ಹುವೈ ಮಡಚುವ ಸ್ಮಾರ್ಟ್‌ಫೋನ್ ಬಿಡುಗಡೆ, ಬೆಲೆ ಕೇಳಿದ್ರಾ..?

By Suvarna NewsFirst Published Feb 23, 2021, 2:28 PM IST
Highlights

ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯಾಗಿರುವ ಹುವೈ ಈಗ ತನ್ನ ಬಹು ನಿರೀಕ್ಷೆಯ ಫೋಲ್ಡಬಲ್ ಸ್ಮಾರ್ಟ್‌ಫೋನ್ ಮೇಟ್ ಎಕ್ಸ್ 2 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗಮನ ಸೆಳೆಯುವ ಫೀಚರ್‌ಗಳನ್ನು ಹೊಂದಿರುವ ಈ ಮಡಚುವ ಸ್ಮಾರ್ಟ್‌ಫೋನ್ ಜಾಗತಿಕ ಮಾರುಕಟ್ಟೆಗೆ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಕಂಪನಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಈಗ ಫೋಲ್ಟಬಲ್ ಸ್ಮಾರ್ಟ್‌ಫೋನ್‌ಗಳ ಜಮಾನಾ ಶುರುವಾಗಿದೆ. ಈಗಾಗಲೇ ಸ್ಯಾಮ್ಸಂಗ್, ಮೊಟೊರೊಲಾ, ಎಲ್‌ಜಿ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಇದೀಗ ಈ ಸಾಲಿಗೆ ಹುವೈ(Huawei) ಕೂಡ ಸೇರಿದೆ.

ಹುವೈ ಕಂಪನಿಯ ತನ್ನ ಫೋಲ್ಡಬಲ್ ಸ್ಮಾರ್ಟ್‌ಫೋನ್ ಹುವಾವೇ ಮೇಟ್ ಎಕ್ಸ್2 ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಫೋನ್ ಬಹಳಷ್ಟು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿದ್ದು, ಗಮನ ಸೆಳೆಯುತ್ತಿದೆ.

ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ ಮಾಹಿತಿ ಸೋರಿಕೆ, ಹೆಚ್ಚಿದ ಕುತೂಹಲ

ಹುವೈ ಮೇಟ್ ಎಕ್ಸ್‌2 ಸ್ಮಾರ್ಟ್‌ಫೋನ್ 8 ಇಂಚಿನ ಒಎಲ್ಇಡಿ  ಪ್ಯಾನೆಲ್ ಅನ್ನು 8: 7.1 ಆಕಾರ ಅನುಪಾತ ಮತ್ತು ಒಳಭಾಗದಲ್ಲಿ 2480 x 2200 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಮತ್ತೊಂದೆಡೆ, ಬಾಹ್ಯ ಡಿಸ್‌ಪ್ಲೇ 6.45-ಇಂಚಿನ ಪರದೆಯ ಗಾತ್ರದಲ್ಲಿದ್ದು, 21: 9 ಆಕಾರ ಅನುಪಾತವನ್ನು ಹೊಂದಿದೆ. ಆಂತರಿಕ ಮತ್ತು ಬಾಹ್ಯ ಪ್ರದರ್ಶನಗಳು 90Hz ರಿಫ್ರೆಶ್ ದರವನ್ನು ಬೆಂಬಲಿಸಿದರೆ, ಎರಡನೆಯದು 240Hz ನಲ್ಲಿ ಹೆಚ್ಚಿನ ಸ್ಪರ್ಶ ಮಾದರಿ ದರವನ್ನು ಹೊಂದಿದೆ.

ಆಂತರಿಕ ಸ್ಕ್ರೀನ್ ಕೂಡ ಡಿಸಿಐಪಿ3 ಕಲರ್ ಕವರೇಜ್‌ಗೆ ಸಪೋರ್ಟ್ ಮಾಡುತ್ತದೆ. ಹುವಾವೇ ಮೇಟ್ ಎಕ್ಸ್ 2 ಆಂತರಿಕ ಡಿಸ್‌ಪ್ಲೇ ಮ್ಯಾಗ್ನಿಟಿಕಲೀ ಕಂಟ್ರೋಲ್ಡ್ ನ್ಯಾನೋ ಆಪ್ಟಿಕಲ್ ಲೇಯರ್‌ನೊಂದಿಗೆ ಬರುತ್ತದೆ. ಈ ರೀತಿಯ ಡಿಸ್‌ಪ್ಲೇ ಇದೇ ಮೊದಲ ಬಾರಿಗೆ ಬಳಕೆಯಾಗುತ್ತಿದೆ. ಬೆಳಕಿನ ಪ್ರತಿಫಲನ ಮತ್ತು ಗ್ಲೇರ್ ಅನ್ನು ಕಡಿಮೆ ಮಾಡಲು ಈ ಹೊಸ ಮಾದರಿಯ ಡಿಸ್‌ಪ್ಲೇಯಿಂದ ಸಾಧ್ಯವಾಗಲಿದೆ. ಹಾಗೆಯೇ ಸ್ಮಾರ್ಟ್‌ಫೋನ್ ಅನ್ನು ಹಗುರವಾಗಿಸುವ ಸಂಬಂಧ ಕಂಪನಿಯು ಝಿರ್ಕಾನಿಯುಮ್ ಆಧರಿತ ಲಿಕ್ವಿಡ್ ಮೆಟಲ್ ಮತ್ತು ಕಾರ್ಬನ್ ಫೈಬರ್ ಪ್ಯಾನೆಲ್‌ಗಳನ್ನು ಬಳಸಿದೆ. ಇದರಿಂದ ಸ್ಮಾರ್ಟ್‌ಫೋನ್‌ನ ಒಟ್ಟು ತೂಕದಲ್ಲಿ ಕಡಿಮೆಯಾಗಿದೆ. ಹಾಗಾಗಿ ಸ್ಮಾರ್ಟ್‌ಫೋನ್ ಹಗುರು ಎನಿಸುತ್ತದೆ.

