ಮೈಕ್ರೋಮ್ಯಾಕ್ಸ್ ಇನ್ 1 ಸ್ಮಾರ್ಟ್‌ಫೋನ್ ಬಿಡುಗಡೆ, ಬೆಲೆ ತುಂಬಾ ಕಡಿಮೆ!

By Suvarna News  |  First Published Mar 20, 2021, 11:29 AM IST

ಭಾರತ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಮೈಕ್ರೋಮ್ಯಾಕ್ಸ್ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನುದೇಶಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೈಕ್ರೋಮ್ಯಾಕ್ಸ್ ಇನ್ 1 ಸ್ಮಾರ್ಟ್‌ಫೋನ್ ಬಜೆಟ್ ಫೋನ್ ಆಗಿದ್ದು, ಪ್ರೀಮಿಯಂ ಫೋನ್‌ನ ಬಹುತೇಕ ಫೀಚರ್‌ಗಳನ್ನು ಒಳಗೊಂಡಿದೆ.


ಸೆಕೆಂಡ್‌ ಇನ್ನಿಂಗ್ಸ್ ಭರ್ಜರಿಯಾಗಿಯೇ ಆರಂಭಿಸಿರುವ ದೇಶಿ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಮೈಕ್ರೋಮ್ಯಾಕ್ಸ್ ಮತೊಂದು, ತೀರಾ ತುಟ್ಟಿಯಲ್ಲದ ಸ್ಮಾರ್ಟ್‌ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಮೈಕ್ರೋಮ್ಯಾಕ್ಸ್ ಬಿಡುಗಡೆ ಮಾಡಿರುವ ಬಜೆಟ್‌ ಫ್ರೆಂಡ್ಲೀ ಸ್ಮಾರ್ಟ್‌ಫೋನ್ ಹೆಸರು – ಮೈಕ್ರೋ ಮ್ಯಾಕ್ಸ್ ಇನ್ 1. ಮೈಕ್ರೋಮ್ಯಾಕ್ಸ್‌ನ ಈ ಹೊಸ ಸ್ಮಾರ್ಟ್‌ಫೋನ್ ಕಡಿಮೆ ಬೆಲೆ ಮೌಲ್ಯ ಹೊಂದಿದ್ದು ಮಾತ್ರವಲ್ಲದೇ ಅತ್ಯಾಕರ್ಷಕ ಫೀಚರ್‌ಗಳನ್ನು ಒಳಗೊಂಡಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ದೊರೆಯುವ ಎಲ್ಲ ಸೌಲಭ್ಯಗಳು ಫೀಚರ್‌ಗಳನ್ನು ನೀವು ಈ ಸ್ಮಾರ್ಟ್‌ಫೋನ್‌ನಲ್ಲಿ ನೋಡಬಹುದು. ಹಾಗಾಗಿ, ಕಡಿಮೆ ದುಡ್ಡಿಗೆ ಹೆಚ್ಚಿನ ಮೌಲ್ಯವನ್ನು ನೀವು ಪಡೆಯಬಹುದಾಗಿದೆ.

