ಟ್ರಾಯ್ ವರದಿ ಪ್ರಕಟ; 4G ಡೌನ್ಲೋಡ್ ವೇಗದಲ್ಲಿ ಜಿಯೋಗೆ ಮೊದಲ ಸ್ಥಾನ!

By Suvarna News  |  First Published Jun 17, 2021, 10:03 PM IST
  • ಡನ್ಲೋಡ್ ವೇಗದಲ್ಲಿ ಜಿಯೋಗೆ ಮತ್ತೆ ಮೊದಲ ಸ್ಥಾನ
  • ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ವರದಿ ಪ್ರಕಟ
  • ಅಪ್‌ಲೋಡ್‌ನಲ್ಲಿ ವೋಡಾಫೋನ್‌‍ಗೆ ಮೊದಲ ಸ್ಥಾನ

ನವದೆಹಲಿ(ಜೂ.16): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಪ್ರತಿಯೊಬ್ಬರಿಗೂ ಇಂಟರ್ನೆಟ್ ವೇಗ ಅತೀ ಮುಖ್ಯವಾಗಿದೆ. ಭಾರತದಲ್ಲಿ ಹಲವು ನೆಟ್‌ವರ್ಕ್ ಡೇಟಾ ನೀಡುತ್ತಿದೆ. ಇದರಲ್ಲಿ ರಿಲಯನ್ಸ್ ಜಿಯೋ ಪ್ರತಿ ಸೆಕೆಂಡಿಗೆ ಸರಾಸರಿ 20.7 ಮೆಗಾಬೈಟ್ ಡೌನ್‌ಲೋಡ್ ವೇಗ ನೀಡೋ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. 

5 ಹೊಸ ಪ್ರಿಪೇಯ್ಡ್ ಆಫರ್ ಘೋಷಿಸಿದ ರಿಲಯನ್ಸ್ ಜಿಯೋ!

Tap to resize

Latest Videos

ಮೇ ತಿಂಗಳ ಪಟ್ಟಿಯನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಬಿಡುಗಡೆ ಮಾಡಿದೆ. ಡೌನ್ಲೋಡ್‌ನಲ್ಲಿ ಜಿಯೋ ಮೊದಲ ಸ್ಥಾನ ಪಡೆದಿದ್ದರೆ,  ವೊಡಾಫೋನ್ ಐಡಿಯಾ 6.7 ಎಂಬಿಪಿಎಸ್ ಡೇಟಾ ವೇಗದೊಂದಿಗೆ ಅಪ್‌ಲೋಡ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದೆ.

ರಿಲಯನ್ಸ್ ಜಿಯೋದ 4ಜಿ ನೆಟ್‌ವರ್ಕ್ ವೇಗವು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಅದು ತನ್ನ ಅತಿ ಸಮೀಪದ ಪ್ರತಿಸ್ಪರ್ಧಿ ವೊಡಾಫೋನ್ ಐಡಿಯಾಕ್ಕಿಂತಲೂ ಮೂರು ಪಟ್ಟು ಅಧಿಕವಾಗಿದೆ. ವೊಡಾಫೋನ್ ಐಡಿಯಾ 6.3 ಎಂಬಿಪಿಎಸ್ ಸರಾಸರಿ ಡೌನ್‌ಲೋಡ್ ವೇಗವನ್ನು ಹೊಂದಿದೆ.

2018ರ ಆಗಸ್ಟ್‌ನಲ್ಲಿ ವೊಡಾಫೋನ್ ಮತ್ತು ಐಡಿಯಾಗಳು ವಿಲೀನಗೊಂಡ ಬಳಿಕ ಇದೇ ಮೊದಲ ಬಾರಿಗೆ ಟ್ರಾಯ್ ಈ ಕಂಪೆನಿಗಳ ನೆಟ್‌ವರ್ಕ್ ವೇಗವನ್ನು ಜತೆಗೂಡಿಸಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಜೂನ್ 8ರಂದು ಪ್ರಕಟಿಸಿರುವ ವರದಿ ಪ್ರಕಾರ, ಸರಾಸರಿ 4.7 ಎಂಬಿಪಿಎಸ್ ವೇಗದೊಂದಿಗೆ ಏರ್‌ಟೆಲ್ ಅತ್ಯಂತ ಕಡಿಮೆ ವೇಗದ ಸ್ಥಾನ ಪಡೆದುಕೊಂಡಿದೆ. ಡೌನ್‌ಲೋಡ್ ವೇಗವು ಗ್ರಾಹಕರು ಅಂತರ್ಜಾಲದಿಂದ ಮಾಹಿತಿಗಳನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಅಪ್‌ಲೋಡ್ ವೇಗವು ತಮ್ಮ ಸಂಪರ್ಕದಲ್ಲಿರುವವರಿಗೆ ಚಿತ್ರಗಳು ಅಥವಾ ವಿಡಿಯೋಗಳನ್ನು ರವಾನಿಸಲು ಸಹಾಯ ಮಾಡುತ್ತದೆ.

ಸಂಗೀತ ಮತ್ತು ಆಡಿಯೊ ಮನರಂಜನೆ ಜಿಯೋ ಸಾವನ್ ಟಿವಿ ಬಿಡುಗಡೆ!

ಟ್ರಾಯ್ ವರದಿ ಪ್ರಕಾರ, ವೊಡಾಫೋನ್ ಐಡಿಯಾ ಮೇ ತಿಂಗಳಲ್ಲಿ ಸರಾಸರಿ 6.3 ಎಂಬಿಪಿಎಸ್ ಅಪ್‌ಲೋಡ್ ವೇಗ ಹೊಂದಿತ್ತು. ರಿಲಯನ್ಸ್ ಜಿಯೋ 4.2 ಎಂಬಿಪಿಎಸ್‌ನೊಂದಿಗೆ ಎರಡನೆಯ ಸ್ಥಾನದಲ್ಲಿದ್ದರೆ, ಭಾರ್ತಿ ಏರ್‌ಟೆಲ್ 3.6 ಎಂಬಿಪಿಎಸ್ ಅಪ್‌ಲೋಡ್ ವೇಗ ಹೊಂದಿದೆ.

ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್‌ಎನ್‌ಎಲ್ ಆಯ್ದ ಪ್ರದೇಶಗಳಲ್ಲಿ 4ಜಿ ಸೇವೆ ಆರಂಭಿಸಿದ್ದರೂ, ಅದರ ನೆಟ್‌ವರ್ಕ್‌ ವೇಗವನ್ನು ಟ್ರಾಯ್ ಪಟ್ಟಿಯಲ್ಲಿ ನಮೂದಿಸಿಲ್ಲ. ತನ್ನ ಮೈ ಸ್ಪೀಡ್ ಆಪ್‌ನಲ್ಲಿನ ರಿಯಲ್ ಟೈಮ್ ಆಧಾರದಲ್ಲಿ ಭಾರತದಾದ್ಯಂತ ಸಂಗ್ರಹಿಸಿದ ದತ್ತಾಂಶಗಳ ಲೆಕ್ಕಾಚಾರದಲ್ಲಿ ಟ್ರಾಯ್, ಸರಾಸರಿ ವೇಗವನ್ನು ನಿರ್ಧರಿಸುತ್ತದೆ.

click me!