ಶೀಘ್ರ ಸ್ಯಾಮ್ಸಂಗ್ ಗ್ಯಾಲಕ್ಸಿ A32 ಫೋನ್ ಬಿಡುಗಡೆ: ಕ್ಯಾಮೆರಾ, ಬ್ಯಾಟರಿ ಸೂಪರ್!

By Suvarna News  |  First Published Feb 27, 2021, 4:38 PM IST

ಪ್ರಖ್ಯಾತ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಸ್ಯಾಮ್ಸಂಗ್ ತನ್ನ ಹೊಸ ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಕ್ಯಾಮೆರಾ ಹಾಗೂ ಬ್ಯಾಟರಿ ದೃಷ್ಟಿಯಿಂದ ಈ ಫೋನು ತುಂಬ ಶಕ್ತಿಶಾಲಿಯಾಗಿದೆ. ಈಗಾಗಲೇ ಈ ಇದೇ ಫೋನ್‌ನ 5ಜಿ ವರ್ಷನ್ ಅನ್ನು ಬಿಡುಗಡೆ ಮಾಡಲಾಗಿದೆ. ರಷ್ಯಾದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಗ್ಯಾಲಕ್ಸಿ ಎ32 ಸ್ಮಾರ್ಟ್‌ಫೋನ್ ಅನ್ನು ಈಗ ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.


ಭಾರತೀಯ ಸ್ಯಾಮ್ಸಂಗ್ ಗ್ರಾಹಕರಿಗೆ ಇದು ಖುಷಿಯ ಸುದ್ದಿ. ಸ್ಯಾಮ್ಸಂಗ್ ಕಂಪನಿ ಶೀಘ್ರವೇ ಭಾರತದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎ32 4ಜಿ ಸ್ಮಾರ್ಟ್‌ಫೋನ್ ಅನ್ನು  ಬಿಡುಗಡೆ ಮಾಡಲಿದೆ. ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಗ್ರಸ್ಥಾನಿಯಾಗಿರುವ ಸ್ಯಾಮ್ಸಂಗ್ ತನ್ನ ಪ್ರೀಮಿಯಂ ಮತ್ತು ಬಜೆಟ್ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರನ್ನು ಸಂತೃಪ್ತಗೊಳಿಸಲು ಯಶಸ್ವಿಯಾಗಿದೆ. ಜೊತೆಗೆ ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೂಲಕವು ಸ್ಯಾಮ್ಸಂಗ್ ತನ್ನದೇ ಪ್ರಭಾವವನ್ನು ಹೊಂದಿದೆ.

ಇದೀಗ ಕಂಪನಿ ಈ ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ ಎ32 ಸ್ಮಾರ್ಟ್‌ಫೋನ್ ಮೂಲಕ ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ. ಈ ಹೊಸ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವ ತನ್ನ ಪತ್ರಿಕಾ ಪ್ರಕಟಣೆಯ ಮೂಲಕ ಖಚಿತಪಡಿಸಿರುವ ಕಂಪನಿ, ಬಿಡುಗಡೆಯ ನಿರ್ದಿಷ್ಟ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಹಾಗಾಗಿ, ಶೀಘ್ರವೇ ಈ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಭಾವಿಸಬಹುದಾಗಿದೆ.

Tap to resize

Latest Videos

undefined

ವಾಟ್ಸಾಪ್‌ಗೆ 12 ಹರೆಯ, ನಿತ್ಯ ನೂರು ಕೋಟಿ ಕರೆಗಳ ನಿರ್ವಹಣೆ!

ಇಲ್ಲೊಂದು ಕುತೂಹಲಕಾರಿ ವಿಷಯವಿದೆ. ವಾಸ್ತವದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎ32 4ಜಿ ಸ್ಮಾರ್ಟ್‌ಫೋನ್ ಅನ್ನು ಕಂಪನಿ ಈಗಾಗಲೇ ರಷ್ಯಾದಲ್ಲಿ ಬಿಡುಗಡೆ ಮಾಡಿದೆ. ಇದೇ ಮಾಡೆಲ್‌ನ 5ಜಿ ತಂತ್ರಜ್ಞಾನದ ಸ್ಮಾರ್ಟ್‌ಫೋನ್ ಅನ್ನು ಕಂಪನಿ ಜನವರಿಯಲ್ಲೇ ಬಿಡುಗಡೆ ಮಾಡಿತ್ತು. ಅದೇ ಫೋನ್ ಅನ್ನು ಈಗ ಕಂಪನಿ 4ಜಿ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುವ ಮಾಡೆಲ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡುತ್ತಿದೆ.

ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎ32 4ಜಿ ಸ್ಮಾರ್ಟ್‌ಫೋನ್‌ಗೆ ರಷ್ಯಾದಲ್ಲಿ 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಸಾಮರ್ಥ್ಯದ ಸ್ಯಾಮ್ಸಂಗ್ ಗ್ಯಾಲಕ್ಸಿ ಎ32 ಸ್ಮಾರ್ಟ್‌ಫೋನ್‌ಗೆ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಅಂದಾಜು 19,960 ರೂ. ಅದೇ ರೀತಿ 4 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯ ವೆರಿಯೆಂಟ್ ಸ್ಮಾರ್ಟ್‌ಫೋನ್‌ಗೆ ಅಂದಾಜು 21,500 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಬಹುಶಃ ಇದೇ ದರದಲ್ಲಿ ಭಾರತದಲ್ಲೂ ಕಂಪನಿ ಮಾರಾಟ ಮಾಡಬಹುದು. ಆದರೆ, ಕಂಪನಿ ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಈ ಸ್ಯಾಮ್ಸಂಗ್ ಗ್ಯಾಲಕ್ಸಿ ಎ32 ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಕಪ್ಪು, ನೀಲಿ ಮತ್ತು ನೇರಳೆ  ಬಣ್ಣದ ಆಯ್ಕೆಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

