ಬೆಂಗಳೂರು(ಸೆ.22): ಪೋಸ್ಟ್ ಪೇಯ್ಡ್ ಸೇವೆಗಳ ವಿಭಾಗವನ್ನು ಪರಿವರ್ತಿಸುವ ಅನ್ವೇಷಣೆಯಲ್ಲಿ ಜಿಯೋ ಹೊಸ ಯೋಜನೆಯನ್ನು ಆರಂಭಿಸಿದೆ. ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಹಿಂದೆಂದೂ ಕೇಳದಂತಹ ಆಫರ್‍ಗಳೊಂದಿಗೆ ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಅನ್ನು ಪರಿಚಯಿಸುತ್ತಿದೆ. ಇದರಲ್ಲಿ ಸೂಪರ್ ಸೇವೆಗಳನ್ನು ಒದಗಿಸಲಿದ್ದು, ಸಂಪರ್ಕ, ಮನರಂಜನೆ ಅನುಭವವನ್ನು ಈ ಆಫರ್ ನೀಡಲಿದೆ.
IPL ಜೊತೆಗೆ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್: ಆಡಿ ಬಹುಮಾನ ಗೆಲ್ಲಿ!
undefined
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಜಿಯೋ ನಿರ್ದೇಶಕ ಶ್ರೀ ಆಕಾಶ್ ಅಂಬಾನಿ, “ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಅನ್ನು ಪರಿಚಯಿಸಲು ಇದು ಸೂಕ್ತ ಸಮಯ. ಪ್ರಿಪೇಯ್ಡ್ ಸ್ಮಾರ್ಟ್ ಫೋನ್ ವಿಭಾಗದಲ್ಲಿ ಸುಮಾರು 400 ಮಿಲಿಯನ್ ತೃಪ್ತಿಕರ ಗ್ರಾಹಕರ ವಿಶ್ವಾಸವನ್ನು ಗಳಿಸಿದ ನಂತರ, ನಮ್ಮ ಗ್ರಾಹಕರ ಗೀಳನ್ನು ಪೋಸ್ಟ್ ಪೇಯ್ಡ್ ವಿಭಾಗಕ್ಕೆ ವಿಸ್ತರಿಸಲು ನಾವು ಬಯಸುತ್ತೇವೆ ಎಂದಿದ್ದಾರೆ.
ಅನ್‌ಲಿಮಿಟೆಡ್ ಡಾಟಾ, 30 ದಿನ ಉಚಿತ ಟ್ರಯಲ್; ಭರ್ಜರಿ ಆಫರ್ ಘೋಷಿಸಿದ ಜಿಯೋಫೈಬರ್
ಪ್ರತಿ ಪೋಸ್ಟ್ ಪೇಯ್ಡ್ ಗ್ರಾಹಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಅನ್ನು ಸೂಕ್ಷ್ಮವಾಗಿ ವಿನ್ಯಾಸಗೊಳಿಸಲಾಗಿದೆ. ಇದು ವಿಶ್ವಾಸಾರ್ಹ ಮತ್ತು ಉತ್ತಮ-ಗುಣಮಟ್ಟದ ಸಂಪರ್ಕ, ಮಿತಿಯಿಲ್ಲದ ಪ್ರೀಮಿಯಂ ಮನರಂಜನೆ, ತಡೆರಹಿತ ಮತ್ತು ಕೈಗೆಟುಕುವ ಅಂತರರಾಷ್ಟ್ರೀಯ ರೋಮಿಂಗ್, ಅತ್ಯಾಧುನಿಕ ನವೀನ ವೈಶಿಷ್ಟ್ಯಗಳು ಮತ್ತು ಮುಖ್ಯವಾಗಿ ಗ್ರಾಹಕರ ಅನುಭವವನ್ನು ಅಗತ್ಯವಾಗಿ ಪರಿಗಣಿಸುತ್ತದೆ. ಭಾರತದ ಪ್ರತಿ ಪೋಸ್ಟ್ ಪೇಯ್ಡ್ ಬಳಕೆದಾರರು ಇದನ್ನು ಪೂರ್ಣವಾಗಿ ಬಳಸಿಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್‌ನ ವಿಶೇಷತೆಗಳು:
ಎಂಟರ್ಟೈನ್ಮೆಂಟ್ ಪ್ಲಸ್:
ಈ ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ಪಡೆದುಕೊಳ್ಳುವವರಿಗೆ ನೆಟ್ ಫ್ಲಿಕ್ಸ್ , ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ + ಹಾಟ್ ಸ್ಟಾರ್‌ಗೆ ಚಂದಾದಾರಿಕೆ ಉಚಿತವಾಗಿ ದೊರೆಯಲಿದೆ. 650+ ಲೈವ್ ಟಿವಿ ಚಾನೆಲ್‌ಗಳು, ವೀಡಿಯೊ ಕಂಟೆಂಟ್, 5 ಕೋಟಿ ಹಾಡುಗಳು, 300+ ನ್ಯೂಸ್ ಪೇಪರ್ಗಳೊಂದಿಗೆ ಜಿಯೋ ಅಪ್ಲಿಕೇಶನ್‌ಗಳನ್ನು ಉಚಿತವಾಗಿ ಬಳಸುವ ಅವಕಾಶ ದೊರೆಯಲಿದೆ.
