ಫ್ಲಿಪ್‌ಕಾರ್ಟ್ ಸಹಯೋಗದಲ್ಲಿ ಗ್ಯಾಲಕ್ಸಿ F ಸೀರಿಸ್ ಬಿಡುಗಡೆ ಮಾಡಲಿದೆ ಸ್ಯಾಮ್ಸಂಗ್!

By Suvarna NewsFirst Published Sep 24, 2020, 7:08 PM IST
Highlights
  • ಸ್ಯಾಮ್ಸಂಗ್ನಿಂದ ಗ್ಯಾಲಕ್ಸಿ F ಭಾರತದಲ್ಲಿ ಬಿಡುಗಡೆಗೆ ತಯಾರಿ
  • ಹಬ್ಬದ ಪ್ರಯುಕ್ತ ಎಫ್ ಸೀರಿಸ್ ಫೋನ್ ಬಿಡುಗಡೆ ಮಾಡಲಿದೆ ಸ್ಯಾಮ್ಸಂಗ್

ಬೆಂಗಳೂರು(ಸೆ.24): ಭಾರತದ ಅತ್ಯಂತ ವಿಶ್ವಾಸಾರ್ಹ ಸ್ಮಾರ್ಟ್‍ಫೋನ್ ಬ್ರಾಂಡ್ ಸ್ಯಾಮ್‍ಸಂಗ್ ಇಂದು ಭಾರತದ ಸ್ಥಳೀಯ ಇ-ಕಾಮರ್ಸ್ ಪ್ಲಾಟ್‍ಫಾರಂನೊಂದಿಗೆ ಸಹಯೋಗವನ್ನು ಪ್ರಕಟಿಸಿದ್ದು ದೇಶದ ಮಹತ್ವಾಕಾಂಕ್ಷೆಯ ಯುವ ಗ್ರಾಹಕರ ಬೇಡಿಕೆಗಳನ್ನು ಪೂರೈಸಲಿದೆ. ಗ್ಯಾಲಕ್ಸಿ ಎಫ್ ಸೀರೀಸ್ ಅನ್ನು ಫ್ಲಿಪ್‍ಕಾರ್ಟ್‍ನ ಗ್ರಾಹಕರ ಆಳವಾದ ಅರ್ಥೈಸಿಕೊಳ್ಳುವಿಕೆ ಮತ್ತು ಸ್ಯಾಮ್‍ಸಂಗ್‍ನ ಆವಿಷ್ಕಾರದ ಶಕ್ತಿಯ ಮೇಲೆ ನಿರ್ಮಿಸಲಾಗಿದ್ದು ಈ ಎರಡು ಕಂಪನಿಗಳ ಸಹಯೋಗವು ಈ ಹಬ್ಬದ ಋತುವಿಗೆ ಹಾಗೂ ಅತ್ಯಂತ ನಿರೀಕ್ಷೆಯ ಬಿಗ್ ಬಿಲಿಯನ್ ಡೇಗಳಿಗೆ ಗ್ರಾಹಕರಿಗೆ ಸಂತೋಷ ತರಲಿದೆ.

ಫ್ಲಿಪ್‌ಕಾರ್ಟ್‌ನಿಂದ MarQ ಆ್ಯಂಡ್ರಾಯ್ಡ್ 9.0 ಸ್ಮಾರ್ಟ್ TV ಬಿಡುಗಡೆ.

ಜಾಗತಿಕ ಪ್ರಥಮ ಬಿಡುಗಡೆಯಾದ ಗ್ಯಾಲಕ್ಸಿ ಎಫ್ ಸೀರೀಸ್ ಸ್ಮಾರ್ಟ್‍ಫೋನ್ ಅತ್ಯಂತ ಅಗತ್ಯವಾಗಿರುವ ಈ ಸಮಯದಲ್ಲಿ ಯುವ ಗ್ರಾಹಕರ ಸಾಮಾಜಿಕ ಮತ್ತು ವೃತ್ತಿಪರವಾಗಿ ಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸಲಿದೆ. ಉದ್ಯಮದ ವರದಿಗಳ ಪ್ರಕಾರ ಭಾರತದಲ್ಲಿ ಸ್ಮಾರ್ಟ್‍ಫೋನ್ ಬಳಕೆದಾರರ ಸಂಖ್ಯೆಯು 2021ರ ವೇಳೆಗೆ 760 ಮಿಲಿಯನ್ ತಲುಪಲಿದೆ ಮತ್ತು ಬಹುತೇಕ ಭಾರತೀಯರು ಅವರ ಸ್ಮಾರ್ಟ್‍ಫೋನ್ ಅನ್ನು ಅವರ ಕೆಲಸ ಅಥವಾ ಶಿಕ್ಷಣಕ್ಕೆ ದಿನಕ್ಕೆ ಕನಿಷ್ಠ 6 ಗಂಟೆಗಳ ಕಾಲ ಬಳಸುತ್ತಾರೆ, ಉನ್ನತ ಕಾರ್ಯಕ್ಷಮತೆಯ ಸ್ಮಾರ್ಟ್‍ಫೋನ್ ಎನ್ನುವುದು ಬಯಕೆಯಾಗಿ ಉಳಿದಿಲ್ಲ, ಬದಲಿಗೆ ಅಗತ್ಯವಾಗಿದೆ.

