ಡಿಜಿಟಲ್ ನೀರಿನ ಬಿಲ್ ಪಾವತಿಯ 5 ಪ್ರಯೋಜನಗಳು

By Suvarna News  |  First Published Nov 3, 2024, 6:33 PM IST

ಡಿಜಿಟಲ್ ಪಾವತಿಗಳು ಸಮಯ ಉಳಿತಾಯ, ಭದ್ರತೆ, ಪರಿಸರ ಸ್ನೇಹಿ ಆಯ್ಕೆ, ರಿವಾರ್ಡ್‌ಗಳು ಮತ್ತು ಉತ್ತಮ ಹಣಕಾಸಿನ ನಿರ್ವಹಣೆಯಂತಹ ಹಲವಾರು ಪ್ರಯೋಜನಗಳನ್ನು ನೀಡುತ್ತವೆ. ನಗದು ಪಾವತಿಗಿಂತ ಡಿಜಿಟಲ್ ವ್ಯವಹಾರಗಳು ಹೆಚ್ಚು ಪರಿಣಾಮಕಾರಿ ಮತ್ತು ಅನುಕೂಲಕರವಾಗಿವೆ.


ಇಂದು ಎಲ್ಲಾ ಕಡೆಯೂ ಡಿಜಿಟಲ್ ಪೇಮೆಂಟ್ ಸ್ವೀಕರಿಸಲಾಗುತ್ತದೆ. ವಿವಿಧ ಆನ್‌ಲೈನ್ ಪ್ಲಾಟ್‌ಫಾರಂಗಳ ಮೂಲಕ ಸುಲಭ ಮತ್ತು ಸುರಕ್ಷಿತವಾಗಿ ಡಿಜಿಟಲ್ ವ್ಯವಹಾರ ನಡೆಸಬಹುದಾಗಿದೆ. ನೀವು ಇನ್ನೂ ವಾಟರ್ ಬಿಲ್ ನಗದು ರೂಪದಲ್ಲಿ ಪಾವತಿಸುತ್ತಿದ್ದೀರಾ? ಯಾಕೆ ಡಿಜಿಟಲ್ ಮೂಲಕ ನೀರಿನ ಬಿಲ್ ಪಾವತಿಸಬೇಕು ಎಂದು ಹೇಳುತ್ತಿದ್ದೇವೆ. ಡಿಜಿಟಲ್ ಪೇಮೆಂಟ್ ಪ್ರಮುಖವಾಗಿ ನಿಮ್ಮ ಸಮಯವನ್ನು ಉಳಿಸುತ್ತದೆ. ಡಿಜಿಟಲ್ ಪೇಮೆಂಟ್ ಸಾಂಪ್ರದಾಯಿಕ ಶೈಲಿಯ ಪೇಮೆಂಟ್‌ಗಳಿಗಿಂತ ಹಲವು ಪ್ರಯೋಜನೆಗಳನ್ನು ನೀಡುತ್ತದೆ. ಇಂದು ಯಾಕೆ ಡಿಜಿಟಲ್ ಪಾವತಿ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂಬುದಕ್ಕೆ ಐದು ಕಾರಣಗಳು ಇಲ್ಲಿವೆ. 

1.ಸಮಯ ಉಳಿತಾಯ
ಡಿಜಿಟಲ್ ವ್ಯವಹಾರದಿಂದ ಬಳಕೆದಾರರಿಗೆ ಪ್ರಮುಖವಾಗಿ ಸಮಯ ಉಳಿತಾಯವಾಗುತ್ತದೆ. ನೀರಿನ ಬಿಲ್ ನಗದು ರೂಪದಲ್ಲಿ ಪಾವತಿಸಬೇಕಾದ್ರೆ ನೀವು ಪಾವತಿ ಕೇಂದ್ರಕ್ಕೆ ತೆರಳಬೇಕಾಗುತ್ತದೆ. ಅಷ್ಟು ಮಾತ್ರವಲ್ಲದೇ ಕೆಲವು ಸಮಯದವರೆಗೆ ಸರತಿ ಸಾಲಿನಲ್ಲಿ ನಿಂತುಕೊಳ್ಳಬೇಕಾಗುತ್ತದೆ. ಇದಕ್ಕಾಗಿ  ಸಮಯ ವ್ಯಯವಾಗುತ್ತದೆ. ನೀರಿನ ಬಿಲ್ ಪಾವತಿ ಕೇಂದ್ರ ಮನೆಯಿಂದ ದೂರವಿದ್ದರೆ ಅಲ್ಲಿಗೆ ತೆರಳಲು ಹೆಚ್ಚು ಸಮಯ ಬೇಕಾಗುತ್ತದೆ. ಬಿಡುವಿಲ್ಲದ ಸಮಯದಲ್ಲಿ ನೀರಿನ ಬಿಲ್ ಪಾವತಿಗೆ ಒಂದು ದಿನ ಮೀಸಲಿಡಬೇಕಾಗುತ್ತದೆ.