ಫೀಚರ್ ಪ್ಲಸ್:
ರೂ. 250ಕ್ಕೆ ದೊರೆಯುವ ಸಂಪರ್ಕದಲ್ಲಿ ನಿಮ್ಮ ಸಂಪೂರ್ಣ ಕುಟುಂಬಕ್ಕಾಗಿ ಕುಟುಂಬ ಯೋಜನೆ ದೊರೆಯಲಿದೆ. ಡಾಟಾ ರೋಲೊವರ್ 500 ಜಿಬಿ ವರೆಗೆ ಸಿಗಲಿದ್ದು, ಉಚಿತವಾಗಿ ಭಾರತ ಮತ್ತು ವಿದೇಶದಲ್ಲಿ ವೈಫೈ-ಕರೆ ಮಾಡಬಹುದಾಗಿದೆ.
ಇಂಟರ್ನ್ಯಾಷನಲ್ ಪ್ಲಸ್:
ವಿದೇಶಗಳಿಗೆ ಪ್ರಯಾಣಿಸುವ ಭಾರತೀಯ ಪ್ರಯಾಣಿಕರಿಗೆ ಮೊದಲ-ಫ್ಲೈಟ್ ಸಂಪರ್ಕವನ್ನು ನೀಡಲಿದೆ ಈ ಪ್ಲಾನ್ನಲ್ಲಿ ಜಿಯೋ ನೀಡಲಿದೆ. USA ಮತ್ತು UAE ಗಳಿಗೆ ಉಚಿತ ಇಂಟರ್ನ್ಯಾಷನಲ್ ರೋಮಿಂಗ್ ಸೇವೆ ದೊರೆಯಲಿದೆ. ಭಾರತದಲ್ಲಿ ಮತ್ತು ಇಂಟರ್ನ್ಯಾಷನಲ್ ರೋಮಿಂಗ್‌ನಲ್ಲಿ ವೈಫೈ ಕರೆ ಮಾಡುವುದರ ಜೊತೆಗೆ ಅಂತರರಾಷ್ಟ್ರೀಯ ಕರೆ (ISD)ಗಳು ಕೇವಲ 50 ಪೈಸೆಯಿಂದ ಶುರುವಾಗಲಿದೆ.
ಎಕ್ಸ್ಪೀರಿಯನ್ಸ್ ಪ್ಲಸ್;
JIO ನಲ್ಲಿ ಅಸ್ತಿತ್ವದಲ್ಲಿರುವ ಕ್ರೆಡಿಟ್ ಮಿತಿಯನ್ನು ಮುಂದುವರೆಸಬಹುದು, ಅದೇ ಸಂಖ್ಯೆ, ಡೌನ್‌ಟೈಮ್ ಇಲ್ಲದೇ (ಎಂಎನ್‌ಪಿ) ಸೇವೆಯನ್ನು ಪಡೆಯಬಹುದು. ಉಚಿತ ಹೋಮ್ ಡೆಲಿವರಿ ಮತ್ತು ಆಕ್ಟೀವೇಷನ್ ನೊಂದಿಗೆ ಪ್ರೀಮಿಯಂ ಕಾಲ್ ಸೆಂಟರ್ ಸೇವೆಯನ್ನು ತಮ್ಮದಾಗಿಸಿಕೊಳ್ಳಬಹುದು.
