ಬಿಎಸ್‌ಎನ್‌ಎಲ್‌ನ ಬೆಳವಣಿಗೆಯನ್ನು ತಡೆಯಲು, ಜಿಯೋ 2 ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿದೆ: ಈ ಪ್ಲಾನ್‌ಗಳು ಅನಿಯಮಿತ ಕರೆಗಳು, ದೈನಂದಿನ ಡೇಟಾ ಮತ್ತು ಹೆಚ್ಚುವರಿ ಪ್ರಯೋಜನಗಳನ್ನು ಒಳಗೊಂಡಿವೆ.
- ಕೈ ಕೈ ಹಿಸುಕಿಕೊಂಡ್ರು ಪೋರ್ಟ್ ಆದವರು!
ಮುಂಬೈ: 20 ಲಕ್ಷಕ್ಕೂ ಅಧಿಕ ಬಳಕೆದಾರರನ್ನು ಕಳೆದುಕೊಂಡ ಬಳಿಕ ಟೆಲಿಕಾಂ ಲೋಕದ ದಿಗ್ಗಜ ಕಂಪನಿ ರಿಲಯನ್ಸ್ ಜಿಯೋ ಅಖಾಡಕ್ಕೆ ಧುಮುಕಿದೆ. ಕಳೆದ ನಾಲ್ಕೈದು ತಿಂಗಳಿನಿಂದ ವೇಗವಾಗಿ ಬೆಳೆಯುತ್ತಿರುವ ಬಿಎಸ್‌ಎನ್‌ಎಲ್‌ಗೆ ಮೂಗುದಾರ ಹಾಕಲು ರಿಲಯನ್ಸ್ ಜಿಯೋ ಎರಡು ಹೊಸ ಆಫರ್ ಪರಿಚಯಿಸಿದೆ. ಈ ಎರಡು ಆಫರ್‌ಗಳ ಬಳಕೆದಾರರ ಪಾಕೆಟ್‌ಗೆ ಕತ್ತರಿ ಹಾಕೋದನ್ನು ತಡೆಯಲಿದೆ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. 90 ದಿನದ 899 ರೂಪಾಯಿ ಮತ್ತು 98 ದಿನದ 999 ರೂಪಾಯಿ ಎರಡು ಪ್ರಿಪೇಯ್ಡ್ ಮೂಲಕ ಗ್ರಾಹಕರನ್ನು ಉಳಿಸಿಕೊಳ್ಳುವ ಮತ್ತು ಹೊಸಬರನ್ನು ಸೆಳೆಯಲು ಮುಕೇಶ್ ಅಂಬಾನಿ ಕಂಪನಿ ಮುಂದಾಗಿದೆ.
Jio 90 Days 899 Rs Plan
ಈ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಗ್ರಾಹಕರು 899 ರೂಪಾಯಿ ರಿಚಾರ್ಜ್ ಮಾಡಿಕೊಂಡರೆ ಯಾವುದೇ ನೆಟ್‌ವರ್ಕ್‌ಗೆ 90 ದಿನಗಳವರೆಗೆ ಅನಿಯಮಿತವಾಗಿ ಕಾಲ್ ಮಾಡಬಹುದು. ಹಾಗೆಯೇ 90 ದಿನಗಳವರೆಗೆ ಪ್ರತಿದಿನ ನಿಮಗೆ 2GB ಡೇಟಾ ಲಭ್ಯವಾಗುತ್ತದೆ. ಇದರೊಂದಿಗೆ ಹೆಚ್ಚುವರಿಯಾಗಿ 20GB ಡೇಟಾವನ್ನು ಉಚಿತವಾಗಿ ರಿಲಯನ್ಸ್ ಜಿಯೋ ಕೊಡುತ್ತಿದೆ. ಉಳಿದಂತೆ ಪ್ರತಿದಿನ 100 ಉಚಿತ SMS, ಜಿಯೋ ಆಪ್, ಜಿಯೋ ಕ್ಲೌಡ್, ಜಿಯೋ ಟಿವಿಗೆ ಉಚಿತವಾಗಿ ಸಬ್‌ಸ್ಕ್ರಿಪ್ಷನ್ ಸಿಗಲಿದೆ. ನಿಯಮಿತವಾಗಿ ನೆಟ್ ಬಳಸೋ ಗ್ರಾಹಕರಿಗೆ ಇದು ಬಜೆಟ್ ಫ್ರೆಂಡ್ಲಿ ಪ್ರಿಪೇಯ್ಡ್ ಪ್ಲಾನ್ ಆಗಿದೆ.