ಸ್ಯಾಮ್‍ಸಂಗ್‍ನಲ್ಲಿ ನಾವು ಗ್ರಾಹಕ-ಕೇಂದ್ರಿತ ಆವಿಷ್ಕಾರಗಳಿಗೆ ಬದ್ಧರಾಗಿದ್ದೇವೆ. ಗ್ಯಾಲಕ್ಸಿ ಎಫ್ ಅನ್ನು ಭಾರತದಲ್ಲಿ ಫ್ಲಿಪ್‍ಕಾರ್ಟ್ ಸಹಯೋಗದಲ್ಲಿ ವಿನ್ಯಾಸಗೊಳಿಸಲಾಗಿದ್ದು ಇದು ಸಾಮಾಜಿಕವಾಗಿ ಸಕ್ರಿಯವಾಗಿರುವ ಗ್ರಾಹಕರ ಹೆಚ್ಚುತ್ತಿರುವ ಆಕಾಂಕ್ಷೆಗಳ ಸಂಭ್ರಮವಾಗಿದೆ. ಗ್ಯಾಲಕ್ಸಿ ಎಫ್‍ನೊಂದಿಗೆ ಸ್ಯಾಮ್‍ಸಂಗ್ ಮತ್ತು ಫ್ಲಿಪ್‍ಕಾರ್ಟ್ ತಮ್ಮ ಜೀವನವನ್ನು ಪೂರ್ಣವಾಗಿ ಆನಂದಿಸಲು ಬಯಸುವ ಯುವ ಗ್ರಾಹಕರಿಗೆ ಫೀಚರ್-ಸನ್ನದ್ಧ ಆಯ್ಕೆಯನ್ನು ಒದಗಿಸುತ್ತಿದೆ. ಗ್ಯಾಲಕ್ಸಿ ಎಫ್‍ನ ಪ್ರಸ್ತಾವನೆಯು `ಫುಲ್-ಆನ್’ ಇಂದಿನ ಜೆನ್ ಝಡ್ ಯುವ ಗ್ರಾಹಕರ ಜೀವನಶೈಲಿಯನು ವ್ಯಾಖ್ಯಾನಿಸುತ್ತದೆ ಮತ್ತು ಎಫ್ ಸೀರೀಸ್ ಸ್ಮಾರ್ಟ್‍ಫೋನ್‍ಗಳು `ಪೂರ್ಣತ್ವದ ವಿಶ್ವಾಸಾರ್ಹತೆ ಉಳಿಸಿಕೊಳ್ಳುತ್ತವೆ ಎಂಬ ಭರವಸೆ ನಮ್ಮದು ಎಂದು ಸ್ಯಾಮ್‍ಸಂಗ್ ಇಂಡಿಯಾ ಹಿರಿಯ ಉಪಾಧ್ಯಕ್ಷ ಮತ್ತು ಹೆಡ್ ಆಫ್ ಇಕಾಮರ್ಸ್ ಅಸಿಮ್ ವಾರ್ಸಿ ಹೇಳಿದರು.

ಸ್ಥಳೀಯವಾಗಿ ಬೆಳೆದ ಕಂಪನಿಯಾಗಿ, ಭಾರತೀಯ ಗ್ರಾಹಕರ ನಾಡಿಮಿಡಿತವನ್ನು ನೈಜವಾಗಿ ಅರ್ಥ ಮಾಡಿಕೊಂಡಿರುವುದಕ್ಕೆ ಮತ್ತು ಮೌಲ್ಯಯುತ ಉತ್ಪನ್ನಗಳನ್ನು ತರುವ ಬ್ರಾಂಡ್‍ಗಳೊಂದಿಗೆ ಸಹಯೋಗದಲ್ಲಿ ಕೆಲಸ ಮಾಡಲು ಹೆಮ್ಮೆಪಡುತ್ತೇವೆ. ಸ್ಯಾಮ್‍ಸಂಗ್‍ನೊಂದಿಗೆ ನಮ್ಮ ಕಾರ್ಯತಂತ್ರೀಯ ಸಹಯೋಗವು ಜನರ ಜೀವನಗಳಲ್ಲಿ ಸ್ಮಾರ್ಟ್‍ಫೋನ್‍ಗಳು ತರುತ್ತಿರುವ ಅಪಾರ ಮೌಲ್ಯದ ಸಂದರ್ಭದಲ್ಲಿ ಅತ್ಯಾಧುನಿಕ ತಂತ್ರಜ್ಞಾನವು 250 ಮಿಲಿಯನ್‍ಗೂ ಹೆಚ್ಚು ಗ್ರಾಹಕರಿಗೆ ಭಾರತದಾದ್ಯಂತ ಲಭ್ಯವಿರುವಂತೆ ಮಾಡಲು ನಮ್ಮ ಬದ್ಧತೆಯನ್ನು ಮರು ದೃಢೀಕರಿಸಿದೆ ಎಂದು  ಫ್ಲಿಪ್‍ಕಾರ್ಟ್ CEO ಕಲ್ಯಾಣ್ ಕೃಷ್ಣಮೂರ್ತಿ ಹೇಳಿದ್ದಾರೆ.