ಟ್ಯಾರಿಫ್ ಪ್ಲಾನ್
ರೂ.399 ಪ್ಲಾನ್:
ಈ ಪ್ಲಾನ್ನಲ್ಲಿ ಗ್ರಾಹಕರಿಗೆ 75 GB ಡೇಟಾದೊಂದಿಗೆ ಅನ್ಲಿಮಿಟೆಡ್ ಕರೆ ಮಾಡುವ ಮತ್ತು SMS ಕಳುಹಿಸುವ ಅವಕಾಶವು ದೊರೆಯಲಿದೆ. ಎಂಟರ್ಟೈನ್ಮೆಂಟ್ ಪ್ಲಸ್ ಆಯ್ಕೆಯೊಂದಿಗೆ 200GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ.
ರೂ.599 ಪ್ಲಾನ್:
ಈ ಪ್ಲಾನ್ನಲ್ಲಿ ಗ್ರಾಹಕರಿಗೆ 100 GB ಡೇಟಾದೊಂದಿಗೆ ಅನ್ಲಿಮಿಟೆಡ್ ಕರೆ ಮಾಡುವ ಮತ್ತು SMS ಕಳುಹಿಸುವ ಅವಕಾಶವು ದೊರೆಯಲಿದೆ. ಎಂಟರ್ಟೈನ್ಮೆಂಟ್ ಪ್ಲಸ್ ಆಯ್ಕೆಯೊಂದಿಗೆ 200GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ. ಇದಲ್ಲದೇ ಹೆಚ್ಚುವರಿಯಾಗಿ ಒಂದು ಹೆಚ್ಚುವರಿ ಸಿಮ್ಕಾರ್ಡ್ ಫ್ಯಾಮಿಲಿ ಪ್ಲಾನ್ನೊಂದಿಗೆ ಲಭ್ಯವಾಗಲಿದೆ.
ರೂ.799 ಪ್ಲಾನ್:
ಈ ಪ್ಲಾನ್ನಲ್ಲಿ ಗ್ರಾಹಕರಿಗೆ 150 GB ಡೇಟಾದೊಂದಿಗೆ ಅನ್ಲಿಮಿಟೆಡ್ ಕರೆ ಮಾಡುವ ಮತ್ತು SMS ಕಳುಹಿಸುವ ಅವಕಾಶವು ದೊರೆಯಲಿದೆ. ಎಂಟರ್ಟೈನ್ಮೆಂಟ್ ಪ್ಲಸ್ ಆಯ್ಕೆಯೊಂದಿಗೆ 200GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ. ಇದಲ್ಲದೇ ಹೆಚ್ಚುವರಿಯಾಗಿ ಎರಡು ಹೆಚ್ಚುವರಿ ಸಿಮ್ಕಾರ್ಡ್ ಫ್ಯಾಮಿಲಿ ಪ್ಲಾನ್ನೊಂದಿಗೆ ಲಭ್ಯವಾಗಲಿದೆ.
ರೂ.999 ಪ್ಲಾನ್:
ಈ ಪ್ಲಾನ್ನಲ್ಲಿ ಗ್ರಾಹಕರಿಗೆ 200 GB ಡೇಟಾದೊಂದಿಗೆ ಅನ್ಲಿಮಿಟೆಡ್ ಕರೆ ಮಾಡುವ ಮತ್ತು SMS ಕಳುಹಿಸುವ ಅವಕಾಶವು ದೊರೆಯಲಿದೆ. ಎಂಟರ್ಟೈನ್ಮೆಂಟ್ ಪ್ಲಸ್ ಆಯ್ಕೆಯೊಂದಿಗೆ 500GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ. ಇದಲ್ಲದೇ ಹೆಚ್ಚುವರಿಯಾಗಿ ಮೂರು ಹೆಚ್ಚುವರಿ ಸಿಮ್ಕಾರ್ಡ್ ಫ್ಯಾಮಿಲಿ ಪ್ಲಾನ್ನೊಂದಿಗೆ ಲಭ್ಯವಾಗಲಿದೆ.
