ರೆಡ್‌ಮಿ ನೋಟ್ 10 ಸೀರೀಸ್ ಹೊಸ ಫೋನ್‌ಗಳು ಶೀಘ್ರ ಮಾರುಕಟ್ಟೆಗೆ, ಏನೇನಿವೆ ವಿಶೇಷತೆ?

By Suvarna News  |  First Published Feb 21, 2021, 3:22 PM IST

ರೆಡ್‌ಮಿ ನೋಟ್‌ 10 ಸೀರೀಸ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗ ಹಾಕಲು ಸಿದ್ಧವಾಗಿವೆ. ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಸೋರಿಕೆಯಾಗಿದ್ದು, ಈ ಸೀರೀಸ್‌ನಲ್ಲಿ ಒಟ್ಟು ಮೂರು ಫೋನ್‌ಗಳನ್ನು ಮಾರ್ಚ್ 4ರಂದು ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಬ್ಯಾಟರಿ ಮತ್ತು ಪ್ರೊಸೆಸರ್ ದೃಷ್ಟಿಯಿಂದ ಈ ಫೋನ್ ಧಮಾಕಾ ಆಗಿರಲಿವೆ.


ರೆಡ್‌ಮಿ ಸ್ಮಾರ್ಟ್‌ಫೋನ್ ಇಷ್ಟುಪಡೋರಿಗೆ ಇದು ಗುಡ್‌ನ್ಯೂಸ್. ಮಾರ್ಚ್ 4ರಂದು ರೆಡ್‌ಮಿ ನೋಟ್ 10 ಸೀರೀಸ್ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ. ಈ ಸೀರೀಸ್‌ನ ಸ್ಮಾರ್ಟ್‌ಫೋನ್‌ಗಳಿಗೆ ಸಂಬಂಧಿಸಿದಂತೆ ಒಂದಿಷ್ಟು ಮಾಹಿತಿಗಳನ್ನು ಟಿಪಸ್ಟರ್ಸ್ ಟ್ವಿಟರ್‌ನಲ್ಲಿ ಮಾಹಿತಿ ಸೋರಿಕೆ ಮಾಡಿದ್ದಾರೆ.

ಈ ಸೀರೀಸ್ ಫೋನ್‌ಗಳ ಕಲರ್‌ ಮತ್ತು ಅವುಗಳ ವಿಶೇಷತೆಗಳ ಬಗ್ಗೆ ಮಾಹಿತಿ ಸೋರಿಕೆಯಾಗಿದ್ದು, ರೆಡ್‌ಮಿ ನೋಟ್‌ ಸೀರೀಸ್‌ನಲ್ಲಿ ಬಹುಶಃ ರೆಡ್‌ಮಿ ನೋಟ್ 10, ರೆಡ್‌ಮಿ ನೋಟ್ 10 ಪ್ರೋ ಮತ್ತು ರೆಡ್‌ಮಿ ನೋಟ್ ನೋಟ್‍ 10 ಪ್ರೋ ಮ್ಯಾಕ್ಸ್‌ ಎಂಬ ಫೋನ್‌ಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಪೈಕಿ ರೆಡ್‌ಮೆ ನೋಟ್ 10 ಮತ್ತು ರೆಡ್‌ಮಿ ನೋಟ್ 10  ಪ್ರೋ ತುಸು ಅಗ್ಗದ ಫೋನ್‌ ಆಗಿರಬಹುದು. ಆದರೆ, ರೆಡ್‌ಮಿ ನೋಟ್  10 ಪ್ರೋ ಮ್ಯಾಕ್ಸ್ ಸ್ಮಾರ್ಟ್‌ಫೋನ್‌ ಪ್ರೀಮಿಯಂ ಫೋನ್ ಆಗಿದ್ದು, ಸ್ನ್ಯಾಪ್‌ಡ್ರಾಗನ್ 768ಜಿ ಪ್ರೊಸೆಸರ್ ಬಳಸಲಾಗಿದೆ. ಪರಿಣಾಮ ಈ ಸ್ಮಾರ್ಟ್‌ಫೋನ್ ಪವರ್‌ಫುಲ್ ಆಗಿದ್ದು, ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ 108 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಕೂಡ ನೀಡಲಾಗಿದೆ.

Tap to resize

Latest Videos

undefined

ಸರ್ಕಾರಿ ನಿರ್ಮಿತ ‘ಸಂದೇಶ್’ ಆಪ್ ಲಾಂಚ್, ಇದು ದೇಶಿ ವಾಟ್ಸಾಪ್!

Xiaomiui ಎಂಬ ಟಿಪ್ಸಟರ್ ಟ್ವಿಟರ್ ಖಾತೆಯಲ್ಲಿ ಈ ರೆಡ್‌ಮಿ ನೋಟ್ 10 ಸೀರೀಸ್ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ರೆಡ್ ಮಿ ನೋಟ್ 10 ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 678 ಎಸ್ಒಸಿ ಪ್ರೊಸೆಸರ್ ಆಧರಿತವಾಗಿರಲಿದೆ. 48 ಮೆಗಾಪಿಕ್ಸೆಲ್ ಕ್ಯಾಮೆರಾ ಒಳಗೊಂಡಂತೆ ನಾಲ್ಕು ಕ್ಯಾಮೆರಾಗಳ ಸೆಟ್ ಅಪ್ ಇರಲಿದೆ. ಈ ಫೋನ್ ಕೂಡ ಗ್ರಾಹಕರಿಗೆ 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಹಾಗೂ 6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್‌ಗಳಲ್ಲಿ ಮಾರಾಟಕ್ಕೆ ಲಭ್ಯವಾಗುವ ಸಾಧ್ಯತೆ ಇದೆ.