 ಫ್ಲಿಪ್‍ಕಾರ್ಟ್ ಹಲವು ಕೈಗೆಟುಕುವ ನಿರ್ಮಾಣಗಳನ್ನು ಹೊಂದಿದ್ದು ಲಕ್ಷಾಂತರ ಗ್ರಾಹಕರಿಗೆ ಅತ್ಯಾಧುನಿಕ ಸ್ಮಾರ್mಫೋನ್ ಕೊಡುಗೆಗಳು ದೊರೆಯುವಂತೆ ಮಾಡುತ್ತದೆ ಮತ್ತು ಇದರಲ್ಲಿ ಬೈ ನೌ ಪೇ ಲೇಟರ್, ನೋ-ಕಾಸ್ಟ್ ಇಎಂಐಗಳು, ಉತ್ಪನ್ನ ವಿನಿಮಯ ಮತ್ತು ಕಾರ್ಡ್‍ರಹಿತ ಸಾಲ ಮುಂತಾದವುಗಳಿದ್ದು ಗ್ರಾಹಕರಿಗೆ ಅವರ ಫೋನ್‍ಗಳನ್ನು ಸುಲಭವಾಗಿ ಕೊಳ್ಳಲು ಅಥವಾ ಅಪ್‍ಗ್ರೇಡ್ ಮಾಡಲು ಅವಕಾಶ ನೀಡುತ್ತದೆ.

F ಸೀರೀಸ್ ಕುರಿತು:
ಗ್ಯಾಲಕ್ಸಿ ಎಫ್ ಸೀರೀಸ್ ಮಿತಿಗಳು ಹಾಗೂ ರಾಜಿಗಳಿಲ್ಲದೆ ವರ್ಣಮಯ ಜೀವನಗಳನ್ನು ನಡೆಸುವ ತಲೆಮಾರಿಗೆ ವಿನ್ಯಾಸಗೊಳಿಸಲಾಗಿದೆ. ಇದು ಭಾರತೀಯ ಕೊಳ್ಳುಗರಿಗೆ ಮಿತಿಗಳಿಲ್ಲದೆ ಆವಿಷ್ಕಾರ, ಅಭಿವ್ಯಕ್ತಿ ಮತ್ತು ತೊಡಗಿಕೊಳ್ಳಲು ಅವಕಾಶ ನೀಡುತ್ತವೆ.

ಗ್ಯಾಲಕ್ಸಿ ಎಫ್41, ಎಫ್ ಸೀರೀಸ್‍ನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಸ್ಮಾರ್ಟ್‍ಫೋನ್ ಆಗಿದೆ. ಗ್ಯಾಲಕ್ಸಿ ಎಫ್41ನೊಂದಿಗೆ ಗ್ರಾಹಕರು `ಫುಲ್ ಆನ್’ ಅನುಭವವನ್ನು ಅವರಿಗೆ ಮುಖ್ಯವಾಗಿರುವ ಸ್ಮಾರ್ಟ್‍ಫೋನ್‍ನ ಪ್ರತಿಯೊಂದು ಆಯಾಮದಲ್ಲೂ ಪಡೆಯುತ್ತಾರೆ. ಗ್ಯಾಲಕ್ಸಿ ಎಫ್41 ಅದ್ಭುತ ಡಿಸ್ಪ್ಲೇ, ಶಕ್ತಿಯುತ ಬ್ಯಾಟರಿ ಮತ್ತು ಅದ್ಭುತ ನೋಟಗಳನ್ನು ಹೊಂದಿದ್ದು ಚಲನಚಿತ್ರಗಳು, ಗೇಮ್ಸ್, ಮ್ಯೂಸಿಕ್ ಅಥವಾ ಮನರಂಜನೆಗೆ `ಫುಲ್ ಆನ್’ ಅನುಭವ ನೀಡುತ್ತದೆ.

ಗ್ಯಾಲಕ್ಸಿ ಎಫ್41 ಅಕ್ಟೋಬರ್ 8ರಂದು ನಡೆಯುವ `ಫುಲ್ ಆನ್ ಫೆಸ್ಟಿವಲ್’ ಮೂಲಕ ಜಾಗತಿಕ ಪ್ರವೇಶ ಪಡೆಯಲಿದೆ. `ಫುಲ್ ಆನ್ ಫೆಸ್ಟಿವಲ್’ ಅನ್ನು ಆನ್‍ಲೈನ್‍ನಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ. ಇದು ಎಫ್ ಸೀರೀಸ್‍ನ `ಫುಲ್ ಆನ್’ ಪ್ರಸ್ತಾವನೆಯಾದ ಮನರಂಜನೆಯನ್ನು ನೇರವಾಗಿ ತರುತ್ತದೆ!

click me!