ಪಾಸ್‌ಪೋರ್ಟ್‌ಗೆ ಅಗತ್ಯ ದಾಖಲೆ ನೀಡಲು ಡಿಜಿಲಾಕರ್ ಸಾಕು!

ಈ ಫೋಲ್ಡಬಲ್ ಹುವಾವೇ ಮೇಟ್ ಎಕ್ಸ್ 2 ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಡ್ ಕೋರ್ ಕ್ಯಾಮೆರಾ ಸೆಟ್‌ ಅಪ್ ಇದೆ. ನಾಲ್ಕು ಕ್ಯಾಮೆರಾಗಳ ಪೈಕಿ ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಎರಡನೆಯದ್ದು 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದು, ಅಲ್ಟ್ರಾವೈಡ್ 16 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಇದ್ದು, ಮತ್ತೊಂದು 12 ಮೆಗಾ ಪಿಕ್ಸೆಲ್ ಕ್ಯಾಮೆರಾ ಕೊಡಲಾಗಿದೆ.  ಇನ್ನು ಫ್ರಂಟ್‌ನಲ್ಲಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಕೊಡಲಾಗಿದೆ. ಎರಡು ಪರದೆಗಳು ಇರುವುದರಿಂದ ಮುಖ್ಯ ಕ್ಯಾಮೆರಾವನ್ನು ನೀವು ಸೆಲ್ಫಿ ಕ್ಯಾಮೆರಾ ರೀತಿಯಲ್ಲೂ ಬಳಸಬಹುದು. ಹಾಗೆಯೇ  ಹೆಚ್ಚುವರಿಯಾಗಿ  ಹೊರಗಿನ ಡಿಸ್‌ಪ್ಲೇಯಲ್ಲಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಕೊಡಲಾಗಿದೆ. ಜೊತೆಗೆ, ಫಿಂಗರ್ ಪ್ರಿಂಟ್ ರೀಡರ್ ಅನ್ನು ಸ್ಮಾರ್ಟ್‌ಫೋನ್ ಬದಿಯಲ್ಲಿ ಅಳವಡಿಸಲಾಗಿದ್ದು, ಇದರಿಂದ ಬಳಕೆದಾರರಿಗೆ ಬಯೋಮೆಟ್ರಿಕ್ ದೃಢೀಕರಣ ಸುಲಭವಾಗಲಿದೆ.

ಚೀನಾದಲ್ಲಿ ಬಿಡುಗಡೆಯಾಗಿರುವ ಈ ಹುವಾವೇ ಮೇಟ್ ಎಕ್ಸ್ 2 ಸ್ಮಾರ್ಟ್‌ಫೋನ್  ಬೆಲೆ 18,000 ಚೀನೀಸ್ ಯಾನ್‌ಯಾಗಿದೆ. ಇದನ್ನು ನೀವು ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ ಅದರ ಅಂದಾಜು ಬೆಲೆ 2,01,900 ರೂಪಾಯಿ ಆಗಲಿದೆ. ಇದು 256 ಜಿಬಿ ಮಾಡೆಲ್ ಬೆಲೆಯಾಗಿದೆ.

ರೆಡ್‌ಮಿ ನೋಟ್ 10 ಸೀರೀಸ್ ಹೊಸ ಫೋನ್‌ಗಳು ಶೀಘ್ರ ಮಾರುಕಟ್ಟೆಗೆ, ಏನೇನಿವೆ ವಿಶೇಷತೆ?

ಇನ್ನು 512 ಜಿಬಿ ವೆರಿಯೆಂಟ್ ಬೆಲೆ  19,000 ಚೀನೀಸ್ ಯಾನ್ ಆಗಿದೆ. ಅಂದರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ ಇದು 2,13,100 ರೂಪಾಯಿ ಆಗಲಿದೆ. ಈ ಫೋಲ್ಡೇಬಲ್ ಫೋನ್ ನಿಮಗೆ ಕ್ರಿಸ್ಟಲ್ ಬ್ಲೂ, ಕ್ರಿಸ್ಟಲ್ ಪಿಂಕ್, ವೈಟ್ ಮತ್ತು ಕಪ್ಪು ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಆದರೆ, ಈ ಫೋನ್ ಭಾರತದ ಮಾರುಕ್ಟಟೆಗೆಗಾಗಲಿ ಅಥವಾ ಜಾಗತಿಕ ಮಾರುಕಟ್ಟೆಗಾಗಲಿ ಯಾವಾಗ ಸಿಗಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

click me!