2 ರಿಯಲ್‌ಮಿ ಸ್ಮಾರ್ಟ್‌ಫೋನ್ ಬಿಡುಗಡೆ, ಇದು ಪಾಕೆಟ್ ಫ್ರೆಂಡ್ಲೀ

Suvarna News   | Asianet News
Published : Feb 25, 2021, 02:51 PM IST
2 ರಿಯಲ್‌ಮಿ ಸ್ಮಾರ್ಟ್‌ಫೋನ್ ಬಿಡುಗಡೆ, ಇದು ಪಾಕೆಟ್ ಫ್ರೆಂಡ್ಲೀ

ಸಾರಾಂಶ

ಈ ಮೊದಲೇ ಘೋಷಿಸಿದಂತೆ ರಿಯಲ್‌ಮಿ ಕಂಪನಿಯ ರಿಯಲ್ ಮಿ ನಾರ್ಜೋ 30 ಪ್ರೋ 5ಜಿ ಹಾಗೂ ರಿಯಲ್ ಮಿ ನಾರ್ಜೋ 30ಎ ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಫೋನ್‌ಗಳ ಜತೆಗೆ ಶಿಯೋಮಿಗೆ ಪೈಪೋಟಿ ನೀಡುವುದಕ್ಕಿ ಮೋಷನ್ ಆಕ್ಟಿವೇಟೆಡ್ ನೈಟ್ ಲೈಟ್ ಕೂಡ ಬಿಡುಗಡೆ ಮಾಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಪ್ರದರ್ಶನ ತೋರುತ್ತಿರುವ ರಿಯಲ್ ಮಿ ಇದೀಗ ತನ್ನ ಮತ್ತೆರಡು ಹೊಸ ಸ್ಮಾರ್ಟ್‌ಫೋನ್‌ ಹಾಗೂ ರಿಯಲ್ ಮಿ  ಮೋಷನ್ ಆಕ್ಟಿವೇಟೆಡ್ ನೈಟ್ ಲೈಟ್ ಅನ್ನು ಪರಿಚಯಿಸುವ ಮೂಲಕ ಗ್ರಾಹಕರ ಮುಂದೆ ಬಂದಿದೆ. ಫೆ.24ರಂದು ಕಂಪನಿಯು ಫೆಬ್ರವರಿ 24, ಬುಧವಾರದಂದು ರಿಯಲ್ ಮಿ ನಾರ್ಜೋ 30 ಪ್ರೋ 5ಜಿ , ರಿಯಲ್ ಮಿ ನಾರ್ಜೋ 30ಎ ಬಿಡುಗಡೆ ಮಾಡಿದ್ದು ಮಾರ್ಚ್ 4 ಮತ್ತು 5ರಿಂದ ಈ ಸ್ಮಾರ್ಟ್‌ಫೋನ್‌ಗಳು ಮಾರಾಟಕ್ಕೆ ಸಿಗಲಿವೆ.

ಪ್ರೀಮಿಯಂ ಮತ್ತು  ಬಜೆಟ್ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ರಿಯಲ್‌ಮಿ ಇದೀಗ ಎರಡು ಸ್ಮಾರ್ಟ್‌ಫೋನ್ ಮತ್ತು ನೈಟ್ ಲೈಟ್ ಬಿಡುಗಡೆ ಮೂಲಕ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.

ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ ಮಾಹಿತಿ ಸೋರಿಕೆ, ಹೆಚ್ಚಿದ ಕುತೂಹಲ

ಸಿಕ್ಕಾಪಟ್ಟೆ ಸದ್ದು ಮಾಡಿದ್ದ ರಿಯಲ್‌ ನಾರ್ಜೋ 30 ಪ್ರೋ 5ಜಿ  ಮತ್ತು ರಿಯಲ್ ಮಿ ನಾರ್ಜೋ 30 ಎ ಸ್ಮಾರ್ಟ್‌ಫೋನ್‌ ಬೆಲೆ ಎಷ್ಟು ಎಂಬುದು ಗೊತ್ತಾಗಿದೆ. ರಿಯಲ್ ಮಿ ನಾರ್ಜೋ 30 ಪ್ರೋ 5ಜಿ ಸ್ಮಾರ್ಟ್‌ಫೋನ್ 6 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ವೆರಿಯೆಂಟ್ ಬೆಲೆ 16,999 ರೂಪಾಯಿ ಮತ್ತು 8 ಜಿಬಿ ರ್ಯಾಮ್ ಪ್ಲಸ್ 128 ಜಿಬಿ ವೆರಿಯೆಂಟ್ ಸ್ಮಾರ್ಟ್‌ಫೋನ್ ಬೆಲೆ  19,999 ರೂಪಾಯಿಯಾಗಿದೆ. ಈ ಫೋನ್ ನಿಮಗೆ ಸ್ವಾರ್ಡ್ ಬ್ಲ್ಯಾಕ್ ಮತ್ತು ಬ್ಲೇಡ್ ಸಿಲ್ವರ್ ಬಣ್ಣಗಳಲ್ಲಿ ಸಿಗುತ್ತದೆ.

ಇನ್ನು ರಿಯಲ್ ಮಿ ನಾರ್ಜೋ  30ಎ ಸ್ಮಾರ್ಟ್‌ಫೋನ್ ಬೆಲೆ ಕೂಡಾ ಗೊತ್ತಾಗಿದ್ದು, 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಆಯ್ಕೆಯ ಫೋನ್‌ಗೆ  9,999 ರೂಪಾಯಿಯಾಗಿದೆ. ಈ ಫೋನ್ ಈ ಒಂದೇ ಆಯ್ಕೆಯಲ್ಲಿ ಮಾರಾಟಕ್ಕೆ ಲಭ್ಯವಿದೆ. ಲೇಸರ್ ಬ್ಲ್ಯಾಕ್ ಮತ್ತು ಲೇಸರ್ ಬ್ಲೂ ಬಣ್ಣಗಳಲ್ಲಿ ಮಾರಾಟಕ್ಕೆ ಸಿಗುತ್ತದೆ.

