ಜಿಯೋ, ಏರ್‌ಟೆಲ್‌ಗೆ ಮತ್ತೆ ಸವಾಲೆಸೆದ ಬಿಎಸ್ಎನ್‌ಎಲ್; 400 ರೂಪಾಯಿಗೂ ಕಡಿಮೆ ಬೆಲೆಯಲ್ಲಿ 150 ದಿನದ ಪ್ಲಾನ್

By Mahmad Rafik  |  First Published Nov 4, 2024, 8:07 PM IST

ಬಿಎಸ್‌ಎನ್‌ಎಲ್ ತನ್ನ ಪ್ರಿಪೇಯ್ಡ್ ಪ್ಲಾನ್‌ನೊಂದಿಗೆ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸವಾಲು ಹಾಕಿದೆ. ಬಿಎಸ್‌ಎನ್‌ಎಲ್ 4G ನೆಟ್‌ವರ್ಕ್ ಅಳವಡಿಕೆ ಮತ್ತು 5G ಸೇವೆಗಳನ್ನು ಪರಿಚಯಿಸುವ ಮೂಲಕ ಬೆಳವಣಿಗೆಯತ್ತ ಸಾಗುತ್ತಿದೆ.


ನವದೆಹಲಿ: ಭಾರತ ಸಂಚಾರ ನಿಗಮ ಲಿಮಿಟೆಡ್ (Bharat Sanchar Nigam Limited) ಮತ್ತೊಮ್ಮೆ ಖಾಸಗಿ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸವಾಲು ಹಾಕಿದೆ. 4G ನೆಟ್‌ವರ್ಕ್ ಅಳವಡಿಕೆ ಜೊತೆ 5G ಸ್ಪೀಡ್‌ ನೊಂದಿಗೆ ಪ್ರಬಲ ಮತ್ತು ವೇಗವಾಗಿ ಬಿಎಸ್‌ಎನ್‌ಎಲ್ ಬೆಳೆಯುತ್ತಿ ದೆ. ಹಾಗಾಗಿ ಹಂತ ಹಂತವಾಗಿ ಬೆಳೆಯುತ್ತಿರುವ ಬಿಎಸ್‌ಎನ್‌ಎಲ್ ಹೊಸ ಪ್ಲಾನ್‌ ಮೂಲಕ ಮತ್ತೊಮ್ಮೆ ಮೂರು ಖಾಸಗಿ ಟೆಲಿಕಾಂ ಕಂಪನಿಗಳಿಗೆ ಶಾಕ್ ಕೊಟ್ಟಿದೆ. ಈಗಾಗಲೇ ಬಿಎಸ್‌ಎನ್‌ಎಲ್ ಕಡಿಮೆ ಬೆಲೆಯ ಮತ್ತು ದೀರ್ಘಾವಧಿಯ ಪ್ಲಾನ್‌ಗಳನ್ನು ಬಳಕೆದಾರರಿಗೆ ನೀಡಿದೆ. ಈ ಬೆಲೆಗಳು ಖಾಸಗಿ ಕಂಪನಿಗಳಿಗಿಂತ ಕಡಿಮೆಯಾಗಿರುವ ಕಾರಣ ಜನರು ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಆಗುತ್ತಿದ್ದಾರೆ. ಈಗ ಖಾಸಗಿ ಟೆಲಿಕಾಂ ಕಂಪನಿಗಳು 28 ದಿನಕ್ಕೆ ವಿಧಿಸುವ ಬೆಲೆಯಲ್ಲಿ ಬಿಎಸ್ಎನ್ಎಲ್ 150 ದಿನದ ಸೇವೆಯನ್ನು ಒದಗಿಸುತ್ತದೆ. ಈ ಪ್ರಿಪೇಯ್ಡ್ ರೀಚಾರ್ಜ್ ಆಯ್ಕೆಯಿಂದ ಮತ್ತಷ್ಟು ಜನರು ಬಿಎಸ್‌ಎನ್‌ಎಲ್‌ನತ್ತ ಆಕರ್ಷಿತರಾಗುತ್ತಿದ್ದಾರೆ.

BSNL Rs 397 recharge plan
ಬಿಎಸ್ಎನ್‌ಎಲ್ ನೀಡುತ್ತಿರುವ 397 ರೂಪಾಯಿಯ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಬಳಕೆದಾರರ ಫೇವರಿಟ್ ಪ್ಲಾನ್ ಆಗಿದೆ. ಈ ಪ್ರಿಪೇಯ್ಡ್ ಪ್ಲಾನ್ 150 ದಿನದ ವ್ಯಾಲಿಡಿಟಿಯನ್ನು ಹೊಂದಿದ್ದು, ಅನ್‌ಲಿಮಿಟೆಡ್ ಕರೆ, ಡೇಟಾ, ಎಸ್‌ಎಂಎಸ್ ಸೇರಿದಂತೆ ಹಲವು ಬೆನೆಫಿಟ್‌ಗಳು ಸೇರಿವೆ. ಕೆಲವರು ಬಿಎಸ್‌ಎನ್‌ಎಲ್ ಅನ್ನು ಸೆಕೆಂಡರಿ ಸಿಮ್ ಆಗಿ ಬಳಸೋರಿಗೆ ಇದು ಒಳ್ಳೆಯ ಆಯ್ಕೆಯಾಗಿದೆ.