Tap to resize

Latest Videos

undefined

ಮಾರುಕಟ್ಟೆಗೆ ಲಗ್ಗೆ ಇಟ್ಟ ರೆಡ್‌ಮಿ ಸ್ಮಾರ್ಟ್ ಟಿವಿಗಳು

ಮೈಕ್ರೋಮ್ಯಾಕ್ಸ್‌ನ ಈ ಹೊಸ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಎಕ್ಸ್ ಪ್ಯಾಟರ್ನ್‌ನೊಂದಿಗೆ ಮೆಟಾಲಿಕ್ ಫಿನಿಶಿಂಗ್ ಹೊಂದಿದೆ. ಜೊತೆಗೆ, ಮೂರು ಕ್ಯಾಮೆರಾಗಳ ಸೆಟ್ ‌ಅಪ್ ಇದೆ. ಸೆಲ್ಫಿ ಕ್ಯಾಮೆರಾಗಾಗಿ ಹೋಲ್ ಪಂಚ್ ಕಟೌಟ್ ‌ನೀಡಲಾಗಿದೆ. ಮೀಡಿಯಾಟೆಕ್ ಹೆಲಿಯೊ ಜಿ80 ಪ್ರೊಸೆಸರ್ ಆಧರಿತವಾಗಿರುವ ಈ ಫೋನ್, ಎರಡು  ಬಣ್ಣಗಳ ಆಯ್ಕೆಯಲ್ಲಿ ಮಾರಾಟಕ್ಕೆ ಸಿಗಲಿದೆ. ಫೋನ್‌ನ ಹಿಂಬದಿಯಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಕೂಡಾ ಇದೆ. ಈ ಫೋನ್ ಫೇಸ್‌ ಅನ್‌ಲಾಕ್  ಫೀಚರ್‌ಗೂ ಸಪೋರ್ಟ್ ಮಾಡುತ್ತದೆ. ಒಟ್ಟಾರೆ ನಿಮಗೆ ಪ್ರೀಮಿಯಂ ಸ್ಮಾರ್ಟ್‌ಫೋನ್ ಬಳಿಸಿದಾಗ ಸಿಗುವ ಅನುಭವ ಸಿಗುತ್ತದೆ.

ಈ ಮೈಕ್ರೋಮ್ಯಾಕ್ಸ್ ಇನ್ 1 ಸ್ಮಾರ್ಟ್‌ಫೋನ್‌ ನಿಮಗೆ 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಹಾಗೂ 6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್‌ ಪ್ರಕಾರಗಳಲ್ಲಿ ಸಿಗುತ್ತದೆ. ಈ ಫೋನ್‌ಗಳ ಬೆಲೆ ಕ್ರಮವಾಗಿ  10,499 ರೂಪಾಯಿ ಹಾಗೂ 11,999 ರೂಪಾಯಿ ಎಂದು ಕಂಪನಿ ಹೇಳಿಕೊಂಡಿದೆ. ಈ ಫೋನ್ ನಿಮಗೆ ನೀಲಿ ಮತ್ತು ನೇರಳ ಬಣ್ಣಗಳಲ್ಲಿ ಮಾರಾಟಕ್ಕೆ ಸಿಗಲಿದೆ.  

ಮಾರ್ಚ್ 26ರಿಂದ ಮೈಕ್ರೋಮ್ಯಾಕ್ಸ್ ಇನ್ 1 ಸ್ಮಾರ್ಟ್‌ಫೋನ್ ನಿಮಗೆ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್, ಮೈಕ್ರೋಮ್ಯಾಕ್ಸ್ ವೆಬ್‌ಸೈಟ್‌ಗಳಲ್ಲಿ ಮಾರಾಟ ಕಾಣಲಿದೆ.

ಚುನಾವಣೆ, ಆರ್ಥಿಕ ಮಾಹಿತಿ ನೀಡುವ BolSubol ಆಪ್ ಬಿಡುಗಡೆ

6.67 ಇಂಚ್ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇಸ್ ಅನ್ನು ಈ ಮೈಕ್ರೋಮ್ಯಾಕ್ಸ್ ಇನ್ 1 ಸ್ಮಾರ್ಟ್‌ಫೋನ್ ಹೊಂದಿದೆ. ಅಕ್ಟಾಕೋರ್ ಮೀಡಿಯಾಟೆಕ್ ಹೆಲಿಯೋ ಜಿ80 ಪ್ರೊಸೆಸರ್‌ ಆಧರಿತವಾಗಿರುವ  ಈಸ್ಮಾರ್ಟ್‌ಫೋನ್ 6 ಜಿಬಿ ರ್ಯಾಮ್ ಮತ್ತು 128 ಜಿಬಿವರೆಗೂ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಸ್ಟೋರೇಜ್ ಸಾಮರ್ಥ್ಯವನ್ನು ಬಳಕೆದಾರರು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 256 ಜಿಬಿವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ. ಇದಕ್ಕಾಗಿಯೇ ಪ್ರತ್ಯೇಕವಾದ ಸ್ಲಾಟ್ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ಒದಗಿಸಲಾಗಿದೆ.

