ಒಡೆತನದ ವಾಟ್ಸಾಪ್‌ಗೆ ಇದೊಂದು ಎಚ್ಚರಿಕೆ ಗಂಟೆಯಾಗಿದೆ ಎಂದು ಹೇಳಬಹುದು.  ಬಳಕೆದಾರರ ವಿಶ್ವಾಸ ಒಮ್ಮೆ ಹೊರಟು ಹೋದರೆ ಮತ್ತೆ ಕುದುರಿಸಿಕೊಳ್ಳಲು ಭಾರಿ ಕಷ್ಟಪಡಬೇಕಾಗುತ್ತದೆ. ಬಳಕೆದಾರರ ಹಿತರಕ್ಷಣೆಯೊಂದಿಗೆ ಯಾವುದೇ ಆಪ್ ರಾಜಿ ಮಾಡಿಕೊಳ್ಳಬಾರದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎನ್ನಬಹುದು.

BSNL Offer: 199 ರೂ.ನಲ್ಲಿ 8 ಸಾವಿರಕ್ಕೂ ಅಧಿಕ ಸಿನಿಮಾ ನೋಡಿ