4 ಕ್ಯಾಮೆರಾ, 64 ಮೆಗಾಪಿಕ್ಸೆಲ್! ರಿಯಲ್‌ಮಿಯಿಂದ ಅಗ್ಗದ ಸ್ಮಾರ್ಟ್‌ಫೋನ್

By Suvarna News  |  First Published Dec 7, 2019, 3:45 PM IST
  • ಅಗ್ಗದ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ಬಿಟ್ಟ Realme
  • ಕ್ವಾಡ್ ಕ್ಯಾಮೆರಾ ಸೆಟಪ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳು
  • Realme X2 Pro ಮತ್ತು Realme 5S - ಇಲ್ಲಿದೆ ಮತ್ತಷ್ಟು ವಿವರ...

ಬೆಂಗಳೂರು (ಡಿ.07): ಹೊಸ ವರ್ಷ ಬರುತ್ತಿದ್ದಂತೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರಲಾರಂಭಿಸಿವೆ. ಸ್ಮಾರ್ಟ್‌ಫೋನ್ ದೈತ್ಯ Realme ಈಗ ಎರಡು ಹೊಸ ಫೋನ್‌ಗಳನ್ನು ಹೊರತಂದಿದೆ.

ಈಗ ಬಿಡುಗಡೆಯಾಗಿರುವ Realme X2 Pro ಮತ್ತು 5S ಸ್ಮಾರ್ಟ್‌ಫೋನ್‌ಗಳು ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿವೆ.

Tap to resize

Latest Videos

undefined

6.5 ಇಂಚು ಪರದೆಯ Realme X2 Pro ಸ್ನ್ಯಾಪ್‌ಡ್ರ್ಯಾಗನ್‌ 855 ಪ್ಲಸ್‌ ಚಿಪ್‌ಸೆಟ್ ಹೊಂದಿದೆ.  ಆ್ಯಂಡ್ರಾಯಿಡ್‌ 9 ಪೈ ಆಪರೇಟಿಂಗ್ ಸಿಸ್ಟಮ್ ಹೊಂದಿದೆ.

64 ಮೆಗಾಪಿಕ್ಸೆಲ್ ಕ್ವಾಡ್‌ ಕ್ಯಾಮೆರಾ ಸೆಟಪ್ ಇದರ ವಿಶೇಷತೆ. ಉಳಿದ ಕ್ಯಾಮೆರಾಗಳು 13 ಎಂಪಿ, 8 ಎಂಪಿ ಮತ್ತು 2 ಎಂಪಿಯದ್ದಾಗಿದ್ದರೆ, ಫ್ರಂಟ್ ಕ್ಯಾಮೆರಾ 16 ಎಂಪಿ ಸಾಮರ್ಥ್ಯದ್ದಾಗಿದೆ.

ಇದನ್ನೂ ನೋಡಿ | ನಿಷೇಧದ ಬಳಿಕ ಪೋರ್ನ್ ವೀಕ್ಷಣೆಗೆ ಕಳ್ಳದಾರಿ, 'ನೀಲಿ' ಪ್ರಿಯರಿಗೆ ಇದೇ ಹೆದ್ದಾರಿ!...

50 ವ್ಯಾಟ್‌ನಲ್ಲಿ ಸೂಪರ್‌ ವೂಕ್‌ ಫ್ಲ್ಯಾಶ್‌ ಚಾರ್ಜರ್ ಸೌಲಭ್ಯ ಇದರಲ್ಲಿದ್ದು, ಅತಿ ವೇಗದಲ್ಲಿ ಅಂದರೆ ಅರ್ಧಗಂಟೆಯಲ್ಲಿ ಶೇ.100 ರಷ್ಟು ಚಾರ್ಜ್ ಆಗಲಿದೆ ಎಂದು ಕಂಪೆನಿಯು ತಿಳಿಸಿದೆ. 

8 GB RAM 128 GB ಸ್ಟೋರೇಜ್‌ ಹಾಗೂ 12 GB RAM, 256 GB ಸ್ಟೋರೇಜ್‌ನಲ್ಲಿ ಇದು ಲಭ್ಯ.  Realme X2 Proನ ಬ್ಯಾಟರಿ ಸಾಮರ್ಥ್ಯ 4000 mAh.

ಇದರ ಜೊತೆಗೆ ಬಿಡುಗಡೆಯಾದ Realmeಯ ಇನ್ನೊಂದು ಸ್ಮಾರ್ಟ್‌ಫೋನ್‌ 5S. ಸ್ನ್ಯಾಪ್‌ಡ್ರ್ಯಾಗನ್‌ 665 ಚಿಪ್‌ಸೆಟ್ ಹೊಂದಿರುವ ಈ ಫೋನ್,  ಆ್ಯಂಡ್ರಾಯಿಡ್‌ 9 ಪೈ ಆಪರೇಟಿಂಗ್ ಸಿಸ್ಟಮ್ ಹೊಂದಿದೆ.

ಇದನ್ನೂ ಓದಿ | ಏರ್‌ಟೆಲ್‌, ವೊಡಾಫೋನ್‌ ಬಳಿಕ ಜಿಯೋ ದರ ಏರಿಕೆ...

ಈ ಫೋನ್ 48 ಎಂಪಿ ಕ್ವಾಡ್‌ ಕ್ಯಾಮೆರಾ ಹೊಂದಿದೆ.  ಇನ್ನುಳಿದ ಕ್ಯಾಮೆರಾಗಳು 8,2 ಮೆಗಾಪಿಕ್ಸೆಲ್ ಸಾಮರ್ಥ್ಯ ಹೊಂದಿವೆ.   

ಇದು ಕೂಡಾ ಮಾದರಿಯಲ್ಲಿ ಲಭ್ಯ. 5000 mAh ಬ್ಯಾಟರಿ ಇದೆ. 4GB ಮತ್ತು 64GBಯಲ್ಲಿ ಹಾಗೂ 4 GB RAM ಹಾಗೂ 128 GB ಸ್ಟೋರೇಜ್‌ನಲ್ಲಿ ಲಭ್ಯ.

ಬೆಲೆ:

  • Realme X2 Pro - 29,999 ರು.( 8 GB RAM 128GB ಸ್ಟೋರೇಜ್) ಹಾಗೂ 33,999 (12 GB ಹಾಗೂ 256 GB ಸ್ಟೋರೇಜ್‌)
  • Realme 5S ಸ್ಮಾರ್ಟ್‌ ಫೋನ್‌- 9,999 ರು. ( 4 GB ಹಾಗೂ 64 GB) ಮತ್ತು 10,999 (4 GB ಹಾಗೂ 128 GB)

 

click me!