ಮೈಕ್ರೋಮ್ಯಾಕ್ಸ್ ಇನ್ 1 ಸ್ಮಾರ್ಟ್‌ಫೋನ್  ಆಂಡ್ರಾಯ್ಡ್ 10 ಓಎಸ್‌ ಆಧರಿತವಾಗಿದ್ದು ಡ್ಯುಯಲ್ ಸಿಮ್‌ಗೆ ಸಪೋರ್ಟ್ ಮಾಡುತ್ತದೆ. ಜೊತೆಗೆ ಕಂಪನಿ ಶೀಘ್ರವೇ ಆಂಡ್ರಾಯ್ಡ್ 11 ಆವೃತ್ತಿಗೆ ಅಪ್‌ಗ್ರೇಡ್ ಮಾಡುವುದಾಗಿ ಹೇಳಿಕೊಂಡಿದೆ. ಎರಡು ವರ್ಷಗಳವರೆಗೆ ಕಂಪನಿ ಪ್ರತಿ ತಿಂಗಳು ಸೆಕ್ಯುರಿಟಿ ಅಪ್‌ಡೇಟ್ ಕೂಡ ಒದಗಿಸಲಿದೆ.

ಇನ್ನು ಈ ಮೈಕ್ರೋಮ್ಯಾಕ್ಸ್ ಇನ್ 1 ಫೋನ್‌ನ ಕ್ಯಾಮೆರಾ ಬಗ್ಗೆ ಹೇಳುವುದಾದರೆ;  ಈ ಫೋನ್ ಮೂವರು ಕ್ಯಾಮೆರಾಗಳ ಸೆಟ್‌ ಅಪ್ ಅನ್ನು ಹೊಂದಿದೆ. ಈ ಮೂರು ಕ್ಯಾಮೆರಾಗಳ ಪೈಕಿ ಮೊದಲನೆಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಕ್ಯಾಮೆರವಾಗಿದೆ. ಡೆಫ್ತ್ ಫೀಲ್ಡ್‌ಗಾಗಿ ಎರಡನೆಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಕ್ಯಾಮೆರಾ ಕೊಡಲಾಗಿದೆ. ಇನ್ನು 2 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಮ್ಯಾಕ್ರೋ ಕ್ಯಾಮೆರಾ ಆಗಿ ನೀಡಲಾಗಿದೆ. ಇನ್ನು ಸ್ಮಾರ್ಟ್‌ಫೋನ್‌ನ ಮುಂಬದಿಯಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಸ್ಕ್ರೀನ್‌ನಲ್ಲಿ 4.6 ಡಯಾಮೀಟರ್‌ನ ಪಂಚ್ ಹೋಲ್ ಕಟೌಟ್‌ನಲ್ಲಿ ಈ ಸೆಲ್ಫಿ ಕ್ಯಾಮೆರಾವನ್ನು ಫಿಕ್ಸ್ ಮಾಡಲಾಗಿದೆ.

ಮೇರಾ ರೇಷನ್ ಕಾರ್ಡ್ ಆಪ್‌ ಬಿಡುಗಡೆ: ಸಮೀಪದ ರೇಷನ್ ಅಂಗಡಿ ಎಲ್ಲಿದೆ ತಿಳಿಯಿರಿ

ಮೈಕ್ರೋಮ್ಯಾಕ್ಸ್ ಇನ್ 1 ಸ್ಮಾರ್ಟ್‌ಫೋನ್ 5000ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 18 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ.

 

click me!