JioPhone Next ಖರೀದಿಗೆ ಮುನ್ನ ನೋಂದಣಿ ಕಡ್ಡಾಯ!

By Suvarna News  |  First Published Nov 5, 2021, 8:29 AM IST

*ರಿಲಯನ್ಸ್‌ ಜಿಯೋದ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ ಪೋನ್‌
*ಮಳಿಗೆಯಲ್ಲಿ ಖರೀದಿಗೂ ಮುನ್ನ ನೋಂದಾವಣಿ ಕಡ್ಡಾಯ
*ವಾಟ್ಸಪ್ ಅಥವಾ ಜಿಯೋ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಣಿ 
 


ಮುಂಬೈ (ನ.5) : ರಿಲಯನ್ಸ್‌ ಒಡೆತನದ ಜಿಯೋ ಕಂಪನಿ (Jio) ಮತ್ತು ಗೂಗಲ್‌ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಅಗ್ಗದ ದರದ ಜಿಯೋಫೋನ್‌ ನೆಕ್ಸ್ಟ್‌(JioPhone Next) ಹೆಸರಿನ ಸ್ಮಾರ್ಟ್‌ಫೋನ್‌ ದೇಶದ್ಯಾಂತ ಮಾರಾಟಕ್ಕೆ ಲಭ್ಯವಾಗಿದೆ. 6499 ರು. ಬೆಲೆ ಬಾಳುವ ಈ ಮೊಬೈಲ್‌ ಅನ್ನು ರಿಲಯನ್ಸ್‌ ಡಿಜಿಟಲ್‌ (Reliance Digital) ಮಳಿಗೆಗಳಲ್ಲಿ ಲಭ್ಯವಿದ್ದು, ಗ್ರಾಹಕರು ಖರೀದಿಸಬಹುದಾಗಿದೆ. ಅಲ್ಲದೆ ಗ್ರಾಹಕರು ಕೇವಲ 1999 ರು. ಹಾಗೂ 500 ರು. ಪ್ರೊಸೆಸಿಂಗ್‌ ಶುಲ್ಕದೊಂದಿಗೆ (Processing Fee) ಬಾಕಿ ಹಣವನ್ನು ಪ್ರತೀ ತಿಂಗಳ ಕಂತು (EMI)ಗಳಲ್ಲಿ ಪಾವತಿಸುವ ರೀತಿಯಲ್ಲೂ ಈ ಮೊಬೈಲ್‌ ಖರೀದಿಸಲು ಅವಕಾಶವಿದೆ. 

WhatsApp ಅಥವಾ Website ಮೂಲಕ ನೋಂದಣಿ!

Latest Videos

undefined

ಈ ಮೊಬೈಲ್‌ ಖರೀದಿಸಲು ರಿಲಯನ್ಸ್‌ ಮಳಿಗೆಗಳಿಗೆ ಹೋಗುವ ಮುನ್ನ ಗ್ರಾಹಕರು 7018-270-182 ಸಂಖ್ಯೆಗೆ ಹಾಯ್‌ (Hi) ಎಂದು ಸಂದೇಶ ರವಾನಿಸಿ, ತಮ್ಮ ಹೆಸರುಗಳನ್ನು ನೋಂದಾಯಿಸಲೇಬೇಕು ಎಂದು ರಿಲಯನ್ಸ್‌ ಗ್ರಾಹಕರಿಗೆ ಕೋರಿದೆ. ಅಥವಾ ರಿಲಯನ್ಸ್‌ನ ಅಧಿಕೃತ ವೆಬ್‌ಸೈಟ್ ನಲ್ಲಿ ಕೂಡ ಗ್ರಾಹಕರೊ ನೋಂದಾವಣಿ ಮಾಡಕೊಳ್ಳಬಹುದಾಗಿದೆ. ನೋಂದಣಿ ಪ್ರಕ್ರಿಯೆ ವೇಳೆ ಬಳಕೆದಾರರು ತಮ್ಮ ಸ್ಥಳವನ್ನು (Area) ಹಂಚಿಕೊಳ್ಳುವ ಅಗತ್ಯವಿದೆ ಮತ್ತುನಂತರ, ಬಳಕೆದಾರರು ಯಾವ ಅಂಗಡಿಗೆ ಹೋಗುವಂತೆ ಸೂಚನೆಯನ್ನು ಪಡೆಯುತ್ತಾರೆ ಎಂದು ಕಂಪನಿ ತಿಳಿಸಿದೆ. ಇದಾದ ಬಳಿಕವೇ ಗ್ರಾಹಕರು ಮೊಬೈಲ್‌ ಖರೀದಿಸಲು ಮಳಿಗೆಗಳಿಗೆ ತೆರಳಬೇಕು.

30,000ಕ್ಕಿಂತ ಹೆಚ್ಚು ಮಳಿಗೆಗಳಲ್ಲಿ ಲಭ್ಯ!

