ಆಗಸ್ಟ್ 3ಕ್ಕೆ ಹಲವು ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳು ಲಾಂಚ್?

By Suvarna News  |  First Published Jun 14, 2021, 5:55 PM IST

ದಕ್ಷಿಣ ಕೊರಿಯಾ ಮೂಲದ ಟೆಕ್ ದೈತ್ಯ ಸ್ಯಾಮ್ಸಂಗ್ ಕಂಪನಿಯು ಆಗಸ್ಟ್ ಮೂರರಂದು ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಕಾರ್ಯಕ್ರಮವನ್ನು ನಡೆಸಲಿದ್ದು, ಈ ವೇಳೆ ಫೋಲ್ಡೇಬಲ್ ಮತ್ತು ಫ್ಲಿಪ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇವುಗಳ ಜತೆಗೆ ಸ್ಮಾರ್ಟ್‌ವಾಚ್‌ಗಳೂ ಬಿಡುಗಡೆಯಾಗಲಿವೆ.


ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳ ಫ್ಯಾನ್ಸ್‌ಗೆ ಇದೊಂದು ಶುಭ ಸುದ್ದಿ. ಸ್ಯಾಮ್ಸಂಗ್ ಆಗಸ್ಟ್ 3ರಂದು ಹಲವು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಿದೆ! ಈ ಪೈಕಿ ಸ್ಯಾಮ್ಸಂಗ್ ಫೋಲ್ಡ್ 3 ಫೋನ್ ಗಮನ ಸೆಳೆಯುವಂತಿದೆ.

ಸೋರಿಕೆಯಾದ ಮಾಹಿತಿಯ ಪ್ರಕಾರ, ಮುಂಬರುವ ಆಗಸ್ಟ್ 3ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಫೋಲ್ಡ್ ಮಾಡಬಹುದಾದ, ಸ್ಯಾಮ್ಸಂಗ್ ಗ್ಯಾಲಕ್ಸಿ ಜೆಡ್ 3, ಗ್ಯಾಲಕ್ಸಿ ಜೆಡ್ ಫ್ಲಿಪ್ 3, ಗ್ಯಾಲಕ್ಸಿ ವಾಚ್ 4 ಮತ್ತು ಗ್ಯಾಲಕ್ಸಿ ವಾಚ್ ಆಕ್ಟಿವ್ 4 ಸಾಧನಗಳನ್ನು ಜಗತ್ತಿಗೆ ಅನಾವರಣಗೊಳ್ಳಲಿವೆ. ಗ್ಯಾಲಕ್ಸಿ ಎಸ್21 ಸೀರೀಸ್ ಅನಾವರಣಗೊಂಡ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಕಾರ್ಯಕ್ರಮದಲ್ಲಿ ಈ ವರ್ಷಕ್ಕೆ ಕಂಪನಿ ಫೋಲ್ಡೇಬಲ್ ಫೋನ್‌ಗಳನ್ನು ಪರಿಚಯಿಸಿರಲಿಲ್ಲ. 

Tap to resize

Latest Videos

undefined

ಒನ್‌ಪ್ಲಸ್ ನಾರ್ಡ್ ಸಿಇ 5ಜಿ ಬಿಡುಗಡೆ, ಬೆಲೆ 22,999 ರೂ.ನಿಂದ ಆರಂಭ

ಹೀಗಿದ್ದಾಗ್ಯೂ ಮುಂಬರುವ ಕೆಲವು ತಿಂಗಳಲ್ಲಿ ಕಂಪನಿಯು ಹೊಸ ಫೋಲ್ಡೇಬಲ್ ಫೋನ್‌ಗಳನ್ನು ಮತ್ತು  ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿತ್ತು. ಇದೀಗ, ಮುಂಬರುವ ದಿನಗಳಲ್ಲಿ ನಡೆಯುವ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಕಾರ್ಯಕ್ರಮದಲ್ಲಿ ಈ ಸಾಧನಗಳನ್ನು ಜಗತ್ತಿಗೆ ತೆರೆದುಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. 

ಕೆಲವು ಟಿಪ್ಸಟರ್‌ಗಳ ಪ್ರಕಾರ, ಸ್ಯಾಮ್ಸಂಗ್ ತನ್ನ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಕಾರ್ಯಕ್ರಮವನ್ನು ಆಗಸ್ಟ್ 3ರಂದು ನಡೆಸಲಿದೆ. ಈ ಕಾರ್ಯಕ್ರಮದಲ್ಲಿ ಗ್ಯಾಲಕ್ಸಿ ಜೆಡ್ ಫೋಲ್ಡ್ 3, ಗ್ಯಾಲಕ್ಸಿ ಜೆಡ್ ಫ್ಲಿಪ್ 3 ಫೋಲ್ಡೇಬಲ್ ಫೋನ್‌ಗಳು ಬಿಡುಗಡೆಯಾಗಲಿವೆ. ಈ ವಿಶಿಷ್ಟ ಸ್ಮಾರ್ಟ್‌ಫೋನ್‌ಗಳ ಜತೆಗೆ ಕಂಪನಿಯು ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್ 4, ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್ ಆಕ್ಟಿವ್ 4 ಕೂಡಾ ಲಾಂಚ್ ಆಗಲಿವೆ. ಈ ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್ 4 42 ಎಂಎಂ ಮತ್ತು 46 ಎಂಎಂ ಗಾತ್ರ ಹೊಂದಿದ್ದರೆ, ಗ್ಯಾಲಕ್ಸಿ ವಾಚ್ 4, 40 ಎಂಎಂ ಮತ್ತು 44 ಎಂಎಂನಲ್ಲಿರಲಿದೆ ಎನ್ನಲಾಗುತ್ತಿದೆ.