Latest Videos

undefined

ರೀಚಾರ್ಜ್ ಮಾಡಿಕೊಂಡ ಆರಂಭದ 30 ದಿನಗಳು ಗ್ರಾಹಕರಿಗೆ ದೇಶವ್ಯಾಪಿ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕಾಲ್‌ ಮಾಡಬಹುದು. ಇದರ ಜೊತೆಗೆ ಪ್ರತಿದಿನ 2GB ಡೇಟಾ ಲಭ್ಯವಾಗುತ್ತದೆ. ದೈನಂದಿನ 2GB ಡೇಟಾ ಮುಕ್ತಾಯವಾಗುತ್ತಿದ್ದಂತೆ ಇಂಟರ್‌ನೆಟ್ ಸ್ಪೀಡ್ 40 kbps ಗೆ ಕಡಿಮೆಗೊಳಿಸಲಾಗುತ್ತದೆ. ರೀಚಾರ್ಜ್ ಆಕ್ಟಿವೇಟ್ ಆದ ಮೊದಲ ತಿಂಗಳು ಪ್ರತಿದಿನ ಉಚಿತವಾಗಿ 100 ಎಸ್ಎಂಎಸ್ ಕಳುಹಿಸುವ ಅವಕಾಶವೂ ಲಭ್ಯವಿದೆ.

ಇದನ್ನೂ ಓದಿ: 600 GB ಡೇಟಾ, 365 ದಿನ ವ್ಯಾಲಿಡಿಟಿಯ ಪ್ಲಾನ್ ಮೇಲೆ ಡಿಸ್ಕೌಂಟ್ ಘೋಷಿಸಿ ದೀಪಾವಳಿ ಆಫರ್ ಕೊಟ್ಟ ಬಿಎಸ್‌ಎನ್ಎಲ್

ದೂರಸಂಪರ್ಕ ಕ್ಷೇತ್ರದಲ್ಲಿ ಕಮ್ ಬ್ಯಾಕ್ ಮಾಡಿರುವ ಬಿಎಸ್ಎನ್ಎಲ್, ಕಳೆದ ಐದು ತಿಂಗಳಿನಿಂದ ದೊಡ್ಡಮಟ್ಟದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಇತ್ತೀಚೆಗಷ್ಟೇ 24 ವರ್ಷಗಳನ್ನು ಪೂರೈಸಿರುವ ಬಿಎಸ್ಎನ್ಎಲ್, ಹೊಸ ಲೋಗೋ ಮತ್ತು ಏಳು ಸೇವೆಗಳನ್ನು ಪರಿಚಯಿಸಿದೆ. ಇತ್ತ ದೇಶಾದ್ಯಂತ 4G ಸೇವೆಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಮುಂದಿನ ವರ್ಷದ ಜೂನ್ ವೇಳೆಗೆ 5G ಸೇವೆಗಳನ್ನು ಹೊರತರುವ ಯೋಜನೆಗಳು ಸಹ ಜಾರಿಯಲ್ಲಿವೆ. ತನ್ನ ಮೊಬೈಲ್ ನೆಟ್‌ವರ್ಕ್ ಸೇವೆಯ ಗುಣಮಟ್ಟ ಹೆಚ್ಚಿಸುವ ಸಂಬಂಧವೂ ಬಿಎಸ್‌ಎನ್ಎಲ್ ಕ್ಷಿಪ್ರವಾಗಿ ಕಾರ್ಯನಿರ್ವಹಿಸುತ್ತಿದೆ. BSNL ಒಟ್ಟು 1,00,000 ಹೊಸ ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದು, 35,000 ಕ್ಕೂ ಹೆಚ್ಚು ಈಗಾಗಲೇ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕೃತ ಮಾಹಿತಿಯೂ ಹೊರ ಬಂದಿದೆ.

ಆಗಸ್ಟ್‌ನಲ್ಲಿ ಬಿಎಸ್‌ಎನ್ಎಲ್ ಒಂದೇ ಸಬ್‌ ಸ್ಕ್ರೈಬರ್ ಹೆಚ್ಚಿಸಿಕೊಳ್ಳಲು ಯಶಸ್ವಿಯಾಗಿತ್ತು. ಇನ್ನುಳಿದ ಮೂರು ಖಾಸಗಿ ಕಂಪನಿಗಳು ಲಕ್ಷ ಲಕ್ಷ ಬಳಕೆದಾರರನ್ನು ಕಳೆದುಕೊಂಡಿವೆ. ರಿಲಯನ್ಸ್ ಜಿಯೋ 40 ಲಕ್ಷ, ಏರ್‌ಟೆಲ್ 24 ಲಕ್ಷ ಮತ್ತು ವೊಡಾಫೋನ್ ಐಡಿಯಾ 19 ಲಕ್ಷ ಬಳಕೆದಾರರನ್ನು ಕಳೆದುಕೊಂಡಿವೆ. ಆದರೆ ಬಿಎಸ್‌ಎನ್ಎಲ್ 25 ಲಕ್ಷಕ್ಕೂ ಅಧಿಕ ಬಳಕೆದಾರರನ್ನು ಹೆಚ್ಚಿಸಿಕೊಂಡಿದೆ.

ಇದನ್ನೂ ಓದಿ: ಗ್ರಾಹಕರಿಗಾಗಿ ಹೊಸ 7 ಸೇವೆ ಬಿಡುಗಡೆಗೊಳಿಸಿದ ಬಿಎಸ್‌ಎನ್‌ಎಲ್: ಪತರಗುಟ್ಟಿದ ಜಿಯೋ, ಏರ್‌ಟೆಲ್

click me!