Tap to resize

Latest Videos

undefined

ಆದರೆ ಡಿಟಿಟಲ್ ಪಾವತಿಯನ್ನು ನೀವು ಮನೆ ಅಥವಾಮ ಕಚೇರಿ ಅಥವಾ ಪ್ರಯಾಣದ ಸಂದರ್ಭದಲ್ಲಿಯೂ ಮಾಡಬಹುದಾಗಿದೆ.  Bajaj Pay ನಂತಹ ಮೊಬೈಲ್ ಅಪ್ಲಿಕೇಶನ್‌ ಬಳಸಿ, ಕೆಲವೇ ನಿಮಿಷಗಳಲ್ಲಿ ವಾಟರ್ ಬಿಲ್ ಪಾವತಿಸಬಹುದು. ಹಣ ಪಾವತಿಯಾಗುತ್ತಲೇ ನಿಮ್ಮ ವಹಿವಾಟಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ. ಡಿಜಿಟಲ್ ಪೇಮೆಂಟ್‌ನಿಂದ ಉಳಿತಾಯವಾಗುವ ಸಮಯದಲ್ಲಿ ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. 

2.ಭದ್ರತೆ ಮತ್ತು ವಂಚನೆಯಿಂದ ರಕ್ಷಣೆ
ನೀರಿನ ಬಿಲ್ ನಗದು ಪಾವತಿಸಲು ಹೋಗುತ್ತಿದ್ದರ ಹಣವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು. ಈ ಸಮಯದಲ್ಲಿ ಹಣ ಕಳ್ಳತನವಾಗುವ ಸಾಧ್ಯತೆಯೂ ಇರುತ್ತದೆ. ನಿಮ್ಮಲ್ಲಿಯ ಹಣ ಕಂಡು ವಂಚನೆಗಾರರು ನಿಮ್ಮ ಸುತ್ತ ಸುಳಿಯಬಹುದು. ಒಂದು ವೇಳೆ ಹಣ ಕಳ್ಳತನವಾದ್ರೆ ಪೊಲೀಸ್ ಠಾಣೆ ಸುತ್ತುವ ಪರಿಸ್ಥಿತಿ ನಿರ್ಮಾಣವಾಗಬಹುದು. ಇದೆಲ್ಲದರಿಂದ ನಿಮ್ಮನ್ನು ಡಿಜಿಟಿಲ್ ಪೇಮೆಂಟ್ ರಕ್ಷಣೆ ಮಾಡುತ್ತದೆ. ಡಿಜಿಟಲ್ ವ್ಯವಹಾರದಿಂದ ಬಳಕೆದಾರ ವೈಯಕ್ತಿಕ ಮಾಹಿತಿ ರಕ್ಷಿಸಲು ಭದ್ರತಾಕ್ರಮಗಳನ್ನು ತೆಗೆದುಕೊಳ್ಳಲಾಗಿರುತ್ತದೆ. 

ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್‌ಗಳು ಸುಧಾರಿತ ಎನ್‌ಕ್ರಿಪ್ಶನ್, ಮಲ್ಟಿ-ಫ್ಯಾಕ್ಟರ್ ಅಥೆಂಟಿಕೇಶನ್ (MFA), ಮತ್ತು ಇತರ ಭದ್ರತಾ ಪ್ರೋಟೋಕಾಲ್‌ಗಳನ್ನು ವಹಿವಾಟುಗಳನ್ನು ರಕ್ಷಿಸಲು ಬಳಸಲಾಗುತ್ತದೆ. ಉದಾಹರಣೆಗೆ, ಬಜಾಜ್ ಪೇಯಂತಹ UPI ಅಪ್ಲಿಕೇಶನ್‌ಗಳ ಮೂಲಕ Indane ಗ್ಯಾಸ್ ಆನ್‌ಲೈನ್ ಪಾವತಿ ಅಥವಾ ನೀರಿನ ಬಿಲ್‌ನಂತಹ ಯುಟಿಲಿಟಿ ಬಿಲ್‌ಗಳನ್ನು ಪಾವತಿಸಿದಾಗ ಬಳಕೆದಾರರ ಬ್ಯಾಂಕ್ ವಿವರಗಳನ್ನು ಭದ್ರತಾ ವೈಶಿಷ್ಟ್ಯಗಳಿಂದ ರಕ್ಷಿಸಲಾಗುತ್ತದೆ. ಬಿಲ್ ಪಾವತಿಯ ರಶೀದಿಯೂ ಆನ್‌ಲೈನ್‌ನಲ್ಲಿಯೇ ಲಭ್ಯವಾಗುತ್ತದೆ. ಹಣ ಕಳ್ಳತನವಾಗುವ ಅಥವಾ ಮೋಸಕ್ಕೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. 
 
3.ಪರಿಸರ ಸ್ನೇಹಿ ಆಯ್ಕೆ: ಕಾಗದ ರಹಿತ ಪೇಮೆಂಟ್ 
ನಗದು ರೂಪದ ಪಾವತಿ ಕಾಗದ ಬಳಕೆಯನ್ನು ಒಳಗೊಂಡಿರುತ್ತದೆ. ಬಿಲ್ ಪಾವತಿಸಿದ ರಶೀದಿ ಸೇರಿದಂತೆ ಹಲವೆಡೆ ಕಾಗದದ ಬಳಕೆಯಾಗುತ್ತದೆ. ಈ ಬೆಳವಣಿಗೆ ಪ್ರಕೃತಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಮ್ಮ ದೈನಂದಿನ ಅಭ್ಯಾಸಗಳಿಂದ ಪ್ರಕೃತಿಗೆ ಉಂಟಾಗುವ ಹಾನಿಯನ್ನು ತಡೆಯಲು ಡಿಜಿಟಲ್ ಪೇಮೆಂಟ್ ಆಯ್ಕೆ ಒಳ್ಳೆಯ ವಿಧಾನವಾಗಿದೆ. ಡಿಜಿಟಲ್ ಪೇಮೆಂಟ್ ಬಳಕೆಯೂ ಕಾಗದ ಬಳಕೆಯನ್ನು ನಿಯಂತ್ರಿಸುತ್ತದೆ. ಆನ್‌ಲೈನ್‌ನಲ್ಲಿ ವಾಟರ್ ಬಿಲ್ ಪಾವತಿಸಲು ಮುಂದಾದ್ರೆ ರಶೀದಿಯೂ ಮೊಬೈಲ್‌ಗೆ ಬರುತ್ತದೆ. ಬಿಲ್ ನೋಟಿಫಿಕೇಶನ್ ಸಹ ನೇರವಾಗಿ ಮೊಬೈಲ್‌ಗೆ ಬರುತ್ತದೆ. ಈ ಮೂಲಕ ಪ್ರಕೃತಿಯ ರಕ್ಷಣೆ ಮಾಡಿದಂತಾಗುತ್ತದೆ. 