ಪಾಸ್‌ಪೋರ್ಟ್‌ಗೆ ಅಗತ್ಯ ದಾಖಲೆ ನೀಡಲು ಡಿಜಿಲಾಕರ್ ಸಾಕು!

ಮಾರ್ಚ್ 4ರ ಮಧ್ಯಾಹ್ನ 12 ಗಂಟೆಗೆ ರಿಯಲ್ ಮಿ ನಾರ್ಜೋ 30 ಪ್ರೋ 5ಜಿ ಸ್ಮಾರ್ಟ್‌ಫೋನ್ ಮಾರಾಟಕ್ಕೆ ಸಿಗಲಿದೆ. ಹಾಗೆಯೇ ಮಾರ್ಚ್ 5ರಂದು ಮಧ್ಯಾಹ್ನ 12ಕ್ಕೆ ರಿಯಲ್ ಮಿ ನಾರ್ಜೋ 30ಎ ಸ್ಮಾರ್ಟ್‌ಫೋನ್ ಕೂಡ ಮಾರಾಟಕ್ಕೆ ಹೋಗಲಿದೆ. ಬಳಕೆದಾರರು ಈ ಎರಡೂ ಫೋನ್‌ಗಳನ್ನು ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮತ್ತು ರಿಯಲ್ ಮಿ ಡಾಟ್ ಕಾಮ್‌ ಆನ್‌ಲೈನ್ ಹಾಗೂ ಪ್ರಮುಖ ಆಫ್‌ಲೈನ್ ಸ್ಟೋರ್‌ಗಳಿಂದ ಖರೀದಿಸಬಹುದಾಗಿದೆ.

ಬಳಕೆದಾರರು ಐಸಿಐಸಿಐ ಬ್ಯಾಂಕ್ ಕಾರ್ಡ್ ಮತ್ತು ಇಎಂಐ ಬಳಸಿ ರಿಯಲ್ ಮಿ ನಾರ್ಜೋ 30 ಪ್ರೋ 5ಜಿ ಸ್ಮಾರ್ಟ್‌ಫೋನ್ ಖರೀದಿಸಿದರೆ 1,000 ರೂ. ರಿಯಾಯಿತಿ ಸಿಗಲಿದೆ. ಶಿಯೋಮಿಯ ಮೋಷನ್ ಆಕ್ಟಿವೇಟೆಡ್ ನೈಟ್ ಲೈಟ್‌ 2ಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ರಿಯಲ್ ಮಿ, ಮೋಷನ್ ಆಕ್ಟಿವೇಟೆಡ್ ನೈಟ್ ಲೈಟ್ ಅನ್ನು ಇದೀಗ ಮಾರುಕಟ್ಟೆಗೆ ಪರಿಚಯಿಸಿದೆ.

ರೆಡ್‌ಮಿ ನೋಟ್ 10 ಸೀರೀಸ್ ಹೊಸ ಫೋನ್‌ಗಳು ಶೀಘ್ರ ಮಾರುಕಟ್ಟೆಗೆ, ಏನೇನಿವೆ ವಿಶೇಷತೆ?

ಕೆಲವು ದಿನದ ಹಿಂದೆ ರಿಯಲ್ ಮಿ ಇಂಡಿಯಾ ಸಿಇಒ ಮಾಧವ್ ಶೇಠ್ ಟ್ವೀಟ್ ಮಾಡಿ, ರಿಯಲ್ ಮೀ ಜಿಟಿ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆಯ ಮಾಹಿತಿಯನ್ನು ಬಿಟ್ಟುಕೊಟ್ಟಿದ್ದಾರೆ. ಅವರು ಟ್ವೀಟ್‌ನಲ್ಲಿ - ರಿಯಲ್ ಮೀ ಫ್ಯಾನ್ಸ್ ನಿಮ್ಮ ಕ್ಯಾಲೆಂಡರ್‌ನಲ್ಲಿ ಮಾರ್ಚ್ 4 ದಿನಾಂಕವನ್ನು ಗುರುತು ಹಾಕಿಕೊಳ್ಳಿ. ಮುಂದಿನ ತಲೆಮಾರಿನ ಫ್ಲ್ಯಾಗ್‌ಶಿಫ್ ಸೀರೀಸ್- ರಿಯಲ್ ಮಿ ಜಿಟಿ 5ಜಿ ಜಾಗತಿಕವಾಗಿ ಬಿಡುಗಡೆಯಾಗಲಿದೆ. ಸ್ನ್ಯಾಪ್ ಡ್ರಾಗನ್ 888 ಚಿಪ್‌ಸೆಟ್ ಆಧರಿತವಾಗಿದೆ. ಅತ್ಯುತ್ತಮ ಪ್ರದರ್ಶನಕ್ಕಾಗಿ ಇನ್ನೋವೇಷನ್, ಡಿಸೈನ್ ಮತ್ತು   ಪ್ರಾಡಕ್ಟ್ ವ್ಯಾಲ್ಯೂವಿನಲ್ಲಿ ಈ ರಿಯಲ್ ಮಿ ಜಿಟಿ 5ಜಿ ಮುಂದಿರಲಿದೆ. ಯಾರೆಲ್ಲ ಎಕ್ಸೈಟ್ ಆಗಿದ್ದೀರಿ ಎಂದು ತಿಳಿಸಿದ್ದಾರೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