2 ರಿಯಲ್‌ಮಿ ಸ್ಮಾರ್ಟ್‌ಫೋನ್ ಬಿಡುಗಡೆ, ಇದು ಪಾಕೆಟ್ ಫ್ರೆಂಡ್ಲೀ

ಸ್ಯಾಮ್ಸಂಗ್ ಗ್ಯಾಲಕ್ಸಿ ಎ32 ಸ್ಮಾರ್ಟ್‌ಫೋನ್ ಹಲವು ವಿಶಿಷ್ಟ ಫೀಚರ್‌ಗಳನ್ನು ಹೊಂದಿದೆ. ಹಾಗೆಯೇ ಈ ಫೋನು 5ಜಿ ಸ್ಮಾರ್ಟ್‌ಫೋನ್‌ಗಿಂತಲೂ ತುಂಬ ಭಿನ್ನವಾಗಿದೆ. ಸೂಪರ್ ಅಮೋಎಲ್ಇಡಿ  6.4 ಇಂಚ್ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್, ಮೀಡಿಯಾ ಟೆಕ್ ಹೆಲಿಯೋ ಜಿ80 ಎಸ್ಒಸಿ ಪ್ರೊಸೆಸರ್ ಆಧರಿತವಾಗಿದೆ. 4 ಜಿಬಿ ರ್ಯಾಮ್ ಇದ್ದು, ಇನ್‌ಬಿಲ್ಟ್ ಸ್ಟೋರೇಜ್‌ ಪೈಕಿ ಎರಡು ರೀತಿಯಲ್ಲಿ ದೊರೆಯಲಿದೆ. ಮೊದಲನೆಯದ್ದು 64 ಜಿಬಿ ಎರಡನೆಯದ್ದು 128 ಜಿಬಿ ವೆರಿಯೆಂಟ್‌ಗಳಲ್ಲಿ ಈ ಸ್ಮಾರ್ಟ್‌ಫೋನ್ ಸಿಗಲಿದೆ. ಆದರೆ, ನೀವು ಮೈಕ್ರೋ ಎಸ್‌ಡಿ ಕಾರ್ಡ್ ಬಳಸಿಕೊಂಡು ಮೆಮೋರಿಯನ್ನು 1 ಟಿಬಿವರೆಗೂ ಹೆಚ್ಚಿಸಿಕೊಳ್ಳಬಹುದಾಗಿದೆ. ಅಂಥದೊಂದು ಅವಕಾಶವನ್ನು ಈ ಸ್ಮಾರ್ಟ್‌ಪೋನ್ ಒದಗಿಸಿಕೊಡುತ್ತದೆ.

ಈ ಫೋನ್‌ ಕೂಡ ನಾಲ್ಕು ಕ್ಯಾಮೆರಾಗಳ ಸೆಟ್ ಅಪ್ ಅನ್ನು ಹಿಂಬದಿಯಲ್ಲಿ ಹೊಂದಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದ್ದರೆ, ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿರುವ ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ. ಇನ್ನು ಉಳಿದ ಎರಡು ಕ್ಯಾಮೆರಾಗಳು 5 ಮೆಗಾ ಪಿಕ್ಸೆಲ್ ಮತ್ತು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಾಗಿವೆ. ಸೆಲ್ಫಿಗೋಸ್ಕರ್ ಫೋನ್ ಫ್ರಂಟ್‌ನಲ್ಲಿ 20 ಮೆಗಾ ಪಿಕ್ಸೆಲ್ ಕ್ಯಾಮೆರಾ ಕೊಡಲಾಗಿದೆ. ಹಾಗಾಗಿ, ಸೆಲ್ಫಿ ಕ್ಯಾಮೆರಾ ಅನುಭವವ ಇತರೆ ಸ್ಮಾರ್ಟ್‌ಫೋನ್‌ಗಳಿಗಿಂತಲೂ ಇದು ಭಿನ್ನವಾಗಿರಲಿದೆ.

15 ವಾಟ್ ಸ್ಪೀಡ್ ಚಾರ್ಜಿಂಗ್‌ನೊಂದಿಗೆ 5000ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಈ ಸೆಗ್ಮೆಂಟ್‌ನಲ್ಲಿರುವ ಇತರ ಫೋನುಗಳಿಗೆ ಹೋಲಿಸಿದರೆ ಈ ಸ್ಮಾರ್ಟ್‌ಫೋನ್ ಬ್ಯಾಟರಿ ಸಾಮರ್ಥ್ಯ ಹೆಚ್ಚಾಗಿದೆ ಎಂದು ಹೇಳಬಹುದು. ಹಾಗಾಗಿ, ಬ್ಯಾಟರಿ ದೃಷ್ಟಿಯಿಂದಲೂ ಸ್ಯಾಮ್ಸಂಗ್ ಗ್ಯಾಲಕ್ಸಿ ಎ32 ಸ್ಮಾರ್ಟ್‌ಫೋನ್ ಹೆಚ್ಚು ಗಮನ ಸಳೆಯುತ್ತದೆ.

ಹುವೈ ಮಡಚುವ ಸ್ಮಾರ್ಟ್‌ಫೋನ್ ಬಿಡುಗಡೆ, ಬೆಲೆ ಕೇಳಿದ್ರಾ..?

click me!