4.ರಿವಾರ್ಡ್ ಮತ್ತು ಡಿಸ್ಕೌಂಟ್‌
ಯುಪಿಐ ಡಿಜಿಟಲ್ ಪೇಮೆಂಟ್ ಪ್ಲಾಟ್‌ಫಾರಂಗಳಾದ ಬಜಾಜ್ ಪೇನಂತಹ ಆಪ್‌ಗಳು ಬಳಕೆದಾರರಿಗೆ ರಿವಾರ್ಡ್, ಕ್ಯಾಶ್‌ಬ್ಯಾಕ್ ಮತ್ತು ರಿಯಾಯ್ತಿಗಳ್ನು  ಬಳಕೆದಾರರಿಗೆ ನೀಡಲಾಗುತ್ತದೆ. ಡಿಜಿಟಲ್ ಪೇಮೆಂಟ್ ಮಾಡುವ ಗ್ರಾಹಕರಿಗೆ ರಿವಾರ್ಡ್ ಮತ್ತು ಡಿಸ್ಕೌಂಟ್ ಎಲ್ಲವೂ ಲಭ್ಯವಾಗುತ್ತವೆ. ವಾಟರ್ ಬಿಲ್ ಪಾವತಿ ಮಾಡೋದರ ಜೊತೆಗೆ ಹಣ ಉಳಿತಾಯ ಸಹ ಮಾಡಬಹುದು. ಕೆಲವು ಡಿಜಿಟಲ್ ಪೇಮೆಂಟ್ ಪ್ಲಾಟ್‌ಫಾರಂಗಳು ಗ್ರಾಹಕರಿಗೆ ಭವಿಷ್ಯದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತವೆ. ಉದಾಹರಣೆಗೆ ಬೇರೆ ವಸ್ತುಗಳ ಖರೀದಿ ಮೇಲೆಯೂ ಡಿಸ್ಕೌಂಟ್ ನೀಡಲಾಗುತ್ತದೆ. ಆದರೆ ನಗದು ಪಾವತಿಯಲ್ಲಿ ಇಂತಹ ಯಾವುದೇ ಲಾಭಗಳು ಗ್ರಾಹಕರಿಗೆ ಸಿಗಲ್ಲ. ಡಿಜಿಟಲ್ ಪೇಮೆಂಟ್ ನಿಮ್ಮ ಒಟ್ಟಾರೆ ವೆಚ್ಚವನ್ನು ಸಹ ಕಡಿಮೆ ಮಾಡುತ್ತದೆ. ಡಿಜಿಟಲರ್ ಪಾವತಿಗಳು ಹೆಚ್ಚು ಪರಿಣಾಮಕಾರಿಯಾಗಿದ್ದು, ತುಂಬಾ ಸರಳವಾಗಿವೆ. 

5.ಪಾವತಿ ಟ್ರ್ಯಾಕ್ ಮತ್ತು ಉತ್ತಮ ಹಣಕಾಸಿನ ನಿರ್ವಹಣೆ
ಡಿಜಿಟಲ್ ಪಾವತಿಯಲ್ಲಿ ನಿಮ್ಮ ವ್ಯವಹಾರವನ್ನು ಟ್ರ್ಯಾಕ್ ಮಾಡಬಹುದು. ಇದಕ್ಕಾಗಿ ಪದೇ ಪದೇ ನಗದು ಬಿಲ್ ಕೌಂಟರ್‌ಗೆ ಅಲೆಯುವ ಸನ್ನಿವೇಶ ಉಂಟಾಗುವುದಿಲ್ಲ. ಇದರ ಜೊತೆ ನೀವು ಮಾಡಿದ ಪ್ರತಿಯೊಂದು ಪಾವತಿಗೂ ಡಿಜಿಟಲ್ ಪೇಮೆಂಟ್‌ನಲ್ಲಿ ದಾಖಲೆ ಇರುತ್ತದೆ. ಎಲ್ಲಿ ನಿಮ್ಮ ಹಣ ಖರ್ಚು ಆಗಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಕೆಲವೊಮ್ಮೆ ಪಾವತಿ ಬಾಕಿ ಉಳಿದಿದ್ರೂ ನೆನಪಿಸುವ ಕೆಲಸವನ್ನು ಡಿಜಿಟಲ್ ಪೇಮೆಂಟ್ ಆಪ್‌ಗಳು ಮಾಡುತ್ತವೆ. ಇದರಿಂದ ದಂಡ ಪಾವತಿಸೋದನ್ನು ತಪ್ಪಿಸಬಹುದಾಗಿದೆ.

ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಪ್ರತಿ ವಹಿವಾಟಿನ ಎಲೆಕ್ಟ್ರಾನಿಕ್ ದಾಖಲೆಯನ್ನು ಒದಗಿಸುತ್ತವೆ. ಯಾವುದೇ ಸಮಯದಲ್ಲಿಯೂ ನಿಮ್ಮ ಹಣಕಾಸಿನ ಹಿಸ್ಟರಿಯನ್ನು ಪರಿಶೀಲಿಸಿಕೊಳ್ಳಬಹುದು. ಈ ಮೂಲಕ ನಿಮ್ಮ ಬಜೆಟ್‌ ಲೆಕ್ಕಾಚಾರವನ್ನು ಸುಲಭವಾಗಿ ತಿಳಿದುಕೊಳ್ಳಲು ಸಹಾಯವಾಗುತ್ತದೆ. ಈ ಮೂಲಕ ಹಣಕಾಸಿನ ವ್ಯವಹಾರಗಳ ಮೇಲೆ ನೀವೇ ನಿಯಂತ್ರಣ ತೆಗೆದುಕೊಳ್ಳಬಹುದು. ನಿಮ್ಮ ಬಿಲ್‌ಗಳನ್ನು ಸಮಯಕ್ಕೆ ಪಾವತಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬಹುದು ಮತ್ತು ನಿಮ್ಮ ಪಾವತಿ ಇತಿಹಾಸವನ್ನು ಉಲ್ಲೇಖಕ್ಕಾಗಿ ಸುಲಭವಾಗಿ ಪ್ರವೇಶಿಸಬಹುದು.

ನಗದು ಪಾವತಿಗಿಂತಲೂ ಡಿಜಿಟಲ್ ಪೇಮೆಂಟ್ ಹಲವು ಪ್ರಯೋಜನೆಗಳನ್ನು ಹೊಂದಿದೆ. ಡಿಜಿಟಲ್ ಪಾವತಿ ಪರಿಸರ ಸ್ನೇಹಿಯಾಗಿದ್ದು, ಸುರಕ್ಷಿತ ಮತ್ತು ಭದ್ರತೆಯನ್ನು ನೀಡುತ್ತದೆ. ಡಿಜಿಟಲ್ ಪೇಮೆಂಟ್ ಬಳಕೆದಾರರ ಬ್ಯಾಂಕಿಂಗ್ ಮಾಹಿತಿಯನ್ನು ಸಹ ಗೌಪ್ಯವಾಗಿರಸುತ್ತದೆ. ಈ ಮೂಲಕ ಕ್ರಮಬದ್ಧವಾದ ಹಣಕಾಸಿನ ನಿರ್ವಹಣೆ ನಿಮ್ಮದಾಗುತ್ತದೆ. Bajaj Pay ನಂತಹ ಪ್ಲಾಟ್‌ಫಾರ್ಮ್‌ಗಳು ಈ ಎಲ್ಲಾ ಅನುಕೂಲಗಳನ್ನು ತಮ್ಮ ಬಳಕೆದಾರರಿಗೆ ನೀಡುತ್ತವೆ. ನೀರಿನ ಬಿಲ್ ಸೇರಿದಂತೆ ಇತರೆ ವೆಚ್ಚಗಳನ್ನು ಸಮಪರ್ಕವಾಗಿ ನಿರ್ವಹಿಸಲು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಸಹಾಯ ಮಾಡುತ್ತವೆ.

ನಗದು ರೂಪದ ಪಾವತಿಗಿಂತ ಡಿಜಿಟಲ್ ಪೇಮೆಂಟ್‌ಗಳು  ಹಣಕಾಸಿನ ನಿರ್ವಹಣೆಯನ್ನು ಸರಳಗೊಳಿಸುತ್ತವೆ. ಡಿಜಿಟಲ್ ಪೇಮೆಂಟ್ ಮಾಡುವ ಬಳಕೆದಾರರಿಗೆ ರಿವಾರ್ಡ್, ಡಿಸ್ಕೌಂಟ್, ಕ್ಯಾಶ್‌ಬ್ಯಾಕ್, ಬೋನಸ್ ಪಾಯಿಂಟ್‌ ಅಂತಹ ಹೆಚ್ಚುವರಿ ಸೌಲಭ್ಯಗಳು ಬಳಕೆದಾರರಿಗೆ ಸಿಗುತ್ತವೆ. ಇಂತಹ ಯಾವುದೇ ಆಫರ್‌ಗಳು ನಗದು ರೂಪದ ಪಾವತಿಯಲ್ಲಿ ಸಿಗಲ್ಲ. ಹಾಗಾಗಿ ಡಿಜಿಟಲ್ ಫೈನಾನ್ಸ್‌ ಆಯ್ಕೆಯನ್ನು ಅಳವಡಿಸಿಕೊಳ್ಳುವುದು ಉತ್ತಮವಾಗಿದೆ.

click me!