ಈ ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್‌ 4 ಸೀರೀಸ್‌ನಲ್ಲಿ ಬಿಡುಗಡೆಯಾದ ವಾರದಲ್ಲೇ ಸಾಗಾಟವನ್ನು ಆರಂಭಿಸಲಿದೆ. ಅದೇ ರೀತಿ, ಗ್ಯಾಲಕ್ಸಿ ಜೆಡ್ ಫೋಲ್ಡ್ 3 ಮತ್ತು ಗ್ಯಾಲಕ್ಸಿ ಜೆಡ್ ಫ್ಲಿಪ್ 3 ಸಾಧನಗಳನ್ನು ಕಂಪನಿಯ ಆಗಸ್ಟ್‌ನ ಮೂರನೇ ವಾರ ಅಂದರೆ, 27ರಿಂದ ಆರಂಭಿಸಬಹುದು ಎಂದು ಹೇಳಲಾಗುತ್ತಿದೆ.

ಭಾರತೀಯ ಮಾರುಕಟ್ಟೆಗೆ OnePlus TV U1S ಟಿವಿ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

ಇನ್ನೂ ವಿಶೇಷ ಎಂದರೆ, ಸ್ಯಾಮ್ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ 3 ಸ್ಮಾರ್ಟ್‌ಫೋನ್, ಅಂಡರ್ ಡಿಸ್‌ಪ್ಲೇ ಇರುವ ಮೊದಲ ಕ್ಯಾಮೆರಾ ಫೋನ್ ಆಗಿರುವ ಸಾಧ್ಯತೆ ಇದೆ. ಬಹುಶಃ ಮುಂಬರುವ ಎಲ್ಲ ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ಗಳು ಹೈಬ್ರಿಡ್ ಎಸ್‌ ಪೆನ್‌ಗೆ ಸಪೋರ್ಟ್ ಮಾಡುವ ಸಾಧ್ಯತೆಗಳಿವೆ. ಹೊಸ ಸ್ಟೈಲಸ್‌ಗೆ ಪರದೆಯ ಹಾನಿಯಾಗದಂತೆ ತಡೆಯಲು ತೀಕ್ಷ್ಣವಾದ ಅಂಚುಗಳು ಇರುವುದಿಲ್ಲ ಎಂದು ಹೇಳಲಾಗುತ್ತಿದೆ. ಡಿಸ್‌ಪ್ಲೇ ರಕ್ಷಣೆ ಮತ್ತು ಅದರ ಮೇಲಿನ ಗೀಚುಗಳು ಬೀಳುವುದನ್ನ ತಡೆಯುವುದಕ್ಕೆ ಕಂಪನಿಯು ಕಾರ್ನಿಂಗ್ ಗೊರಿಲ್ಲ ಗ್ಲಾಸ್ ಬಳಸಲಿದೆ ಎನ್ನಲಾಗುತ್ತಿದೆ. 

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ ಮೂರು ಬಣ್ಣಗಳಲ್ಲಿ ಗ್ರಾಹಕರಿಗೆ ಸಿಗುವ ಸಾಧ್ಯತೆಗಳಿವೆ. ವಿಶೇಷವಾಗಿ ಕಪ್ಪು, ಡಾರ್ಕ್ ಗ್ರೀನ್ ಮತ್ತು ಸಿಲ್ವರ್ ಬಣ್ಣಗಳಲ್ಲಿ ಈ ಸ್ಮಾರ್ಟ್‌ಫೋನ್ ಸಿಗಬಹುದು. ಜೊತೆಗೆ, ಈ ಸ್ಮಾರ್ಟ್‌ಫೋನ್‌ನಲ್ಲಿ  4,275 ಎಂಎಎಚ್ ಅಥವಾ 4,380 ಎಂಎಎಚ್ ಬ್ಯಾಟರಿ ಇರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎನ್ನಲಾಗುತ್ತಿದೆ.

ಆಗಸ್ಟ್ 3ರಂದು ನಡೆಯುವ ಸ್ಯಾಮ್ಸಂಗ್ ಅನ್‌ಪ್ಯಾಕ್ಡ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕಂಪನಿಯು ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಈಗ ಗೊತ್ತಾಗಿರುವ ಮಾಹಿತಿ ಎಲ್ಲವೂ ಸೋರಿಕೆಯಿಂದ ತಿಳಿದು ಬಂದಿರುವಂಥದ್ದು. ಹಾಗಿದ್ದೂ ಕಂಪನಿಯು ಹಲವು ಮಾಡೆಲ್‌ಗಳನ್ನು ಲಾಂಚ್ ಮಾಡುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. 

ಕನ್ನಡ, ಹಿಂದಿ ಬಳಿಕ ಬಂಗಾಳಿ, ಪಂಜಾಬಿ, ತೆಲುಗು ಭಾಷೆ ಸೇರಿಸಿದ ಸ್ನ್ಯಾಪ್‌ಚಾಟ್

ದಕ್ಷಿಣ ಕೊರಿಯಾ ಮೂಲದ ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆ ಮಾತ್ರವಲ್ಲದೇ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಉತ್ಪಾದಿಸಿ, ಮಾರಾಟ ಮಾಡುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಉತ್ಪನ್ನಗಳಿಗೆ ಹೆಚ್ಚಿನ ಮಾನ್ಯತೆ ಇದೆ ಮತ್ತು ಜನಪ್ರಿಯತೆಯೂ ಇದೆ.

click me!