Jio 98 Days 999 Rs Plan
ಇನ್ನು ಜಿಯೋದ ಮತ್ತೊಂದು ಪ್ಲಾನ್ ಬೆಲೆ 999 ರೂಪಾಯಿ ಆಗಿದೆ. ಈ ಆಫರ್‌ನಲ್ಲಿ ಪ್ರತಿದಿನ 2GB ಡೇಟಾ, ಅನ್‌ಲಿಮಿಟೆಡ್ ಕಾಲ್, 100 ಎಸ್ಎಂಎಸ್ ಸಿಗುತ್ತದೆ. ಜಿಯೋ ಕ್ಲೌಡ್, ಜಿಯೋ ಸಿನಿಮಾ (ಸ್ಪೋರ್ಟ್ಸ್ ಮತ್ತು ಮೂವೀಸ್) ಜಿಯೋ ಟಿವಿಯ ಫ್ರೀ ಆಕ್ಸೆಸ್ ಸಿಗುತ್ತದೆ. ಜಿಯೋ ಟಿವಿಯಲ್ಲಿ 800+ ಟಿಬಿ ಚಾನೆಲ್, 100+ ಹೆಚ್‌ಡಿ ಚಾನೆಲ್ ವೀಕ್ಷಣೆ ಮಾಡಬಹುದು.
ಇದನ್ನೂ ಓದಿ: ಜಿಯೋ, ಏರ್‌ಟೆಲ್‌ಗೆ ಮತ್ತೆ ಸವಾಲೆಸೆದ ಬಿಎಸ್ಎನ್‌ಎಲ್; 400 ರೂಪಾಯಿಗೂ ಕಡಿಮೆ ಬೆಲೆಯಲ್ಲಿ 150 ದಿನದ ಪ್ಲಾನ್
ಬಿಎಸ್ಎನ್ಎಲ್ ಅತಿ ಕಡಿಮೆ ಬೆಲೆಯ ಪ್ರಿಪೇಯ್ಡ್ ಪ್ಲಾನ್
ಬಿಎಸ್‌ಎನ್‌ಎಲ್ ಪ್ರಿಪೇಯ್ಡ್ ಬಳಕೆದಾರರಿಗಾಗಿ 1,198 ರೂಪಾಯಿಯಲ್ಲಿ 1 ವರ್ಷದ ಪ್ಲಾನ್ ನೀಡಿದೆ. ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡ ಗ್ರಾಹಕರಿಗೆ ಯಾವುದೇ ನೆಟ್‌ವರ್ಕ್‌ಗೆ 300 ನಿಮಿಷದವರೆಗೆ ಉಚಿತವಾಗಿ ಮಾತನಾಡಬಹುದು. ಪ್ರತಿತಿಂಗಳು 3GB ಡೇಟಾ 3G/4G ನೆಟ್‌ವರ್ಕ್ ಸಿಗಲಿದೆ. ಪ್ರತಿ ತಿಂಗಳು 300 ಉಚಿತ ಎಸ್‌ಎಂಎಸ್ ಸಿಗಲಿದೆ.
ಬಿಎಸ್ಎನ್‌ಎಲ್ ತನ್ನ ಮತ್ತೊಂದು 365 ದಿನದ ವ್ಯಾಲಿಡಿಟಿಯ ಪ್ಲಾನ್ ರೀಚಾರ್ಜ್ ಮೇಲೆ 100 ರೂಪಾಯಿ ಕಡಿಮೆ ಮಾಡಿದ್ದು, ಈ ಆಫರ್ ಕೇವಲ ನವೆಂಬರ್ 7ರವರೆಗೆ ಮಾತ್ರ ಲಭ್ಯವಿರಲಿದೆ. 1999 ರೂಪಾಯಿ ಬದಲಾಗಿ 1899 ರೂಪಾಯಿ ರೀಚಾರ್ಜ್ ಮಾಡಿಕೊಳ್ಳಬೇಕು. ಈ ಆಫರ್‌ನಲ್ಲಿ ಬಳಕೆದಾರರಿಗೆ ಒಟ್ಟು 600GB ಡೇಟಾ, 100 ಉಚಿತ ಎಸ್‌ಎಂಎಸ್ ಮತ್ತು ಅನ್‌ಲಿಮಿಟೆಡ್ ಕಾಲಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ.
ಇದನ್ನೂ ಓದಿ: ಮಾರುಕಟ್ಟೆಗೆ ಬರ್ತಿದೆ ಬಿಎಸ್‌ಎನ್‌ಎಲ್ 5G ಸ್ಮಾರ್ಟ್‌ಫೋನ್: ಏನಿದರ ವಿಶೇಷ? ಬೆಲೆ ಎಷ್ಟು?