ಬೆಂಗಳೂರು(ಸೆ.21) ರಿಲಯನ್ಸ್ ಜಿಯೋ ಭಾರತದಲ್ಲಿ ಐಪಿಎಲ್ 2020 ಅಭಿಮಾನಿಗಳಿಗೆ ಹೊಸ ಕೊಡುಗೆಗಳನ್ನು ಘೋಷಿಸಿದೆ. ಕಂಪನಿಯು ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಎಂಬ ಹೊಸ ಪ್ರಸ್ತಾಪವನ್ನು ಪರಿಚಯಿಸಿದೆ, ಇದರಲ್ಲಿ ಕ್ರಿಕೆಟ್ ಅಭಿಮಾನಿಗಳು ತಮ್ಮ ಕ್ರಿಕೆಟ್ ಕೌಶಲ್ಯವನ್ನು ‘ಪ್ರತಿ ಬಾಲ್ ನೊಂದಿಗೆ ಆಡುವ ಮೂಲಕ’ ಬಳಸಿಕೊಳ್ಳಬಹುದು. ಸರಿಯಾದ ಉತ್ತರವನ್ನು ಊಹಿಸುವ ಬಳಕೆದಾರರು ಅತ್ಯಾಕರ್ಷಕ ಬಹುಮಾನಗಳನ್ನು ಪಡೆಯಬಹುದು
ಜಿಯೋ ರಿಚಾರ್ಜ್ ಮಾಡಿ ಉಚಿತವಾಗಿ ಐಪಿಎಲ್ ನೋಡಿ..!...
undefined
ಜಿಯೋ ತನ್ನ ಬಳಕೆದಾರರಿಗೆ ಈ ಬಾರಿ ಐಪಿಎಲ್ ಕ್ರಿಕೆಟ್ ಟೂರ್ನಿಯ ಸಂಭ್ರಮವನ್ನು ಹೆಚ್ಚು ಮಾಡುವ ಸಲುವಾಗಿ ಹೊಸ ಮತ್ತು ಆಕರ್ಷಕವಾಗಿ ಅನುಭವವನ್ನು ನೀಡಲು ಪ್ರಶಸ್ತಿ ವಿಜೇತ ‘ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್’ ಅನ್ನು ಆರಂಭಿಸಿದೆ.
ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ನಲ್ಲಿ ಆಡುವ ಮೂಲಕ ಜಿಯೋ ಬಳಕೆದಾರರು ಅತ್ಯಾಕರ್ಷಕ ಬಹುಮಾನಗಳನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಪಂದ್ಯದ ಆರಂಭಕ್ಕೂ ಮುನ್ನವೇ ನಡೆಯುವ ಪ್ರಶ್ನೆಗಳಿಗೆ ಉತ್ತರಿಸಬಹುದು, ಪೋಲ್ಸ್, ರಸಪ್ರಶ್ನೆಗಳು ಮತ್ತು ನಿಮ್ಮ ಮೆಚ್ಚಿನ ತಂಡಕ್ಕೆ ‘ಸ್ಟಿಕ್ಕರ್ ಚಾಟ್’ ಮೂಲಕ ಮೆರಗು ನೀಡಿ ಮತ್ತು ಸ್ಕೋರ್‌ಗಳು, ಪಂದ್ಯದ ವೇಳಾಪಟ್ಟಿಗಳು, ಫಲಿತಾಂಶಗಳು ಮತ್ತು ಹೆಚ್ಚಿನವುಗಳನ್ನು ಬಳಕೆ ಮಾಡಬಹುದಾಗಿದೆ.
‘ಡೈಲಿ ರಿವಾರ್ಡ್ಸ್’ ಮೂಲಕ ಭಾಗವಹಿಸುವವರು ಪ್ರತಿದಿನ ಬಹುಮಾನಗಳನ್ನು ಗೆಲ್ಲಬಹುದು ಮತ್ತು ‘ದೈನಂದಿನ ಸವಾಲುಗಳನ್ನು’ ಪೂರ್ಣಗೊಳಿಸಿದ ನಂತರ ಬಂಪರ್ ಬಹುಮಾನವನ್ನು ತಮ್ಮದಾಗಿಸಿಕೊಳ್ಳಬಹುದು. ಪಂದ್ಯ ಪ್ರಾರಂಭವಾಗುವ ಮೊದಲು, ದೈನಂದಿನ ಸವಾಲುಗಳ ವಿಭಾಗದ ಅಡಿಯಲ್ಲಿ ಬಳಕೆದಾರರಿಗೆ ಬಂಪರ್ ಪ್ರಶಸ್ತಿ ಟೈಲ್ ಅನ್ನು ಪ್ರದರ್ಶಿಸಲಾಗುತ್ತದೆ.
ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಆಟವನ್ನು ಮೈಜಿಯೊ ಅಪ್ಲಿಕೇಶನ್‌ನಲ್ಲಿರುವ ಜಿಯೋ ಎನ್ಗೇಜ್ ವಿಭಾಗದಲ್ಲಿ ಪ್ರವೇಶಿಸಬಹುದು, ಇದನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಜಿಯೋ ಬಳಕೆದಾರರು ಮತ್ತು ಜಿಯೋ ಅಲ್ಲದ ಬಳಕೆದಾರರು ಈ ಕ್ರಿಕೆಟ್ ಋತುವಿನಲ್ಲಿ ಆಟವನ್ನು ಆಡಬಹುದು ಮತ್ತು ಬಹುಮಾನ ಗೆಲ್ಲಬಹುದು.