ರೆಡ್‌ಮಿ ನೋಟ್ 10 ಪ್ರೋ ಮ್ಯಾಕ್ಸ್ ಸ್ಮಾರ್ಟ್‌ಫೋನ್‌ ಐಪಿಎಸ್ 120Hz ಡಿಸ್‌ಪ್ಲೇ ಹೊಂದಿದ್ದು, ಸ್ನ್ಯಾಪ್‌ಡ್ರಾಗನ್ 768ಜಿ ಪ್ರೊಸೆಸರ್ ಇರಲಿದೆ. ಫೋನ್‌ನ ಹಿಂಬದಿಯಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಇರಲಿದೆ. 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ ಮತ್ತು 5,050mAh ಬ್ಯಾಟರಿ ಇರಲಿದೆ. ಈ ರೆಡ್‌ಮಿ ನೋಟ್ 10 ಪ್ರೋ ಮ್ಯಾಕ್ಸ್ ಗ್ರಾಹಕರಿಗೆ 6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಹಾಗೂ 8 ಜಿಬಿ ರ್ಯಾಮ್ ಹಾಗೂ 128 ಜಿಬಿ ಸ್ಟೋರೇಜ್ ಆಯ್ಕೆಗಳಲ್ಲಿ ಸಿಗಲಿದೆ ಎಂದು ಟಿಪ್ಸಟರ್ ಹೇಳಿದ್ದಾರೆ.

ಬಹುಶಃ ಈ ರೆಡ್‌ಮಿ ನೋಟ್ 10 ಪ್ರೋ ಮ್ಯಾಕ್ಸ್ ಡಾರ್ಕ್ ನೈಟ್, ಗ್ಲೇಸಿಯರ್ ಬ್ಲೂ ಮತ್ತು ಗ್ರೇಡಿಯೆಂಟ್ ಬ್ರೋಂಜ್, ವಿಂಟೇಜ್ ಬ್ರೋಂಜ್ ಬಣ್ಣಗಳ ಆಯ್ಕೆಯಲ್ಲಿ ಮಾರಾಟಕ್ಕೆ ಲಭ್ಯವಾಗಬಹುದು ಎನ್ನಲಾಗುತ್ತಿದೆ.

ಫೆ.24ಕ್ಕೆ ಎರಡು ರಿಯಲ್ ಮಿ ಸ್ಮಾರ್ಟ್‌ಫೋನ್ , ಇಯರ್‌ಬಡ್ಸ್ ಬಿಡುಗಡೆ

ರೆಡ್‌ಮಿ ನೋಟ್ 10, ರೆಡ್‌ಮಿ ನೋಟ್ 10 ಪ್ರೋ ಮತ್ತು ರೆಡ್‌ಮಿ ನೋಟ್ ನೋಟ್‍ 10 ಪ್ರೋ ಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ಗಳು ಎಂಐಯುಐ 12ನೊಂದಿಗೆ ಆಂಡ್ರಾಯ್ಡ್ 11 ಆಧರಿತವಾಗಿರಲಿವೆ. ಬಹುಶಃ ಈ ಸ್ಮಾರ್ಟ್‌ಫೋನುಗಳು 4ಜಿ ಮತ್ತು 5ಜಿ ಕನೆಕ್ಟಿವಿಟಿ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡಲಿವೆ.

ರೆಡ್ ಮಿ ನೋಟ್ ಪ್ರೋ ಸ್ಮಾರ್ಟ್‌ಫೋನ್‌ನಲ್ಲೂ 120Hz IPS ಡಿಸ್‌ಪ್ಲೇ ಹಾಗೂ 5,050mAh ಬ್ಯಾಟರಿ ಇರಲಿದೆ. ಈ ಫೋನ್‌ನಲ್ಲಿ ಸ್ನ್ಯಾಪ್‌ಡ್ರಾಗನ್ 732ಜಿ ಎಸ್ಒಸಿ ಪ್ರೊಸೆಸರ್ ಇರಬಹುದು ಎಂದು ಹೇಳಲಾಗುತ್ತಿದೆ. ಈ ಫೋನ್‌ನಲ್ಲೂ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಇರಲಿದ್ದು, ಈ ಪೈಕಿ ಪ್ರೈಮರಿ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿರಲಿದೆ. ಹಾಗೆಯೇ ಈ ಫೋನ್ 3 ವೆರಿಯೆಂಟ್‌ಗಳಲ್ಲಿ ಮಾರಾಟಕ್ಕೆ ಸಿಗಲಿದೆ. 6 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್, 6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಹಾಗೂ 8 ಜಿಬಿ ಮತ್ತು 128 ಜಿಬಿ ಸ್ಟೋರೇಜ್ ‌ಮಾದರಿಗಳಲ್ಲಿ ಗ್ರಾಹಕರಿಗೆ ಸಿಗಲಿದೆ.

ಈ ರೆಡ್‌ಮಿ ನೋಟ್ ಸೀರೀಸ್ ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟಿರಲಿದೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

ಟ್ವಿಟರ್‌ನಲ್ಲಿ ಇನ್ನು ವಾಯ್ಸ್ ಡೈರೆಕ್ಟ್ ಮೆಸೇಜ್! ಹೇಗೆ ಗೊತ್ತಾ..?

click me!