ರೂ.1499 ಪ್ಲಾನ್:
ಈ ಪ್ಲಾನ್ನಲ್ಲಿ ಗ್ರಾಹಕರಿಗೆ 300 GB ಡೇಟಾದೊಂದಿಗೆ ಅನ್ಲಿಮಿಟೆಡ್ ಕರೆ ಮಾಡುವ ಮತ್ತು SMS ಕಳುಹಿಸುವ ಅವಕಾಶವು ದೊರೆಯಲಿದೆ. ಎಂಟರ್ಟೈನ್ಮೆಂಟ್ ಪ್ಲಸ್ ಆಯ್ಕೆಯೊಂದಿಗೆ 500GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ. ಅಲ್ಲದೇ USA-UAE ಕರೆಗಳಿಗೆ ಅನ್ಲಿಮಿಟೆಡ್ ಡೇಟಾ ಮತ್ತು ವಾಯ್ಸ್ ದೊರೆಯಲಿದೆ.
ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಪಡೆಯುವುದು ಹೇಗೆ:
ಪೋಸ್ಟ್ ಪೇಯ್ಡ್ ಬಳಕೆದಾರರು ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಗೆ ಸೇರಲು ಬಯಸಿದರೆ:
ಹಂತ 1: ನಿಮ್ಮ ಅಸ್ತಿತ್ವದಲ್ಲಿರುವ ಆಪರೇಟರ್‌ನ ಕ್ರೆಡಿಟ್ ಮಿತಿಯನ್ನು ಮುಂದುವರಿಸಬಹುದು - WHATSAPP ನಲ್ಲಿ 88-501-88-501 ಗೆ ‘HI’ ಕಳುಹಿಸಿಸುವ ಮೂಲಕ ನಿಮ್ಮ ಕ್ರೆಡಿಟ್ ಮಿತಿಯನ್ನು ಸರಳವಾಗಿ ಮುಂದುವರೆಸಬಹುದು.
ಹಂತ 2: ನಿಮಗಾಗಿ ಮತ್ತು ನಿಮ್ಮ ಕುಟುಂಬ ಸದಸ್ಯರಿಗಾಗಿ ವಿತರಿಸಲಾದ ನಿಮ್ಮ ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಸಿಮ್ ಅನ್ನು ಮನೆಗೆ ಪಡೆಯಲುಅಧೀಕೃತ ವೆಬ್‌ಸೈಟ್ ಅಥವಾ ಜಿಯೋ ಡಿಜಿಟಲ್ ಸ್ಟೋರ್‌ಗೆ ಭೇಟಿ ನೀಡಿ
ಹಂತ 3: ಮೈಜಿಯೊ ಅಪ್ಲಿಕೇಶನ್‌ನಲ್ಲಿ ನಿಮ್ಮ ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಫ್ಯಾಮಿಲಿ ಪ್ಲ್ಯಾನ್‌ಗೆ ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಲಿಂಕ್ ಮಾಡಿ.
ಪ್ರಿಪೇಯ್ಡ್ ಬಳಕೆದಾರರು ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಸೇರಲು ಬಯಸಿದರೆ:
ಹಂತ 1: ನಿಮಗಾಗಿ ಮತ್ತು ನಿಮ್ಮ ಕುಟುಂಬ ಸದಸ್ಯರಿಗಾಗಿ ವಿತರಿಸಲಾದ ನಿಮ್ಮ ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಸಿಮ್ ಮನೆ ಪಡೆಯಲು ಅಧೀಕೃತ ವೆಬ್‌ಸೈಟ್ ಅಥವಾ ಜಿಯೋ ಡಿಜಿಟಲ್ ಸ್ಟೋರ್‌ಗೆ ಭೇಟಿ ನೀಡಿ
ಹಂತ 2: 100% ಮರುಪಾವತಿಸಬಹುದಾದ ಠೇವಣಿಯೊಂದಿಗೆ ನಿಮ್ಮ ಕ್ರೆಡಿಟ್ ಮಿತಿಯನ್ನು ಅನ್ಲಾಕ್ ಮಾಡಿ (ಅನ್ವಯವಾಗಿದ್ದರೆ)
ಹಂತ 3: ಮೈಜಿಯೊ ಅಪ್ಲಿಕೇಶನ್‌ನಲ್ಲಿ ನಿಮ್ಮ ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಫ್ಯಾಮಿಲಿ ಪ್ಲ್ಯಾನ್‌ಗೆ ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಲಿಂಕ್ ಮಾಡಿ.