JioPhone Next ಸುಲಭ ಮಾರಾಟವನ್ನು ಖಚಿತಪಡಿಸಿಕೊಳ್ಳಲು ಭಾರತದಾದ್ಯಂತ 30,000ಕ್ಕಿಂತ ಹೆಚ್ಚು ಮಳಿಗೆಗಳೊಂದಿಗೆ  ಜಿಯೋ ಒಪ್ಪಂದ ಮಾಡಿಕೊಂಡಿದೆ ಎಂದು ಕಂಪನಿ ತಿಳಿಸಿದೆ. ಜಿಯೋ ಕಾಗದ ರಹಿತ ಡಿಜಿಟಲ್ ಫೈನಾನ್ಸಿಂಗ್ (Digital Financing) ಆಯ್ಕೆಯನ್ನು ಸಹ ಲಭ್ಯವಾಗುವಂತೆ ಮಾಡಿದೆ. ಇದು ದೇಶದ ಪ್ರತಿ ಮೂಲೆಯಲ್ಲೂ ಲಭ್ಯವಿರಲಿದೆ ಎಂದು ಕಂಪನಿ ತಿಳಿಸಿದೆ. ಸದ್ಯಕ್ಕೆ ಆನ್‌ಲೈನ್ ಜಿಯೋ ಸ್ಟೋರ್‌ನಿಂದ JioPhone Next ಅನ್ನು ಖರೀದಿಸಲು ಯಾವುದೇ ಆಯ್ಕೆಗಳಿಲ್ಲ. ನಿಮ್ಮ ಹತ್ತಿರದ ಜಿಯೋ ಸ್ಟೋರ್ ಜಿಯೋ ಅಧಿಕೃತ ವೆಬ್‌ಸೈಟ್ ಮೂಲಕ ನೀವು ಪತ್ತೆ ಮಾಡಬಹುದು.

ಮೊಬೈಲ್ ಕಳೆದು ಹೋಯ್ತಾ? Google Pay, Paytm and PhonePe ಬ್ಲಾಕ್ ಮಾಡೋದು ಹೇಗೆ?

JioPhone Next ವಿಶೇಷತೆಗಳು!

ರಿಲಯನ್ಸ್‌ ಜಿಯೋ (Reliance Jio) ಹೊಸ ಸ್ಮಾರ್ಟ್‌ ಪೋನ್‌ ಬಿಡುಗಡೆ ಮಾಡುವ ಮೂಲಕ  ಭಾರತೀಯ ಸೆಲ್ಯೂರಾರ್‌ (Cellular) ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ಅತಿ ಕಡಿಮೆ ಬೆಲೆಯ ಜಿಯೋಪೋನ್ ನೆಕ್ಸ್ಟ್‌  ಟಚ್‌ ಸ್ಕ್ರೀನ್ ಮೊಬೈಲ್‌ ಮಾರುಕಟ್ಟಗೆ ಬಿಡುಗಡೆ ಮಾಡಿದೆ. ದೇಶಾದ್ಯಂತ ಇರುವ ಎಲ್ಲಾ ಜಿಯೋ (Jio) ಡಿಜಿಟಲ್‌ ರಿಟೇಲ್‌ (Digital shops) ಮಳಿಗೆಗಳಲ್ಲಿ ಈ ಫೋನ್‌ ಸಿಗಲಿದೆ.‌  

ಅತ್ಯಂತ ಕಡಿಮೆ ದರದ ಟಚ್ ಸ್ಕ್ರೀನ್ ಫೋನ್ ಬಿಡುಗಡೆ ಮಾಡಿದ ಜಿಯೋ!

ಈ ಮೊಬೈಲ್‌ 13 ಮೆಗಾಪಿಕ್ಸಲ್‌ ರೇರ್‌ ಕ್ಯಾಮೆರಾ (Camera), 8 ಎಂಪಿ ಫ್ರಂಟ್‌ ಕ್ಯಾಮೆರಾ, 2   ಸಿಮ್‌ ಸ್ಲಾಟ್‌ಗಳನ್ನು (Sim slot), 2 ಜಿಬಿ  Ram 32 ಜಿಬಿ ಆಂತರಿಕ ಸ್ಟೋರೇಜ್‌ (Internal Memory) ಹೊಂದಿದೆ.  JioPhone ನೆಕ್ಸ್ಟ್, 5W ಚಾರ್ಜಿಂಗ್ ಅಡಾಪ್ಟರ್ ಮತ್ತು ಮೈಕ್ರೋ ಯುಎಸ್‌ಬಿ ಚಾರ್ಜಿಂಗ್ ಕೇಬಲ್ ಜೊತೆಗೆ ವಾರಂಟಿ ಕಾರ್ಡ್ ಮತ್ತು ಬಳಕೆದಾರ ಮಾರ್ಗದರ್ಶಿಯನ್ನು ನೀಡುತ್ತಿದೆ. ಬಾಕ್ಸ್ ಒಳಗೆ ಯಾವುದೇ ಫೋನ್‌ ಕವರ್‌ ಅಥವಾ ಇಯರ್‌ಫೋನ್‌ಗಳಿಲ್ಲ. ಬಾಕ್ಸ್‌ ನಲ್ಲಿ ಬ್ಯಾಟರಿ ಕೂಡ ಪ್ರತ್ಯೇಕವಾಗಿ ನೀಡಲಾಗಿದೆ ಹಾಗಾಗಿ ಗ್ರಾಹಕರೇ ಬ್ಯಾಟರಿ ಅಳವಡಿಸಬೇಕಾಗುತ್ತದೆ.

click me!